ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!

By Suneel
|

ಅಂತು ಇಂತು ಮಂಗಳ ಗ್ರಹಕ್ಕೆ ಮಾನವರಹಿತ ಗಗನ ನೌಕೆ ಪಾದಾರ್ಪಣೆ ಮಾಡುವ ದಿನ ಹತ್ತಿರ ಬಂದೇ ಬಿಟ್ಟಿತು. ಆದ್ರೆ ಮಂಗಳ ಗ್ರಹಕ್ಕೆ ಮಾನವರಹಿತ ಬಾಹ್ಯಾಕಾಶ ನೌಕೆ ಕಳುಹಿಸುತ್ತಿರುವುದು ನಾಸಾ ಅಲ್ಲಾ. ಆಮೆರಿಕನ್ ವೈಮಾನಿಕ ತಯಾರಕ ಮತ್ತು ಬಾಹ್ಯಾಕಾಶ ಸಾರಿಗೆ ಸೇವಾ ಕಂಪನಿ "SpaceX"(ಸ್ಪೇಸ್‌ಎಕ್ಸ್‌). ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹಕ್ಕೆ 2018ರೊಳಗೆ ಕಳುಹಿಸಲು ಯೋಜನೆ ರೂಪಿಸಿದೆ ಎಂದು "SpaceX" ಕಂಪನಿ ಬುಧವಾರ (ಏಪ್ರಿಲ್‌ 27) ಹೇಳಿದೆ. ಈ ಮೊದಲ ಹಂತದ ಸಾಧನೆಯ ಗುರಿಯನ್ನು "SpaceX" ಸ್ಥಾಪಕ ಎಲಾನ್‌ ಮಸ್ಕ್‌ ಹೊಂದಿದ್ದಾರೆ. ಅಂದಹಾಗೆ ಎಲಾನ್‌ ಮಸ್ಕ್‌ ಯಾರು, ಈ "SpaceX" ಯಾರದು, ಅದು ಏಕೆ ಮಂಗಳ ಗ್ರಹಕ್ಕೆ ಸ್ಪೇಸ್‌ಕ್ರ್ಯಾಫ್ಟ್‌ ಕಳುಹಿಸುತ್ತಿದೆ ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡ್‌ನಲ್ಲಿ ಓದಿರಿ.

"SpaceX"

ಅಮೆರಿಕನ್ ವೈಮಾನಿಕ ತಯಾರಕ ಮತ್ತು ಬಾಹ್ಯಾಕಾಶ ಸಾರಿಗೆ ಸೇವಾ ಕಂಪನಿ "SpaceX"(ಸ್ಪೇಸ್‌ಎಕ್ಸ್‌) ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹಕ್ಕೆ 2018ರೊಳಗೆ ಕಳುಹಿಸಲು ಯೋಜನೆ ರೂಪಿಸಿದೆ ಎಂದು "SpaceX" ಕಂಪನಿ ಬುಧವಾರ (ಏಪ್ರಿಲ್‌ 27) ಹೇಳಿದೆ. ಈ ಮೊದಲ ಹಂತದ ಸಾಧನೆಯ ಗುರಿಯನ್ನು "SpaceX" ಸ್ಥಾಪಕ ಎಲಾನ್‌ ಮಸ್ಕ್‌ ಹೊಂದಿದ್ದಾರೆ. ಇತರ ಗ್ರಹಕ್ಕೆ ಜನರನ್ನು ಕಳುಹಿಸಲು ಗುರಿಹೊಂದಿರುವ ಯೋಜನೆ ಸಹ ಇದಾಗಿದೆ.
ಚಿತ್ರ ಕೃಪೆ: AP

 ಅಮೆರಿಕ ಬಾಹ್ಯಾಕಾಶ ಏಜೆನ್ಸಿ ನಾಸಾ

ಅಮೆರಿಕ ಬಾಹ್ಯಾಕಾಶ ಏಜೆನ್ಸಿ ನಾಸಾ

ಅಮೆರಿಕ ಬಾಹ್ಯಾಕಾಶ ಏಜೆನ್ಸಿ 'ನಾಸಾ' ಮಾನವ ಸಹಿತ ನೌಕೆಯನ್ನು ಮಂಗಳ ಗ್ರಹಕ್ಕೆ 2030ಕ್ಕೆ ಕಳುಹಿಸುವ ಗುರಿ ಹೊಂದಿದೆ. ನಾಸಾ "SpaceX" ಗೆ ಮಂಗಳ ಗ್ರಹದ ಮೊದಲ ಪಾದಾರ್ಪಣೆಗೆ ಹೋಗುತ್ತಿರುವ "ರೆಡ್‌ ಡ್ರ್ಯಾಗನ್ "ಗೆ ತಾಂತ್ರಿಕ ಸಹಾಯ ಒದಗಿಸುವುದಾಗಿ ಹೇಳಿದೆ.

