'ವಿಂಡೋಸ್ 10' ಸುರಕ್ಷತೆಗೆ ಟಾಪ್‌ 5 ಉಚಿತ ಆಂಟಿವೈರಸ್ ಸಾಫ್ಟ್‌ವೇರ್‌ ಇವುಗಳೇ..

ವಿಂಡೋಸ್ 10 ಬಳಕೆದಾರರು ತಮ್ಮ ಸಿಸ್ಟಮ್‌ ಸುರಕ್ಷತೆಗೆ ಉಚಿತವಾಗಿ ಈ ಸಾಫ್ಟ್‌ವೇರ್‌ಗಳನ್ನು ಬಳಸಬಹುದು.

Written By:

ಕಂಪ್ಯೂಟರ್, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಮತ್ತು ಐಫೋನ್ ಈ ಎಲ್ಲಾ ಪ್ರಾಡಕ್ಟ್‌ಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಆಂಟಿವೈರಸ್ ಮುಖ್ಯ. ಇಂದು ಹಲವು ವಿಂಡೋಸ್ ಕಂಪ್ಯೂಟರ್‌ ಬಳಕೆದಾರರು 7, 8, 8.1 ಓಏಸ್‌ನಿಂದ ವಿಂಡೋಸ್‌ 10 ಓಏಸ್‌ಗೆ ಅಪ್‌ಗ್ರೇಡ್ ಮಾಡಿಕೊಂಡಿದ್ದಾರೆ. ವಿಂಡೋಸ್ 10 ಅದ್ಭುತ ಆಪರೇಟಿಂಗ್ ಸಿಸ್ಟಮ್‌ ಎಂಬುದನ್ನು ಈಗಾಗಲೇ ಹಲವು ಬಳಕೆದಾರರು ತಿಳಿದಿದ್ದಾರೆ.

'ವಿಂಡೋಸ್ 10' ಆಪರೇಟಿಂಗ್ ವೇಗ ಬಳಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ವೈರಸ್‌, ಮಾಲ್‌ವೇರ್‌ಗಳಿಂದ ಓಎಸ್‌ ಅನ್ನು ಸಂರಕ್ಷಿಸಬೇಕಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ವಿಂಡೋಸ್ 10 ಬಳಕೆದಾರರಿಗೆ ಟಾಪ್‌ 5 ಉಚಿತ ಆಂಟಿವೈರಸ್(Antivirus) ಸಾಫ್ಟ್‌ವೇರ್‌ಗಳನ್ನು ಪರಿಚಯಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅವಿರಾ ಆಂಟಿವೈರಸ್ ಪ್ರೊ(Avira Antivirus Pro)

ವಿಂಡೋಸ್ 10 ಬಳಕೆದಾರರು ಐಡೆಂಟಿಟಿ, ಹಣಕಾಸು ಮತ್ತು ಇತರೆ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಹಲವು ಟಾಸ್ಕ್‌ಗಳ ಲೈಸನ್ಸ್‌ನಿಂದ ತಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಡಬಹುದು. ಈ ಆಂಟಿವೈರಸ್‌ನ ಪ್ರಮುಖ ಅಂಶವೆಂದರೆ, ಸಿಸ್ಟಮ್ ನಿಧಾನವಾಗಲು ಅವಕಾಶ ನೀಡುವುದಿಲ್ಲ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ನಾರ್ಟನ್ ಸೆಕ್ಯೂರಿಟಿ(Norton Security)

ಪ್ರಪಂಚದಾದ್ಯಂತ ಹೆಚ್ಚು ಜನರು ಬಳಸುವ, ಹೆಚ್ಚು ತಂತ್ರಜ್ಞಾನ ಪರಿಣಿತರು ಅಭಿವೃದ್ದಿಪಡಿಸಿರುವ ಸಾಫ್ಟ್‌ವೇರ್ 'ನಾರ್ಟನ್‌'. ಪ್ರಪಂಚದಲ್ಲಿ ಅತಿ ಹೆಚ್ಚು ಹಳೆಯದಾದ ಮತ್ತು ಪ್ರಖ್ಯಾತ ಆಂಟಿವೈರಸ್ ಆಗಿದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಲ್‌ವೇರ್‌ಬೈಟ್ಸ್ ಆಂಟಿ-ಮಾಲ್‌ವೇರ್ (Malwarebytes Anti-Malware)

ಮಾಲ್‌ವೇರ್‌ಗಳು ಒಂದು ರೀತಿಯ ವೈರಸ್‌ಗಳೇ ಆಗಿದ್ದು, ಕಂಪ್ಯೂಟರ್'ನಲ್ಲಿ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಮಾಲ್‌ವೇರ್‌ ಬೈಟ್ಸ್‌, ಈ ವೈರಸ್‌ಗಳಿಂದ ಸಿಸ್ಟಮ್‌ ಸುರಕ್ಷತೆಗೆ ಬೆಸ್ಟ್‌ ಟೂಲ್‌ ಆಗಿದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಅವಾಸ್ತ್ ಫ್ರೀ ಆಂಟಿವೈರಸ್ (Avast Free Antivirus)

ಹೆಚ್ಚು ಜನರು ಬಳಸುವ, ಬಳಕೆದಾರರ ಸ್ನೇಹಿ ಆಂಟಿವೈರಸ್ 'ಅವಾಸ್ತ್ ಆಂಟಿವೈರಸ್‌'. ಇದು ಸಿಸ್ಟಮ್‌ಗೆ ಎಲ್ಲಾ ರೀತಿಯ ಸುರಕ್ಷತೆ ನೀಡುತ್ತದೆ. ವಿಂಡೋಸ್‌ 10 ಸಿಸ್ಟಮ್‌ನಲ್ಲಿ ಉತ್ತಮವಾಗಿ ಆಂಟಿವೈರಸ್ ರಿಮೂವ್ ಮಾಡಲು ಬೆಸ್ಟ್‌ ಆಂಟಿವೈರಸ್ ಎಂದು ಹೇಳಬಹುದು. ಇದು ಉಚಿತ ಸಾಫ್ಟ್‌ವೇರ್.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಮೈಕ್ರೋಸಾಫ್ಟ್ ಸೆಕ್ಯೂರಿಟಿ ಎಸೆನ್ಷಿಯಲ್( Microsoft Security Essential)

* ಸಮಗ್ರ ಮಾಲ್ವೇರ್ ರಕ್ಷಣೆ
* ವಿಂಡೋಸ್ 7,10 ಮತ್ತು ವಿಂಡೋಸ್ ವಿಸ್ಟಾಗಳಲ್ಲಿ ಸಪೋರ್ಟ್‌ ಮಾಡುತ್ತದೆ.
* 33 ಭಾಷೆಗಳಲ್ಲಿ ಲಭ್ಯವಿದೆ
* ಸರಳ, ಮುಕ್ತ ಡೌನ್ಲೋಡ್
* ಸ್ವಯಂಚಾಲಿತ ಅಪ್‌ಡೇಟ್‌ ಪಡೆಯುತ್ತದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 Read more about:
English summary
Top 5 Best Antivirus Software For Windows 10. To know more visit kannada.gizbot.com
Please Wait while comments are loading...
Opinion Poll

Social Counting