ವಿಖ್ಯಾತ ವೇರಿಯೇಬಲ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯ

By Shwetha
|

ವೇರಿಯೇಬಲ್ ಡಿವೈಸ್‌ಗಳ ಉತ್ಪಾದನೆಯಲ್ಲೂ ಈಗ ಭರ್ಜರಿ ಪೈಪೋಟಿ ನಡೆಯುತ್ತಿದ್ದು ಸ್ಮಾರ್ಟ್‌ಫೋನ್‌ನಂತೆ ವಾಚ್‌ಗಳೂ ಕೂಡ ಮಾರುಕಟ್ಟೆಗೆ ಬಿಸಿ ದೋಸೆಯಂತೆ ಆಗಮಿಸುತ್ತಿವೆ. ಗೂಗಲ್ ಈಗಾಗಲೇ ತನ್ನ ವೇರಿಯೇಬಲ್ ಕುರಿತ ಮಾಹಿತಿಯನ್ನು ತನ್ನ ಅಭಿಮಾನಿ ಬಳಗಕ್ಕೆ ನೀಡುತ್ತಿದ್ದಂತೆ ದಕ್ಷಿಣ ಕೊರಿಯಾದ ಸ್ಮಾರ್ಟ್ ಜೈಯೆಂಟ್ ವೇರಿಯೇಬಲ್ ಉತ್ಪಾದನೆಯ ತನ್ನ ರಂಗವನ್ನು ಸಜ್ಜುಗೊಳಿಸಿದೆ.

ಹೌದು ಸ್ಯಾಮ್‌ಸಂಗ್ ಕೂಡ ಆಂಡ್ರಾಯ್ಡ್ ವೇರ್ ಸ್ಮಾರ್ಟ್‌ವಾಚ್ ಅನ್ನು ಈಗ ತಯಾರಿಸುತ್ತಿದ್ದು, ಇದನ್ನು ಗೇರ್ ಲೈವ್ ಎಂದು ಕರೆದಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ವಾಚ್ ಲಭ್ಯವಿದ್ದು ಈಗಾಗಲೇ ಘೋಷಿಸಿದ್ದ ಎಲ್‌ಜಿ ಜಿ ವಾಚ್ ಕೂಡ ಆಂಡ್ರಾಯ್ಡ್ ವೇರ್‌ನಲ್ಲಿ ಚಾಲನೆಯಾಗುತ್ತಿದೆ. ಎಲ್‌ಜಿ ಜಿ ವಾಚ್ ಮತ್ತು ಸ್ಯಾಮ್‌ಸಂಗ್ ಗೇರ್ ಲೈವ್ ಆಂಡ್ರಾಯ್ಡ್ ವೇರ್ ಪ್ಲಾಟ್‌ಫಾರ್ಮ್‌ಗೆ ಬೆಂಬಲವನ್ನು ಒದಗಿಸಲಿದೆ.

ಗೇರ್ 2 ಸ್ಮಾರ್ಟ್‌ವಾಚ್‌ಗಿಂತಲೂ ಸ್ಯಾಮ್‌ಸಂಗ್ ಗೇರ್ ಲೈವ್ ನೋಡಲು ಆಕರ್ಷಕವಾಗಿದ್ದು 1.63 ಇಂಚಿನ ಸೂಪರ್ AMOLED (320x320 ಪಿಕ್ಸೆಲ್‌ಗಳು) 512ಎಮ್‌ಬಿ RAM ವಾಚ್‌ನಲ್ಲಿದೆ. ಇದರಲ್ಲಿ 1.2GHz ಪ್ರೊಸೆಸರ್ ಚಾಲನೆಯಾಗುತ್ತಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4ಜಿಬಿಯಾಗಿದೆ. ಇದರ ಸಂಪರ್ಕ ವೈಶಿಷ್ಟ್ಯ ಬ್ಲೂಟೂತ್ 4.0 ಆಗಿದೆ.

