ವಿಶ್ವವನ್ನೇ ನಿಬ್ಬೆರಗುಗೊಳಿಸಿದ 11 ರ ಹರೆಯದ ಭಾರತೀಯ ಬಾಲಕಿ

By Shwetha
|

'ಸಾಧಿಸಿದರೆ ಸಬಳವನ್ನೂ ನುಂಗಬಹುದು' ಎಂಬ ಗಾದೆ ಮಾತಿನಂತೆ ಹನ್ನೊಂದರ ಹರೆಯದ ಬಾಲೆಯೊಬ್ಬಳು ಕ್ರ್ಯಾಕ್ ಮಾಡಲೇ ಸಾಧ್ಯವಿಲ್ಲದ ಪಾಸ್‌ವರ್ಡ್ ಅನ್ನು ತನಗಾಗಿ ರಚಿಸಿಕೊಂಡಿದ್ದು, ವಿಶ್ವವೇ ಈಕೆಯನ್ನು ಕಣ್ಣರಳಸಿ ನೋಡುವಂತೆ ಮಾಡಿದೆ. ಈಕೆಯ ಹೆಸರು ಮೀರಾ ಮೋದಿ, ವಯಸ್ಸು 11. ಅದಲ್ಲದೆ ನಿಮಗಾಗಿ ಹೆಚ್ಚು ಶಕ್ತಿಯುತ ಪಾಸ್‌ವರ್ಡ್ ಅನ್ನು ರಚಿಸುವ ಕಲೆಯಲ್ಲೂ ಈಕೆ ನಿಷ್ಣಾತೆಯಾಗಿದ್ದು ಈ ಕುರಿತು ತನ್ನದೇ ವೆಬ್‌ಸೈಟ್ dicewarepasswords.com. ನಲ್ಲಿ ಬರೆದುಕೊಂಡಿದ್ದಾಳೆ.

ಡಿಕ್ಶನರಿಯ ಮತ್ತು ಡೈಸ್ (ದಾಳ) ಬಳಸಿಕೊಂಡು ಮೀರಾ ಪಾಸ್‌ವರ್ಡ್ ರಚನೆಯನ್ನು ಮಾಡುತ್ತಿದ್ದು ಈಕೆಯ ಅದ್ಭುತ ಪ್ರತಿಭೆ ಎಂತಹ ಕಂಪ್ಯೂಟರ್ ಮೇಧಾವಿಗಳನ್ನು ಬೆಕ್ಕಸಬೆರಗಾಗಿಸಿದೆ. ಈಕೆ ಹೇಗೆ ಪಾಸ್‌ವರ್ಡ್ ರಚಿಸುತ್ತಾಳೆ ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೀಡಿದ್ದೇವೆ.

ಓದಿರಿ: ಮರೆತುಹೋದ ವಿಂಡೋಸ್‌ ಪಾಸ್‌ವರ್ಡ್‌ ರೀಸೆಟ್‌ ಹೇಗೆ?

#1

#1

ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರುವ ಮೀರಾ ಹೆಚ್ಚು ಬಲಿಷ್ಟವಾದ ಬ್ರೇಕ್ ಮಾಡಲು ಸಾಧ್ಯವಾಗದೇ ಇರುವ ಪಾಸ್‌ವರ್ಡ್ ಅನ್ನು ರಚಿಸಿಕೊಂಡಿದ್ದು ಈಕೆ ಪಾಸ್‌ವರ್ಡ್ ರಚನೆಗಾಗಿ ತನ್ನದೇ ಆದ ವಿಭಿನ್ನ ವಿಧಾನವನ್ನು ಕಂಡುಕೊಂಡಿದ್ದಾಳೆ.

#2

#2

$2 ರ ಬೆಲೆಯ ಡೈಸ್‌ವೇರ್ ಸಿಸ್ಟಮ್ ಅನ್ನು ಬಳಸಿಕೊಂಡು ಮೀರಾ ಪಾಸ್‌ವರ್ಡ್ ಅನ್ನು ಸಿದ್ಧಪಡಿಸಿಕೊಂಡಿದ್ದಾಳೆ. ಸಾಧಾರಣವಾಗಿ ಪಾಸ್‌ವರ್ಡ್ ರಚಿಸುವಾಗ ಅದು ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆ, ವಿಶೇಷ ಅಕ್ಷರ ಹೀಗೆ ಮೊದಲಾದವುಗಳನ್ನು ಪ್ರೊಗ್ರಾಮ್ ಕೇಳುತ್ತದೆ. ಆದರೆ ಇದೆಲ್ಲವೂಗಳನ್ನು ಬಳಸಿಕೊಂಡು ತಯಾರಿಸುವ ಪಾಸ್‌ವರ್ಡ್ ನೆನಪಿಡಲು ಕಷ್ಟ.

