ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

By Ashwath
|

ಒಂದು ಕಿಮೀ ಎತ್ತರದ ವಿಶ್ವದಲ್ಲೇ ಅತಿ ಎತ್ತರದ ಟವರ್ ಸೌದಿ ಅರೇಬಿಯಾದಲ್ಲಿ ನಿರ್ಮಾಣಗೊಳ್ಳಲಿದೆ.ಈಗಾಗಲೇ ದುಬೈಯಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಪ್ರಖ್ಯಾತಿಯನ್ನು ಪಡೆದಿರುವ ಬುರ್ಜ್‌‌ ಎತ್ತರವನ್ನು ಮೀರಿಸುವ 'ಕಿಂಗ್‌‌ಡಂ ಟವರ್‌' ಜೆಡ್ಡಾದಲ್ಲಿ ನಿರ್ಮಾಣವಾಗುತ್ತಿದೆ.

ಕಿಂಗ್‌‌ಡಂ ಟವರ್‌ 6,330 ಕೋಟಿ ರೂ. ವೆಚ್ಚದಲ್ಲಿ ನಿರ್ಮಾ‌‌ಣಗೊಳ್ಳುತ್ತಿದ್ದು,63 ತಿಂಗಳಲ್ಲಿ ಪೂರ್ಣ‌ಗೊಳ್ಳಲಿದೆ ಎಂದು ಇದರ ನಿರ್ಮಾ‌ಣವನ್ನು ಕೈಗೊಂಡಿರುವ ಕಿಂಗ್‌ಡಂ ಹೋಲ್ಡಿಂಗ್ ಕಂಪೆನಿ ತಿಳಿಸಿದೆ.

ಸೌದಿ ಅರೇಬಿಯಾದ ಯುವರಾಜ ಅಲ್‌ ವಲೀದ್‌ ಬಿನ್‌ ತಲಾಲ್‌ 2008ರಲ್ಲಿ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಕಾಣಿಸಿಕೊಂಡ ಸಂದರ್ಭದಲ್ಲಿ ಕೆಂಪು ಸಮುದ್ರದ ಬಂದರು ನಗರಿಯ ಉತ್ತರಕ್ಕೆ 'ಕಿಂಗ್‌ಡಂ ಸಿಟಿ' ಯೋಜನೆಯನ್ನು ಪ್ರಕಟಿಸಿದ್ದರು.ಈ ಯೋಜನೆಯ ಭಾಗವಾಗಿ ಈ ಕಿಂಗ್‌ಡಮ್‌ ಟವರ್‌ ನಿರ್ಮಾ‌ಣಗೊಳ್ಳುತ್ತಿದೆ.

ಒಟ್ಟು 200 ಮಳಿಗೆಗಳ ವಾಣಿಜ್ಯ ಸಂಕೀರ್ಣ‌ದಲ್ಲಿ ಅಪಾರ್ಟ್‌ಮೆಂಟ್‌,ಹೋಟೆಲ್‌, ಐಷಾರಾಮಿ ಮನೆ ಹಾಗೂ ಕಚೇರಿಗಳು ಇರಲಿದೆ.160 ಮಹಡಿಗಳನ್ನು ವಸತಿಗೆ ಮೀಸಲಿಡಲಾಗುತ್ತದೆ. 2013 ಡಿಸೆಂಬರ್‌ನಲ್ಲಿ ಅಡಿಪಾಯ ಹಾಕುವ ಕಾಮಗಾರಿ ಆರಂಭವಾಗಿದ್ದು,ನೆಲಮಟ್ಟದಿಂದ ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಏ.27ರಿಂದ ಶುರುವಾಗಲಿದೆ.

ಮುಂದಿನ ಪುಟದಲ್ಲಿ ಈ ಟವರ್‌ ಕುರಿತ ಕೆಲ ಮಾಹಿತಿ ಮತ್ತು ವಿಡಿಯೋ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಡು ಹೋಗಿ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌
ಇದನ್ನೂ ಓದಿ: ದುಬೈನ ಬುರ್ಜ್ ಖಲೀಫಾ ಒಳಗಡೆ ಹೇಗಿದೆ ನೋಡಿದ್ದೀರಾ?

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಬುರ್ಜ್‌ ಖಲೀಫಾ ಕಟ್ಟಡವನ್ನು ವಿನ್ಯಾಸ ಮಾಡಿದ್ದ ಶಿಕಾಗೋ ಮೂಲದ ಆ್ಯಡ್ರಿಯನ್‌ ಸ್ಮಿತ್‌ ಅಂಡ್‌ ಗಾರ್ಡನ್‌ ಗಿಲ್‌ ಆರ್ಕಿಟೆಕ್ಚರ್‌ ಕಂಪನಿ ಈ ಯೋಜನೆಯನ್ನು ವಿನ್ಯಾಸಗೊಳಿಸಿದೆ.

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

2 ಚದರ ಮೈಲು ವಿಸ್ತೀರ್ಣದಲ್ಲಿ ಬೃಹತ್‌‌ ವಾಣಿಜ್ಯ ಸಂಕೀರ್ಣ‌ ನಿರ್ಮಾಣವಾಗಲಿದೆ.

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸದ್ಯ ವಿಶ್ವದಲ್ಲಿ ಅತಿ ಎತ್ತರದ ಕಟ್ಟಡ ಎಂದು ಪ್ರಖ್ಯಾತಿಗಳಿಸಿಕೊಂಡಿರುವ ದುಬೈನ ಬುರ್ಜ್‌ ಖಲೀಫಾ 828 ಮೀಟರ್‌ ಎತ್ತರವಿದೆ. ಬುರ್ಜ್‌ ಖಲೀಫಾ ನಿರ್ಮಾ‌ಣ ಕೆಲಸ ಆರು ವರ್ಷ‌ದಲ್ಲಿ ಪೂರ್ಣ‌ಗೊಂಡಿತ್ತು.

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಕಿಂಗ್‌ಡಂ ಟವರ್‌ ನಿರ್ಮಾ‌ಣ ಕೆಲಸವನ್ನು 63 ತಿಂಗಳಲ್ಲಿ(ಏಳು ವರ್ಷ‌) ಪೂರ್ಣ‌ಗೊಳಿಸುವುದಾಗಿ ಕಿಂಗ್‌ಡಂ ಹೋಲ್ಡಿಂಗ್ ಕಂಪೆನಿ ತಿಳಿಸಿದೆ.

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿ ಬಿನ್ ಲಾಡೆನ್ ಗ್ರೂಪ್ 2,065 ಕೋಟಿ ರೂ. ಹೂಡಿಕೆ ಮಾಡುತ್ತಿದೆ.

 ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಜೆಡ್ಡಾ ಎಕಾನಮಿಕ್ ಕಂಪೆನಿ ಶೇ 16.63 ರಷ್ಟು ಷೇರನ್ನು ಕಿಂಗ್‌ಡಂ ಟವರ್‌‌ನಲ್ಲಿ ಹೊಂದಿದೆ.

 ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

59 ಲಿಫ್ಟ್‌, 12 ಎಸ್ಕಲೇಟರ್‌‌‌ಗಳು ಈ ಟವರ್‌ನಲ್ಲಿ ಇರಲಿದೆ.

 ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ಕಿಂಗ್‌ಡಂ ಟವರ್‌

ವಿಶ್ವದ ಎತ್ತರದ ಕಟ್ಡಡಗಳು

ಸೌದಿಯಲ್ಲಿ ನಿರ್ಮಾಣವಾಗುತ್ತಿದೆ 1 ಕಿಮೀ ಎತ್ತರದ ಕಟ್ಟಡ!

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X