ಸೋನಿ ಎಕ್ಸ್‌ಪೀರಿಯಾ ಝೆಡ್3 ಮತ್ತು ಟಾಪ್ 10 ಪ್ರತಿಸ್ಪರ್ಧಿಗಳು: ಅತ್ಯುತ್ತಮ ಮತ್ತು ಉಳಿದಿರುವುದಕ್ಕೆ ಇರುವ ವ್ಯತ್ಯಾಸ

By Shwetha
|

ಹೆಚ್ಚಿನ ಖ್ಯಾತ ಸ್ಮಾರ್ಟ್‌ಫೋನ್ ತಯಾರಕರು ಈ ವರ್ಷ ಹೆಚ್ಚಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದನ್ನು ನಮಗೆ ಕಾಣಬಹುದು. ಭಾರತೀಯ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿರುವ ಅಂತರಾಷ್ಟ್ರೀಯ ಖ್ಯಾತನಾಮರ ಈ ಪ್ರಗತಿಯು ಸ್ಪರ್ಧೆಯನ್ನು ಹೆಚ್ಚಿಸುವಲ್ಲಿ ಕಾರಣವಾಗಿದೆ. ಆಪಲ್, ಸ್ಯಾಮ್‌ಸಂಗ್ ಮತ್ತು ಎಚ್‌ಟಿಸಿ ಭಾರತದಲ್ಲಿ ತಮ್ಮ ವ್ಯಾಪಾರವನ್ನು ಉತ್ತಮವಾಗಿಯೇ ಮಾಡುತ್ತಿದ್ದು, ಸೋನಿ ಕಂಪೆನಿಯ ಎಕ್ಸ್‌ಪೀರಿಯಾ ಝೆಡ್3 ಆಗಮನ ಈ ವ್ಯಾಪಾರಕ್ಕೆ ಧಕ್ಕೆಯನ್ನುಂಟು ಮಾಡುವ ಕಾಲ ಸನ್ನಿಹಿತವಾಗಿದೆ.

ಅತ್ಯಾಧುನಿಕ ಹಾರ್ಡ್‌ವೇರ್ ಅನ್ನು ಹೊಂದಿ ಆಕರ್ಷಕ ವಿನ್ಯಾಸದಲ್ಲಿರುವ ಸೋನಿ ಎಕ್ಸ್‌ಪೀರಿಯಾ ಝೆಡ್3 ರೂ 51,990 ಕ್ಕೆ ಬಿಡುಗಡೆಯಾಗಿದೆ. ಅದಾಗ್ಯೂ ಸೋನಿಯ ಆಕರ್ಷಕ ಸ್ಮಾರ್ಟ್‌ಫೋನ್ ಅನ್ನು ಆಕರ್ಷಕ ಬೆಲೆ ರೂ 49,990 ಮಾರುಕಟ್ಟೆಯಲ್ಲಿ ನಿಮಗೆ ಖರೀದಿಸಬಹುದು.

ಸೋನಿಯು ನಿಜಕ್ಕೂ ಭರ್ಜರಿಯಾಗಿರುವ ಹಾರ್ಡ್‌ವೇರ್ ಅನ್ನು ತಯಾರಿಸಿದ್ದು ಹಿಂದೆಂದಿಗಿಂತಲೂ ಹೆಚ್ಚು ಕಾತರಮಯವಾಗಿ ತನ್ನ ಹೊಸ ಫ್ಲ್ಯಾಗ್‌ಶಿಪ್‌ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಎಕ್ಸ್‌ಪೀರಿಯಾ ಝೆಡ್3 ಯೊಂದಿಗೆ, ನಿಜವಾದ ಪ್ರಯೋಜನವನ್ನು ಪಡೆಯಲಿರುವ ಉತ್ತಮ ಬಳಕೆದಾರರನ್ನು ಸೋನಿ ಇಲ್ಲಿ ಗುರುತಿಸುತ್ತಿದೆ.