#3

#3

ಡೈಸ್‌ವೇರ್ ವಿಧಾನವನ್ನು ಬಳಸಿಕೊಂಡು, ಇದನ್ನು ಇನ್ನಷ್ಟು ಸರಳವನ್ನಾಗಿ ಮಾಡಿಕೊಳ್ಳಬಹುದಾಗಿದೆ. ಇದು ನಿಮಗಾಗಿ ಗುಪ್ತವಾಕ್ಯಾಂಶವನ್ನು ರಚಿಸುತ್ತದೆ. ಆರು ಬಾರಿ ಡೈಸ್ ಅನ್ನು ತಿರುಗಿಸುತ್ತಾ ಡೈಸ್‌ವೇರ್ ಡಿಕ್ಶನರಿಯಲ್ಲಿ ಅನುಗುಣವಾದ ಪದಗಳಿಗೆ ಸಂಖ್ಯೆಗಳನ್ನು ಹೊಂದಿಸಬೇಕು.

#4

#4

ಇದು 7000 ಅಸಾಮಾನ್ಯವಾಗಿರುವ ಪದಗಳನ್ನು ಇಂಗ್ಲೀಷ್ ನಿಘಂಟಿನಿಂದ ಒಳಗೊಂಡಿರುತ್ತದೆ. ಈಗ ಎಲ್ಲಾ ಪದಗಳನ್ನು ಒಟ್ಟಿಗೆ ಜೋಡಿಸಿ ಮತ್ತು ಹೆಚ್ಚು ಸುಭದ್ರವಾಗಿರುವ ಪಾಸ್‌ವರ್ಡ್ ನಿಮಗೆ ದೊರೆಯುತ್ತದೆ.

#5

#5

ಮಿರಾ ಡೈಸ್ ಅನ್ನು ರೋಲ್ ಮಾಡಿ ಪಾಸ್‌ವರ್ಡ್ ಅನ್ನು ಲೆಕ್ಕಾಚಾರ ಮಾಡುತ್ತಾಳೆ. ನಂತರ ಅದನ್ನು ಹಾಳೆಯಲ್ಲಿ ಬರೆದುಕೊಂಡು ನಿಮಗಿದನ್ನು ಪೋಸ್ಟ್ ಮಾಡುತ್ತಾಳೆ.

#6

#6

ಅಂತೆಯೇ ಆಕೆಯ ವೆಬ್‌ಸೈಟ್ ಪಾಸ್‌ವರ್ಡ್ ಖರೀದಿ ಮಾಡುವ ಯಾವುದೇ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ</a><br /><a href=80 ವರ್ಷ ಪೂರೈಸಿದ ಆಕಾಶವಾಣಿ; ತಿಳಿಯಲೇಬೇಕಾದ 8 ಮಾಹಿತಿಗಳು
ಕೊನೆಗೂ ಪತ್ತೆಯಾಗದ ವಿಶ್ವ ರಹಸ್ಯಗಳು" title="ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ
80 ವರ್ಷ ಪೂರೈಸಿದ ಆಕಾಶವಾಣಿ; ತಿಳಿಯಲೇಬೇಕಾದ 8 ಮಾಹಿತಿಗಳು
ಕೊನೆಗೂ ಪತ್ತೆಯಾಗದ ವಿಶ್ವ ರಹಸ್ಯಗಳು" loading="lazy" width="100" height="56" />ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ
80 ವರ್ಷ ಪೂರೈಸಿದ ಆಕಾಶವಾಣಿ; ತಿಳಿಯಲೇಬೇಕಾದ 8 ಮಾಹಿತಿಗಳು
ಕೊನೆಗೂ ಪತ್ತೆಯಾಗದ ವಿಶ್ವ ರಹಸ್ಯಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Mira's service, Diceware Passwords builds you an extremely secure password for the small price of $2, using the Diceware system..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X