ಹೊಸ ವರ್ಷಕ್ಕೆ ಟೆಕ್ ರೆಸೂಲ್ಯೂಷನ್

By Super
|

ಗಿಜ್ಬಾಟ್‌ನ ಎಲ್ಲಾ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2012 ಕಳೆಯಿತು 2013 ಬಂದೇ ಬಿಟ್ಟಿದೆ. ಈ ಹೊಸ ವರ್ಷದ ಸಮಯದಲ್ಲಿ ಗಿಜ್ಬಾಟ್‌ನ ಎಲ್ಲಾ ಓದುಗರು ಒಂದಲ್ಲ ಒಂದು ಯೋಜನೆ, ಯೋಚನೆಗಳನ್ನು ಹಾಕಿಕೊಂಡಿರುತ್ತೀರಿ. ಆ ನಿಮ್ಮ ಯೋಜನೆ, ಯೋಚನೆಗಳು ಎಲ್ಲಾ ಈ ವರ್ಷ ಯಶಸ್ವಿಯಾಗಲಿ. ನಿಮ್ಮ ಕನಸುಗಳು ನನಸಾಗಲಿ.

ಯಾವಾಗ್ಲೂ ತನ್ನ ಓದುಗರ ಹಿತವನ್ನೇ ಬಯಸುವ ಗಿಜ್ಬಾಟ್ ಈ ಬಾರಿ ಓದುಗರಿಗೆ 8 ಹೊಸ ಟೆಕ್ ರೆಸಲ್ಯೂಷನ್ನುಗಳನ್ನು ತಂದಿದೆ. ಈ ಕೆಳಕಂಡ ಟೆಕ್‌ ರೆಸಲ್ಯೂಷನ್ನುಗಳು ನೀವು ಪಾಲಿಸುತ್ತೀರಿ ಎನ್ನುವ ವಿಶ್ವಾಸ ಗಿಜ್ಬಾಟ್‌ಗೆ ಇದೆ.

ಹೊಸ ವರ್ಷಕ್ಕೆ ಟೆಕ್ ರೆಸೂಲ್ಯೂಷನ್

-sdfffffffffffffffffffff


ಕೀ ಬೋರ್ಡ್‌ನ್ನು ಕ್ಲೀನ್‌ ಮಾಡಿ:

ಆಹಾರ ಸೇವಿಸಿದ ಬಳಿಕ ಹೇಗೆ ನೀವು ನಿಮ್ಮ ಡೆಸ್ಕ್‌ನ್ನು ಕ್ಲೀನ್‌ ಮಾಡುತ್ತಿರೋ ಆದೇ ರೀತಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿದ ನಂತರ ನೀವು ನಿಮ್ಮ ಕೀ ಬೋರ್ಡ್‌ನ್ನು ಕ್ಲೀನ್‌ ಮಾಡಿ.

ಹಳೆಯ ಫೊಟೋವನ್ನು ಡಿಜಟಲೀಕರಣಗೊಳಿಸಿ:

ಹಿಂದೆ ನೀವು ತೆಗೆದ ಫೋಟೋಗಳಿದ್ದರೆ ಅದನ್ನು ಅದಷ್ಟು ಬೇಗ ಸ್ಕ್ಯಾನ್ ಮಾಡಿ ಡಿಜಟಲೀಕರಣ ಮಾಡಿ.ಯಾಕಂದ್ರೆ ಹಳೇ ಫೋಟೋಗಳು ಹಾಳಾದ್ರೆ ಮತ್ತೆ ಅದನ್ನು ಶುಚಿಗೊಳಿಸಲು ಸಾಧ್ಯವಿಲ್ಲ. ಸ್ಕ್ಯಾನ್‌ ಮಾಡಿದ ಮೇಲೆ ಆ ಫೋಟೋವನ್ನು ನಿಮ್ಮ ಆಪ್ತರಿಗೆ ಕಳುಹಿಸಿ. ಆವಾಗ ಅವರು ಆ ನೆನಪನ್ನು ನೋಡಿ ಮೆಲುಕು ಹಾಕುತ್ತಾರೆ. ಸಾಧ್ಯವಾದ್ರೆ ಒಂದು ಪ್ರತಿ ಪ್ರಿಂಟ್ ಹಾಕಿಸಿ.

