ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಕುರಿತ ಮುನ್ನೋಟ

By Shwetha
|

ದೀರ್ಘ ಸಮಯದಿಂದೀಚೆಗೆ, ಕ್ಯುಪರ್ಟೀನೋ ಆಧಾರಿತ ದಿಗ್ಗಜ ಆಪಲ್ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಆಳುತ್ತಿದೆ. ಜಗತ್ತಿನಾದ್ಯಂತ ಟ್ಯಾಬ್ಲೆಟ್ ಮಾರುಕಟ್ಟೆ ಹಂಚಿಕೆಯಲ್ಲಿ ಆಪಲ್ ಪ್ರಥಮ ಸ್ಥಾನದಲ್ಲಿದೆ. ಏಕೆಂದರೆ ಟ್ಯಾಬ್ಲೆಟ್ ತಯಾರಿಕೆಯಲ್ಲಿ ಆಪಲ್ ಸನಿಹಕ್ಕೆ ಬರುವಷ್ಟು ಸಾಹಸ ಇತರ ಕಂಪೆನಿಗಳಿಗಿಲ್ಲ ಎಂಬುದೇ ಮನೆಮಾತಾದ ಸುದ್ದಿಯಾಗಿತ್ತು.

ಆದರೆ ಕಾಲಕ್ಕೆ ತಕ್ಕಂತಹ ಬದಲಾವಣೆ ಟೆಕ್ ಕ್ಷೇತ್ರದಲ್ಲೂ ನಡೆಯುತ್ತದೆ ಎಂಬುದಕ್ಕೆ ಪೂರಕವಾಗಿ ಸ್ಯಾಮ್‌ಸಂಗ್ ಎಂಬ ದಕ್ಷಿಣ ಕೊರಿಯಾದ ಕಂಪೆನಿ ಸ್ಮಾರ್ಟ್‌ಫೋನ್‌ನಲ್ಲೂ ಹೇಗೆ ತನ್ನ ಸ್ಥಾನವನ್ನು ಬಪಡಿಸಿಕೊಂಡಿತ್ತೋ ಅಂತೆಯೇ ಟ್ಯಾಬ್ಲೆಟ್ ಕ್ಷೇತ್ರದಲ್ಲೂ ಹೊಸ ಇತಿಹಾಸವನ್ನು ಬರೆಯಲು ಮುಂದುವರೆದಿದೆ. ಒಂದು ರೀತಿಯಲ್ಲಿ ಆಪಲ್‌ಗೆ ಭರ್ಜರಿ ಪೈಪೋಟಿಯನ್ನು ನೀಡುವ ಬಲಾಢ್ಯ ಕಂಪೆನಿ ಸ್ಯಾಮ್‌ಸಂಗ್ ಆಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಈ ದಕ್ಷಿಣ ಕೊರಿಯಾದ ಮಹಾ ಪ್ರಚಂಡ ಸಾಧಕ ಭಾರತದಲ್ಲಿ ಗ್ಯಾಲಕ್ಸಿ ಟ್ಯಾಬ್ ಎಸ್ ಎಂಬ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದ್ದು ಸದ್ಯಕ್ಕೆ ಸುದ್ದಿಯಲ್ಲಿದೆ. ಇದು 10.5 ಮತ್ತು 8.4 ಇಂಚಿನ ಗಾತ್ರದಲ್ಲಿದ್ದು ತನ್ನ ಹೆಚ್ಚು ರೆಸಲ್ಯೂಶನ್‌ನ ಸೂಪರ್ ಅಮ್ಲೋಡ್ ಡಿಸ್‌ಪ್ಲೇಯ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಿನ ಸಂಚಾರವನ್ನೇ ಉಂಟುಮಾಡಿದೆ. ಇದು ಆಕರ್ಷಕ ಬಿಳಿ ಮತ್ತು ಬ್ರೋನ್ಜ್ ಬಣ್ಣದಲ್ಲಿ ಲಭ್ಯವಿದೆ.

ಹಾಗಿದ್ದರೆ ಟ್ಯಾಬ್ಲೆಟ್ ಕುರಿತ ಸುದೀರ್ಘ ಮಾಹಿತಿಯನ್ನು ಈ ಕೆಳಗಿನ ಸ್ಲೈಡ್‌ಗಳಲ್ಲಿ ತಿಳಿದುಕೊಳ್ಳೋಣ

#1

#1

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 10.5 ಕೂಡ ಟ್ಯಾಬ್ ಎಸ್ 5 ನಂತೆ ಅದೇ ಪ್ರಕಾರದ ಸ್ಟೈಲಿಶ್ ಆಕಾರದಲ್ಲಿದೆ. ಸ್ಯಾಮ್‌ಸಂಗ್‌ನ ಇತ್ತೀಚಿನ ಡಿವೈಸ್‌ಗಳಲ್ಲಿ ಕಂಡುಬರುವ ಅದೇ ಪಡಿಯಚ್ಚು ಮಾದರಿಯ ವಿನ್ಯಾಸವನ್ನು ಈ ಟ್ಯಾಬ್ ಹೊಂದಿದೆ. ಇದನ್ನು ಕೈಯಲ್ಲಿ ಹಿಡಿದುಕೊಳ್ಳಲು ತುಂಬಾ ಆರಾಮದಾಯಕವಾಗಿದ್ದು ಪ್ರಥಮ ಪ್ರಯತ್ನದಲ್ಲೇ ಸ್ಯಾಮ್‌ಸಂಗ್ ಉತ್ತಮ ಮಾದರಿಯ ಟ್ಯಾಬ್ ಅನ್ನು ಒದಗಿಸಿದೆ ಎಂದು ಹೇಳಬಹುದಾಗಿದೆ.

