ಆಧಾರ್ ಇ-ಕೆವೈಸಿ ಪರಿಶೀಲನೆ ಮಾಡಿಸದಿದ್ದರೆ ನಿಮ್ಮ ಸಿಮ್ ವರ್ಕ್ ಆಗೊಲ್ಲಾ!!

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಎಲ್ಲಾ ಸಿಮ್‌ಗಳನ್ನು ಮತ್ತೆ ಇ-ಕೆವೈಸಿ ಪರಿಶೀಲನೆ ಮಾಡಿಸಬೇಕಾದ ಅನಿವಾರ್ಯತೆ ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಒದಗಿಬಂದಿದೆ.!!

Written By:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ "ಟ್ರಾಯ್" ಟೆಲಿಕಾಂನಲ್ಲಿ ಹೊಸದೊಂದು ಬದಲಾವಣೆಯನ್ನು ಜಾರಿಗೆ ತರಲು ಚಿಂತಿಸಿದೆ. ಸಿಮ್ ಪರಿಶೀಲನೆ‌ಗೆ ಇತ್ತೀಚಿಗೆ ಬಂದಿರುವ ಆಧಾರ್ ಇ-ಕೆವೈಸಿ ಪರಿಶೀಲನೆ ತಂತ್ರಜ್ಞಾನವನ್ನು ಹಳೆಯ ಟೆಲಿಕಾಂ ಗ್ರಾಹಕರಿಗೂ ಜಾರಿಗೆ ತರಲು ಮುಂದಾಗಿದೆ.

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಎಲ್ಲಾ ಸಿಮ್‌ಗಳನ್ನು ಮತ್ತೆ ಇ-ಕೆವೈಸಿ ಪರಿಶೀಲನೆ ಮಾಡಿಸಬೇಕಾದ ಅನಿವಾರ್ಯತೆ ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಒದಗಿಬಂದಿದೆ. ಸಿಮ್‌ ಖರೀದಿಸುವ ಸಮಯದಲ್ಲಿ ಆಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಈ ಕ್ರಮ ಸೂಕ್ತವಾದುದು ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

 ಆಧಾರ್ ಇ-ಕೆವೈಸಿ ಪರಿಶೀಲನೆ ಮಾಡಿಸದಿದ್ದರೆ ನಿಮ್ಮ ಸಿಮ್ ವರ್ಕ್ ಆಗೊಲ್ಲಾ!!

ಪೊಲೀಸ್‌ ಇಲಾಖೆ ಮಾಹಿತಿಯಂತೆ ಸಾವಿರಾರು ಸಿಮ್‌ಗಳು ಫೇಕ್‌ ಡಾಕ್ಯುಮೆಂಟ್ಸ್‌ಗಳನ್ನು ಹೊಂದಿದ್ದು, ಇದರಿಂದ ಇತರರಿಗೆ ತೊಂದರೆ ಹೆಚ್ಚಾಗಿದೆ. ಹಾಗಾಗಿ, ಈ ಮೊದಲು ಇದ್ದ ಪರಿಶೀಲನೆ ಸಿಸ್ಟಮ್‌ ಅನ್ನು ಸಂಪೂರ್ಣ ಬದಲಿಸಬೇಕಿದೆ ಎಂದು ಹೇಳಿದೆ.

 ಆಧಾರ್ ಇ-ಕೆವೈಸಿ ಪರಿಶೀಲನೆ ಮಾಡಿಸದಿದ್ದರೆ ನಿಮ್ಮ ಸಿಮ್ ವರ್ಕ್ ಆಗೊಲ್ಲಾ!!

ಭಾರತದಲ್ಲಿ ನೂರು ಕೋಟಿಗೂ ಹೆಚ್ಚು ಸಿಮ್‌ ಬಳಕೆದಾರರು ಇದ್ದು, ಭದ್ರತಾ ದೃಷ್ಟಿಯಿಂದ ಇ-ಕೆವೈಸಿ ಪರಿಶೀಲನೆ ಪ್ರಮುಖವಾಗಲಿದೆ. ಇದರಿಂದ ಪೊಲೀಸ್‌ ಇಲಾಖೆಗಳಿಗೂ ಸಹಾಯಕವಾಗುತ್ತದೆ. ಮತ್ತು ಅಕ್ರಮವಾಗಿ ಉಪಯೋಗವಾಗುತ್ತಿರುವ ಸಿಮ್‌ಗಳನ್ನು ನಿಷ್ಕ್ರಿಯಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
TRAI has suggested verification of existing mobile subscribers through Aadhaar based e-KYC
Please Wait while comments are loading...
Opinion Poll

Social Counting