ಸೋನಿ ಎಕ್ಸ್‌ಪೀರಿಯಾ ಝೆಡ್3 - ಪ್ರಮುಖ ವಿಶೇಷತೆಗಳು

ಇನ್ನಷ್ಟು ಉತ್ತಮತನವನ್ನು ಕಾಯ್ದಿರಿಸಿಕೊಳ್ಳುವ ನಿಟ್ಟಿನಲ್ಲಿ ಸೋನಿ ಎಕ್ಸ್‌ಪಿರಿಯಾ ಝೆಡ್3 ಮುಂದಿನ ಹಂತಕ್ಕೆ ತನ್ನ ಯೋಜನೆಗಳನ್ನು ವಿಸ್ತರಿಸಿದೆ. ಡಿವೈಸ್‌ನ ವಿನ್ಯಾಸ ಮಾತ್ರ ಆಕರ್ಷಕವಾಗಿರದೇ, ಇದರಲ್ಲಿರುವ ಹಾರ್ಡ್‌ವೇರ್ ಕೂಡ ನಿಜಕ್ಕೂ ಮನಸೋಲುವಂತೆ ಮಾಡುತ್ತಿದೆ. ಅತ್ಯಾಧುನಿಕ ಎಕ್ಸ್‌ಪೀರಿಯಾ ಝೆಡ್3, 5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ( 1920 x 1080) ಇದರ ಪಿಕ್ಸೆಲ್ ಡೆನ್ಸಿಟಿ 424 ppi ಯೊಂದಿಗೆ ಬಂದಿದೆ. ಜಿ2 ನ ಡಿಸ್‌ಪ್ಲೇಗೆ ಹೋಲಿಸಿದಾಗ ಈ ಫೋನ್‌ನ ಪರದೆಯು 20 % ಹೆಚ್ಚು ಪ್ರಕಾಶಮಾನವಾಗಿದ್ದು ಇದರ ಡಿಸ್‌ಪ್ಲೇ ಪರಿಣಾಮಕಾರಿಯಾಗಿದೆ ಮತ್ತು ಪಠ್ಯಗಳನ್ನು ನಿರರ್ಗಳವಾಗಿ ನೇರವಾಗಿ ಸೂರ್ಯನ ಬೆಳಕಿನಲ್ಲಿ ಓದಬಹುದಾಗಿದೆ.

ಇನ್ನು ಎಕ್ಸ್‌ಪೀರಿಯಾ ಝೆಡ್3 ನ ಆಂತರಿಕ ಪ್ರೊಸೆಸರ್ 2.5GHz ಇದರಲ್ಲಿದ್ದು ಎಕ್ಸ್‌ಪೀರಿಯಾ ಜಿ2 ನಲ್ಲಿದ್ದ ಅದೇ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್ ಎಕ್ಸ್‌ಪೀರಿಯಾ ಝೆಡ್3 ನಲ್ಲೂ ಇದೆ. ಇನ್ನು ಡಿವೈಸ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು 3,100mAh ಬ್ಯಾಟರಿಯನ್ನು ಎಕ್ಸ್‌ಪೀರಿಯಾ ಝೆಡ್3 ಹೊಂದಿದೆ.

