ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

By Shwetha
|

ಇಂಟರ್ನೆಟ್ ಒಂದು ಶಕ್ತಿಯುತ ಸಂಶೋಧನೆಯಾಗಿದ್ದು ಇದನ್ನು ಧನಾತ್ಮಕ ವಿಧಾನದಲ್ಲಿ ಬಳಸಿದರೆ, ಇದನ್ನು ಹೆಚ್ಚು ಲಾಭಕರ ಎಂದು ಪರಿಗಣಿಸಬಹುದಾಗಿದೆ.

ಆದರೆ ಈ ದಿನಗಳಲ್ಲಿ, ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಕಾರಣದಿಂದ ಅಂದರೆ ಫೇಸ್‌ಬುಕ್‌ನಂತಹ ತಾಣಗಳು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತಿದೆ ಅದರಲ್ಲೂ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇದರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಉತ್ತಮ ಅಂಶಗಳಿರುವ ಇಂಟರ್ನೆಟ್‌ನ ಬಳಕೆ ಇಂದು ಕೆಟ್ಟ ವಿಷಯಗಳಿಗೆ ಬಳಕೆಯಾಗುತ್ತಿದೆ.

ಇದನ್ನೂ ಓದಿ:ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಇದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುತ್ತಿದ್ದು ಋಣಾತ್ಮಕ ಪರಿಣಾಮವನ್ನು ಅವರ ಮೇಲೆ ಬೀರುತ್ತಿದೆ. ಇಂದಿನ ಲೇಖನದಲ್ಲಿ ಇಂಟರ್ನೆಟ್ ವಿದ್ಯಾರ್ಥಿಗಳ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳನ್ನು ಕುರಿತು ಅರಿಯೋಣ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ವಿದ್ಯಾರ್ಥಿಗಳು ಹೆಚ್ಚು ಸಮಯ ಅಂತರ್ಜಾಲವನ್ನು ಬಳಸುವಾಗ ತಮ್ಮ ಕುಟುಂಬದವರೊಂದಿಗೆ ಇಲ್ಲವೇ ಸ್ನೇಹಿತರೊಂದಿಗೆ ನೇರ ಸಂವಹನವನ್ನು ಮಾಡುವುದಿಲ್ಲ. ಅವರು ತಮ್ಮ ಮಾತುಕಥೆಗಾಗಿ ಫೇಸ್‌ಬುಕ್ ಅನ್ನೇ ಹೆಚ್ಚು ಅವಲಂಬಿಸಿರುತ್ತಾರೆ ಮತ್ತು ಇನ್ನೊಬ್ಬರೊಂದಿಗೆ ಸಂಪರ್ಕವನ್ನು ಬೆಳೆಸದೇ ಸ್ನೇಹಿತರಾಗುತ್ತಾರೆ. ದಿನವಿಡೀ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕಾಲಹರಣ ಮಾಡುತ್ತಿರುತ್ತಾರೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಠ್ಯ ಸಂಬಂಧಿ ಕೆಲಸಗಳನ್ನು ನೀಡುವಾಗ ಅವರು ಇಂಟರ್ನೆಟ್‌ನಲ್ಲಿ ಅದನ್ನು ಜಾಲಾಡುತ್ತಾರೆ ಮತ್ತು ಸುಲಭವಾಗಿ ಭಟ್ಟಿ ಇಳಿಸುತ್ತಾರೆ. ಆದರೆ ಇದು ಸರಿಯಾದ ಬೋಧನಾ ಕ್ರಮವಲ್ಲ. ಇದು ಅವರಲ್ಲಿ ಯೋಚನಾ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಅವರು ಇಂಟರ್ನೆಟ್ ಅನ್ನೇ ಹೆಚ್ಚು ಅವಲಂಬಿಸುವಂತೆ ಮಾಡುತ್ತದೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಸಂಶೋಧನೆಯ ಪ್ರಕಾರ ಎರಡರಿಂದ ಮೂರು ಗಂಟೆಗಳಷ್ಟು ಸಮಯ ಇಂಟರ್ನೆಟ್ ಬಳಸುವ ವಿದ್ಯಾರ್ಥಿಗಳು ಲೈಂಗಿಕ ದುರಾಭ್ಯಾಸವನ್ನು ಮೈಗೂಡಿಸಿಕೊಂಡಿರುತ್ತಾರೆ. ಅದೂ ಅಲ್ಲದೆ ಇದು ಸಣ್ಣ ಮಕ್ಕಳನ್ನು ಬಹುಬೇಗ ದುರಾಭ್ಯಾಸಕ್ಕೆ ಒಳಗಾಗುವಂತೆ ಮಾಡುತ್ತದೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ನೀವು ಇಂಟರ್ನೆಟ್ ಅನ್ನು ಹೆಚ್ಚು ಬಳಸಿದಂತೆಲ್ಲಾ, ನಿಮ್ಮ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ. ಇಂಟರ್ನೆಟ್ ಹ್ಯಾಕ್ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸುಲಭವಾಗಿದ್ದು, ನಿಮ್ಮ ಜೀವನವನ್ನೇ ನಾಶ ಮಾಡುವ ಬುದ್ಧಿವಂತಿಕೆಯನ್ನು ಈ ಹ್ಯಾಕರ್‌ಗಳು ಹೊಂದಿರುತ್ತಾರೆ ಎಂಬುದು ನೆನಪಿರಲಿ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಆಲ್ಕೋಹಾಲ್ ಮತ್ತು ಡ್ರಗ್ಸ್‌ನಂತೆಯೇ, ಇಂಟರ್ನೆಟ್ ಎಂಬುದು ಕೂಡ ಚಾಳಿಯಾಗಿದೆ. ಈ ಇಂಟರ್ನೆಟ್ ಎಂಬ ಮಾಯಾಜಗತ್ತಿಗೆ ನೀವು ಒಮ್ಮೆ ಧುಮಿಕಿದರೆ ಸಾಕು, ಅದರಿಂದ ಹೊರಬರಲು ತುಂಬಾ ಕಷ್ಟ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್‌ನ ಹಾಜರಾತಿಯಿಂದ, ಕೆಲವು ವಿದ್ಯಾರ್ಥಿಗಳು ತಮ್ಮ ನಿದ್ರೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತಡರಾತ್ರಿಯವರೆಗೆ ತಮ್ಮ ಲ್ಯಾಪ್‌ಟಾಪ್ ಮುಂದೆ ಇವರು ಕುಳಿತುಕೊಳ್ಳುತ್ತಿದ್ದು ಇದು ಹೀಗೆಯೇ ಮುಂದುವರಿದಲ್ಲಿ ಇನ್‌ಸೋಮ್ನಿಯಾ ಸಂಭವಿಸಬಹುದು. ಅಂದರೆ ಇನ್‌ಸೋಮ್ನಿಯಾದ ದಾಳಿಗೆ ತುತ್ತಾದವರು ನಿದ್ರೆಯನ್ನೇ ಕಳೆದುಕೊಳ್ಳುತ್ತಾರೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ವಿದ್ಯಾರ್ಥಿಗಳಿಗೆ ಸಂಬಂಧಿಸದೇ ಇರುವ ಕೆಲ ಅಂಶಗಳು ಇಂಟರ್ನೆಟ್‌ನಲ್ಲಿದ್ದು ಇದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಅಂದರೆ ಯಾರು ಬೇಕಾದರೂ ಇದನ್ನು ಓದಬಹುದಾಗಿದೆ. 18 ವರ್ಷದವರು ಓದುವಂತಹುದ್ದನ್ನು 5 ವರ್ಷದವರು ಓದಿದರೆ ಅವರಲ್ಲಿ ಕೀಳುಚಿಂತನೆಗಳು ಉಂಟಾಗುವುದು ಸಹಜವಾಗಿದೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಒಂದೇ ವಯಸ್ಸಿನ ಇತರ ವಿದ್ಯಾರ್ಥಿಗಳನ್ನು ಬುಲ್ಲಿಂಗ್ ಮಾಡಲು ಇಂಟರ್ನೆಟ್ ಬಳಸುವುದನ್ನು ಸೈಬರ್ ಬುಲ್ಲಿಂಗ್ ಎಂದು ಕರೆಯಲಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಅಪಮಾನವನ್ನು ಅನುಭವಿಸುತ್ತಾರೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಹೆಚ್ಚು ಸಮಯ ನಿಮ್ಮ ಕಂಪ್ಯೂಟರ್ ಮುಂದೆ ನೀವು ಕುಳಿತಂತೆಲ್ಲಾ, ನಿಮ್ಮ ಅಧ್ಯಯನಕ್ಕೆ ನೀವು ಕಡಿಮೆ ಸಮಯವನ್ನು ವಿನಿಯೋಗಿಸುತ್ತೀರಿ. ಈ ಅಂಶವನ್ನು ವಿದ್ಯಾರ್ಥಿಗಳು ಮನಗಾಣುವುದಿಲ್ಲ ಮತ್ತು ಪರೀಕ್ಷೆ ಸಮೀಪಿಸಿದಾಗ ಅವರಿಗೆ ತಮ್ಮ ಸಮಯವನ್ನು ವೃಥಾ ಕಂಪ್ಯೂಟರ್ ಬಳಸಲು ಕಳೆದದ್ದು ನೆನೆದು ಜ್ಞಾನೋದಯವಾಗುತ್ತದೆ.

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತು ಇಂಟರ್ನೆಟ್ ಬಳಸುತ್ತಿದ್ದಾರೆ ಎಂದಾದಲ್ಲಿ ಅವರು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದಾಗಿದೆ. ನಡಿಗೆ ಮತ್ತು ಸೈಕಲ್ ಬದಲಿಗೆ ಬೈಕ್ ಖಯಾಲಿಯನ್ನು ಅವರು ಆಯ್ದುಕೊಳ್ಳುತ್ತಾರೆ. ಒಂದೇ ಕಡೆ ಕುಳಿತು ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಅನ್ನು ಬಳಸುವುದು ಅವರ ದೇಹದಲ್ಲಿ ಚಲನೆಯನ್ನು ಕಡಿಮೆ ಮಾಡುತ್ತದೆ.

Best Mobiles in India

English summary
This article tells about Top 10 Negative Effects of Internet on Students.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X