ಆನ್‌ಲೈನ್‌ ಶಾಪಿಂಗ್‌ ಮಾಡುವವರ ಖಾತೆ ಹ್ಯಾಕ್‌

By Suneel
|

ಆನ್‌ಲೈನ್‌ ಬಳಕೆ ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿ ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ. ಕಾರಣ ಏಕೆಂದರೆ ಚೀನಾದಲ್ಲಿ ಹ್ಯಾಕರ್‌ಗಳು ಸುಮಾರು 20 ದಶಲಕ್ಷ ಜನರ ಚಾಲ್ತಿಯಲ್ಲಿನ ಖಾತೆಗಳನ್ನು ಆಕ್ಸೆಸ್‌ ಮಾಡಲು ಪ್ರಯತ್ನಿಸಿದ್ದಾರೆ. ಮುಂದೊಂದು ದಿನ ಹೀಗೆಯೇ ಹ್ಯಾಕರ್‌ಗಳ ದಾಳಿ ಮುಂದುವರೆದರೆ, ಆನ್‌ಲೈನ್‌ ಶಾಪಿಂಗ್ ಮಾಡುವ ಮತ್ತು ಆನ್‌ಲೈನ್‌ ಬ್ಯಾಂಕಿಂಗ್‌ ಬಳಸುವವರು ಅವರ ಖಾತೆಗಳಲ್ಲಿ ಗೊತ್ತಾಗದ ಹಾಗೆಯೇ ಬ್ಯಾಂಕ್‌ ಖಾತೆಯಲ್ಲಿನ ಹಣ ಖಾಲಿಯಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಹ್ಯಾಕಿಂಗ್‌ಗೆ ಒಳಗಾಗುವ ಬಗ್ಗೆ ಮುನ್ನೆಚ್ಚರಿಗೆ ವಹಿಸಲೇ ಬೇಕಾಗಿದೆ.

ಓದರಿ :ಭಾರತೀಯ ಸೇನೆಯ ಮೇಲೆ ಪಾಕಿಸ್ತಾನಿ ಹ್ಯಾಕರ್ ದಾಳಿ

ಇಂದಿನ ಲೇಖನದಲ್ಲಿ ಚೀನಾದಲ್ಲಿ ಹ್ಯಾಕರ್‌ಗಳು ಸುಮಾರು 20 ದಶಲಕ್ಷ ಜನರ ಚಾಲ್ತಿಯಲ್ಲಿನ ಖಾತೆಗಳನ್ನು ಆಕ್ಸೆಸ್‌ ಮಾಡಲು ಪ್ರಯತ್ನಿಸಿದ ಅಘಾತಕಾರಿ ವಿಷಯವನ್ನು ನಿಮ್ಮ ತಿಳಿಸುತ್ತಿದ್ದೇವೆ.

20 ದಶಲಕ್ಷ ಬ್ಯಾಂಕ್‌ ಖಾತೆ ಹ್ಯಾಕ್‌

20 ದಶಲಕ್ಷ ಬ್ಯಾಂಕ್‌ ಖಾತೆ ಹ್ಯಾಕ್‌

ಚೀನಾದಲ್ಲಿ ಹ್ಯಾಕರ್‌ಗಳು ಸುಮಾರು 20 ದಶಲಕ್ಷ ಜನರ ಚಾಲ್ತಿಯಲ್ಲಿನ ಖಾತೆಗಳನ್ನು ಆಕ್ಸೆಸ್‌ ಮಾಡಲು ಪ್ರಯತ್ನಸಲಾಗಿದೆ.

ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌

ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌

ಚೀನಾದ ತಾವೊಬಾವೊ ಇ-ಕಾಮರ್ಸ್ ವೆಬ್‌ಸೈಟ್‌, ಆಲಿಬಾಬಾ ಕ್ಲೌಡ್‌ ಕಂಪ್ಯೂಟಿಂಗ್‌ ಸೇವೆಯನ್ನು ಹೊಂದಿದ್ದು ಎಂದು ಸ್ಟೇಟ್‌ ಮೀಡಿಯಾ ವರದಿಯನ್ನು ಇಂಟರ್ನೆಟ್‌ ರೆಗೂಲೇಟರ್ಸ್‌ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಹ್ಯಾಕರ್‌ಗಳ ದಾಳಿ ಪತ್ತೆ

ಹ್ಯಾಕರ್‌ಗಳ ದಾಳಿ ಪತ್ತೆ

ಆಲಿಬಾಬಾ ಕಂಪನಿಯೂ ಸದಸ್ಯರೊಬ್ಬರು "ಮೊದಲ ಪ್ರಸಂಗ"ದಲ್ಲಿ ಹ್ಯಾಕರ್‌ಗಳ ದಾಳಿ ಪತ್ತೆ ಮಾಡಿದ್ದು, ಖಾತೆದಾರರಿಗೂ ಖಾತೆಯ ಪಾಸ್‌ವರ್ಡ್‌ ಅನ್ನು ಬದಲಿಸಲು ಹೇಳಿದ್ದಾರೆ. ಅಲ್ಲದೇ ಪೊಲೀಸರು ಕಾರ್ಯಾಚರಣೆ ನೆಡೆಸುತ್ತಿದ್ದಾರೆ.

