ಸ್ಮಾರ್ಟ್‌ಫೋನ್‌ ಬಳಕೆದಾರರು ತ್ಯಜಿಸಬೇಕಾದ ದುರಾಭ್ಯಾಸಗಳು

By Suneel
|

ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರ ಕೈಗೆ ಸಿಗುತ್ತಿರುವ ಆಟಿಕೆಗಳಾಗಿವೆ. ಬಳಕೆ ಮಾಡುವುದರಲ್ಲಿ ತಿಳಿಯದೇ ಕೆಲವು ದಿನನಿತ್ಯ ಚಟುವಟಿಕೆಗಳು ದುರಭ್ಯಾಸವಾಗಿ ಮಾರ್ಪಾಡಿವೆ. ಎಲ್ಲಂದರಲ್ಲಿ ಸ್ವಚ್ಛತೆ ಮಾಡದೇ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದೇವೆ. ಇವು ಎಲ್ಲರೂ ಮಾಡುವ ಸಾಮಾನ್ಯ ತಪ್ಪುಗಳು ಆಗಿವೆ.

ಓದಿರಿ:ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

ಸ್ಮಾರ್ಟ್‌ಫೋನ್‌ಗಳಿಂದ ಮಾಡುವ ಕೆಲವು ದುಶ್ಚಟಗಳನ್ನು ನಾವು ಇಂದಿನ ಲೇಖನದಲ್ಲಿ ಹೇಳಲು ಹೊರಟಿದ್ದೇವೆ. ಕಾರಣ ಆ ದುಶ್ಚಟಗಳನ್ನು ಇನ್ನು ಮುಂದಾದರೂ ಬಿಡಲಿ ಎಂದು. ಅಂತಹ ಚಟುವಟಿಕೆಗಳು ಪ್ರಾಣಹಾನಿ ಮತ್ತು ಮಾನಹಾನಿ ಎರಡಕ್ಕೂ ಕಾರಣವಾಗುವುದರಲ್ಲಿ ಮುಂದಾಗುತ್ತಿರುವುದರಿಂದ ಅವುಗಳನೊಮ್ಮೆ ನಿಮಗೆ ಮನವರಿಕೆ ಮಾಡಿಕೊಡಲಿದ್ದೇವೆ.

ಊಟದ ಸಮಯದಲ್ಲಿ ಫೋಟೊ ತೆಗೆಯುವುದು

ಊಟದ ಸಮಯದಲ್ಲಿ ಫೋಟೊ ತೆಗೆಯುವುದು

ಊಟ ಮಾಡುವ ಸಂದರ್ಭದಲ್ಲಿಯೂ ಕೆಲವರು ತಮ್ಮ ಸ್ಮಾರ್ಟ್‌ಫೋನ್‌ ಬಳಸಿ ಇನ್ನೊಬ್ಬರ ಫೋಟೊ ತೆಗೆಯುತ್ತಾರೆ. ಇದೊಂದು ರೀತಿಯ ಹುಚ್ಚು ಚಟುವಟಿಕೆಯಾಗಿದೆ. ಇದು ಅಪರಾಧವು ಹೌದು.

ಸಮ್ಮೇಳನದಲ್ಲಿ ಫೋಟೋ ತೆಗೆಯುವುದು

ಸಮ್ಮೇಳನದಲ್ಲಿ ಫೋಟೋ ತೆಗೆಯುವುದು

ಸಾಮಾನ್ಯವಾಗಿ ಸಮ್ಮೇಳನದಲ್ಲಿ ಫೋಟೊ ತೆಗೆಯುವುದು ಪತ್ರಕರ್ತರ ಕೆಲಸ. ಆದರೆ ಇಂದು ಸ್ಮಾರ್ಟ್‌ಫೋನ್‌ ಇರುವವರೆಲ್ಲಾ ಫೋಟೊ ತೆಗೆಯುವುದು ಒಂದು ರೀತಿ ಸ್ಟುಪಿಡ್‌ ಕೆಲಸವಾಗಿಬಿಟ್ಟಿದೆ.

ಅನಾವಶ್ಯಕ ಫೋಟೊಗಳು

ಅನಾವಶ್ಯಕ ಫೋಟೊಗಳು

ಹೋಟೆಲ್‌ಗಳಿಗೆ ಹೋದ ಸಂದರ್ಭದಲ್ಲಿ ಅಥವಾ ಮನೆಗಳಲ್ಲೇ ಪ್ಲೇಟ್‌ಗಳಲ್ಲಿರುವ ಆಹಾರವನ್ನು ಫೋಟೊ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಡುವುದು.