ಇದಲ್ಲದೆ ಸೋನಿ ಎಕ್ಸ್‌ಪೀರಿಯಾ ಝೆಡ್3 ನಿಜಕ್ಕೂ ಅದ್ಭುತವಾದ ಕ್ಯಾಮೆರಾದೊಂದಿಗೆ ಬಂದಿದ್ದು ಎಕ್ಸ್‌ಪೀರಿಯಾ ಝೆಡ್3 ಇಂಡಸ್ಟ್ರೀಯಲ್ಲೇ ಉತ್ತಮ ಎಂದು ಹೆಸರು ಗಳಿಸಿರುವ 20.7MP ಕ್ಯಾಮೆರಾದೊಂದಿಗೆ ಬಂದಿದೆ. ಇದರ ಸೆನ್ಸಾರ್ ಐಎಸ್‌ಒ 12800 ಆಗಿದ್ದು, ಇದೇ ಶ್ರೇಣಿಯ ಇತರ ಫೋನ್‌ಗಳು ಐಎಸ್‌ಒ 800 ವರೆಗೆ ಮಾತ್ರ ಇರುತ್ತದೆ. ಇದರರ್ಥ ಫೋನ್ ನಿಜಕ್ಕೂ ಅದ್ಭುತವಾಗಿದ್ದು ಧ್ವನಿ ರಹಿತವಾಗಿದೆ. ಇನ್ನು ಫೋನ್‌ನ ರಿಯರ್ ಕ್ಯಾಮೆರಾವು 4 ಕೆ ವೀಡಿಯೊಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದ್ದರಿಂದಲೇ ಉತ್ತಮ ಗುಣಮಟ್ಟದ ವೀಡಿಯೊವನ್ನು ದಾಖಲಿಸಲು ಎಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್ ನಿಜಕ್ಕೂ ಹೇಳಿಮಾಡಿಸಿದ್ದಾಗಿದೆ.

ಪಿಎಸ್ 4 ರಿಮೋಟ್ ಪ್ಲೇ ಎನ್ನುವ ಫೀಚರ್ ಅನ್ನು ಎಕ್ಸ್‌ಪೀರಿಯಾ ಪಡೆದುಕೊಂಡಿದ್ದು ಇದು ಫೋನ್‌ಗೆ ಹೆಚ್ಚಿನ ಗುಣಮಟ್ಟದ ಪಿಎಸ್4 ಗೇಮ್‌ಗಳನ್ನು ಕನ್ಸೋಲರ್ ಆನ್ ಆಗಿದ್ದಾಗ ಅಥವಾ ಸ್ಟ್ಯಾಂಡ್‌ ಬೈ ಮೋಡ್‌ನಲ್ಲಿದ್ದಾಗ ವೈಫೈ ಮೂಲಕ ಆಡಲು ಅನುವು ಮಾಡಿಕೊಡುತ್ತದೆ.

ಸೋನಿಯ ಜಲನಿರೋಧಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಕ್ಸ್‌ಪೀರಿಯಾ ಝೆಡ್3 ನಿಜಕ್ಕೂ ಅದ್ಭುತವಾದ ಹ್ಯಾಂಡ್‌ಸೆಟ್ ಆಗಿದೆ. ಡಿವೈಸ್ ನಿಜಕ್ಕೂ ಹಗುರವಾಗಿದೆ ಮತ್ತು ಇದರ ಹಿಂದಿನ ಆವೃತ್ತಿ ಎಕ್ಸ್‌ಪೀರಿಯಾ ಜಿ2 ಗಿಂತ ಹೆಚ್ಚು ಆಕರ್ಷಕವಾಗಿದೆ. ಮಾರುಕಟ್ಟೆಯಲ್ಲಿರುವ ಇತರ ಅತ್ಯುತ್ತಮ ಫೋನ್‌ಗಳಿಗಿಂತ ಎಕ್ಸ್‌ಪೀರಿಯಾ ಝೆಡ್3 ಹೇಗೆ ಹೆಚ್ಚು ಆಕರ್ಷಕ ಮತ್ತು ಭಿನ್ನವಾಗಿದೆ? ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವ ಮುನ್ನ ಈ ಫೋನ್‌ನ ಕುರಿತಾದ ಇನ್ನಷ್ಟು ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

