ಫೋನ್ ಚಾರ್ಜ್ ಸಂಕಷ್ಟ ಮುಕ್ತಿ ಹಾಡುವುದು ಹೇಗೆ?

By Shwetha
|

ಸ್ಮಾರ್ಟ್‌ಫೋನ್‌ ವಿಚಾರದಲ್ಲಿ ನಿಮ್ಮನ್ನು ಹೆಚ್ಚು ಸಂಕಷ್ಟಕ್ಕೆ ಒಳಪಡಿಸುವುದು ಅದರ ಬ್ಯಾಟರಿ ಇಳಿಮುಖವಾಗುವುದು. ನಿಮ್ಮ ಫೋನ್‌ಗೆ ನೀವೆಷ್ಟು ಚಾರ್ಜ್ ಮಾಡಿದರೂ ಫೋನ್‌ನ ಬ್ಯಾಟರಿ ಕೆಲವೇ ಗಂಟೆಗಳಲ್ಲಿ ಇಳಿಕೆಯಾಗುತ್ತದೆ. ಫೋನ್ ಅನ್ನು ಸರಿಯಾದ ರೀತಿಯಲ್ಲಿ ಚಾರ್ಜ್ ಮಾಡುವುದು ಹೇಗೆ? ಫೋನ್ ಚಾರ್ಜಿಂಗ್ ವಿಚಾರದಲ್ಲಿ ಅವರಿವರು ಹೇಳುವಂತಹ ಮಾತುಗಳು ನಿಜವೇ ಎಂಬುದನ್ನು ಸುತ್ತ ನಾವಿಂದು ಕಣ್ಣಾಡಿಸಲಿರುವೆವು.

ಓದಿರಿ: ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

ಪ್ರತಿಯೊಂದು ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚಾರ್ಜಿಂಗ್ ಸಮಸ್ಯೆ ಹೆಚ್ಚು ಗಂಭೀರವಾದುದು. ಜೊತೆಯಾಗಿ ಚಾರ್ಜಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಮಿಥ್ಯಗಳು ಇದ್ದು ಈ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿರುವೆವು.

ರಾತ್ರಿ ಚಾರ್ಜಿಂಗ್

ರಾತ್ರಿ ಚಾರ್ಜಿಂಗ್

ರಾತ್ರಿ ಪೂರ್ತಿ ಚಾರ್ಜ್ ಮಾಡಿ ನಿಮ್ಮ ಫೋನ್ ಅನ್ನು ರಾತ್ರಿ ಪೂರ್ತಿ ಚಾರ್ಜರ್ ಸಂಪರ್ಕದಲ್ಲಿಟ್ಟರೆ ಏನೂ ಸಂಭವಿಸುವುದಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಅಂದರೆ ರಾತ್ರಿ ಪೂರ್ತಿ ಫೋನ್ ಯಾ ಲ್ಯಾಪ್‌ಟಾಪ್ ಅನ್ನು ಚಾರ್ಜ್‌ನಲ್ಲಿಟ್ಟುಕೊಂಡೇ ನಿಮಗೆ ಆರಾಮ ನಿದ್ದೆ ಮಾಡಬಹುದು.

ಆಗಾಗ್ಗೆ ಚಾರ್ಜ್ ಮಾಡಿ

ಆಗಾಗ್ಗೆ ಚಾರ್ಜ್ ಮಾಡಿ

ಲಿಥಿಯಮ್ ಬ್ಯಾಟರಿಗಳನ್ನು ನೀವು ಆಗಾಗ್ಗೆ ಚಾರ್ಜ್ ಮಾಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಏನೂ ಮಾರಕವಿಲ್ಲ.

