ಸ್ಕೈಪ್‌ನ ಹೊಸ ಫೀಚರ್ ಇನ್ನು ಆಂಡ್ರಾಯ್ಡ್‌ನಲ್ಲಿ

By Shwetha
|

ಸ್ಕೈಪ್ ಅಪ್ಲಿಕೇಶನ್‌ಗೆ ಹೊಸ ನವೀಕರಣವು ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ವೀಡಿಯೊ ಚಾಟ್ ವಿಂಡೋದ ಹೊರತಾಗಿ ಅವರು ಇಷ್ಟಪಟ್ಟಿರುವುದನ್ನು ನೋಡಲು ಅನುಮತಿಸುತ್ತದೆ.

ಪಿಕ್ಚರ್ ಇನ್ ಪಿಕ್ಚರ್ ಫೀಚರ್ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಈಗಾಗಲೇ ಲಭ್ಯವಿದ್ದು ಫೋನ್‌ಗಳಲ್ಲಿ ದೀರ್ಘ ಮಿತಿಯನ್ನು ಹೊಂದಿತ್ತು. ಮೈಕ್ರೋಸಾಫ್ಟ್ ಇದೀಗ ಆಂಡ್ರಾಯ್ಡ್‌ನಲ್ಲಿ ಇತ್ತೀಚಿನ ಅಪ್‌ಡೇಟ್ ಮೂಲಕ ಹೊಸ ಫೀಚರ್ ಅನ್ನು ತನ್ನ ಸ್ಕೈಪ್ ಅಪ್ಲಿಕೇಶನ್‌ಗೆ ಪ್ರಾಯೋಜಿಸುತ್ತಿದೆ ಎಂದು ಪಿಸಿ ವರ್ಲ್ಡ್ ತಿಳಿಸಿದೆ.

ಆಂಡ್ರಾಯ್ಡ್ ಡಿವೈಸ್‌ನಲ್ಲೂ ಪಡೆಯಿರಿ ಸ್ಕೈಪ್‌ನ ಹೊಸ ಫೀಚರ್

ತ್ವರಿತ ಸಂದೇಶಗಳಲ್ಲಿ ಪಠ್ಯವನ್ನು ಸ್ವರೂಪಗೊಳಿಸಲು ನವೀಕರಣವು ಬಳಕೆದಾರರನ್ನು ಅನುಮತಿಸುತ್ತಿದ್ದು ಐಫೋನ್ ಸ್ಕೈಫೋನ್ ಬಳಕೆದಾರರಿಂದ ಕಳುಹಿಸಿದ ಫೋಟೋಗಳನ್ನು ಸ್ವೀಕರಿಸಲು ಅನುಮತಿಸುತ್ತದೆ. ಇದು ಕಡ್ಡಾಯ ಬಗ್ ಫಿಕ್ಸ್‌ಗಳನ್ನು ಒಳಗೊಂಡಿದ್ದು ಆವೃತ್ತಿ ನವೀಕರಣದೊಂದಿಗೆ ಬಂದಿದೆ.

ಇದನ್ನೂ ಓದಿ: ನೀವು ಕಂಡರಿಯದ ಲಾಲಿಪಪ್ ವಿಶೇಷತೆಗಳು

ಇತ್ತೀಚಿನ ವರದಿ ಹೇಳುವಂತೆ ಸ್ಕೈಪ್‌ನೊಂದಿಗೆ ಡಾಕ್ಯುಮೆಂಟ್‌ಗಳನ್ನು ಚಾಟ್ ಮಾಡಲು ಮೈಕ್ರೋಸಾಫ್ಟ್ ಆಫೀಸ್ ಆನ್‌ಲೈನ್ ಬಳಕೆದಾರರಿಗೆ ಅನುಮತಿಸುತ್ತದೆ. ಆಫೀಸ್ ಆನ್‌ಲೈನ್ ಹೊಸ ವಿಶೇಷತೆಯಾದ 'ಡಾಕ್ಯುಮೆಂಟ್ ಚಾಟ್' ಅನ್ನು ಸಂಯೋಜಿಸಿದ್ದು ಒಬ್ಬರು ಇನ್ನೊಬ್ಬರೊಂದಿಗೆ ಚಾಟ್ ಮಾಡಲು ಮತ್ತು ಡಾಕ್ಯುಮೆಂಟ್‌ಗಳಲ್ಲಿ ಜತೆಗೂಡಿ ಕಾರ್ಯನಿರ್ವಹಿಸಲು ಅನುಮತಿಸುತ್ತದೆ. ಮೇಲಿನ ಬಲಭಾಗದಲ್ಲಿ ಚಾಟ್ ಬಟನ್ ಮೇಲೆ ಸುಮ್ಮನೆ ಕ್ಲಿಕ್ ಮಾಡುವ ಮೂಲಕ ಡಾಕ್ಯುಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಂತೆಯೇ ಬಳಕೆದಾರರು ಪ್ರತಿಯೊಬ್ಬರೊಂದಿಗೆ ಚಾಟ್ ಮಾಡಬಹುದು, ಇದು ಸಹೋದ್ಯೋಗಿಗಳೊಂದಿಗೆ ಸಂವಹಿಸಲು ಸುಲಭ ಮಾರ್ಗವನ್ನು ಒದಗಿಸುತ್ತದೆ.

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಲಭ್ಯವಿರುವ ಸ್ಕೈಪ್‌ನೊಂದಿಗೆ ಇತ್ತೀಚೆಗೆ ಪ್ರಸ್ತುತಪಡಿಸಲಾದ ವೆಬ್ ಬ್ರೌಸರ್‌ಗಳಲ್ಲಿ, ಬಳೆಕೆದಾರರು ಡಾಕ್ಯುಮೆಂಟಿನ ಹೊರಗಿದ್ದರೂ ತಮ್ಮ ಸಂವಾದಗಳನ್ನು ಮುಂದುವರಿಸಬಹುದು.

Best Mobiles in India

English summary
This article tells about A new update to the Skype app will now allow Android users to do away with the video chat window and move on to something more intriguing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X