#1

#1

4.7 ಇಂಚಿನ ರೆಟಿನಾ ಎಚ್‌ಡಿ ಎಲ್‌ಇಡಿ ಡಿಸ್‌ಪ್ಲೇಯೊಂದಿಗೆ ಬಂದಿರುವ ಆಪಲ್ ಐಫೋನ್ 6 ಗೆ ಹೋಲಿಸಿದಾಗ ಸೋನಿ ಎಕ್ಸ್‌ಪೀರಿಯಾ ಝೆಡ್3 5.2 ಇಂಚಿನ ಡಿಸ್‌ಪ್ಲೇಯ ಜೊತೆಗೆ 1,920 x 1,080 ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಇನ್ನು ದೊಡ್ಡದಾದ ಮತ್ತು ಉತ್ತಮ ಡಿಸ್‌ಪ್ಲೇಯ ಹೊರತಾಗಿ, ಎಕ್ಸ್‌ಪೀರಿಯಾ ಝೆಡ್3, 2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು 3 ಜಿಬಿ RAM ಸಹಯೋಗದೊಂದಿಗೆ ಬಂದಿದೆ. ಇನ್ನು ಇದಕ್ಕೆ ಹೋಲಿಸಿದಾಗ ಐಫೋನ್ 6 1.4GHz ಡ್ಯುಯಲ್ ಕೋರ್ A8 ಚಿಪ್‌ಸೆಟ್ ಮತ್ತು 1 ಜಿಬಿ RAM ಅನ್ನು ಪಡೆದುಕೊಂಡಿದೆ. ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3 ಮೈಕ್ರೋಎಸ್‌ಡಿ ಕಾರ್ಡ್ ಅನ್ನು ಒದಗಿಸುತ್ತಿದ್ದು, ಆಪಲ್ ಐಫೋನ್ 6 ಈ ಅಂಶದಲ್ಲಿ ಹಿಂದೆ ಬಿದ್ದಿದೆ.

#2

#2

ಕೆಲವೊಂದು ಒಂದೇ ಬಗೆಯ ವಿಶೇಷತೆಗಳ ಮೂಲಕ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್5 ಎಕ್ಸ್‌ಪೀರಿಯಾ ಝೆಡ್3 ಗೆ ಸಮಾನಾಂತರವಾಗಿ ಬಂದಿದ್ದರೂ ಸೋನಿ ತನ್ನ ಡಿವೈಸ್‌ನಲ್ಲಿ ದೊಡ್ಡದಾದ 3,100 ಬ್ಯಾಟರಿಯನ್ನು ಸೇರಿಸಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 5 ಗೆ ಹೋಲಿಸಿದಾಗ ಇದು 2,800 ಎಮ್‌ಎಎಚ್‌ನೊಂದಿಗೆ ಬಂದಿದೆ.ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಗ್ಯಾಲಕ್ಸಿ ಎಸ್‌5, 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಎಕ್ಸ್‌ಪೀರಿಯಾ ಝೆಡ್3, 20.7 ಮೆಗಾಪಿಕ್ಸೆಲ್ ಹಿಂಭಾಗ ಕ್ಯಾಮೆರಾದೊಂದಿಗೆ ಬಂದಿದೆ.

