ಜಿಯೋ, ಏರಟೆಲ್ ಸೇರಿದಂತೆ ಟೆಲಿಕಾಂಗೆ ಶಾಕ್ ನೀಡಿದ ಮೋದಿ!!

ಪ್ರಧಾನಮಂತ್ರಿ ಮೋದಿಯವರು ಏರ್‌ಟೆಲ್ ,ವೊಡಾಫೋನ್ ಮತ್ತು ಜಿಯೋ ಸೇರಿದಂತೆ ಎಲ್ಲಾ ದೊಡ್ಡ ಟೆಲಿಕಾಂಗಳ ವಿರುದ್ದ ಸಿಕ್ಸರ್ ಭಾರಿಸಿದ್ದಾರೆ.!!

Written By:

ಟೆಲಿಕಾಂನಲ್ಲಿ ಏಕಸ್ವಾಮ್ಯಗಳಿಸಿಕೊಂಡಿದ್ದ ಏರ್‌ಟೆಲ್‌, ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳಿಗೆ ಅಂಬಾನಿ ಟಾಂಗ್ ನೀಡಿದರೆ, ಇದೀಗ ಪ್ರಧಾನಮಂತ್ರಿ ಮೋದಿಯವರು ಏರ್‌ಟೆಲ್ ,ವೊಡಾಫೋನ್ ಮತ್ತು ಜಿಯೋ ಸೇರಿದಂತೆ ಎಲ್ಲಾ ದೊಡ್ಡ ಟೆಲಿಕಾಂಗಳ ವಿರುದ್ದ ಸಿಕ್ಸರ್ ಭಾರಿಸಿದ್ದಾರೆ.!!

ಹೌದು, ದೊಡ್ಡ ಟೆಲಿಕಾಂಗಳಿಗೆ ಮೋದಿ ಶಾಕ್ ನೀಡಿದ್ದು, ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ (MNVO) ದೊಡ್ಡ ಪ್ರಮಾಣದಲ್ಲಿ ಕರೆ ಮತ್ತು ಬ್ರಾಂಡ್ವಿಡ್ತ್ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದಾರೆ.!! ಈ ಬಗ್ಗೆ ಕಳೆದ ವರ್ಷವೇ ಘೋಷಿಸಿದ್ದ ಮೋದಿಯವರು, ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ ಈಗ ಸಿಹಿಸುದ್ದಿ ನೀಡಿದ್ದಾರೆ.

ಓದಿರಿ: ಇದೀಗ ಬಂದ ಸುದ್ದಿ..ಜಿಯೋ ಸಮ್ಮರ್ ಆಫರ್ ಪಡೆಯಲು ಲಾಸ್ಟ್‌ಚಾನ್ಸ್ ನೀಡಿದ ಅಂಬಾನಿ!!

ಹಾಗಾದರೆ, ಈ ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ ಎಂದರೆ ಏನು? ಕರೆ ಮತ್ತು ಬ್ರಾಂಡ್ವಿಡ್ತ್ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರಿಂದ ಮುಂದೆ ಟೆಲಿಕಾಂನಲ್ಲಿ ಆಗುವ ಬದಲಾವಣೆಗಳೇನು? ಇದರಿಂದ ಸರ್ಕಾರಕ್ಕೆ ಉಪಯೋಗವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏನಿದು ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್?

ವೈರ್‌ಲೆಸ್‌ ಮೂಲಕ ಸೇವೆ ನೀಡುವ ಸಣ್ಣ ಟೆಲಿಕಾಂ ಸಂಸ್ಥೆಗಳನ್ನೇ ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್ (MNVO) ಎಂದು ಕರೆಯಬಹುದಾಗಿದ್ದು, ಏರ್‌ಟೆಲ್, ಜಿಯೋ ಮತ್ತು ವೊಡಾಫೊನ್‌ಗಳಂತಹ ದೊಡ್ಡ ಟೆಲಿಕಾಂ ಕಂಪೆನಿಗಳ ಮುಂದೆ ತತ್ತರಿಸಿ ಹೋಗಿದ್ದ, ಸಣ್ಣ ಟೆಲಿಕಾಂ ಸಂಸ್ಥೆಗಳಾಗಿವೆ.!!

ಕರೆ ಮತ್ತು ಬ್ರಾಂಡ್ವಿಡ್ತ್ ಅವಕಾಶ!!

ಮೋದಿಯವರು ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ ಕರೆ ಮತ್ತು ಬ್ರಾಂಡ್ವಿಡ್ತ್ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಟೆಲಿಕಾಂನಲ್ಲಿ ಮತ್ತೆ ದರಸಮರ ನಡೆಯುವ ಸೂಚನೆಯಿದ್ದು, ಏರ್‌ಟೆಲ್ ಮತ್ತು ವೊಡಾಫೋನ್‌ಗೆ ಜಿಯೊ ರೀತಿಯಲ್ಲಿಯೇ ಪೈಪೋಟಿ ನೀಡುವ ಇನ್ನು ಹಲವು ಟೆಲಿಕಾಂ ಕಂಪೆನಿಗಳು ಹುಟ್ಟಿಕೊಳ್ಳುತ್ತವೆ.!!

ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್ ಏಕೆ ಬೇಕು?

ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ, ದುರ್ಗಮ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ ಸಾಕಷ್ಟು ಬೇಡಿಕೆ ಇದ್ದು, ಇದರಿಂದ ಜಿಲ್ಲಾ ಮಟ್ಟದಲ್ಲಿ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್ ಕಾರ್ಯಗೊಳಿಸಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಇದರಿಂದ ಸರ್ಕಾರಕ್ಕೆ ಏನು ಲಾಭ?

ಮೊಬೈಲ್ ವರ್ಚವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ ಕರೆ ಮತ್ತು ಬ್ರಾಂಡ್ವಿಡ್ತ್ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಸರ್ಕಾರಕ್ಕೆ ಟೆಲಿಕಾಂ ವಲಯದಿಂದ ಬರುವ ತೆರಿಗೆ ದುಪ್ಪಟ್ಟಾಗುತ್ತದೆ. ಇನ್ನು ಇದರಿಂದ ಟೆಲಿಕಾಂನಲ್ಲಿ ಉಂಟಾಗುತ್ತಿದ್ದ ಏಕಸ್ವಾಮ್ಯತೆ ತಪ್ಪಲಿದೆ!!

ಓದಿರಿ: ಜಿಯೋ ಡಿಟಿಹೆಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
MVNO industry could change with Jio’s ultra-affordable pricing impact . to know more visit to kannada.gizbot.com
Please Wait while comments are loading...
Opinion Poll

Social Counting