500, 1000 ನೋಟು ಬ್ಯಾನ್: ಒಂದೇ ದಿನ ಪೇಟಿಎಂನಲ್ಲಿ 24000 ಕೋಟಿ ವ್ಯವಹಾರ!

ಪೇಟಿಎಂ ಮೂಲಕ ವ್ಯವಹರಿಸುವರ ಸಂಖ್ಯೆ ಶೇ.700 ರಷ್ಟು ಹೆಚ್ಚಾಗಿದೆ, ಸಾಮಾನ್ಯಕ್ಕಿಂತ ಶೇ.1000 ರಷ್ಟು ಹಣದ ವ್ಯವಹಾರ ಹೆಚ್ಚಾಗಿದೆ.

|

ಕಪ್ಪು ಹಣವನ್ನು ಹೊರತರಲು 500 ಮತ್ತು 1೦೦೦ ರೂಪಾಯಿ ನೋಟುಗಳನ್ನು ರದ್ದುಗೊಳಿಸಿರುವುದು, ಅಂತರ್ಜಾಲ ವ್ಯಾಪಾರ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದೆ. ಹೌದು, ಭಾರತದ ಪ್ರಮುಖ ಅಂತರ್ಜಾಲ ಮಾರುಕಟ್ಟೆ ಪೇಟಿಎಂ ನೀಡಿರುವ ಮಾಹಿತಿ ಪ್ರಕಾರ, ಕೇವಲ ಒಂದೇ ದಿನದಲ್ಲಿ 5 ಕೋಟಿಗೂ ಹೆಚ್ಚು ಅಂತರ್ಜಾಲ ವ್ಯವಹಾರಗಳು ಪೇಟಿಎಂ ಜಾಲದ ಮೂಲಕ ನಡೆದಿವೆ. ಸುಮಾರು 24000 ಕೋಟಿಗೂ ಹೆಚ್ಚು ಹಣ ಪೇಟಿಎಂ ಜಾಲದಲ್ಲಿ ವಿನಿಮಯವಾಗಿದೆ.

500, 1000 ನೋಟು ಬ್ಯಾನ್: ಒಂದೇ ದಿನ ಪೇಟಿಎಂನಲ್ಲಿ 24000 ಕೋಟಿ ವ್ಯವಹಾರ!

ಭಾರತದ ಟೆಕ್‌ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು

500 ಮತ್ತು 1೦೦೦ ರೂಪಾಯಿಗಳ ನೋಟನ್ನು ನಿ‍ಷೇಧಿಸಿದ ಪರಿಣಾಮ ಜನಸಾಮಾನ್ಯರಿಗೂ ಹಣದ ಬಿಸಿ ತಟ್ಟಿದೆ. ಹಣಕ್ಕಾಗಿ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಜನಸಾಮಾನ್ಯರು ಕಿಲೋಮೀಟರ್‌ಗಳಷ್ಟು ಕ್ಯೂ ನಿಂತಿದ್ದಾರೆ. ಹಣ ಪಡೆಯುವುದು ಜನರಿಗೆ ಸಂಕಷ್ಟವಾಗಿ ಪರಿಣಮಿಸಿದೆ.

ಇನ್ನು ದೈನಂದಿನ ವ್ಯವಹಾರಗಳಿಗೆ ಉಳಿದಿರುವ ಅಲ್ಪಸ್ವಲ್ಪ ಹಣವನ್ನು ವಿನಿಯೋಗಿಸಿ ಎಲ್ಲಿ ಹಣದ ಅಭಾವವನ್ನು ಎದುರಿಸಬೇಕಾಗುತ್ತದೆಯೋ ಎಂಬ ಭಯದಿಂದ ಜನರು ಅಂತರ್ಜಾಲ ವ್ಯವಹಾರಕ್ಕೆ ಮುಖಮಾಡಿದ್ದಾರೆ.

500, 1000 ನೋಟು ಬ್ಯಾನ್: ಒಂದೇ ದಿನ ಪೇಟಿಎಂನಲ್ಲಿ 24000 ಕೋಟಿ ವ್ಯವಹಾರ!

ಕಂಪನಿ ಹೇಳುವಂತೆ ಪೇಟಿಎಂ ಮೂಲಕ ವ್ಯವಹರಿಸುವರ ಸಂಖ್ಯೆ ಶೇ.700 ರಷ್ಟು ಹೆಚ್ಚಾಗಿದೆ, ಸಾಮಾನ್ಯಕ್ಕಿಂತ ಶೇ.1000 ರಷ್ಟು ಹಣದ ವ್ಯವಹಾರ ಹೆಚ್ಚಾಗಿದೆ. ಇನ್ನು ಆಪ್ ಉಪಯೋಗಿಸುವವರ ಸಂಖ್ಯೆ 300 ಪ್ರತಿಶತ ಹೆಚ್ಚಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Rs. 500, Rs. 1000 Ban Effect: Paytm Creates Record with 5 Million Transactions per Day. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X