ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು

By Shwetha
|

7.9 ರಿಕ್ಟರ್ ಅಳತೆಯಲ್ಲಿ ಶನಿವಾರ ನೇಪಾಳದಲ್ಲಿ ನಡೆದ ಭೂಕಂಪ ಇನ್ನೂ ಮನದಲ್ಲಿ ಅಳಿಸಿಲ್ಲ. ನೇಪಾಳದಲ್ಲಿ ಭೂಕಂಪ ಇನ್ನೂ ನಡೆಯುತ್ತಲೇ ಇದೆ. ನೇಪಾಳ ಮಾತ್ರವಲ್ಲದೆ ದೆಹಲಿ ಸೇರಿದಂತೆ ಭಾರತದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಈ ತರಹದ ಸಂಭವಗಳು ಉಂಟಾದಾಗ ವೃತ್ತಪತ್ರಿಕೆ ಅಂತೆಯೇ ಸಾಮಾಜಿಕ ಜಾಲತಾಣಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಜನರ ಸುರಕ್ಷತೆಗೆ ಮುನ್ನುಗ್ಗುತ್ತವೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಭೂಕಂಪದಿಂದ ಮುಂಜಾಗ್ರತಾಕ್ರಮವಾಗಿ ಯಾವೆಲ್ಲಾ ವಿಧಾನಗಳನ್ನು ಅನುಸರಿಬೇಕು ಎಂಬುದನ್ನು ತಿಳಿಸಿಕೊಡುತ್ತವೆ. ಇಂದಿನ ಲೇಖನದಲ್ಲಿ ನಿಮಗೆ ಭೂಕಂಪ ಅಥವಾ ಸುನಾಮಿಯ ಕುರಿತ ಮಾಹಿತಿಯನ್ನು ನೀಡುವ ಅಪ್ಲಿಕೇಶನ್ ವಿವರಗಳನ್ನು ನಾವು ನೀಡುತ್ತಿದ್ದೇವೆ.

ಅರ್ತ್‌ಕ್ವೇಕ್ ಅಲರ್ಟ್ (ಆಂಡ್ರಾಯ್ಡ್)

ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು

ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಅರ್ತ್‌ಕ್ವೇಕ್ ಅಲರ್ಟ್ ಅಪ್ಲಿಕೇಶನ್ ಲಭ್ಯವಿದ್ದು ನಿಮಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ ತುಂಬಾ ಬಲಶಾಲಿ ಭೂಕಂಪ ಕೆಂಪು ಬಣ್ಣದಲ್ಲಿ ಗುರುತಿಸಲ್ಪಟ್ಟಿದ್ದರೆ ಸಣ್ಣವುಗಳನ್ನು ಹಸಿರು ಬಣ್ಣದಲ್ಲಿ ಗುರುತಿಸಲಾಗಿರುತ್ತದೆ.

ಓದಿರಿ: ಟೆಕ್ ಕ್ಷೇತ್ರವನ್ನೇ ತಲ್ಲಣಗೊಳಿಸಲಿರುವ ಆಪಲ್ ಉತ್ಪನ್ನಗಳಿವು

ಯುರೇಕುರು ಕಾಲ್ (ಐಓಎಸ್)

ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು
ಇದು ಉಚಿತ ಅಪ್ಲಿಕೇಶನ್ ಆಗಿದ್ದು ಐಓಎಸ್ ಅಂತೆಯೇ ಆಂಡ್ರಾಯ್ಡ್ ಡಿವೈಸ್‌ಗಳೆರಡರಲ್ಲೂ ಇದು ಲಭ್ಯವಿದೆ. ಭೂಕಂಪದ ಸಂಪೂರ್ಣ ವಿವರವನ್ನು ಈ ಅಪ್ಲಿಕೇಶನ್ ಬಳಕೆದಾರರಿಗೆ ನೀಡುತ್ತಿದ್ದು ಯಾವಾಗ ಭೂಕಂಪ ಸಂಭವಿಸಲಿದೆ ಎಂಬುದನ್ನು ತಿಳಿಸುತ್ತದೆ.

ಕ್ವೇಕ್ಸ್ - ಅರ್ತ್‌ಕ್ವೇಕ್ ನೋಟಿಫೀಕೇಶನ್ (ಐಓಎಸ್)

ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು
ಯುರೇಕುರು ಅಪ್ಲಿಕೇಶನ್‌ನಂತೆಯೇ ಅರ್ತ್‌ಕ್ವೇಕ್ ನೋಟಿಫೀಕೇಶನ್ ಉತ್ತಮ ಅಪ್ಲಿಕೇಶನ್ ಎಂದೆನಿಸಿದೆ. ಭೂಕಂಪದ ತೀವ್ರತೆಯನ್ನು ಅನುಸರಿಸಿ ಮೇಲ್ಭಾಗದಲ್ಲಿ ಟೈಮ್‌ಲೈನ್ ಅನ್ನು ನಿಮಗೆ ಕಾಣಬಹುದು.

ಓದಿರಿ: ವಾಟ್ಸಾಪ್ ಸ್ಥಾಪಕ ಜಾನ್ ಕೋಮ್ ಕುರಿತು ನಿಮಗೆಷ್ಟು ಗೊತ್ತು?

ಗೆಂಪಾಲೋಕ (ಬ್ಲ್ಯಾಕ್‌ಬೆರ್ರಿ)

ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು
ಬ್ಲ್ಯಾಕ್‌ಬೆರ್ರಿ ಸ್ಮಾರ್ಟ್‌ಫೋನ್‌ಗಾಗಿ ವಿನ್ಯಾಸಗೊಳಿಸಿರುವ ಅಪ್ಲಿಕೇಶನ್ ಇದಾಗಿದ್ದು ನಕ್ಷೆಯ ಮೂಲಕ ಭೂಕಂಪದ ತೀವ್ರತೆಯನ್ನು ಇದು ಬಳಕೆದಾರರಿಗೆ ತಿಳಿಸುತ್ತದೆ. ಎಲ್ಲಿ ಯಾವಾಗ ಭೂಕಂಪ ಸಂಭವಿಸುತ್ತದೆ ಎಂಬುದನ್ನು ಇದು ನಕ್ಷೆಯಲ್ಲಿ ಚಿತ್ರಿಸಿ ತೋರಿಸುತ್ತದೆ.
Best Mobiles in India

English summary
A high-intensity quake measuring 7.9 on the Richter scale rocked Nepal along with many parts of east and north India, including Delhi on Saturday. We’ve compiled a list of some of the free apps for iOS, Android and Blackberry...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X