ಗ್ರಾಹಕರನ್ನು ವಂಚಿಸುವ ಟೆಲಿಕಾಂ ಕಂಪೆನಿ ಲೈಸೆಸ್ಸ್ ರದ್ದು!!

ಟೆಲಿಕಾಂ ಕಂಪೆನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪರವಾನಗಿಯನ್ನು ರದ್ದುಗೊಳಿಸುವ ಅಧಿಕಾರ ಪ್ರಾಧಿಕಾರಕ್ಕಿದೆ.

|

ಯಾವುದೇ ಆಫರ್ಸ್, ಅಥವಾ ಯಾವುದೇ ರೂಪದಲ್ಲಿಯೂ ಗ್ರಾಹಕರನ್ನು ವಂಚಿಸುವ ಟೆಲಿಕಾಂ ಕಂಪೆನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪರವಾನಗಿಯನ್ನು ರದ್ದುಗೊಳಿಸುವ ಅಧಿಕಾರ ಪ್ರಾಧಿಕಾರಕ್ಕಿದೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಎಂದು ಟ್ರಾಯ್‌ನ ಸಲಹೆಗಾರ ಶ್ರೀನಿವಾಸ್‌ ಗಲಗಲಿ ಹೇಳಿದ್ದಾರೆ.

ಬೆಂಗಳೂರಿನ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಗ್ರಾಹಕರ ನೇರ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ವಂಚಿಸುವ ಪ್ರಕರಣಗಳ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ದೂರುಬಂದರೆ ಟೆಲಿಕಾಂ ಕಂಪೆನಿಗಳ ಪರವಾನಗಿಯನ್ನು ರದ್ದುಗೊಳಿಸಬಹುದು ಎಂದು ಹೇಳಿದ್ದಾರೆ.!!

ಇನ್ನು ಟೆಲಿಕಾಂ ಬಗ್ಗೆ ಸಾಮಾನ್ಯರಿಗೆ ತಿಳಿಯದ ಹಲವು ಮಾಹಿತಿಗಳನ್ನು ಟ್ರಾಯ್‌ನ ಸಲಹೆಗಾರ ಶ್ರೀನಿವಾಸ್‌ ಗಲಗಲಿ ಅವರು ಹಂಚಿಕೊಂಡಿದ್ದು, ಅವುಗಳು ಯಾವುವು? ಗ್ರಾಹಕರಿಗೆ ಟ್ರಾಯ್‌ನಿಂದ ಆಗುತ್ತಿರುವ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಟ್ರಾಯ್ ನಿಬಂಧನೆ ಬಗ್ಗೆ ಎಲ್ಲರೂ ತಿಳಿಯಬೇಕು!!

ಟ್ರಾಯ್ ನಿಬಂಧನೆ ಬಗ್ಗೆ ಎಲ್ಲರೂ ತಿಳಿಯಬೇಕು!!

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಮುಖ ನಿಬಂಧನೆಗಳಾದ ಮೊಬೈಲ್‌ ಸಂಖ್ಯೆ ಪೋರ್ಟಾಬಿಲಿಟಿ, ವಾಣಿಜ್ಯ ಸಂದೇಶಗಳು ಸೇರಿದಂತೆ ಹಲವು ವಿಚಾರಗಳನ್ನು ಗ್ರಾಹಕರು ತಿಳಿದುಕೊಳ್ಳಬೇಕು. ಇದರಿಂದ ಗ್ರಾಹಕರು ಲಾಭವನ್ನು ಪಡೆಯಬಹುದು ಶ್ರೀನಿವಾಸ್‌ ಅವರು ಅಭಿಪ್ರಾಯಪಟ್ಟರು .!!

80 ಕೋಟಿ ಮೊಬೈಲ್ ಬಳಕೆದಾರರು.!!

80 ಕೋಟಿ ಮೊಬೈಲ್ ಬಳಕೆದಾರರು.!!

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಬಹಳ ಹೆಚ್ಚಳವಾಗಿದ್ದು, ದೇಶದ ಜನಸಂಖ್ಯೆಯಲ್ಲಿ 80 ಕೋಟಿಯಷ್ಟು ಜನ ದೂರಸಂಪರ್ಕ ಸಾಧನ ಹೊಂದಿದ್ದಾರೆ. ಅದರಲ್ಲಿ ಶೇ 90ರಷ್ಟು ಜನರು ಮೊಬೈಲ್ ಸಂಪರ್ಕ ಹೊಂದಿದ್ದಾರೆ ಎಂದು ಶ್ರೀನಿವಾಸ್‌ ಅವರು ತಿಳಿಸಿದರು.

ಗ್ರಾಹಕರ ಜವಾಬ್ದಾರಿ ಪ್ರಮುಖ!!

ಗ್ರಾಹಕರ ಜವಾಬ್ದಾರಿ ಪ್ರಮುಖ!!

ಟೆಲಿಕಾಂ ಕಂಪೆನಿಗಳ ಮೋಸವನ್ನು ಹೊರಗೆಳೆಯಲು ಗ್ರಾಹಕರ ಜವಾಬ್ದಾರಿ ಪ್ರಮುಖವಾಗಿದೆ. ದೂರು ನೀಡಿದಾಗ ಮಾತ್ರ ಸತ್ಯಾಂಶ ಸರ್ಕಾರಕ್ಕೆ ತಿಳಿಯಲಿದೆ. ಗ್ರಾಹಕರು ದೂರು ಕೇಂದ್ರದಲ್ಲಿ ದೂರು ನೋಂದಾಯಿಸಬೇಕು ಎಂದು ಅವರು ಹೇಳಿದರು.!!

ಟ್ರಾಯ್ ಕ್ರಮಗಳು!!

ಟ್ರಾಯ್ ಕ್ರಮಗಳು!!

ಗ್ರಾಹಕರ ಹಕ್ಕು ಸವಲತ್ತುಗಳು ದೂರು ನಿವಾರಣಾ ವ್ಯವಸ್ಥೆ, ಮೇಲ್ಮನವಿ ಪ್ರಾಧಿಕಾರ, ಮೊಬೈಲ್ ಪೋರ್ಟಬಿಲಿಟಿ ಮತ್ತು ಮೌಲ್ಯವರ್ಧಿತ ಸೇವೆಗನಳೂ ಸೇರಿದಂತೆ ಟ್ರಾಯ್ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಗ್ರಾಹಕರಿಗೆ ಮತ್ತು ಟೆಲಿಕಾಂ ಕಂಪೆನಿಗಳಿಗೆ ಉತ್ತಮ ಸಂಭಂಧ ಏರ್ಪಡಿಸುವುದು ಇದರ ಉದ್ದೇಶ ಎಂದು ತಿಳಿಸಿದರು.!!

ಗೂಗಲ್‌ನಲ್ಲಿ ಗೂಗಲ್‌ನಲ್ಲಿ "Find My Phone" ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

Best Mobiles in India

English summary
he Telecom Regulatory Authority of India launches new Mobile Apps and Web Portal.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X