#3

#3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ ಮೆಟಲ್ ನಿರ್ಮಿತ ಫೋನ್ ಆಗಿದ್ದು, ಇದರ ವಿಶೇಷತೆಗಳು ಮತ್ತು ಇತರ ಅಂಶಗಳತ್ತ ನೋಟ ಹರಿಸಿದಾಗ ಸೋನಿಯ ಎಕ್ಸ್‌ಪೀರಿಯಾ ಝೆಡ್3 ಎದುರು ಇದು ಮುಗ್ಗರಿಸುವುದು ಖಂಡಿತವಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ ಮತ್ತು ಸೋನಿ ಎಕ್ಸ್‌ಪೀರಿಯಾ ಝೆಡ್3 ಯ ನಡುವಿನ ವ್ಯತ್ಯಾಸಗಳು ಇಲ್ಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ 4.7 ಇಂಚಿನ ಸೂಪರ್ AMOLED ಪರದೆಯೊಂದಿಗೆ 720 ಪಿ ರೆಸಲ್ಯೂಶನ್‌ ಜೊತೆಗೆ ಬಂದಿದ್ದು, ಸೋನಿ ಎಕ್ಸ್‌ಪೀರಿಯಾ ಝೆಡ್3, 5.2 ಇಂಚಿನ ಟ್ರಿಮ್ಯುಲಿನಿಯಸ್ ಡಿಸ್‌ಪ್ಲೇ ( 1920 x 1080) ನೊಂದಿಗೆ ಬಂದಿದೆ. ಇನ್ನು ಹೆಚ್ಚು ಹೇಳಬೇಕೆಂದರೆ ಗ್ಯಾಲಕ್ಸಿ ಆಲ್ಫಾ ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ಇದನ್ನು ನಾಲ್ಕು ಕ್ವಾಡ್ ಕೋರ್ ಪ್ರೊಸೆಸರ್ - 1.8GHz ಕ್ವಾಡ್ ಕೋರ್ ಕೋರ್ಟೆಕ್ಸ್ A15 ಕಾನ್ಫಿಗರೇಶನ್ ಮತ್ತು 1.3GHz ಕ್ವಾಡ್ ಕೋರ್ ಕೋರ್ಟೆಕ್ಸ್ A7 ಒನ್‌ನಿಂದ ನಿರ್ಮಿಸಲಾಗಿದೆ. ಹ್ಯಾಂಡ್‌ಸೆಟ್ 2 ಜಿಬಿ RAM ಅನ್ನು ಒದಗಿಸುತ್ತಿದ್ದು 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಒದಗಿಸುತ್ತಿದೆ. ಇನ್ನು ಗ್ಯಾಲಕ್ಸಿ ಆಲ್ಫಾ ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಎಕ್ಸ್‌ಪೀರಿಯಾ ಝೆಡ್3 ನ ವೇಗವಾದ ಮತ್ತು ತ್ವರಿತ ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಹೋಲಿಸಲಾಗುವುದಿಲ್ಲ.

#4

#4

ಎಚ್‌ಟಿಸಿ ಒನ್ (ಎಮ್‌8) 4 ಮೆಗಾಪಿಕ್ಸೆಲ್ ಅಲ್ಟ್ರಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3, 20.7 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2.2 ಎಮ್‌ಪಿ ಮುಂಭಾಗ ಶೂಟರ್ ಕ್ಯಾಮೆರಾದೊಂದಿಗೆ ಬಂದಿದೆ. ಇನ್ನು 4 ಕೆ ವೀಡಿಯೊಗಳನ್ನು ಕೂಡ ಇದರಲ್ಲಿ ಉತ್ತಮವಾಗಿ ದಾಖಲಿಸಬಹುದಾಗಿದೆ. ಎಚ್‌ಟಿಸಿ ಒನ್ (ಎಮ್‌8) 4 ಅಷ್ಟೊಂದು ಒರಟಾದ ಹ್ಯಾಂಡ್‌ಸೆಟ್ ಅಲ್ಲ, ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3 ಐಪಿ 65 ಮತ್ತು ಐಪಿ 68 ದರದ್ದಾಗಿದ್ದು, ಇದು ಫೋನ್ ಅನ್ನು ಜಲ ಮತ್ತು ಧೂಳು ಪ್ರತಿರೋಧಕವಾಗಿ ಮಾಡಿದೆ.

#5

#5

ಸೋನಿ ಎಕ್ಸ್‌ಪೀರಿಯಾ ಝೆಡ್3 3,100 ಎಮ್‌ಎಎಚ್ ಬ್ಯಾಟರಿಯೊಂದಿಗೆ ಬಂದಿದ್ದು, ಮೋಟೋರೋಲಾ ಮೋಟೋ ಎಕ್ಸ್ ( 2014) 2300 ಎಮ್‌ಎಎಚ್ ಬ್ಯಾಟರಿಯೊಂದಿಗೆ ಕಂಡುಬಂದಿದೆ. ಎಕ್ಸ್‌ಪೀರಿಯಾ ಝೆಡ್3 ಯ ಮೆಮೊರಿ ವಿಭಾಗದಲ್ಲೂ ಅತ್ಯುತ್ತಮವಾಗಿದೆ. ಎಕ್ಸ್‌ಪೀರಿಯಾ ಝೆಡ್3 3ಜಿಬಿ RAM ಅನ್ನು ಪಡೆದುಕೊಂಡಿದ್ದು 16 ಜಿಬಿ ಆಂತರಿಕ ಮೆಮೊರಿಯನ್ನು ಡಿವೈಸ್ ಪಡೆದುಕೊಂಡಿದೆ. ಇದನ್ನು ಮೈಕ್ರೋ ಎಸ್‌ಡಿ ಬೆಂಬಲದ ಮೂಲಕ 128 ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಹೊಂದಾಣಿಕೆ ಮಾಡುವಾಗ ಮೋಟೋರೋಲಾ ಮೋಟೋ ಎಕ್ಸ್‌ನಲ್ಲಿ ಹೆಚ್ಚು ವಿಸ್ತರಣೆ ಮೆಮೊರಿಯನ್ನು ಸೇರಿಸಿಲ್ಲ.