"SpaceX"

" "SpaceX" ಮಂಗಳ ಗ್ರಹಕ್ಕೆ ಮೌಲ್ಯಯುತವಾದ ಹೆಜ್ಜೆ ಇರಿಸುತ್ತಿದೆ, ಅಲ್ಲದೇ ಅಲ್ಲಿಗೆ ಕಾಲಿಟ್ಟ ನಂತರ ನಾಸಾಗೂ ಸಹ ಮಂಗಳ ಗ್ರಹಕ್ಕೆ ಹೋಗಲು ಡೇಟಾ ನೀಡುತ್ತದೆ. ಇದು ಅಮೆರಿಕ ಬಾಹ್ಯಾಕಾಶ ಉದ್ಯಮಕ್ಕೆ ಸಹಾಯ ನೀಡುತ್ತದೆ" ಎಂದು ನಾಸಾ ಹೇಳಿಕೆ ನೀಡಿದೆ.

"SpaceX" ಕಾರ್ಯಕ್ರಮ

"SpaceX" ಮಾನವರು ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಲು ತಂತ್ರಜ್ಞಾನ ಅಭಿವೃದ್ದಿಪಡಿಸುವ ಉದ್ದೇಶಹೊಂದಿದೆ, ಆದ್ದರಿಂದ ದೀರ್ಘಕಾಲದಿಂದಲೂ ಸಹ "ಎಲಾನ್‌ ಮಸ್ಕ್‌" ಕಂಪನಿಯನ್ನು ಖಾಸಗಿಯಾಗಿ ಹೊಂದಿದ್ದಾರೆ. ಇದು ಅಧಿಕೃತವಾಗಿ "Space Exploration Technologies" ಎಂದು ಪ್ರಖ್ಯಾತವಾಗಿದೆ.

ಮಂಗಳ ಗ್ರಹದ ಪ್ರಯಾಣ

ಮಂಗಳ ಗ್ರಹದ ಪ್ರಯಾಣ

SpaceX, ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸುತ್ತಿರುವ ಯೋಜನೆ ಬಗ್ಗೆ ಮಾಹಿತಿಯನ್ನು "ಅಂತರರಾಷ್ಟ್ರೀಯ ಆಸ್ಟ್ರೋನಾಟಿಕಲ್‌ ಕಾಂಗ್ರೆಸ್‌"ಗೆ ಸೆಪ್ಟೆಂಬರ್‌ನಲ್ಲಿ ನೀಡುವ ಬಗ್ಗೆ ಹೇಳಿದೆ.

ಡ್ರ್ಯಾಗನ್ 2

ಡ್ರ್ಯಾಗನ್ 2

"ರೆಡ್‌ ಡ್ರ್ಯಾಗನ್" ಮಂಗಳ ಗ್ರಹಕ್ಕೆ ಪಾದಾರ್ಪಣೆ ಮಾಡುವ ಮೊದಲ ಪರೀಕ್ಷೆಯ ಮಾನವರಹಿತ ಬಾಹ್ಯಾಕಾಶ ನೌಕೆಯಾಗಿದೆ. SpaceX, " ಡ್ರ್ಯಾಗನ್ 2" ಎಂಬ ಗಗನ ನೌಕೆ ಅಭಿವೃದ್ದಿ ಪಡಿಸಿದ್ದು ಸೌರಮಂಡಲದಲ್ಲಿ ಎಲ್ಲಿ ಬೇಕಾದರೂ ಇಳಿಯಲು ಸಾಮರ್ಥ್ಯ ಹೊಂದಿದೆ ಎಂದು ಎಲಾನ್‌ ಮಸ್ಕ್‌'ರವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಯಾರಿದು ಎಲಾನ್‌ ಮಸ್ಕ್‌

ಯಾರಿದು ಎಲಾನ್‌ ಮಸ್ಕ್‌

ಅಂದಹಾಗೆ ಎಲಾನ್‌ ಮಸ್ಕ್‌'ರವರು ಕೋಟ್ಯಾಧಿಪತಿ ಉದ್ಯಮಿಯಾಗಿದ್ದು, ತೆಸ್ಲಾ ಮೋಟರ್‌ ಮತ್ತು ಪೇಪಾಲ್‌ ಉದ್ಯಮಗಳ ಸ್ಥಾಪನೆಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಎಲಾನ್ ಮಸ್ಕ್‌ ಮಂಗಳ ಗ್ರಹಕ್ಕೆ ಕೈಗೆಟಕುವ ಬೆಲೆಯಲ್ಲಿ ಪ್ರಯಾಣ ಮಾಡಲು ಗಗನ ನೌಕೆ ನಿರ್ಮಿಸುವ ಗುರಿಯೊಂದಿಗೆ 2002 ರಲ್ಲಿ "SpaceX" ಲಾಂಚ್‌ ಮಾಡಿದವರು.

