ಬೆಂಗಳೂರಿಗೆ "ವಿ-ಫೈಬರ್" ತಂತ್ರಜ್ಞಾನ!!..ಏರ್‌ಟೆಲ್ ಇಂಟರ್‌ನೆಟ್ ಸ್ಪೀಡ್‌ ಎಷ್ಟು ಗೊತ್ತಾ?

ವಿ-ಫೈಬರ್ ಪರಿಸರಸ್ನೇಹಿ ತಂತ್ರಜ್ಞಾನವಾಗಿದ್ದು, ಈ ಸೇವೆಯನ್ನು ಪಡೆದ ಗ್ರಾಹಕರಿಗೆ ಇಂಟರ್‌ನೆಟ್‌ ಸ್ಪಿಡ್‌ ತೃಪ್ತಿ ನೀಡದಿದ್ದರೆ ಆಕ್ಟಿವೇಶನ್ ಶುಲ್ಕವನ್ನು ವಾಪಸ್ ನೀಡುವುದಾಗಿ ತಿಳಿಸಿದೆ

|

ಬೆಂಗಳೂರಿನಲ್ಲಿ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸ್ಪೀಡ್‌ ಹೆಚ್ಚಿಸಲು ಏರ್‌ಟೆಲ್ "ವಿ-ಫೈಬರ್" ತಂತ್ರಜ್ಞಾನ ವ್ಯವಸ್ಥೆಯನ್ನು ಬಿಡುಗಡೆಮಾಡಿದೆ. ಪ್ರಸ್ತುತ ಇರುವ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ಗೆ "ವಿ-ಫೈಬರ್" ಅಳವಡಿಸಿಕೊಂಡರೆ ಇಂಟರ್‌ನೆಟ್‌ ಸ್ಪೀಡ್ 100mbps ತನಕ ಹೆಚ್ಚಾಗುತ್ತದೆ ಎಂದು ಏರ್‌ಟೆಲ್ ತಿಳಿಸಿದೆ.

ಏರ್‌ಟೆಲ್‌ನ "ವಿ-ಫೈಬರ್" ತಂತ್ರಜ್ಞಾನವನ್ನು ಬಿಡುಗಡೆ ಮಾಡಿದ ಏರ್‌ಟೆಲ್ ಕರ್ನಾಟಕ ವಲಯದ ಸಿಇಒ ಸಿ. ಸುರೇಂದ್ರನ್ ಮಾತನಾಡಿ. ಬೆಂಗಳೂರಿನಲ್ಲಿ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು "ವಿ-ಫೈಬರ್" ತಂತ್ರಜ್ಞಾನ ಅಳವಡಿಸಿಸುತ್ತಿರುವುದಾಗಿ ತಿಳಿಸಿದರು.

ಬೆಂಗಳೂರಿಗೆ

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ "ಟ್ರಾಯ್"!!...ಜಿಯೋ ಆಫರ್ 2 ಎಫೆಕ್ಟ್?

"ವಿ-ಫೈಬರ್" ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮನೆಯ ಅಥವಾ ಕಚೇರಿಯಲ್ಲಿ ಯಾವುದೇ ರಿತಿಯ ಅಗೆತ ಮತ್ತು ಬದಲಾವಣೆಯನ್ನು ಮಾಡುವ ಅಗತ್ಯವಿರುವುದಿಲ್ಲ. ಮತ್ತು ಇದಕ್ಕಾಗಿ ಹೆಚ್ಚಿನ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿಗೆ

ಇನ್ನು ವಿ-ಫೈಬರ್ ತಂತ್ರಜ್ಞಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಏರ್‌ಟೆಲ್ ಕಂಪೆನಿ ಅಧಿಕಾರಿಗಳು, ಇದೊಂದು ಪರಿಸರಸ್ನೇಹಿ ತಂತ್ರಜ್ಞಾನವಾಗಿದ್ದು, ಈ ಸೇವೆಯನ್ನು ಪಡೆದ ಗ್ರಾಹಕರಿಗೆ ಇಂಟರ್‌ನೆಟ್‌ ಸ್ಪಿಡ್‌ ತೃಪ್ತಿ ನೀಡದಿದ್ದರೆ ಆಕ್ಟಿವೇಶನ್ ಶುಲ್ಕವನ್ನು ವಾಪಸ್ ನೀಡುವುದಾಗಿ ತಿಳಿಸಿದೆ

Best Mobiles in India

English summary
Get airtel High Speed Internet With V Fiber. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X