ದಿನಪೂರ್ತಿ ಪ್ಲಗಿನ್ ಮಾಡಿ

ದಿನಪೂರ್ತಿ ಪ್ಲಗಿನ್ ಮಾಡಿ

ನಿಮ್ಮ ಲ್ಯಾಪ್‌ಟಾಪ್‌ಗೆ ದಿನಪೂರ್ತಿ ನೀವು ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಚಿಂತಿಸದಿರಿ. ಈ ನೀತಿ ನಿಮ್ಮ ಫೋನ್‌ಗಳಿಗೂ ಅನ್ವಯಿಸುತ್ತದೆ ಎಂಬುದು ನೆನಪಿರಲಿ.

ಡಿವೈಸ್ ತಾಪ

ಡಿವೈಸ್ ತಾಪ

ಇನ್ನು ನಿಮ್ಮ ಫೋನ್ ಲ್ಯಾಪ್‌ಟಾಪ್ ಇಲ್ಲವೇ ಟ್ಯಾಬ್ಲೆಟ್‌ನಲ್ಲಿ ಚಾರ್ಜಿಂಗ್ ಸಮಸ್ಯೆ ಕಂಡುಬಂದಿದೆ ಎಂದಾದಲ್ಲಿ ಅದು ಹೆಚ್ಚು ಚಾರ್ಜ್ ಮಾಡುವುದರಿಂದ ಅಲ್ಲ ಬದಲಿಗೆ ಡಿವೈಸ್ ಬಿಸಿಯಾಗುವುದರಿಂದ ಆಗಿದೆ. ನಿಮ್ಮ ಬ್ಯಾಟರಿ ತೀವ್ರ ಮಟ್ಟದಲ್ಲಿ ಬಿಸಿಯಾಗುತ್ತಿದೆ ಎಂದಾದಲ್ಲಿ ಬ್ಯಾಟರಿ ಬದಲಾಯಿಸಿ.

ತಂಪಾಗಿರಿಸಿಕೊಳ್ಳಿ

ತಂಪಾಗಿರಿಸಿಕೊಳ್ಳಿ

ಆದಷ್ಟು ನಿಮ್ಮ ಡಿವೈಸ್‌ಗಳನ್ನು ಶೀತಲ ಸ್ಥಳದಲ್ಲಿ ಅಂದರೆ ಹೆಚ್ಚು ಬಿಸಿ ಇಲ್ಲದ ಸ್ಥಳದಲ್ಲಿ ಇರಿಸಿ. ವೈರ್‌ಲೆಸ್ ಚಾರ್ಜಿಂಗ್ ಆದಷ್ಟು ಮಾಡದಿರಿ.

ಬ್ಯಾಟರಿ ಸ್ಟೋರ್ ಮಾಡಿ

ಬ್ಯಾಟರಿ ಸ್ಟೋರ್ ಮಾಡಿ

ನೀವು ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೀರಿ ಎಂದಾದಲ್ಲಿ, ಮೊದಲಿಗೆ ಸ್ವಲ್ಪ ಚಾರ್ಜ್ ಮಾಡಿಕೊಳ್ಳಿ.

ಬದಲಿ ಬ್ಯಾಟರಿ ವ್ಯವಸ್ಥೆ

ಬದಲಿ ಬ್ಯಾಟರಿ ವ್ಯವಸ್ಥೆ

ತೀರಾ ಆವಶ್ಯಕತೆ ಇದ್ದಾಗ ಮಾತ್ರವೇ ಬ್ಯಾಟರಿಯನ್ನು ಸ್ಥಾನಾಂತರಿಸಿ. ನಿಮ್ಮ ಡಿವೈಸ್ ವೇಗವಾಗಿ ಚಾರ್ಜ್ ಮಾಡುತ್ತಿಲ್ಲ ಎಂದಾದಲ್ಲಿ ಬದಲಿ ಬ್ಯಾಟರಿ ವ್ಯವಸ್ಥೆಯನ್ನು ಮಾಡಿಕೊಳ್ಳಿ.