#2

#2

ಇದು 6.6mm ದಪ್ಪವನ್ನು ಹೊಂದಿದ್ದು ಇದು ಆಪಲ್ ಐಪ್ಯಾಡ್ ಏರ್, ಐಫೋನ್ 5S ಮತ್ತು ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್ Z2 ಗೆ ಹೋಲಿಸಿದಾಗ ಇದು ದಪ್ಪವಾಗಿದೆ. ಇದು ಮೆಟಾಲಿಕ್ ಫ್ರೇಮ್ ಅನ್ನು ಹೊಂದಿದ್ದು ವೃತ್ತಾಕಾರದ ಮೂಲೆಗಳನ್ನು ಹೊಂದಿದೆ. ಮೈಕ್ರೋ ಎಸ್‌ಡಿ ಮತ್ತು ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಹೊಂದಿರುವ ಈ ಟ್ಯಾಬ್ಲೆಟ್, ಮೇಲ್ಭಾಗದಲ್ಲಿ ಐಆರ್ ಇಮಿಟರ್ ಅನ್ನು ಹೊಂದಿದೆ. ಗ್ಯಾಲಕ್ಸಿ ಎಸ್5 ಗೆ ಹೋಲಿಸಿದಾಗ ಇದರ ರಚನಾ ಸಾಮರ್ಥ್ಯ ಉತ್ತಮವಾಗಿದೆ.

#3

#3

ಇದು 10.5 ಇಂಚಿನ ಸೂಪರ್ ಅಮ್ಲೋಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ 2560 x 1600 ಪಿಕ್ಸೆಲ್‌ಗಳಾಗಿವೆ. ಇದರಲ್ಲಿ ಹೋಮ್ ಬಟನ್ ಅನ್ನು ನೀವು ಕಾಣಬಹುದಾಗಿದ್ದು, ಡಿಸ್‌ಪ್ಲೇಯ ಕೆಳಗೆ ಸಾಂಪ್ರದಾಯಿಕ ಕೀಗಳನ್ನು ಕೂಡ ಕಾಣಬಹುದಾಗಿದೆ. ಇದು ಬೆರಳಚ್ಚು ತಂತ್ರಜ್ಞಾನವನ್ನು ಕೂಡ ಹೊಂದಿದೆ.

#4

#4

ಗ್ಯಾಲಕ್ಸಿ ಟ್ಯಾಬ್ 10.5 ಆಂಡ್ರಾಯ್ಡ್ ಕಿಟ್‌ಕ್ಯಾಟ್‌ನಲ್ಲಿ ಚಾಲನೆಯಾಗುತ್ತಿದ್ದು ಇದರಲ್ಲಿ ಕಸ್ಟಮ್ ಯೂಸರ್ ಇಂಟರ್ಫೇಸ್ ಅನ್ನು ದೊಡ್ಡ ಪರದೆ ಟ್ಯಾಬ್ಲೆಟ್‌ಗೆ ಬದಲಾಯಿಸಲಾಗಿದೆ. ಇಷ್ಟಲ್ಲದೆ ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸ್ಯಾಮ್‌ಸಂಗ್ ಇದರಲ್ಲಿ ಸೇರ್ಪಡೆಗೊಳಿಸಿರುವುದರಿಂದ ಇದು ಆಪಲ್ ಐಪ್ಯಾಡ್‌ಗಿಂತ ಭಿನ್ನವಾಗಿದೆ.

#5

#5

ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ವೈಫೈಗೆ ಒಗ್ಗೂಡಿಸಿದಾಗ ಇದರಲ್ಲಿ ಮಲ್ಟಿ ಯೂಸರ್ ಮೋಡ್ ಇದ್ದು ಇದು ಎಂಟು ಬಳಕೆದಾರರಿಗೆ ತಮ್ಮದೇ ಪ್ರೊಫೈಲ್ ಅನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕಿಡ್ಸ್ ಮೋಡ್ ಕೂಡ ನಿರ್ಮಾಣವಾಗಿದ್ದು ಸಣ್ಣ ಮಕ್ಕಳಿಗಾಗಿ ಬಳಕೆದಾರ ಇಂಟರ್ಫೆಸ್ ಮತ್ತು ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

#6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 10.5 ಕುರಿತ ಆಕರ್ಷಕ ಮಾಹಿತಿಯನ್ನು ನಾವಿಲ್ಲಿ ಲಗತ್ತಿಸಿರುವ ವೀಡಿಯೋ ನಿಮಗೆ ನೀಡಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X