'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಪುಸ್ತಕ ಲೋಕಾರ್ಪಣೆ

By Ashwath
|

ಕನ್ನಡ ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ 'ನಾಡೋಜ' ಗೌರವ ಪಡೆದ, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ದರಾದ.ಕೆ.ಪಿ.ರಾವ್‌ ಬಗ್ಗೆ ಟಿ.ಜಿ.ಶ್ರೀನಿಧಿ ಬರೆದ ಪುಸ್ತಕ ಬಿಡುಗಡೆಯಾಗಿದೆ.
ಅವರ ಜೀವನ-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್'ಪುಸ್ತಕ ಹೊರಬಂದಿದ್ದು ಇಜ್ಞಾನ ಡಾಟ್ ಕಾಮ್‌ನ ಟಿ. ಜಿ. ಶ್ರೀನಿಧಿ ಬರೆದ ಈ ಪುಸ್ತಕವನ್ನು ಬೆಂಗಳೂರಿನ ಉದಯಭಾನು ಕಲಾಸಂಘ ಪ್ರಕಟಿಸಿದೆ.

'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಪುಸ್ತಕ ಲೋಕಾರ್ಪಣೆ

ಕೆ.ಪಿ.ರಾವ್‌ ಯಾರು ?
ಪ್ರಶಸ್ತಿಗಳಿಂದ ದೂರವಿರುವ ಕೆ. ಪಿ. ರಾವ್, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ . ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ ಕೆ.ಪಿ.ರಾಯರಿಗೆ ಸಲ್ಲುತ್ತದೆ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ ಇವರದೇ ಸಾಧನೆ. ಮುಂದೆ ಇದೇ ತರ್ಕ ಬಳಸಿ ಅವರು ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಸಿದರು.

ಈ ಪುಸ್ತಕ ದೊರೆಯುವ ಸ್ಥಳ:
ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನ
ರಾಮಕೃಷ್ಣಮಠ ಬಡಾವಣೆ
ಕೆಂಪೇಗೌಡನಗರ, ಬೆಂಗಳೂರು- 19 (ಬಸವನಗುಡಿ ರಸ್ತೆ, ರಾಮಕೃಷ್ಣಮಠ ಹಿಂಭಾಗ)
ಬೆಲೆ: 45 ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X