ವಿಸ್ಮಯಗೊಳಿಸುವ ಟಾಪ್ 10 ಟೆಕ್ ಸಾಧನೆಗಳು

By Shwetha
|

ಟೆಕ್ ಜಗತ್ತನ್ನು ಆಳುವ ಅನ್ವೇಷಣೆಗಳು ನಿಜಕ್ಕೂ ನಮ್ಮನ್ನು ಜ್ಞಾನದ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ. ತಂತ್ರಜ್ಞಾನದ ಈ ಅನ್ವೇಷಣೆಗಳು ನಿಜಕ್ಕೂ ಯಶಸ್ಸಿನ ಯಶೋಗಾಥೆಯನ್ನು ತಿಳಿಸುವಂತವುಗಳಾಗಿವೆ .

2014 ರಲ್ಲಿ ನಡೆದ ಈ ಸಂಶೋಧನೆಗಳು ನಮ್ಮಲ್ಲಿ ಹೊಸ ಅನ್ವೇಷಣೆಯ ಅರಿವನ್ನು ಉಂಟುಮಾಡುವುದು ನಿಜವಾಗಿದೆ. ಟೆಕ್ ಜಗತ್ತಿನಲ್ಲಿನ ಈ ಅದ್ಭುತಗಳು ಹೊಸ ಹೊಸ ಶೋಧನೆಗಳತ್ತ ಮುಖ ಮಾಡುವಲ್ಲಿ ಸ್ಫೂರ್ತಿಯಾಗಿದೆ. ಮಾರುಕಟ್ಟೆಯಲ್ಲಿನ ಈ ಅನ್ವೇಷಣೆಗಳು ಟೆಕ್ ಜಗತ್ತಿನ ಮಹತ್ವತೆಯನ್ನು ನಮಗೆ ತಿಳಿಯಪಡಿಸುವಲ್ಲಿ ಮಹತ್ತರವಾಗಿದೆ.

ಇದನ್ನೂ ಓದಿ: ಮಾರುಕಟ್ಟೆಯನ್ನು ಧೂಳೀಪಟ ಮಾಡಲಿರುವ ಶ್ಯೋಮಿ

ಇಂದಿನ ಲೇಖನದಲ್ಲಿ ಟೆಕ್ ಸಾಧನೆಯನ್ನು ಕುರಿತು ಅವಲೋಕವನ್ನು ಮಾಡುತ್ತಿದ್ದು ಈ ಸಾಧನೆಗಳು ನಿಜಕ್ಕೂ ನಮ್ಮಲ್ಲಿ ಅಚ್ಚರಿಯನ್ನು ತಂದೊಡ್ಡುತ್ತಿವೆ. ಹಾಗಿದ್ದರೆ ಆ ಸಾಧನೆಗಳನ್ನು ಕುರಿತ ವಿವರವಾದ ಮಾಹಿತಿ ಕೆಳಗಿನ ಸ್ಪೈಡ್‌ಗಳಲ್ಲಿ

#1

#1

2013 ರಲ್ಲಿ ಜಾಗೃತಿಗೆ ಬಂದಿರುವ ಸೆಲ್ಫೀ ಪದ 2014 ರಷ್ಟರಲ್ಲಿ ಹೊಸ ಸಂಚಲವನ್ನೇ ರೂಪಿಸಿದೆ. ಬರಿಯ ಸಾಮಾಜಿಕ ತಾಣಗಳಲ್ಲಿ ಮಾತ್ರವೇ ತನ್ನ ಮಹತ್ವತೆಯನ್ನು ಸಾರುತ್ತಿದ್ದ ಸೆಲ್ಫೀ ಪದ ಜನಸಾಮಾನ್ಯರಲ್ಲೂ ಹೊಸತನವನ್ನು ಬೀರಿದೆ. ಸೆಲ್ಫೀಯ ನಂತರ ಸೆಲ್ಫೀ ಸ್ಟಿಕ್ ಕಾನ್ಸೆಪ್ಟ್ ಕ್ರಿಯಾತ್ಮಕತೆಯನ್ನು ಬೀರುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ.

#2

#2

ಮೊದಲ ಪ್ರಯತ್ನದಲ್ಲೇ ಮಂಗಳನನ್ನು ಇದುವರೆಗೆ ಯಾರೂ ಪಡೆದುಕೊಂಡಿಲ್ಲ. ಆದರೆ ಸಪ್ಟೆಂಬರ್ 24 ರಂದು ಭಾರತ ಮಂಗಳನ ಕಕ್ಷೆಗೆ ಕಾಲಿಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

