ಸತ್ಯ ನಾಡೆಲ್ಲಾ ಬಗ್ಗೆ ನೀವು ತಿಳಿಯಲೇಬೇಕಾದ ಹತ್ತು ವಿಷಯಗಳು

By Ashwath
|

ಮೈಕ್ರೋಸಾಫ್ಟ್‌ನ ಹಾಲಿ ಮುಖ್ಯಸ್ಥ ಸ್ವೀವ್‌ ಬಾಲ್ಮರ್‌ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದ ದಿನದಿಂದ ಇಲ್ಲಿಯವರೆಗೆ ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಲಭಿಸಲಿದೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಮಣಿಪಾಲದ ಎಂಜಿನಿಯರಿಂಗ್‌ ವಿದ್ಯಾರ್ಥಿ, ಹೈದರಾಬಾದ್‌ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದು ಹೊರ ಬೀಳಬೇಕಿದೆ.

ಒಂದು ವೇಳೆ ಸಿಇಒ ಆಗಿ ನೇಮಕವಾದರೆ ಭಾರತೀಯ ಮೂಲದ ಜಾಗತಿಕ ಮಟ್ಟದ ದೊಡ್ಡ ಬ್ರ್ಯಾಂಡ್‌ ಐಟಿ ಕಂಪೆನಿಯ ಮುಖ್ಯಸ್ಥರಾಗಿ ನೇಮಕವಾದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸತ್ಯ ನಾಡೆಲ್ಲಾ ಪಾತ್ರವಾಗಲಿದ್ದಾರೆ.ಹೀಗಾಗಿ ಮುಂದಿನ ಪುಟದಲ್ಲಿ ಸತ್ಯ ನಾಡೆಲ್ಲಾ ವ್ಯಕ್ತಿತ್ವ, ಕುಟುಂಬಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

1

1


ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌ ಉದ್ಯೋಗಿಯಾಗಿ ನೇಮಕವಾಗಿದ್ದು 1992ರಲ್ಲಿ. ಕಳೆದ 22 ವರ್ಷದಲ್ಲಿ ನಾಡೆಲ್ಲಾ ಮೈಕ್ರೋಸಾಫ್ಟ್‌‌ನ ವಿವಿಧ ಉತ್ಪನ್ನಗಳ ಹುದ್ದೆಯನ್ನು
ಯಶಸ್ವಿಯಾಗಿ ನಿಭಾಯಿಸಿ ಮೈಕ್ರೋಸಾಫ್ಟ್‌ಗೆ ಲಾಭ ತಂದುಕೊಟ್ಟಿದ್ದಾರೆ.ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

2

2


ಸತ್ಯ ನಾಡೆಲ್ಲಾ ಪ್ರತಿಭೆ ಹೆಚ್ಚು ಬೆಳಕಿಗೆ ಬಂದ್ದು ಬಿಂಗ್‌ ಸರ್ಚ್‌‌ ಎಂಜಿನ್‌ನಿಂದ. ಬಿಂಗ್‌ ಸರ್ಚ್‌ ಎಂಜಿನ್‌‌ ಸಂಪೂರ್ಣ‌‌ ಹೊಣೆಗಾರಿಗೆ ನಾಡೆಲ್ಲಾ ಮೇಲಿತ್ತು.2009 ರಲ್ಲಿ ಆರಂಭಗೊಂಡ ಬಿಂಗ್‌ ಸರ್ಚ್‌,1997 ರಿಂದಲೇ ಕಾರ್ಯ‌ನಿರ್ವಹಿಸುತ್ತಿರುವ ಗೂಗಲ್‌ ಸರ್ಚ್‌ ಮುಂದೆ ಏನು ಇಲ್ಲ ಎಂದು ಐಟಿ ತಂತ್ರಜ್ಞರು ವಿಶ್ಲೇಷಿಸಿದ್ದರು.ಆದರೆ ಬಿಂಗ್‌ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಹಿಸಿದ್ದ ನಾಡೆಲ್ಲ ಅದರ ಅಭಿವೃದ್ಧಿ ಶ್ರಮಿಸಿದ್ದರು. ವೆಬ್‌ಸೈಟ್‌ಗಳ ಟ್ರಾಫಿಕ್‌ ಅಧ್ಯಯನ ಮಾಡಿ Rank ನೀಡುವ alexa ತಾಣದ ಪ್ರಕಾರ ಬಿಂಗ್‌ ಪ್ರಸ್ತುತ 23ನೇ ಸ್ಥಾನದಲ್ಲಿದೆ.

