ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು

By Shwetha
|

ರಿಲಾಯನ್ಸ್ ಜಿಯೋ ಆರ್ಭಾಟ ದೇಶದೆಲ್ಲೆಡೆ ತುಸು ಜೋರಾಗಿಯೇ ಅಬ್ಬರಿಸುತ್ತಿದೆ. ಕಡಿಮೆ ದರದ ಟಾರಿಫ್ ಯೋಜನೆಗಳು ಮತ್ತು ಇನ್ನಷ್ಟು ಆಕರ್ಷಕ ಆಫರ್‌ಗಳನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಜಿಯೋ ಬಳಕೆದಾರರಿಗೆ ವರವಾಗಿ ಪರಿಣಮಿಸಿದೆ. ಅನಿಯಮಿತ 4ಜಿ ಆಫರ್ ಡೇಟಾವನ್ನು ನೀಡುತ್ತಿರುವ ಜಿಯೋ ಸಿಮ್ ಕೆಲವೊಂದು ನಿಯಮಗಳನ್ನು ತನ್ನಲ್ಲಿ ರೂಪಿಸಿಕೊಂಡಿದೆ.

ಓದಿರಿ: ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಬಳಕೆದಾರರು ಈ ಸಿಮ್ ಅನ್ನು ಬಳಸುವ ಮುನ್ನ ಜಿಯೋ ವಿಧಿಸಿರುವ ಷರತ್ತುಗಳೇನು ಎಂಬುದನ್ನೇ ಇಲ್ಲಿ ಅರಿತುಕೊಳ್ಳಲಿದ್ದೇವೆ. ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದೀರಿ ಎಂದಾದಲ್ಲಿ ತಿಳಿಸಲೂ ನಾವು ಸಿದ್ಧರಾಗಿರುವೆವು.

ಓದಿರಿ: ವೊಡಾಫೋನ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಹೇಗೆ?

ಎಸ್‌ಎಮ್‌ಎಸ್ ಅನಿಯಮಿತ

ಎಸ್‌ಎಮ್‌ಎಸ್ ಅನಿಯಮಿತ

ಜಿಯೋ ತನ್ನ ನೆಟ್‌ವರ್ಕ್‌ನಲ್ಲಿ ಅನಿಯಮಿತ ಎಸ್‌ಎಮ್‌ಎಸ್ ಅನ್ನು ಬಳಕೆದಾರರಿಗೆ ನೀಡಲಿದೆ. ಯಾರು ಎಷ್ಟು ಬೇಕಾದರೂ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಬಹುದಾಗಿದೆ. ರೂ 19 ಮತ್ತು ರೂ 149 ರ ಟಾರಿಫ್ ಯೋಜನೆಗಳಲ್ಲಿ ಚಂದಾದಾರರು ಗರಿಷ್ಟ 100 ಎಸ್‌ಎಮ್‌ಎಸ್‌ಗಳನ್ನು ಕಳುಹಿಸಬಹುದಾಗಿದೆ. ಅಂದರೆ 28 ದಿನಗಳ ವ್ಯಾಲಿಡಿಟಿ ಇದರಲ್ಲಿದೆ. ರೂ 299 ರ ಟಾರಿಫ್ ಯೋಜನೆಗಳನ್ನು ಬಳಸಿಕೊಳ್ಳುವ ಬಳಕೆದಾರರು ದಿನಕ್ಕೆ 100 ಕ್ಕಿಂತ ಹೆಚ್ಚಿನ ಎಸ್ಎಮ್‌ಎಸ್‌ಗಳನ್ನುದಿನಕ್ಕೆ ಕಳುಹಿಸಬಹುದಾಗಿದೆ.

ಅನಿಯಮಿತ ರಾತ್ರಿ ಡೇಟಾ

ಅನಿಯಮಿತ ರಾತ್ರಿ ಡೇಟಾ

ಆದರೆ ಜಿಯೋ ಈ ಆಫರ್ ಅನ್ನು ನೀಡುತ್ತಿದೆ ಎಂದಾದಲ್ಲಿ ನೀವು ಇದನ್ನು ಕೊಂಚ ಪರಿಶೀಲಿಸಿಕೊಳ್ಳಬೇಕು. ಅನಿಯಮಿತ ರಾತ್ರಿ ಡೇಟಾ ಬಳಕೆಯು ಬೆಳಗ್ಗೆ 2ರಿಂದ 5 ರ ಗಡುವನ್ನು ಪಡೆದುಕೊಂಡಿದೆ. ದಿನಕ್ಕೆ ಮೂರು ಗಂಟೆಗಳ ಅವಧಿಯನ್ನು ಮಾತ್ರ ಇದು ಪಡೆದುಕೊಂಡಿದೆ.

ಅನಿಯಮಿತ ಡೇಟಾ ಪ್ಲಾನ್

ಅನಿಯಮಿತ ಡೇಟಾ ಪ್ಲಾನ್

ರಿಲಾಯನ್ಸ್ ಜಿಯೋ ಅನಿಯಮಿತ ಡೇಟಾ ಪ್ಲಾನ್ ಅನ್ನು ಒದಗಿಸುತ್ತಿದೆ ಎಂಬುದು ನಿಮ್ಮ ವಿಶ್ವಾಸವಾಗಿದ್ದರೆ ಇಲ್ಲೂ ಕೆಲವೊಂದು ಷರತ್ತುಗಳನ್ನು ಜಿಯೋ ವಿಧಿಸಿದೆ. ದಿನಕ್ಕೆ ನಿಮಗೆ ಹೆಚ್ಚು ವೇಗದಲ್ಲಿ 4ಜಿಬಿ ಡೇಟಾ ಬಳಕೆ ದೊರೆಯುವುದಿಲ್ಲ ಎಂಬುದನ್ನು ನೀವು ಮನಗಾಣಲೇಬೇಕು. ಒಮ್ಮೆ ಈ ಮಿತಿಯನ್ನು ನೀವು ದಾಟಿದರೆ, ಡೇಟಾ ವೇಗವು 128 ಕೆಬಿಪಿಎಸ್‌ಗೆ ಇಳಿಯುತ್ತದೆ.

