ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಯೇ ಇಲ್ಲಿದೆ ಸಲಹೆ

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಯಸದವರು ಯಾರಿದ್ದಾರೆ ಹೇಳಿ? ತಾಂತ್ರಿಕ ಯುಗದಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂದು ಬಯಸುವವರೇ ಹೆಚ್ಚು. ಇನ್ನು ಹೊಸ ಫೋನ್ ಖರೀದಿಸುವವರಿಗಿಂತ ಸೆಕೆಂಡ್ ಹ್ಯಾಂಡ್‌ಗೆ ಮನಸೋಲುವವರು ಹೆಚ್ಚು. ಅದರಲ್ಲೂ ಉತ್ತಮ ಗುಣಮಟ್ಟದ ಸೆಕೆಂಡ್ ಹ್ಯಾಂಡ್ ಫೋನ್ ತಮ್ಮದಾಗಬೇಕೆಂದು ಫೋನ್ ಖರೀದಿಸುವವರು ಎದುರು ನೋಡುತ್ತಾರೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಮೈಕ್ರೋಮ್ಯಾಕ್ಸ್ ಮೇಲೆ ಭರ್ಜರಿ ದರಕಡಿತ

ನೀವೂ ಸೆಕೆಂಡ್ ಹ್ಯಾಂಡ್ ಫೋನ್ ಅನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದವರಾಗಿದ್ದಲ್ಲಿ ಇಲ್ಲಿದೆ ಸರಳ ಸಲಹೆಗಳು. ನಿಮ್ಮ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಗೆ ಅತ್ಯದ್ಭುತವಾಗಿರುವ ಈ ಸಲಹೆಗಳು ನಿಜಕ್ಕೂ ಉತ್ತಮ ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ನಿಮಗೆ ಒದಗಿಸುವಲ್ಲಿ ಕಾರಣವಾಗಿರುತ್ತದೆ.

#1

#1

ಹೆಚ್ಚಿನ ರಿವ್ಯೂ ಸೈಟ್‌ಗಳಿಗೆ ಭೇಟಿ ನೀಡಿ ಮತ್ತು ನೀವು ಕೊಳ್ಳಬೇಕೆಂದು ಬಯಸುವ ಸೆಕೆಂಡ್ ಹ್ಯಾಂಡ್ ಫೋನ್‌ನತ್ತ ಗಮನ ಹರಿಸಿ. ಅವುಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ನೋಡಿ.

#2

#2

ಕೆಲವೊಂದು ಕಂಪೆನಿಗಳು ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಒದಗಿಸುತ್ತವೆ. ಈ ಸಮಯದಲ್ಲಿ ಫೋನ್‌ನ ಗ್ಯಾರಂಟಿಯತ್ತ ಗಮನ ಹರಿಸಿ.

#3

#3

ರೀಟೈಲ್ ತಾಣದ ಎಲ್ಲಾ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.

#4

#4

ಮಾರಾಟಗಾರರ ವಿವರಗಳನ್ನು ಪಡೆದುಕೊಳ್ಳಿ. ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಖರೀದಿಸುವ ಖರೀದಿಗಾರರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ.

#5

#5

ನೀವು ಖರೀದಿಸುವ ಫೋನ್‌ನ ಕಡೆಗೆ ಗಮನ ಹರಿಸುವುದು ಅತ್ಯುತ್ತಮವಾಗಿದೆ. ಬ್ಯಾಟರಿ ಬಾಳಿಕೆ, RAM ಸಾಮರ್ಥ್ಯ, ಪ್ರೊಸೆಸರ್ ವೇಗ, ಫೋನ್ ಗುಣಮಟ್ಟ ಈ ಎಲ್ಲಾ ಅಂಶಗಳ ಕಡೆಗೆ ಗಮನ ಹರಿಸುವುದು ಅತ್ಯವಶ್ಯಕವಾಗಿದೆ.

#6

#6

ನಿಮ್ಮ ಫೋನ್‌ ಡಿಸ್‌ಪ್ಲೇ ಮತ್ತು ಕೀಬೋರ್ಡ್ ಗುಣಮಟ್ಟ ಉತ್ತಮವಾಗಿದೆಯೇ ಎಂಬುದನ್ನು ಗಮನಿಸಿಕೊಳ್ಳಿ. ಕೈಯಿಂದ ಫೋನ್‌ನ ಕೀಬೋರ್ಡ್ ಅನ್ನು ಪರಿಶೀಲಿಸಿಕೊಳ್ಳಿ.

#7

#7

ಫೋನ್‌ನ ಕ್ಯಾಮೆರಾವನ್ನು ಪರಿಶೀಲಿಸುವುದು ಅತೀ ಉತ್ತಮ ಅಂಶವಾಗಿದೆ. ಕ್ಯಾಮೆರಾ ಲೆನ್ಸ್, ಕ್ಲಾರಿಟಿ ಫೋನ್‌ನ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

#8

#8

ನೀವು ಖರೀದಿ ಮಾಡುತ್ತಿರುವುದು ಸೆಕೆಂಡ್ ಹ್ಯಾಂಡ್ ಫೋನ್ ಆಗಿದ್ದರೂ ಬೆಲೆಯನ್ನು ನಿಗದಿಪಡಿಸುವುದು ಅತ್ಯವಶ್ಯಕವಾಗಿದೆ. ಫೋನ್‌ನ ಕರಾರುವಾಕ್ಕು ಬೆಲೆಯನ್ನು ನೀವು ಗಮನಿಸುವುದು ಅತೀ ಅವಶ್ಯಕವಾಗಿದೆ.

#9

#9

ಫೋನ್ ಅನ್ನು ಸರಿಯಾಗಿ ಪರೀಕ್ಷಿಸಿಕೊಳ್ಳುವುದು ಇನ್ನೊಂದು ಮುಖ್ಯ ಅಂಶವಾಗಿದೆ. ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಕರಾರುವಾಕ್ಕಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯ ಅಂಶವಾಗಿದೆ.

Best Mobiles in India

English summary
This article tells about Tips to consider before buying old smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X