ಇಮೇಲ್ ಚೆಕ್ ಮಾಡಿ:

ಈಗಂತೂ ಯಾವುದೋ ಸೈಟ್‌ಗೆ ಜಾಯಿನ್‌ ಆದ ಮೇಲೆ ಡಜನ್‌ಗಟ್ಟಲೇ ಇಮೇಲ್ ಇನ್‌ಬಾಕ್ಸ್‌ಗೆ ಬರತೊಡಗುತ್ತದೆ. ಹಾಗಾಗಿ ಕೆಲವರು ಇನ್‌ಬಾಕ್ಸ್ ನೋಡುವುದನ್ನೇ ನಿಲ್ಲಿಸಿಬಿಟ್ಟಿರುತ್ತೀರಿ. ಆದ್ರೆ ಹಾಗೇ ಮಾಡದೇ ಇಮೇಲ್ ನೋಡುವ ಆಭ್ಯಾಸ ಮಾಡಿಕೊಳ್ಳಿ. ಅನಗತ್ಯವಾದ ಇಮೇಲ್‌ಗಳನ್ನು ಡಿಲೀಟ್ ಮಾಡಿ. ಕೆಲವೊಂದು ಮೈಲ್‌ಗಳು ಅಗತ್ಯವಿದ್ದರೆ ನಿಮ್ಮ ಇಮೈಲ್‌ನಲ್ಲೇ ಒಂದು ಲೇಬಲ್ ಕ್ರಿಯೆಟ್ ಮಾಡಿ ಸಂಗ್ರಹ ಮಾಡಿಕೊಳ್ಳಿ.


ಸಾಮಾಜಿಕ ತಾಣಗಳನ್ನು ಬಳಸುವಾಗ ಎಚ್ಚರದಿಂದ ಬಳಸಿ:

ಸಾಮಾಜಿಕ ತಾಣಗಳನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದ ಬಳಸಿ. ಸ್ನೇಹಿತರನ್ನು ಆಯ್ಕೆ ಮಾಡುವಾಗ ಎಚ್ಚರವಾಗಿರಿ. ಪ್ರೈವೆಸಿ ಸೆಟ್ಟಿಂಗ್‌ ಹೋಗಿ ನಿಮಗೆ ಬೇಕಾದ ಪ್ರೈವೆಸಿ ಆಯ್ಕೆಗಳನ್ನು ಆಯ್ಕೆಮಾಡಿ.

ಬೇರೆ ಆಕೌಂಟ್‌ಗಳನ್ನು ಡಿಲೀಟ್ ಮಾಡಿ:

ಹಿಂದೆ ನೀವು ಯಾವುದೋ ಸೈಟ್‌ನಲ್ಲಿ ಅಕೌಂಟ್ ಕ್ರಿಯೆಟ್ ಮಾಡಿರುತ್ತೀರಿ. ನಂತರ ಬೇರೆ ಸೈಟಲ್ಲಿ ಇನ್ನೊಂದು ಅಕೌಂಟ್ ಕ್ರಿಯೆಟ್ ಮಾಡಿ ನಿಮ್ಮ ವ್ಯವಹಾರವನ್ನು ಮಾಡಿಕೊಂಡಿರುತ್ತೀರಿ. ಆದ್ರೆ ಹಳೆಯ ಅಕೌಂಟ್ ಹಾಗೇಯೇ ಇರುತ್ತದೆ. ಹಾಗಾಗಿ ನೀವು ಬಳಸದೇ ಇದ್ದರೇ ಆ ಹಳೆ ಇಮೇಲ್ ಅಕೌಂಟ್ ಡಿಲೀಟ್ ಮಾಡಿ. ಬ್ಲಾಗ್‌ನನಲ್ಲಿ ಬರೆದು ಅರ್ಧದಲ್ಲಿ ನಿಲ್ಲಿಸಿದವರು ಪುನಃ ಬ್ಲಾಗ್‌ ಬರೆಯಲು ಆರಂಭಿಸಿ.

