ಫೋಟೋನ್ ಮ್ಯಾಕ್ಸ್ ವೈಫೈಯಿಂದ ಹೈ ಸ್ಪೀಡ್ ಇಂಟರ್ನೆಟ್

By Shwetha
|

ತನ್ನ ಫೋಟೋನ್ ಮ್ಯಾಕ್ಸ್ ವೈ-ಫೈ ಡೋಂಗಲ್ ಇದೀಗ ಅಂತರ್ಜಾಲ ಬಳಕೆದಾರರಿಗೆ 9.8Mbps ನಷ್ಟು ವೇಗವಾದ ಡೌನ್‌ಲೋಡ್ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಟಾಟಾ ಡೊಕೊಮೋ ಘೋಷಿಸಿದೆ. ಈ ನವೀಕರಿಸಿದ ಹೊಸ ಯೋಜನೆಯು ಕೆಲವೊಂದು ಆಯ್ಕೆ ಮಾಡಿದ ನಗರಗಳಲ್ಲಿ ದೊರೆಯುತ್ತಿದ್ದು, ಈ ಲಭ್ಯತೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.

ರೇವ್, ಬಿ II ತಂತ್ರಜ್ಞಾನವನ್ನು ಅದರ ನೆಟ್‌ವರ್ಕ್‌ಗೆ ಅಳವಡಿಸಿರುವುದರಿಂದ 9.8Mbps ಡೌನ್‌ಲೋಡ್ ವೇಗವನ್ನು ರಚಿಸಲು ಸಾಧ್ಯವಾಗಿದೆ ಎಂದು ಟಾಟಾ ಡೊಕೊಮೊ ತಿಳಿಸಿದೆ. ಈಗಾಗಲೇ ಫೊಟೋನ್ ಸಂಪರ್ಕವನ್ನು ಹೊಂದಿರುವ ನಗರಗಳು ಸ್ವಯಂಚಾಲಿತವಾಗಿ ತಮ್ಮ ಇಂಟರ್ನೆಟ್ ಸಂಪರ್ಕದಲ್ಲಿ ಉಂಟಾಗುತ್ತಿರುವ ವೇಗವನ್ನು ಗಮನಿಸಬಹುದಾಗಿದೆ.

ಡೊಕೊಮೊ ಒದಗಿಸಲಿದೆ ಸೂಪರ್ ಫಾಸ್ಟ್ ಇಂಟರ್ನೆಟ್

ಟಾಟಾ ಡೊಕೊಮೊ ಫೋಟೋನ್ ಮ್ಯಾಕ್ಸ್ ವೈ-ಫೈ ನಿಮ್ಮ ಸಾಂಪ್ರದಾಯಿಕ 3ಜಿ ಡೋಂಗಲ್‌ನಂತಿದ್ದು, ಅನನ್ಯವಾಗಿದೆ. ನೀವಿದನ್ನು ಯುಎಸ್‌ಬಿ ಮೂಲಕ ಇಂಟರ್ನೆಟ್ ಸಂಪರ್ಕಕ್ಕಾಗಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಗೆ ಸಂಪರ್ಕಪಡಿಸುವಾಗ ಡೋಂಗಲ್ ಅನ್ನು ಯುಎಸ್‌ಬಿ ಅಡಾಪ್ಟರ್ ಮೂಲಕ ಯಾವುದೇ ಪವರ್ ಔಟ್‌ಲೆಟ್‌ಗೆ ಸರಳವಾಗಿ ಸಂಪರ್ಕಪಡಿಸುತ್ತಾ ವೈಫೈ ಹಾಟ್‌ಸ್ಪಾಟ್‌ನಂತೆ ಬಳಸಬಹುದಾಗಿದೆ.

ಇದೀಗ ಈ ಡೋಂಗಲ್ 9.8Mbps ನಷ್ಟು ಆಯ್ಕೆಮಾಡಿದ ಪ್ರದೇಶಗಳಲ್ಲಿ ಬೆಂಬಲಿಸುತ್ತಿದ್ದು, ಕಂಪೆನಿಯು ಫೋಟೋನ್ 3ಜಿ ವೈಫೈ ಡೋಂಗಲ್ ಅನ್ನು ಕೂಡ ಒದಗಿಸುತ್ತಿದೆ. ಇದರಲ್ಲಿ ಒಟ್ಟು ಹತ್ತು ಡಿವೈಸ್‌ಗಳನ್ನು ನಿರ್ವಹಿಸಬಹುದಾಗಿದ್ದು ಇದು 21.1Mpbs ಡೌನ್‌ಲಿಂಕ್ ವೇಗವನ್ನು ಒದಗಿಸುತ್ತದೆ.

ತನ್ನ ಡೌನ್‌ಲಿಂಕ್ ವೇಗವಾದ 9.8Mbps ಅನ್ನು ಒದಗಿಸುತ್ತಿರುವ ನಗರಗಳು ಯಾವುವು ಎಂದು ಕಂಪೆನಿ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಇದು ತನ್ನ ಲಭ್ಯತೆಯನ್ನು ಎಂಟು ಹೆಚ್ಚಿನ ಸ್ಥಾನಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X