#6

#6

ನೋಕಿಯಾದ ಇತ್ತೀಚಿನ ಫ್ಲ್ಯಾಗ್‌ಶಿಪ್, ಲ್ಯೂಮಿಯಾ 930, ಭಾರತದಲ್ಲಿ ಲಭ್ಯವಿದ್ದು ಇದರ ಹಾರ್ಡ್‌ವೇರ್ ವಿಷಯಕ್ಕೆ ಬಂದಾಗ ನಿಜಕ್ಕೂ ಬೆರಗನ್ನು ಉಂಟುಮಾಡುವಂತಿದೆ. ನೋಕಿಯಾ ಲ್ಯೂಮಿಯಾ 930, 2.2GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್‌ಗಳೊಂದಿಗೆ ಬಂದಿದ್ದು, ಎಕ್ಸ್‌ಪೀರಿಯಾ ಝೆಡ್3 2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಅನ್ನು ಹೊಂದಿದೆ. ಮೋಟೋ ಎಕ್ಸ್ ( 2014), ನೋಕಿಯಾ ಲ್ಯೂಮಿಯಾ 930 2,420mAh ಬ್ಯಾಟರಿಯನ್ನು ಹೊಂದಿದೆ. ಈ ಮೊದಲೇ ತಿಳಿಸಿದಂತೆ, ಎಕ್ಸ್‌ಪೀರಿಯಾ ಝೆಡ್3 ದೊಡ್ಡ 3,100 ಎಮ್‌ಎಎಚ್ ಬ್ಯಾಟರಿಯನ್ನು ಹೊಂದಿದೆ.

#7

#7

ಗೂಗಲ್ ನೆಕ್ಸಸ್ 5, 2.3GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಮತ್ತು ಸಣ್ಣ 5 ಇಂಚಿನ FHD ಡಿಸ್‌ಪ್ಲೇಯೊಂದಿಗೆ ಸಂಯೋಜನೆಗೊಂಡಿದೆ. ಡಿವೈಸ್ 2,300 ಎಮ್‌ಎಎಚ್ ಬ್ಯಾಟರಿ ಮತ್ತು 8ಎಮ್‌ಪಿ/1.3ಎಮ್‌ಪಿ ಡ್ಯುಯಲ್ ಕ್ಯಾಮೆರಾಗಳಿವೆ. ಸೋನಿ ಎಕ್ಸ್‌ಪೀರಿಯಾ ಝೆಡ್3 ಜಿಪ್ಪಿ ಪ್ರೊಸೆಸರ್ ಅನ್ನು ಹೊಂದಿದ್ದು 3 ಜಿಬಿ RAM ಅನ್ನು ಒಳಗೊಂಡಿದೆ. ಸೋನಿ ನಿರ್ಮಿತ ಹ್ಯಾಂಡ್‌ಸೆಟ್ ನಿಜಕ್ಕೂ ಅತ್ಯಾಕರ್ಷಕವಾದ 20.7 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು ಇದು DSLR ನ ಪ್ರವೇಶ ಹಂತವನ್ನು ಪಡೆದುಕೊಂಡಿದೆ.