"SpaceX" ಉದ್ದೇಶಗಳು

"SpaceX" ಪ್ರಥಮ ಭಾರಿಗೆ ಹೆಚ್ಚು ಭಾರ ಹೊತ್ತೋಯ್ಯುವ ಮಾರ್ಸ್‌ ರಾಕೆಟ್‌ "Falcon 9" ಅನ್ನು ಈ ವರ್ಷದಲ್ಲಿ ಕೆಲವು ದಿನಗಳ ನಂತರ ಹಾರಿಸುವ ಉದ್ದೇಶ ಹೊಂದಿದೆ. SpaceX ಪ್ರಸ್ತುತದಲ್ಲಿ ಕಾರ್ಗೊ ಆವೃತ್ತಿಯ ಡ್ರ್ಯಾಗನ್‌ ಕ್ಯಾಪ್ಸೂಲ್‌ ಅನ್ನು ಅಂತರರಾಷ್ಟ್ರೀಯ ಸ್ಪೇಸ್‌ ಕೇಂದ್ರದಿಂದ ಮರುಪೂರೈಕೆ ಸೇವೆಯನ್ನು 2 ಮಿಲಿಯನ್ ಡಾಲರ್‌ಗೆ ನಾಸಾ ಒಪ್ಪಂದದಿಂದ ನೀಡುತ್ತಿದೆ.

ಗಗನ ಯಾತ್ರಿಗಳ ನೌಕೆ

ಗಗನ ಯಾತ್ರಿಗಳ ನೌಕೆ

SpaceX ಗಗನ ಯಾತ್ರಿಗಳನ್ನು ಹೊತ್ತೋಯ್ಯುವ ಕ್ಯಾಪ್ಸೂಲ್‌ ಅನ್ನು ಅಪ್‌ಗ್ರೇಡ್‌ ಮಾಡುತ್ತಿದ್ದು 2017 ಕ್ಕೆ ವಿಮಾನ ಪರೀಕ್ಷೆ ನಡೆಸಲಿದೆ. ಈ ಯೋಜನೆಯು ನಾಸಾದೊಂದಿಗೆ 2.6ಮಿಲಿಯನ್‌ ಡಾಲರ್‌ಗೆ ವಿಶೇಷ ಒಪ್ಪಂದ ಹೊಂದಲಾಗಿದೆ.

ನಾಸಾದಿಂದ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲ

ನಾಸಾದಿಂದ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲ

ಅಂದಹಾಗೆ ಬಾಹ್ಯಾಕಾಶ, ಮಂಗಳ ಗ್ರಹಕ್ಕೆ ಹೆಚ್ಚು ಪ್ರಯಾಣ ಬೆಳೆಸುವ ಯೋಜನೆಗಳನ್ನು ಹೊಂದಿರುವುದು ನಾಸಾ ಮಾತ್ರ ಅಂತ ಹೆಚ್ಚು ಜನರ ತಿಳಿದು ಕೊಂಡಿದ್ದಾರೆ. ಆದರೆ ನಾಸಾದಿಂದ "SpaceX"ಗೆ ಯಾವುದೇ ರೀತಿಯ ಹಣಕಾಸಿನ ವ್ಯವಸ್ಥೆ ದೊರೆಯುವುದಿಲ್ಲಾ. "SpaceX" ತನ್ನ ವಯಕ್ತಿಕ ವೆಚ್ಚದಿಂದ ಮಂಗಳ ಗ್ರಹಕ್ಕೆ ಪ್ರಯಾಣ ಮಾಡಲು ಹೆಚ್ಚು ಭಾರ ಹೋತ್ತೋಯ್ಯುವ ರಾಕೆಟ್‌ ಮತ್ತು ಕಾಪ್ಸೂಲ್‌ ಅನ್ನು ಅಭಿವೃದ್ದಿ ಪಡಿಸುತ್ತಿದೆ.

Best Mobiles in India

English summary
SpaceX plans to send unmanned spacecraft to Mars as early as 2018. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X