3

3

ನಾಡೆಲ್ಲಾ ಮೈಕ್ರೋಸಾಫ್ಟ್‌‌ನ ಡೇಟಾಬೇಸ್‌,ವಿಂಡೋಸ್‌ ಸರ್ವರ್‌, ಡೆವಲಪರ್‍ಸ್‌ ಟೂಲ್ಸ್‌,ಕ್ಲೌಡ್‌‌ ವಿಭಾಗದಲ್ಲಿ ವಿವಿಧ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

4

4


ಮೈಕ್ರೋಸಾಫ್ಟ್‌ನ ಆಫೀಸ್‌‌ 365 (ಚಂದಾದಾರಿಕೆ ಆಧಾರಿತ ಆನ್‌ಲೈನ್‌ ಆಫೀಸ್‌ ಸೇವೆಯ ಸೂಟ್) ಉತ್ಪನ್ನವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನ ಎಂದು ಮೈಕ್ರೋಸಾಫ್ಟ್‌ ಹೇಳಿಕೊಂಡಿದೆ.ಈ ಆಫೀಸ್‌ 365 ಈ ರೀತಿ ಜನಪ್ರಿಯಗೊಳ್ಳಲು ಕಾರಣಕರ್ತರಾದ ವ್ಯಕ್ತಿ ನಾಡೆಲ್ಲಾ.

5

5


ಮೈಕ್ರೋಸಾಫ್ಟ್‌ನ ಕ್ಲೌಡ್‌ ವಿಭಾಗದ ಉಪಾಧ್ಯಕ್ಷರಾಗಿ ಸತ್ಯ ನಾಡೆಲ್ಲಾ ನೇಮಕವಾಗಿದ್ದು 2011ರಲ್ಲಿ. 2011ರಲ್ಲಿ ಕ್ಲೌಡ್ ವಿಭಾಗದಿಂದ ಮೈಕ್ರೋಸಾಫ್ಟ್‌ 16.6 ದಶಲಕ್ಷ ಡಾಲರ್‌ ಆದಾಯಗಳಿಸಿದ್ದರೆ, ಕಳೆದ ವರ್ಷ‌ 20.3 ದಶಲಕ್ಷ ಡಾಲರ್‌ ಆದಾಯವನ್ನು ಮೈಕ್ರೋಸಾಫ್ಟ್‌ಗಳಿಸಿದೆ.

6

6


ನಾಡೆಲ್ಲಾ, ಕ್ಲೌಡ್‌ ,ಬಿಂಗ್‌ ವಿಭಾಗವಲ್ಲದೇ ಆನ್‌ಲೈನ್‌ ದೂರವಾಣಿ ಸೇವೆ ನೀಡುವ ಸ್ಕೈಪ್, ಆನ್‌ಲೈನ್‌ ಮಲ್ಟಿಪ್ಲೇಯರ್‌ ಗೇಮಿಂಗ್‌ ಮತ್ತು ಡಿಜಿಟಲ್‌ ಮೀಡಿಯಾ ಸೇವೆಯಾದ ಎಕ್ಸ್‌ಬಾಕ್ಸ್‌ ಲೈವ್‌ ಬಗ್ಗೆ ಚೆನ್ನಾಗಿ ತಿಳಿದಿದ್ದು, ಈ ಜವಾಬ್ದಾರಿ ನೀಡಿದರೂ ನಾಡೆಲ್ಲಾ ಚೆನ್ನಾಗಿ ನಿರ್ವ‌ಹಿಸಬಲ್ಲರು.