ನಿಮ್ಮ ಜೀವನವನ್ನು ಆಳದಿರಲಿ

ನಿಮ್ಮ ಜೀವನವನ್ನು ಆಳದಿರಲಿ

ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಫೋನ್ ಚಾರ್ಜಿಂಗ್ ಅನ್ನೇ ನುಂಗುತ್ತಿರುತ್ತದೆ ಎಂಬುದು ನೆನಪಿರಲಿ. ಆದ್ದರಿಂದ ಆಗಾಗ್ಗೆ ಫೋನ್‌ಗೆ ಚಾರ್ಜ್ ಮಾಡುವುದೇ ಮುಖ್ಯ ಜೀವಾಳ ಎಂದು ಭಾವಿಸದಿರಿ.

ಸ್ಕ್ರೀನ್ ಬ್ರೈಟ್‌ನೆಸ್

ಸ್ಕ್ರೀನ್ ಬ್ರೈಟ್‌ನೆಸ್

ನಿಮ್ಮ ಡಿವೈಸ್ ಅಮೋಲೆಡ್ ಸ್ಕ್ರೀನ್ ಅನ್ನು ಹೊಂದಿದೆ ಎಂದಾದಲ್ಲಿ ನಿಮ್ಮ ಹೋಮ್ ಸ್ಕ್ರೀನ್‌ಗೆ ಕಪ್ಪು ಹಿನ್ನಲೆಯನ್ನು ಅಳವಡಿಸಿ. ಏಕೆಂದರೆ ಕಪ್ಪು ಡಿಸ್‌ಪ್ಲೇಯನ್ನು ಗೋಚರಿಸಲು ಅಮೋಲೆಡ್ ಸ್ಕ್ರೀನ್ಸ್ ಕಡಿಮೆ ಪವರ್ ಅನ್ನು ಬಳಸುತ್ತದೆ.

ಬ್ಲ್ಯೂಟೂತ್

ಬ್ಲ್ಯೂಟೂತ್

ನಿಮ್ಮ ಫೋನ್‌ನೊಂದಿಗೆ ಯಾವುದೇ ಬ್ಲ್ಯೂಟೂತ್ ಆಕ್ಸಸರೀಸ್ ಅನ್ನು ಬಳಸುತ್ತಿಲ್ಲ ಎಂದಾದಲ್ಲಿ ಬ್ಲ್ಯೂಟೂತ್ ಆಫ್ ಮಾಡಿ.

ಜಿಪಿಎಸ್

ಜಿಪಿಎಸ್

ಸೆಟ್ಟಿಂಗ್ಸ್ > ಲೊಕೇಶನ್ ಮತ್ತು ಹೆಚ್ಚುವರಿ ಬ್ಯಾಟರಿ ಸೇವಿಂಗ್ ಮೋಡ್‌ನಿಂದ ಕಡಿಮೆ ಬ್ಯಾಟರಿ ಮೋಡ್‌ಗೆ ಇದನ್ನು ಬದಲಾಯಿಸಿಕೊಳ್ಳಿ.

ಓಕೆ ಗೂಗಲ್

ಓಕೆ ಗೂಗಲ್

ಆದೇಶವನ್ನು ಕೇಳಿಸಿಕೊಳ್ಳುವ ಕೆಲವೊಂದು ಫೋನ್‌ಗಳು ಕೂಡ ಬ್ಯಾಟರಿಯನ್ನು ಬೇಗನೇ ಮುಗಿಸಬಹುದು. ಇದಕ್ಕಾಗಿ ಗೂಗಲ್ ಸೆಟ್ಟಿಂಗ್ಸ್ ತೆರೆಯಿರಿ ಮತ್ತು ಸರ್ಚ್ ಹಾಗೂ ನೌ ವಾಯ್ಸ್ ಮತ್ತು ಇದನ್ನು ಅನ್‌ಚೆಕ್ ಮಾಡಿ. ಓಕೆ ಗೂಗಲ್ ಸರ್ಚ್ ಕಮಾಂಡ್ ಆಫ್ ಆಗುತ್ತದೆ.