#8

#8

ಎಲ್‌ಜಿ ಜಿ3 ದೊಡ್ಡದಾದ 5.5 ಇಂಚಿನ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು ಇದರ ಡಿಸ್‌ಪ್ಲೇ ರೆಸಲ್ಯೂಶನ್ ( 960 x 540) ಆಗಿದೆ. ಜಿ3 ಸ್ಟೈಲಸ್ 1.3GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಅನ್ನು ಹೊಂದಿದ್ದು, 1 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. 13 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು, ಎಕ್ಸ್‌ಪೀರಿಯಾ ಝೆಡ್3 20.7MP ಶೂಟರ್ ಫೋನ್‌ನಲ್ಲಿದೆ. ಇನ್ನು 4 ಕೆ ವೀಡಿಯೊಗಳನ್ನು ಶೂಟಿಂಗ್ ಮಾಡಲು ಫೋನ್ ನಿಜಕ್ಕೂ ಹೇಳಿಮಾಡಿಸಿದ್ದಾಗಿದೆ.

#9

#9

ಸ್ಯಾಮ್‌ಸಂಗ್ ನಿರ್ಮಿತ ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್ 5 ಇಂಚಿನ ಕ್ಯುಎಚ್‌ಡಿ ಪರದೆಯೊಂದಿಗೆ ಬಂದಿದ್ದು ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳೊಂದಿಗೆ ಬಂದಿದೆ. 1.2GHz ಕ್ವಾಡ್ ಕೋರ್ ಪ್ರೊಸೆಸರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, 1 ಜಿಬಿ RAM ನೊಂದಿಗೆ ಪೇರ್ ಆಗಿದ್ದು 2600mAh ಬ್ಯಾಟರಿಯನ್ನು ಇದು ಪಡೆದುಕೊಂಡಿದೆ. 8 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು ಫ್ರಂಟ್ ಫೇಸಿಂಗ್ ಶೂಟರ್ ಇದರಲ್ಲಿದೆ. ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3 ಯ ಎದುರು ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್ ಸರಿಸಾಟಿಯೇ ಅಲ್ಲ.

#10

#10

ಎಚ್‌ಟಿಸಿ ಒನ್ (ಇ 8) ಅನ್ನು ಸೋನಿಯ ಎಕ್ಸ್‌ಪೀರಿಯಾ ಝೆಡ್3 ಗೆ ಹೋಲಿಸಿದಾಗ ಹಾರ್ಡ್‌ವೇರ್ ವಿಷಯದಲ್ಲಿ ಕೆಲವೊಂದು ಬದಲಾವಣೆಗಳನ್ನು ನಮಗೆ ಕಾಣಬಹುದು. ಎಚ್‌ಟಿಸಿ ಒನ್ (ಇ8) ಅನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3 ಹಿಂದಿಕ್ಕುವುದು ಖಂಡಿತ. ಏಕೆಂದರೆ ವೇಗವಾದ 4ಜಿ ಎಲ್‌ಟಿಇ ಸಂಪರ್ಕವನ್ನು ಸೆಟ್ ಹೊಂದಿದ್ದು, ಎಕ್ಸ್‌ಪೀರಿಯಾ ಝೆಡ್3 ಜಲ ಮತ್ತು ಧೂಳು ಪ್ರತಿರೋಧಕವಾಗಿದೆ. ಈ ಎರಡೂ ಫೀಚರ್‌ಗಳು ಸೋನಿ ಎಕ್ಸ್‌ಪೀರಿಯಾ ಝೆಡ್3 ಅನ್ನು ಇತರ ದುಬಾರಿ ಹ್ಯಾಂಡ್‌ಸೆಟ್‌ಗಳಿಗಿಂತ ಭಿನ್ನವಾಗಿಸಿ ಖರೀದಿಸಲೇಬೇಕೆಂಬ ತುಡಿತವನ್ನು ಉಂಟುಮಾಡುತ್ತದೆ.

Best Mobiles in India

English summary
This article tells about The Sony Xperia Z3 was originally unveiled at a price of Rs. 51,990 featuring an impeccable design coupled with latest hardware. However, now you can buy Sony's best high-end smartphone at an attractive price of Rs. 49,990 in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X