ಭಾರತದಲ್ಲಿ ಎಷ್ಟು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ನಿಮಗೆ ಗೊತ್ತಾ?

ಭಾರತದಲ್ಲಿ 119,80,00,000 ಜನರು ಟೆಲಿಕಾಂ ಚಂದಾದಾರರಾಗಿದ್ದಾರೆ.!!

|

ಭಾರತದಲ್ಲಿ ಎಷ್ಟು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ನಿಮಗೆ ಗೊತ್ತಾ? ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಏಪ್ರಿಲ್ 2017 ತಿಂಗಳ ವೇಳಗೆ ಭಾರತದಲ್ಲಿ 119,80,00,000 ಜನರು ಟೆಲಿಕಾಂ ಚಂದಾದಾರರಾಗಿದ್ದಾರೆ.!!

ಹೌದು, ಟೆಲಿಕಾಂನಲ್ಲಿ ಏಪ್ರಿಲ್ ತಿಂಗಳ ಅಂತ್ಯಕ್ಕೆ o.36 ಪರ್ಸೆಂಟ್ ಬೆಳವಣಿಗೆ ಹೊಂದಿದ್ದು, 119 ಕೋಟಿಗೂ ಹೆಚ್ಚು ಭಾರತೀಯರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂದು ಟ್ರಾಯ್ ಬಿಡುಗಡೆ ಮಾಡಿದೆ.! ಆದರೆ, ಒಬ್ಬರೆ ಎರಡು ಸಿಮ್ ಬಳಕೆ ಮಾಡುತ್ತಿರುವ ಅಥವಾ ಇನ್ನಾವ ಅಂಶಗಳನ್ನು ಟ್ರಾಯ್ ಹೇಳಿಲ್ಲಾ.!!

ಭಾರತದಲ್ಲಿ ಎಷ್ಟು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ನಿಮಗೆ ಗೊತ್ತಾ?

ಇನ್ನು ಜಿಯೋ ಬಗ್ಗೆ ಟ್ರಾಯ್ ಮಾಹಿತಿ ನೀಡಿದ್ದು, ಜಿಯೋ ಈಗಲೂ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದೆ. ಜಿಯೋ ಉಚಿತ ಸೇವೆ ಮುಗಿಯುತ್ತಿದೆ ಎನ್ನವಾಗಲೂ ಸಹ ಜಿಯೋಗೆ ಇದ್ದ ಗ್ರಾಹಕರ ಬಲ ಬಹುತೇಕ ಹಾಗೆಯೇ ಇತ್ತು. ಈಗಲೂ ಕೂಡ ಜಿಯೋ 4Gಗೆ ಚಂದಾದಾರರಾಗುವರ ಸಂಖ್ಯೆ ಹೆಚ್ಚಿದೆ ಎಂದು ಟ್ರಾಯ್ ಹೇಳಿದೆ.!!

ಗ್ರಾಹಕರನ್ನು ಸೆಳೆಯುವಲ್ಲಿ ಜಿಯೋ ಈಗಲೂ ಮೊದಲ ಸ್ಥಾನದಲ್ಲಿಯೇ ಇದ್ದರುಚಂದಾದಾರರಾಗುವ ಮೊದಲಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ಟ್ರಾಯ್ ಹೇಳಿದೆ.!! ಏಪ್ರಿಲ್ ತಿಂಗಳಿನಲ್ಲಿ ಜಿಯೋ 3.87 ಮಿಲಿಯನ್ ಗ್ರಾಹಕರನ್ನು ಸೆಳೆದಿದ್ದರೆ, ಜಿಯೋ ಹಿಂಬಾಲಿಸುತ್ತಿರುವ ಏರ್‌ಟೆಲ್ 2.85ಮಿಲಿಯನ್ ಗ್ರಾಹಕರನ್ನು ಸೆಳೆದಿದೆ.

ಭಾರತದಲ್ಲಿ ಎಷ್ಟು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ನಿಮಗೆ ಗೊತ್ತಾ?

BSNL O.81 ಮಿಲಿಯನ್‌ ಗ್ರಾಹಕರಿಗೆ ತೃಷ್ತಿಪಟ್ಟರೆ, ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ಕ್ರಮವಾಗಿ 0.75 ಮಿಲಿಯನ್ ಮತ್ತು 0.68 ಮಿಲಿಯನ್ ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಂಡಿವೆ.!! ಈ ಎಲ್ಲಾ ಬೆಳವಣಿಗೆಗಳ ಜೊತೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗುತ್ತದೆ.!!

ಓದಿರಿ: ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಸಿಗಲಿದೆ 'ಡ್ರೂಣ್'!!!

Best Mobiles in India

English summary
Total wireless or mobile subscribers base increased by 0.38 per cent to 1,174.60 million in April from 1,170.18 million in March.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X