ವೈಫೈ ಸೌಲಭ್ಯ

ವೈಫೈ ಸೌಲಭ್ಯ

ವೈಫೈ ಇಲ್ಲದ ಪ್ರದೇಶದಲ್ಲಿ ನೀವಿದ್ದೀರಿ ಎಂದಾದಲ್ಲಿ, ವೈಫೈ ಸೌಲಭ್ಯವನ್ನು ಆಫ್ ಮಾಡಿ. ಇನ್ನು ಡೇಟಾ ಕನೆಕ್ಶನ್ ಬೇಡದೇ ಇರುವ ಸಮಯದಲ್ಲಿ ಸೆಲ್ಯುಲಾರ್ ಡೇಟಾ ಮತ್ತು ಬ್ಲ್ಯೂಟೂತ್ ನಿಷ್ಕ್ರಿಯಗೊಳಿಸುವ ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಿ.

ಸಿಂಕ್ ಮಾಡಬೇಡಿ

ಸಿಂಕ್ ಮಾಡಬೇಡಿ

ನಿಮ್ಮ ಗೂಗಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ನಿಮ್ಮೆಲ್ಲಾ ಡೇಟಾವನ್ನು ಸಿಂಕ್ ಮಾಡಲು ಪ್ರಯತ್ನಿಸುತ್ತದೆ. ಇದೂ ಕೂಡ ನಿಮ್ಮ ಬ್ಯಾಟರಿಯನ್ನು ನುಂಗಿ ಹಾಕಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ವಿಡ್ಜೆಟ್‌

ವಿಡ್ಜೆಟ್‌

ನಿಮ್ಮ ಮುಖ್ಯ ಪರದೆಗೆ ಆಂಡ್ರಾಯ್ಡ್ ಪವರ್ ವಿಡ್ಜೆಟ್ ಅನ್ನು ಸೇರಿಸಿ. ವಿಡ್ಜೆಟ್‌ಗಳಿಗೆ ಹೋಗಿ ತದನಂತರ ಪವರ್ ಕಂಟ್ರೋಲ್ ಆಯ್ಕೆಮಾಡಿ

ಡೌನ್‌ಲೋಡ್ ಮಾಡಿ

ಡೌನ್‌ಲೋಡ್ ಮಾಡಿ

ಇನ್ನು ನಿಮ್ಮ ಫೋನ್‌ನ ಬ್ಯಾಟರಿ ಸಮಸ್ಯೆಯನ್ನು ನಿವಾರಿಸುವ ಹಲವಾರು ಅಪ್ಲಿಕೇಶನ್‌ಗಳು ಗೂಗಲ್ ಸ್ಟೋರ್‌ನಲ್ಲಿ ಲಭ್ಯವಿದ್ದು ಅವುಗಳನ್ನು ಬಳಸಿ ಫೋನ್‌ನ ಬ್ಯಾಟರಿ ಇಂಗುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಅನಿಮೇಟೆಡ್ ವಾಲ್‌ಪೇಪರ್ಸ್

ಅನಿಮೇಟೆಡ್ ವಾಲ್‌ಪೇಪರ್ಸ್

ಡಿಸ್‌ಪ್ಲೇಗೆ ಹೋಗಿ ಇಲ್ಲಿ ವಾಲ್‌ಪೇಪರ್ ಮತ್ತು ನಾನ್ ಲೈಬ್ ಹಿನ್ನಲೆಯನ್ನು ಆಯ್ಕೆಮಾಡಿ.

ವೈಬ್ರೇಶನ್

ವೈಬ್ರೇಶನ್

ವೈಬ್ರೇಶನ್ ರಿಂಗ್‌ಟೋನ್ ಬ್ಯಾಟರಿಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ ವೈಬ್ರೇಶನ್ ಆಫ್ ಮಾಡಿ.

Best Mobiles in India

English summary
This article tells about Unusual Tips To Keep Your Phone's Battery Healthy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X