7

7

ಅಷ್ಟೇ ಅಲ್ಲದೇ ಬಿಲ್‌ ಗೇಟ್ಸ್‌ ಮತ್ತು ಸ್ವೀವ್‌ ಬಲ್ಮರ್‌ ವ್ಯಕ್ತಿತ್ವಗಿಂತ ಭಿನ್ನವಾಗಿದ್ದು ಮೈಕ್ರೋಸಾಫ್ಟ್‌‌ ಹೊಸ ಜೀವ ನೀಡುವ ಸಾಮರ್ಥ್ಯ ನಾಡೆಲ್ಲ ಹೊಂದಿರುವುದರಿಂದ, ಜೊತೆಗೆ ಇದುವರೆಗೆ ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವ‌ಹಿಸಿದ್ದರಿಂದ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಸಿಇಒ ಆಗಿ ಸತ್ಯ ಅವರನ್ನು ನೇಮಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

9

9


1967ರಲ್ಲಿ ಹೈದರಾಬಾದ್‌‌ನಲ್ಲಿ ಜನಿಸಿದ ಸತ್ಯ ನಾಡೆಲ್ಲಾ ಮಣಿಪಾಲದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌‌ನಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ.ನಂತರ ಹೆಚ್ಚಿನ ಆಧ್ಯಯನಕ್ಕೆ ಅಮೆರಿಕ್ಕೆ ತೆರಳಿದ ಸತ್ಯ ನಾಡೆಲ್ಲಾ ಕಂಪ್ಯೂಟರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು Wisconsin-Milwaukee ವಿವಿ ಮತ್ತು ಚಿಕಾಗೋ ವಿವಿಯಿಂದ ಎಂಬಿಎ ಪದವಿಯನ್ನು ಗಳಿಸಿದ್ದಾರೆ.

9

9


ತಮ್ಮ ಆರಂಭಿಕ ಉದ್ಯೋಗವನ್ನು ಪ್ರಸ್ತುತ ಒರೆಕಲ್‌ ಮಾಲೀಕತ್ವದ
ಸನ್‌ ಮೈಕ್ರೋಸಾಫ್ಟ್‌ನಲ್ಲಿ ಆರಂಭಿಸಿ ಮೈಕ್ರೋಸಾಫ್ಟ್‌ನ್ನು1992ರಲ್ಲಿ ಸೇರಿಕೊಂಡರು.ಬಳಿಕ ವಿವಿಧ ಹುದ್ದೆ ಜವಾಬ್ದಾರಿಯನ್ನು ನಿಭಾಯಿಸಿ ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

10

10

ಸತ್ಯ ನಾಡೆಲ್ಲಾ ಈ ರೀತಿ ಬೆಳೆಯಲು ಅವರ ಕುಟುಂಬವು ಕಾರಣ ಎಂದು ಹೇಳಬಹುದು.ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ನಾಡೆಲ್ಲಾ ಅವರ ತಂದೆ ಕೇಂದ್ರ ಸರ್ಕಾರದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಮನಮೋಹನ್‌ ಸಿಂಗ್‌ ಮುಖ್ಯಸ್ಥರಾಗಿರುವ ಯೋಜನಾ ಆಯೋಗದ ಸದಸ್ಯರಾಗಿ 2004-2009ರವರೆಗೆ ಕೆಲಸಮಾಡಿದ್ದಾರೆ.ತನ್ನ ಬಾಲ್ಯದ ಶಾಲಾ ಗೆಳತಿಯನ್ನು ನಾಡೆಲ್ಲಾ ವಿವಾಹವಾಗಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X