#3

#3

ಆಪಲ್ ವಾಚ್ ಕೈಯಲ್ಲೇ ಕಂಪ್ಯೂಟರ್ ಅನ್ನು ಬಳಸುವ ಹೊಸ ಅನುಭವವನ್ನು ಬಳಕೆದಾರರಿಗೆ ಉಂಟುಮಾಡಿದೆ. ಇದು ಟಚ್ ಸ್ಕ್ರೀನ್ ಮತ್ತು ಫಿಸಿಕಲ್ ಬಟನ್‌ಗಳನ್ನು ಒಳಗೊಂಡು ನಿಜಕ್ಕೂ ಅತ್ಯುತ್ತಮವಾಗಿದೆ. ಇದು ಫಿಟ್‌ನೆಸ್ ಟ್ರ್ಯಾಕ್ ಮಾಡುವ ವಿಶೇಷತೆಯನ್ನು ಹೊಂದಿದ್ದು ಸಂದೇಶ ಕಳುಹಿಸುವಿಕೆ, ದಿಕ್ಕುಗಳ ಸೂಚನೆ, ವೈರ್‌ಲೆಸ್ ಪಾವತಿ ಮೊದಲಾದ ಕಾರ್ಯಗಳನ್ನು ಮಾಡಿದೆ.

#4

#4

ನಿಮ್ಮ ಗೌಪ್ಯತೆಯ ಮಾಹಿತಿಯನ್ನು ಕಾಪಿಡುವ ಬ್ಲ್ಯಾಕ್‌ಫೋನ್ ನಿಜಕ್ಕೂ ಅಸದಳ ವಿಶೇಷತೆಯನ್ನು ಒಳಗೊಂಡು ಅತ್ಯದ್ಭುತವಾಗಿದೆ. ಕಸ್ಟಮೈಸ್ ಮಾಡಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುವ ಬ್ಲ್ಯಾಕ್‌ಫೋನ್ ವೈಯಕ್ತಿಕ ಮಾಹಿತಿ ಕಾಪಿಡಲು ಹೇಳಿಮಾಡಿಸಿದ್ದಾಗಿದೆ.

#5

#5

ಹೋವರ್ ಬೋರ್ಡ್ ಒಂದು ವಿಧವಾದ ಸ್ಕೇಟ್ ಬೋರ್ಡ್ ಆಗಿದ್ದು 1 ಫೀಟ್ ಅಳತೆಯನ್ನ ಹೊಂದಿದ್ದು ಇದರ ಬ್ಯಾಟರಿ ಬಾಳ್ವಿಕೆ 15 ನಿಮಿಷಗಳಾಗಿದೆ.

#6

#6

ಇದರಲ್ಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಾದ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಅನ್ನು ನಾವು ಚಾಲನೆ ಮಾಡಬಹುದಾಗಿದ್ದು ಇದು ಸ್ಲಿಮ್ ಮತ್ತು ಕೀಬೋರ್ಡ್ ಅನ್ನು ತೆಗೆದಿರಿಸಬಹುದಾಗಿದೆ.

#7

#7

ಹೆಚ್ಚಿನ ವೃತ್ತಿಪರರು ಈ ರಿಂಗ್ ಅನ್ನು ತಮ್ಮ ಬೆರಳುಗಳಲ್ಲಿ ಧರಿಸಿ ಫೋನ್‌ನ ಅಧಿಸೂಚನೆಗಳನ್ನು ತಮ್ಮ ಬೆರಳುಂಗುರದ ಮೂಲಕ ಅರಿಯುತ್ತಾರೆ. ಇದು 24 ಗಂಟೆಗಳಲ್ಲಿ ಮಾರಾಟವನ್ನು ಕಂಡುಕೊಂಡಿದೆ.

#8

#8

3 ಡಿ ಪ್ರಿಂಟರ್‌ಗಳು ಡಿಜಿಟಲ್ ಬ್ಲ್ಯೂ ಪ್ರಿಂಟ್‌ಗಳಿಂದ ಆಬ್ಜೆಕ್ಟ್‌ಗಳನ್ನು ನಿರ್ಮಿಸಿ ಹೊಸದಾದ ಅನ್ವೇಷಣೆಗೆ ರಹದಾರಿಯನ್ನು ಉಂಟುಮಾಡಿವೆ.

#9

#9

ಈ ಕೂಲರ್ ಆಹಾರ ಪದಾರ್ಥಗಳನ್ನು ಶೀತಲೀಕರಣಗೊಳಿಸುವ ಗುಣವನ್ನು ಹೊಂದಿದೆ. ಇದು ಬ್ಲ್ಯೂಟೂತ್ ಸ್ಪೀಕರ್ ಅನ್ನು ಹೊಂದಿದ್ದು ಯುಎಸ್‌ಬಿ ಚಾರ್ಜರ್ ಅನ್ನು ಪಡೆದುಕೊಂಡಿದೆ.

#10

#10

ಹೋಮಿಯೊಪ್ಯೂರಿಫೈಯರ್, ಎಬೋಲಾ ವೈರಸ್‌ಗಳನ್ನು ಆಕರ್ಷಿಸಿ ರಕ್ತದಿಂದ ಅವುಗಳನ್ನು ಹೀರಿಬಿಡುತ್ತದೆ. ಇದನ್ನು ಒಮ್ಮೆ ಮಾತ್ರವೇ ಬಳಸಬಹುದಾಗಿದೆ.

Best Mobiles in India

English summary
This article tells about Best top 10 inventions making the world better, smarter and in some cases a little more fun.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X