ಇನ್ನೂ ಮುಂದೆ ವೀಸಾ,ಪಾಸ್‌ಪೋರ್ಟ್‌ ಪ್ರಕ್ರಿಯೆ ಸುಲಭ!

By Ashwath
|

ವೀಸಾ ,ಪಾಸ್‌ಪೋರ್ಟ್‌ ಪಡೆಯುವ ಪ್ರಕ್ರಿಯೆ ಇನ್ನು ಮುಂದೆ ಸುಗಮವಾಗಲಿದೆ. ಈ ಪ್ರಕ್ರಿಯೆ ಈ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಭಾರತದ ವಿದೇಶಾಂಗ ಇಲಾಖೆ ನಿರ್ಧರಿಸಿದ್ದು, ವೀಸಾ, ಪಾಸ್‌ಪೋರ್ಟ್‌ಗಾಗಿ ವಿಶೇಷ ಮೊಬೈಲ್‌ ಅಪ್ಲಿಕೇಶನ್‌ ತರಲು ಸಜ್ಜಾಗಿದೆ

ವೀಸಾ, ಪಾಸ್‌ಪೋರ್ಟ್‌ ಪ್ರಕ್ರಿಯೆಗಳಿಗೆ ವಿವಿಧ ಇಲಾಖೆ,ಅಧಿಕಾರಿಗಳ ಅನುಮತಿ ಅಗತ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ಸುಗಮಗೊಳಿಸಲು ಈ ಎಲ್ಲಾ ಇಲಾಖೆಗಳ ಅನುಮತಿ ಪ್ರಕ್ರಿಯೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಇಲಾಖೆ ಈಗ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲು ಮುಂದಾಗಿದ್ದು,ಸದ್ಯದಲ್ಲೇ ಅಪ್ಲಿಕೇಶನ್‌ ಬಿಡುಗಡೆಯಾಗಲಿದೆ.

ಇನ್ನೂ ಮುಂದೆ ವೀಸಾ,ಪಾಸ್‌ಪೋರ್ಟ್‌ ಪ್ರಕ್ರಿಯೆ ಸುಲಭ!

ಈ ಅಪ್ಲಿಕೇಶನ್‌ಲ್ಲೇ ಹಜ್‌ ಯಾತ್ರೆಗೆ, ಮಾನಸ ಸರೋವರ ಯಾತ್ರೆ ಕುರಿತ ಸೇವೆಗಳ ಮಾಹಿತಿಯನ್ನು ಸಹ ವಿದೇಶಾಂಗ ಇಲಾಖೆ ಸೇರಿಸಲಿದೆ.

ಈಗಾಗಲೇ ಫೇಸ್‌ಬುಕ್‌, ಟ್ವೀಟರ್‌ನಲ್ಲಿ ತನ್ನ ಮಾಹಿತಿಗಳನ್ನು ಪ್ರಕಟಿಸಿ ಜನರಿಗೆ ಮಾಹಿತಿ ನೀಡುತ್ತಿದ್ದ ವಿದೇಶಾಂಗ ಇಲಾಖೆ , ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಪ್ಲಿಕೇಶನ್‌ ತಯಾರಿಸಲು ಮುಂದಾಗಿದೆ. ಆರಂಭದಲ್ಲಿ ಐಓಎಸ್, ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಲ್ಲಿ ಈ ಅಪ್ಲಿಕೇಶನ್‌ ಬರಲಿದೆ.

ಈ ಅಪ್ಲಿಕೇಶನ್‌ಲ್ಲಿ ಪಾಸ್‌ಪೋರ್ಟ್‌‌ಗೆ ಅರ್ಜಿ‌ ಸಲ್ಲಿಸುವುದು ಹೇಗೆ?ಯಾವೆಲ್ಲ ದಾಖಲೆಗಳು ಬೇಕು?ಹಣ ಪಾವತಿ ಹೇಗೆ? ಮುಂತಾದ ಜನರ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಜೊತೆಗೆ ವಿದೇಶಾಂಗ ಮಂತ್ರಿಗೆ ಜನರು ಈ ಅಪ್ಲಿಕೇಶನ್‌ಲ್ಲಿ ಪ್ರಶ್ನೆ ಹಾಕಿ ಉತ್ತರ ಪಡೆಯಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೇರೆ ದೇಶದವರು ನಮ್ಮ ದೇಶದ ಮಾಹಿತಿ ಕದಿಯುವುದು ಹೇಗೆ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X