ಕರೆಂಟ್‌ ಇಲ್ಲದೆಯೇ ಹರಿಯುವ ನೀರಿನ ಬಳಕೆ ಹೇಗೆ?

By Suneel
|

ವಿದ್ಯುತ್ ಸಮಸ್ಯೆ ಎಂಬುದು ಎಲ್ಲಾ ರಾಜ್ಯಗಳಲ್ಲೂ ಸಾಮಾನ್ಯವಾಗಿದೆ. ಈ ಸಮಸ್ಯೆ ಹಳ್ಳಿಯಿಂದ ಹಿಡಿದು ದಿಲ್ಲಿಯ ವರೆಗೆ ಇರುವ ಸಮಸ್ಯೆ. ಆದರೆ ದೇಶದ ಬೆನ್ನಲುಬು ಆಗಿರುವ ರೈತನಿಗೆ ಆಹಾರ ಪದಾರ್ಥಗಳನ್ನು ಬೆಳೆಯಲು ಮೋಟರ್‌ಗಳಿಂದ ನೀರೆತ್ತಲು ವಿದ್ಯುತ್‌ ಅತ್ಯಾವಶ್ಯಕ. ವಿದ್ಯುತ್‌ ಇಲ್ಲದೆ ಕಾಲುವೆಗಳಿಂದ ನೀರನ್ನು ತನ್ನ ಜಮೀನಿಗೆ ತರುವುದು ಚಿಂತಿಸದ ವಿಷಯ. ಯಾಕಂದ್ರೆ ಅದು ಸಾಧ್ಯವಿಲ್ಲದ ವಿಷಯ ಅಂದುಕೊಂಡಿದ್ದೇವೆ. ಈ ಊಹೆಯನ್ನು ಈಗ ಸುಳ್ಳುಮಾಡಲು ತಂತ್ರಜ್ಞಾನ ಒಂದು ತಯಾರಾಗಿದೆ. ಹೌದು. ಅದು ಹೇಗೆ ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಕರೆಂಟ್‌ ಇಲ್ಲದೆಯೇ ಹರಿಯುವ ನೀರಿನ ಬಳಕೆ ಹೇಗೆ?

ಓದಿರಿ:ಮನೆ ಕಟ್ಟಿಕೊಡುವ 3D ಪ್ರಿಂಟರ್

ಸಾಮಾನ್ಯವಾಗಿ ನಾವೆಲ್ಲಾ ಹರಿಯುವ ಜರಿ ಕಾಲುವೆ, ಕೆರೆಗಳ ಪಕ್ಕದಲ್ಲೇ ವಾಸಿಸುವವರು . ಆದರೆ ಆ ಹರಿಯುವ ನೀರನ್ನು ಹಲವಾರು ಕಾರಣಗಳಿಂದ ಬಳಸಿಕೊಳ್ಳಲು ಆಗಿರುವುದಿಲ್ಲ. ಆದರೆ ಈ ಚಿತ್ರದಲ್ಲಿರುವ ಚಕ್ರದ ಪಂಪ್‌ಗೆ ವೇಗವಾಗಿ ಹರಿಯುವ ನೀರಿನ್ನು ವಿದ್ಯುತ್‌ ಸಹಾಯವಿಲ್ಲದೆ ನಮಗೆ ನೀರನ್ನು ಒದಗಿಸುತ್ತದೆ. ಇದನ್ನು 1746 ರ ಹಿಂದೆಯೇ ಕಂಡುಹಿಡಿಯಲಾಗಿತ್ತು. ಈಗ ಇದನ್ನು ಹೊಸರೀತಿಯಲ್ಲಿ ನವೀಕರಣಗೊಳಿಸಿ ವಿಂಡ್‌ಫಾರ್ಮ್‌ ಮ್ಯೂಸಿಯಮ್‌ನಲ್ಲಿ ಅಗ್ಗದ ಆಧುನಿಕ ವಸ್ತುಗಳನ್ನು ಬಳಸಿಕೊಂಡು ಪರೀಕ್ಷೆ ನೆಡೆಸಲಾಗಿದೆ.

ಕರೆಂಟ್‌ ಇಲ್ಲದೆಯೇ ಹರಿಯುವ ನೀರಿನ ಬಳಕೆ ಹೇಗೆ?

ಓದಿರಿ:ಇಂಟರ್‌ನೆಟ್‌ನಲ್ಲಿ ಈ ವೀಡಿಯೋಗಳನ್ನು ಪತ್ತೆಹಚ್ಚುವುದೇ ಕಷ್ಟ

6ft ಡಯಾಮೀಟರ್‌ಅಗಲದಲ್ಲಿ 1-1/4 ಡಯಾಮೀಟ್‌ ಒಳವ್ಯಾಸ ಹೊಂದಿರುವ 160ft ಉದ್ದವಿರುವ ಪಾಲಿಥೈನ್‌ ಪೈಪ್‌ ದಿನ ಒಂದಕ್ಕೆ 3900 ಗ್ಯಾಲನ್‌ ನೀರನ್ನು 40ftಎತ್ತರಕ್ಕೆ ಸೆಕೆಂಡಿಗೆ 3ft ವೇಗದಲ್ಲಿ ಪಂಪ್‌ ಮಾಡಬಲ್ಲದು. ಇದು ಅತಿ ಅಗ್ಗದ ಯೋಜನೆ ಆಗಿದ್ದು, ಇದಕ್ಕೆ ಯಾವುದೇ ಇಂಧನದ ಅಗತ್ಯವಿಲ್ಲ ಮತ್ತು ಪರಿಸರ ಸ್ನೇಹಿ ಯೋಜನೆಯಾಗಿದೆ. ಒಂದು ಲಂಬವಾಗಿರುವ ಸಮತಲದಲ್ಲಿ ಸುರುಳಿಯಾಕಾರದಲ್ಲಿ ಪೈಪ್‌ಅನ್ನು ಅಚ್ಚುಕಟ್ಟಾಗಿ ಜೋಡಿಸಬೇಕು. ಆ ಸುರುಳಿ ನೀರಿನಲ್ಲಿ ಮುಳುಗಿ ವೃತ್ತಾಕಾರದಲ್ಲಿ ತಿರುಗುವುದರಿಂದ ನೀರು ವೃತ್ತಾಕಾರದ ಪೈಪ್‌ನ ಕೇಂದ್ರಕ್ಕೆ ನೀವು ಸಾಗಿ ನಾವು ನೆಲದ ಮೇಲೆ ಕೊನೆಯಲ್ಲಿ ಅಳವಡಿಸಿರುವ ಪೈಪ್‌ ನಲ್ಲಿ ನೀರು ಹೊರಬರುತ್ತದೆ. ಇದು ರೈತಸ್ನೇಹಿಯಾಗಿದ್ದು ಕಡಿಮೆ ಖರ್ಚಿನಲ್ಲಿ ಈ ಇದರ ಉಪಯೋಗ ಪಡೆಯಬಹುದಾಗಿದೆ.

Best Mobiles in India

English summary
A lot of us live close to a running creek, however, are unable to make use of the water owing to a number of factors. Check out this amazing water wheel pump that is capable of utilizing the energy of that very flowing water body for the pumping of water

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X