ಜೋರು ಧ್ವನಿಯಲ್ಲಿ ಮಾತನಾಡುವುದು

ಜೋರು ಧ್ವನಿಯಲ್ಲಿ ಮಾತನಾಡುವುದು

ಕೆಲವರು ತಮ್ಮ ಬಳಿ ಇರುವಂತೆ ಬೇರಾರಲ್ಲಿಯೂ ಸ್ಮಾರ್ಟ್‌ಫೋನ್‌ ಇಲ್ಲದಂತೆ ಕೈಯಲ್ಲಿ ಹಿಡಿದು ಸಾರ್ವಜನಿಕ ಪ್ರದೇಶಗಳಲ್ಲಿ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಇದರಿಂದ ಪ್ರತಿಯೊಬ್ಬರಿಗೂ ನಿಮ್ಮ ಬಾಯಿ ಮುಚ್ಚಿಸಬೇಕೆಂದು ಎನಿಸುತ್ತದೆ.

ಸೆಲ್ಫೀ ಹುಚ್ಚು

ಸೆಲ್ಫೀ ಹುಚ್ಚು

ನಿಮಗೆ ನಿಮ್ಮ ಫೋಟೊ ತೆಗೆದುಕೊಳ್ಳಲು ಯಾರು ಅಡ್ಡಿ ಮಾಡುವುದಿಲ್ಲಾ. ಆದರೆ ಸಾರ್ವಜನಿಕವಾಗಿ ಅತಿಯಾಗಿ ಸೆಲ್ಫೀ ತೆಗೆದುಕೊಳ್ಳುವುದು ನಿಮಗೆ ನಾಚಿಕೆ ವಿಷಯ ಅಲ್ಲವೇ.

ಅಪಾಯಕರ ಸೆಲ್ಫೀ ತೆಗೆದುಕೊಳ್ಳುವುದು

ಅಪಾಯಕರ ಸೆಲ್ಫೀ ತೆಗೆದುಕೊಳ್ಳುವುದು

ಕೆಲವರು ಸ್ಮಾರ್ಟ್‌ಫೋನ್‌ ತಮ್ಮ ಕೈಯಲ್ಲಿ ಬಂದ ಮೇಲೆ ಅಪಾಯಕರ ಸ್ಥಳದಲ್ಲಿ ನಿಂತು ಸಹ ಸೆಲ್ಫೀ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇದು ಪ್ರಾಣಹಾನಿ ಚಟುವಟಿಕೆಯಲ್ಲವೇ.

ಹೆಚ್ಚು ಅಪ್ಲಿಕೇಶನ್‌ ಡೌನ್‌ಲೋಡ್‌

ಹೆಚ್ಚು ಅಪ್ಲಿಕೇಶನ್‌ ಡೌನ್‌ಲೋಡ್‌

ಮಾಡುವುದು ಅನಾವಶ್ಯಕ ಅಪ್ಲಿಕೇಶನ್‌ಗಳನ್ನು ಸಹ ಹೆಚ್ಚು ಡೌನ್‌ಲೋಡ್‌ ಮಾಡುವುದು ಒಂದು ರೀತಿಯಲ್ಲಿ ಫೋನ್‌ ವೇಗಕ್ಕೂ ಕುತ್ತುತರುತ್ತದೆ.

ಗ್ಯಾಜೆಟ್ಸ್‌ಗಳನ್ನು ಮಕ್ಕಳಿಗೆ ಕೊಡುವುದು

ಗ್ಯಾಜೆಟ್ಸ್‌ಗಳನ್ನು ಮಕ್ಕಳಿಗೆ ಕೊಡುವುದು

ಗ್ಯಾಜೆಟ್ಸ್‌ಗಳನ್ನು ಮಕ್ಕಳಿಗೆ ನೀಡುವುದು, ಒಂದು ರೀತಿಯಲ್ಲಿ ಅಪಾಯಕಾರಿಯಾಗಿದೆ.

ವಿಡಿಯೋ

ವಿಡಿಯೋ

ಉತ್ತಮ ದೃಶ್ಯವನ್ನು ಸೆರೆಹಿಡಿಯುವುದು ಒಳ್ಳೆಯದು. ಆದರೆ ಸಾಮರ್ಥ್ಯವನ್ನು ಮೀರಿ ಕೆಲವು ಸಂದರ್ಭಗಳಲ್ಲಿ ಸೆರೆಹಿಡಿಯುವ ದೃಶ್ಯಗಳು ಅಪಾಯಕ್ಕೀಡುಮಾಡುತ್ತವೆ.

ಗೆಳೆಯರ ಮುಂದೆ ಹೆಚ್ಚು ಫೋನ್‌ ಬಳಕೆ

ಗೆಳೆಯರ ಮುಂದೆ ಹೆಚ್ಚು ಫೋನ್‌ ಬಳಕೆ

ನೀವು ನಿಮ್ಮದೇ ಆದ ಗೆಳೆಯರ ಬಳಗದಲ್ಲಿ ಇದ್ದಾಗಲೂ ಸಹ ಅಧಿಕವಾಗಿ ಫೋನ್‌ ಬಳಸುವುದು ಅವರಿಗೆ ಬೇಸರ ತರಿಸಿ ಸ್ನೇಹಕ್ಕೆ ಕಡಿವಾಣ ಬೀಳಬಹುದು.

Best Mobiles in India

English summary
The Stupid Things You Do With Your Smartphone and How to Fix Them.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X