ಸಲ್ಮಾನ್ ಖಾನ್ ಇನ್ನು "ಬೀಯಿಂಗ್ ಸ್ಮಾರ್ಟ್" ಮೊಬೈಲ್ ಕಂಪೆನಿ ಒಡೆಯ!!

ಈಗಾಗಲೇ ಬೀಯಿಂಗ್ ಸ್ಮಾರ್ಟ್ ಮೊಬೈಲ್ ಕಂಪೆನಿಯ ಟ್ರೇಡ್ ಮಾರ್ಕ್ ಈಗಾಗಲೇ ನೋಂದಣಿಯಾಗಿದ್ದು, 20 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟಫೋನ್‌ಗಳನ್ನು ನೀಡುವುದು ಸಲ್ಮಾನ್ ಗುರಿಯಾಗಿದೆ.

Written By:

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ.! ಈಗಾಗಲೇ ಬೀಯಿಂಗ್ ಹ್ಯೂಮನ್ ಬಟ್ಟೆ ಬ್ರಾಂಡ್ ಹೊಂದಿರುವ ಸಲ್ಮಾನ್ ಖಾನ್ ಅವರು "ಬೀಯಿಂಗ್ ಸ್ಮಾರ್ಟ್" ಎಂಬ ಮೊಬೈಲ್ ಕಂಪೆನಿ ತೆರೆಯುತ್ತಿದ್ದಾರೆ.!!

ಈಗಾಗಲೇ ಬೀಯಿಂಗ್ ಸ್ಮಾರ್ಟ್ ಮೊಬೈಲ್ ಕಂಪೆನಿಯ ಟ್ರೇಡ್ ಮಾರ್ಕ್ ಈಗಾಗಲೇ ನೋಂದಣಿಯಾಗಿದ್ದು, 20 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟಫೋನ್‌ಗಳನ್ನು ನೀಡುವುದು ಸಲ್ಮಾನ್ ಗುರಿಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇನ್ನು ಪ್ರಾರಂಭದಲ್ಲಿ ಇದಕ್ಕಾಗಿ ಚೀನಾ ಘಟಕದಲ್ಲಿ ಫೋನ್ ನಿರ್ಮಾಣ ಮಾಡಲಾಗುತ್ತಿದೆ.!

ಸಲ್ಮಾನ್ ಖಾನ್ ಇನ್ನು

ಜಿಯೋಗೆ ಪೋರ್ಟ್ ಆಗಬೇಕೆ? ರೀಚಾರ್ಜ್ ಮಾಡಿಸಬೇಕೆ? ಲೇಖನ ಓದಿ ಡಿಸೈಡ್ ಮಾಡಿ!!

ಭಾರತದ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಚೀನಾ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಶಿಯೋಮಿ ಮತ್ತು ಒಪ್ಪೊ ಕಂಪೆನಿಗೆ ಸೆಡ್ಡು ಹೊಡೆಯುವಂತಹ ಸ್ಮಾರ್ಟ್‌ಫೋನ್ ತಯಾರಿಸಲು ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.!!"ಬೀಯಿಂಗ್ ಸ್ಮಾರ್ಟ್" ಫೋನಿನ ಮಾರಾಟದ ಮೂಲಕ ಸಿಕ್ಕ ಅದಾಯವನ್ನು ಸಲ್ಮಾನ್ ಅವರು ಬೀಯಿಂಗ್ ಹ್ಯೂಮನ್ ಫೌಂಡೇಷನ್ ಇದರ ಇನ್ನಿತರ ಕಾರ್ಯಗಳಿಗೆ ಉಪಯೋಗಿಸಲಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಇನ್ನು

ಆರಂಭದಲ್ಲಿ ಬೀಯಿಂಗ್ ಹ್ಯೂಮನ್ ಫೋನ್ ಗಳನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಅವುಗಳನ್ನು ಬೀಯಿಂಗ್ ಸ್ಮಾರ್ಟ್ ರೀಟೆಲ್ ಸ್ಟೋರುಗಳಲ್ಲಿ ಮಾರಾಟ ಮಾಡಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
For his next blockbuster, Salman Khan is betting on a smaller screen the smartphone beingsmart. to know more visit to kannada.gizbot.com
Please Wait while comments are loading...
Opinion Poll

Social Counting