ಅಪ್ಲಿಕೇಶನ್ ಡಿಲೀಟ್ ಮಾಡಿ:

ನಿಮ್ಮ ಮೊಬೈಲ್‌ನಲ್ಲಿ ನೀವು ಬಳಸದೇ ಇರುವಂತಹ ಅನಗತ್ಯವಾಗಿ ಡೌನ್‌ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಡಿಲೀಟ್ ಮಾಡಿ.ಯಾಕಂದ್ರೆ ಅದು ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಮೆಮೊರಿಯನ್ನು ಕಬಳಿಸುತ್ತಿರುತ್ತದೆ. ಅದೇ ರೀತಿಯಾಗಿ ನಿಮ್ಮ ಕಂಪ್ಯೂಟರ್‌ನಲ್ಲಿ ಅನಗತ್ಯವಾದ ಫೈಲ್‌ಗಳನ್ನು ಡಿಲೀಟ್ ಮಾಡಿ.

ಪೇಪರ್ ಬಳಕೆ ಕಡಿಮೆ ಮಾಡಿ:

ನಿಮ್ಮಲ್ಲಿರುವ ಹಳೆಯ ದಾಖಲೆ ಪತ್ರಗಳಿದ್ದರೆ ಅದನ್ನು ಸ್ಕ್ಯಾನ್ ಮಾಡಿ ಡಿಜಟಲೀಕರಣಗೊಳಿಸಿ. ಯಾಕೆಂದರೆ ಈ ರೂಪದಲ್ಲಿದ್ದರೆ ನೀವು ಯಾವಾಗ ಬೇಕಾದ್ರೂ ಅದನ್ನು ನೋಡಬಹುದು, ಪ್ರಿಂಟ್ ಹಾಕಿಸಿಕೊಳ್ಳಬಹುದು. ಬಿಲ್‌ಗಳನ್ನು ಪಾವತಿ ಮಾಡುವ ವೇಳೆ ಇಂಟರ್‌ನೆಟ್‌ನಲ್ಲೇ ಪಾವತಿ ಮಾಡಿ. ಈ ರೀತಿ ಮಾಡಿದ್ರೆ ಪೇಪರ್ ಉಳಿತಾಯವಾಗುತ್ತದೆ , ನಿಮ್ಮ ಸಮಯವು ಉಳಿತಾಯವಾಗುತ್ತದೆ.

ಹೊರಗೂ ಸ್ವಲ್ಪ ಓಡಾಡಿ:

ನೀವು ಎಷ್ಟು ಕಂಪ್ಯೂಟರ್ ತಂತ್ರಜ್ಞಾನವನ್ನು ಇಷ್ಟಪಡಿತ್ತಿರೋ ಅದೇ ರೀತಿಯಲ್ಲೇ ಫ್ರೆಶ್ ಗಾಳಿ ಮತ್ತು ಮಾನವ ಸಂವಹನ ಅಗತ್ಯ. ಹಾಗಾಗಿ ಯಾವಾಗಲೂ ಟ್ಯಾಬ್ಲೆಟ್ ಲ್ಯಾಪ್‌ಟಾಪ್‌ನೊಂದಿಗೆ ಕೆಲಸ ಮಾಡಬೇಡಿ. ನಿಮ್ಮ ಸ್ನೇಹಿತರು, ಆಪ್ತರ ಜೊತೆ ಮಾತನಾಡಿ.

ಬರಲಿದೆ ಆಪಲ್ ಐ ವಾಚ್

ಕಪ್ಪು ಬಣ್ಣದಲ್ಲಿ ಬರಲಿದೆ ಗ್ಯಾಲಕ್ಸಿ ನೋಟ್ II

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X