ಸ್ಮಾರ್ಟ್‌ವಾಚ್ ಕುರಿತಾದ ಇನ್ನಷ್ಟು ರೋಚಕ ಮಾಹಿತಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನಿಮಗೆ ನೀಡುತ್ತಿದ್ದು ಇದರ ಪೂರ್ಣ ಮಾಹಿತಿಯನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

#1

#1

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ಕಂಪೆನಿಯು ಗೇರ್ ಲೈವ್‌ನಲ್ಲಿ ಹಾರ್ಟ್ ರೇಟ್ ಮಾನಿಟರ್, ಧೂಳು ಮತ್ತು ನೀರು ಪ್ರತಿರೋಧಕ ಸಾಮರ್ಥ್ಯ, ಕಂಪಾಸ್, ಅಕ್ಲೆರೋಮೀಟರ್, ಗಿರೋಸ್ಕೋಪ್ ಮುಂತಾದ ಫೀಚರ್‌ಗಳನ್ನು ಸೇರಿಸಿದೆ.

#2

#2

ಈ ವಾಚ್ ಗ್ರಾಹಕರಿಗೆ ಉತ್ತಮ ವೇರಿಯೇಬಲ್ ಉತ್ಪನ್ನವನ್ನು ನೀಡಲಿದ್ದು ಇದರ ಅತ್ಯಾಕರ್ಷಕ ಫೀಚರ್‌ಗಳು ಬಳಕೆದಾರರಿಗೆ ಪ್ರಯೋಜನಕಾರಿಯಾಗಲಿದೆ. ಆಂಡ್ರಾಯ್ಡ್ ವೇರ್ ಅನ್ನು ಗೇರ್ ಲೈವ್ ಆಗಿ ಪರಿವರ್ತಿಸುವ ಛಲ ಕಂಪೆನಿಯದ್ದಾಗಿತ್ತು ಮತ್ತು ಈ ಕಾರ್ಯದಲ್ಲಿ ಅದು ಪೂರ್ಣ ಯಶಸ್ಸನ್ನು ಕೂಡ ಪಡೆದುಕೊಂಡಿದೆ.

#3

#3

ಇದು 1.63 ಇಂಚಿನ ಸೂಪರ್ AMOLED (320x320 ಪಿಕ್ಸೆಲ್‌ಗಳು) 512ಎಮ್‌ಬಿ RAM ವಾಚ್‌ನಲ್ಲಿದೆ. ಇದರಲ್ಲಿ 1.2GHz ಪ್ರೊಸೆಸರ್ ಚಾಲನೆಯಾಗುತ್ತಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4ಜಿಬಿಯಾಗಿದೆ. ಇದರ ಸಂಪರ್ಕ ವೈಶಿಷ್ಟ್ಯ ಬ್ಲೂಟೂತ್ 4.0 ಆಗಿದೆ. ಬ್ಯಾಟರಿ ಸಾಮರ್ಥ್ಯ 300mAh ಆಗಿದ್ದು ಅಳತೆ 37.9x56.4x8.9ಎಮ್‌ಎಮ್, ಹಾಗೂ ತೂಕ 59 ಗ್ರಾಮ್‌ಗಳಾಗಿದೆ.

#4

#4

ಇಂದಿನಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುತ್ತಿರುವ ಗೇರ್ ಲೈವ್ ತನ್ನೊಂದಿಗೆ ಎಲ್‌ಜಿ ಜಿ ವಾಚ್ ಅನ್ನು ಕೂಡ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಒಟ್ಟಾರೆ ವೇರಿಯೇಬಲ್ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿಯನ್ನು ನಮಗೆ ನಿರೀಕ್ಷಿಸಬಹುದಾಗಿದೆ.

#5

#5

ಇವೆರಡೂ ವೇರಿಯೇಬಲ್‌ಗಳು ಆಂಡ್ರಾಯ್ಡ್‌ ವೇರ್‌ನಲ್ಲಿ ಚಾಲನೆಯಾಗುತ್ತಿದ್ದು ಆಂಡ್ರಾಯ್ಡ್ ವೇರ್ ಪ್ಲಾಟ್‌ಫಾರ್ಮ್‌ಗಾಗಿ ಡೆವಲಪರ್ ತಯಾರಿಸಿದ ಅಪ್ಲಿಕೇಶನ್‌ಗಳಿಗೆ ಇವು ನೆರವನ್ನು ಮಾಡಲಿವೆ. ಅಂದರೆ ಅತ್ಯದ್ಭುತ ಫೀಚರ್‌ಗಳಿಂದ ಇವೆರಡೂ ವೇರಿಯೇಬಲ್ ನಿಮ್ಮ ಕಣ್ಮನಸೆಳೆಯಲಿವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X