ಸೈಬರ್‌ ದಾಳಿ ಚೀನದಲ್ಲಿ ಅಧಿಕ

ಸೈಬರ್‌ ದಾಳಿ ಚೀನದಲ್ಲಿ ಅಧಿಕ

ಚೀನಾ ಕಂಪನಿಗಳಲ್ಲಿ ಸೈಬರ್‌ ದಾಳಿಗೆ ಹೆಚ್ಚು ಗುರಿಯಾಗಿದ್ದು, ಸೈಬರ್‌ ಸುರಕ್ಷತೆ ತಜ್ಞರು ಅಪರಾಧಿಗಳನ್ನು ಪತ್ತೆಹಚ್ಚಲು ದೀರ್ಘ ಸಮಯ ತೆಗೆದುಕೊಳ್ಳುತ್ತಿದೆ. ಆದದ್ದರಿಂದ ಇವರು ಅಮೇರಿಕ ಕೌಂಟರ್‌ಪಾರ್ಟ್ಸ್‌ಗೆ ವಹಿಸಲು ನಿರ್ಧರಿಸಿದ್ದಾರೆ.

 99 ದಶಲಕ್ಷ ಜನರ ಡೇಟಾ ಹ್ಯಾಕ್‌

99 ದಶಲಕ್ಷ ಜನರ ಡೇಟಾ ಹ್ಯಾಕ್‌

ಇತ್ತೀಚಿನ ಕಳೆದ ದಿನಗಳ ಹಿಂದೆ ಹಲವು ವೆಬ್‌ಸೈಟ್‌ಗಳ ಮೂಲಕ ಹ್ಯಾಕರ್‌ಗಳು 99 ದಶಲಕ್ಷ ಜನರ ಡೇಟಾವನ್ನು ಹ್ಯಾಕ್‌ ಮಾಡಿದ್ದರು ಎಂದು ಸಾರ್ವಜನಿಕ ಸುರಕ್ಷತೆ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ವರದಿಯಾಗಿತ್ತು.

ಹ್ಯಾಕರ್‌ಗಳ ಪತ್ತೆ

ಹ್ಯಾಕರ್‌ಗಳ ಪತ್ತೆ

ಹ್ಯಾಕರ್‌ಗಳು ಅಕ್ಟೋಬರ್ ತಿಂಗಳ ಮಧ್ಯಾಂತರದಲ್ಲಿ ತಾವೊಬಾವೊ ವೆಬ್‌ಸೈಟ್‌ಗೆ ವಿವರಗಳನ್ನು ಸೇರಿಸುತ್ತಿದ್ದರು. ಅವರನ್ನು ನವೆಂಬರ್‌ದಲ್ಲಿ ದಾಳಿ ಮಾಡಿರುವ ಬಗ್ಗೆ ಪತ್ತೆ ಹಚ್ಚಲಾಯಿತು. ಅಂದೆಯೇ ಶೀಘ್ರದಲ್ಲಿ ಪೊಲೀಸರಿಗೆ ಪ್ರಕರಣ ವರದಿ ಮಾಡಲಾಯಿತು ಎನ್ನಲಾಗಿದೆ.

 ಲಾಗಿನ್‌ ಬ್ಲಾಕ್‌

ಲಾಗಿನ್‌ ಬ್ಲಾಕ್‌

ಆಲಿಬಾಬಾ ಸಿಸ್ಟಮ್‌, ಹ್ಯಾಕರ್‌ಗಳ ದಾಳಿಯನ್ನು ಪತ್ತೆ ಹಚ್ಚಿನ ನಂತರ ಹ್ಯಾಕರ್‌ಗಳು ದಾಳಿ ಮಾಡಿ ಲಾಗಿನ್‌ ಆಗುವುದಕ್ಕೆ ಅವಕಾಶ ಆಗದಂತೆ ಬ್ಲಾಕ್‌ ಮಾಡಿದ್ದಾರೆ ಎಂದು ಸಚಿವಾಲಯ ವೆಬ್‌ಸೈಟ್‌ ಹೇಳಿದೆ.

ಹ್ಯಾಕರ್‌ಗಳು ಮಾಡಿದ್ದೇನು ?

ಹ್ಯಾಕರ್‌ಗಳು ಮಾಡಿದ್ದೇನು ?

ಹ್ಯಾಕರ್‌ಗಳು, ತಾವೊಬಾವೊ ವೆಬ್‌ಸೈಟ್‌ನಲ್ಲಿ ದಾಳಿ ನಡೆಸಿದಾಗ ರಾಜಿಯಾದ ಖಾತೆಗಳ ಮೂಲಕ ಫೇಕ್‌ ಆರ್ಡರ್‌ ನಡೆಸಿದ್ದಾರೆ. ಅಲ್ಲದೇ ಖಾತೆಗಳನ್ನು ಇತರ ವಂಚನೆ ನಡೆಸುವವರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

Best Mobiles in India

English summary
Shopping website hacked, 20 million accounts compromised. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X