ಜಿಯೋ ಅಪ್ಲಿಕೇಶನ್ ಆಕ್ಸೆಸ್ ಸಂಪೂರ್ಣ ಉಚಿತ

ಜಿಯೋ ಅಪ್ಲಿಕೇಶನ್ ಆಕ್ಸೆಸ್ ಸಂಪೂರ್ಣ ಉಚಿತ

ತನ್ನ ಅಪ್ಲಿಕೇಶನ್ ಮತ್ತು ಸೇವೆಗಳಿಗೆ ಬಳಕೆದಾರರು ಅನಿಯಮಿತ ಪ್ರವೇಶವನ್ನು ಆನಂದಿಸಬಹುದು ಎಂಬುದಾಗಿ ಜಿಯೋ ತಿಳಿಸಿದೆ. ಜಿಯೋ ಸಿನೆಮಾ, ಜಿಯೋ ಟಿವಿ, ಜಿಯೋ ಮ್ಯಾಗ್ಸ್, ಜಿಯೋ ಮ್ಯೂಸಿಕ್, ಜಿಯೋ ನ್ಯೂಸ್‌ಪೇಪರ್, ಜಿಯೋ ಕ್ಲೌಡ್ ಮತ್ತು ಜಿಯೋ ಸೆಕ್ಯುರಿಟಿ ಇವುಗಳನ್ನು ಅಪ್ಲಿಕೇಶನ್ ಒಳಗೊಂಡಿದೆ. ಡಿಸೆಂಬರ್ 31 ರವರೆಗೆ ಕಂಪೆನಿಯು ಈ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ವಿಧಿಸಿದೆ. ಈ ಅಪ್ಲಿಕೇಶನ್‌ಗಳನ್ನು ನೀವು ಅತಿಯಾಗಿ ಬಳಸಿಕೊಳ್ಳುವುದು ಕೂಡ ನಿಯಮವನ್ನು ಪಡೆದುಕೊಂಡಿದೆ. ಜಿಯೋ ನೆಟ್‌ವರ್ಕ್‌ಗೆ ನೀವು ಸಂಪರ್ಕವನ್ನು ಪಡೆದುಕೊಂಡಿದ್ದಾಗ ಮಾತ್ರವೇ ಈ ಅಪ್ಲಿಕೇಶನ್‌ಗಳನ್ನು ನಿಮಗೆ ಬಳಸಬಹುದಾಗಿದೆ. ವೈಫೈ ಸಂರ್ಕದಲ್ಲಿ ಇದಕ್ಕೆ ಪ್ರವೇಶವಿಲ್ಲ.

ಪ್ರತೀ ಜಿಬಿಗೆ ರೂ 50

ಪ್ರತೀ ಜಿಬಿಗೆ ರೂ 50

4ಜಿ ಡೇಟಾದ ಪ್ರತೀ ಜಿಬಿಗೆ ರೂ 50 ಅನ್ನು ಜಿಯೋ ಒದಗಿಸುತ್ತಿದೆ ಎಂಬ ಮಾತಿದೆ. ಇದು ಸೆಲ್ಯುಲಾರ್ ಡೇಟಾಗೆ ಅಲ್ಲ ಆದರೆ ಜಿಯೋನೆಟ್‌ಗೆ ಮಾತ್ರ ಎಂಬುದನ್ನು ಮನಗಾಣಿ. 4ಜಿ ಸೇವೆಗಳೊಂದಿಗೆ, ಜಿಯೋ ಪಬ್ಲಿಕ್ ಹಾಟ್‌ಸ್ಪಾಟ್ ಜಿಯೋ ನೆಟ್‌ ಅನ್ನು ಕೂಡ ನಿಯೋಜಿಸಿದೆ. ಪ್ರತೀ ಪ್ಲಾನ್‌ಗೆ ನೀವು ಜಿಯೋ ನೆಟ್‌ಗೆ ಟೆದರಿಂಗ್ ಮಾಡಿದಾಗ ಮಾತ್ರವೇ ಸೆಲ್ಯುಲಾರ್ ಡೇಟಾವನ್ನು ಪಡೆದುಕೊಳ್ಳುತ್ತೀರಿ. ಜಿಯೋ ನೆಟ್ ಬಳಕೆಯನ್ನು ಬಳಕೆಯನ್ನು ಕ್ರಾಸ್ ಮಾಡಿದಾಗ ಮಾತ್ರವೇ ರೂ 50 ರ ಪ್ರತೀ ಜಿಬಿ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ ಆದರೆ ಸೆಲ್ಯುಲಾರ್ ಡೇಟಾದಲ್ಲಿ ಅಲ್ಲ.

Best Mobiles in India

English summary
Here, we have come up with some myths that are related to the Reliance Jio SIM Welcome Offer that you need to know before you actually get hold of a SIM. Read the same from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X