360 ಡಿಗ್ರಿ ವೀಡಿಯೊ ಸಪೋರ್ಟ್ ಮಾಡುತ್ತದೆ 'ವಿಎಲ್‌ಸಿ ಪ್ಲೇಯರ್‌': ಹೇಗಿರುತ್ತೇ?

ವಿಎಲ್‌ಸಿ ಮೀಡಿಯಾ ಪ್ಲೇಯರ್ ಈಗ 360 ಡಿಗ್ರಿ ವೀಡಿಯೊ ಮತ್ತು ಇಮೇಜ್‌ ಅನ್ನು ನೇರವಾಗಿ ಪ್ಲೇ ಮಾಡುತ್ತದೆ.

By Suneel
|

ಸ್ಮಾರ್ಟ್‌ಫೋನ್‌ನಲ್ಲಿ ಆಗಲಿ, ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗಳಲ್ಲೇ ಆಗಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಬಳಸುವವರಿಗೆ ಈಗೊಂದು ಗುಡ್‌ನ್ಯೂಸ್ ಬಂದಿದೆ. ಹಲವು ಟೆಕ್‌ ಪ್ರಿಯರಿಗೆ ಈಗಾಗಲೇ ತಿಳಿದಿರುವಂತೆ ವಿಎಲ್‌ಸಿ ಮಿಡಿಯಾ ಪ್ಲೇಯರ್ ಯಾವುದೇ ಫಾರ್ಮ್ಯಾಟ್‌ನ ಮೀಡಿಯಾ ಫೈಲ್‌ಗಳನ್ನು ಸಪೋರ್ಟ್‌ ಮಾಡುತ್ತದೆ. ಈಗ ಮತ್ತೊಂದು ಪ್ರಮುಖ ಆಕರ್ಷಕ ಫೀಚರ್ ಅನ್ನು ವಿಎಲ್‌ಸಿ ಮೀಡಿಯಾ ಪ್ಲೇಯರ್ ಆಡ್ ಮಾಡಿದೆ.

360 ಡಿಗ್ರಿ ವೀಡಿಯೊ ಸಪೋರ್ಟ್ ಮಾಡುತ್ತದೆ 'ವಿಎಲ್‌ಸಿ ಪ್ಲೇಯರ್‌': ಹೇಗಿರುತ್ತೇ?

ವೀಡಿಯೊಲ್ಯಾನ್‌ ಡೆವಲಪರ್‌ನ, ವಿಎಲ್‌ಸಿ ಮೀಡಿಯಾ ಪ್ಲೇಯರ್(VLC Media Player) ಇನ್ಮುಂದೆ 360 ಡಿಗ್ರಿ ವೀಡಿಯೊ ಫಾರ್ಮ್ಯಾಟ್ ಸಪೋರ್ಟ್‌ ಮಾಡುತ್ತದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಮುಂದೆ ಓದಿರಿ.

ವಿಎಲ್‌ಸಿ ಮೂಲಕ ಯೂಟ್ಯೂಬ್ ವೀಡಿಯೊ ಡೌನ್‌ಲೋಡ್ ಮಾಡುವುದು ಹೇಗೆ?

ಇಂಟಿಗ್ರಲ್ ಸಹಯೋಗ

ಇಂಟಿಗ್ರಲ್ ಸಹಯೋಗ

ವೀಡಿಯೊಲ್ಯಾನ್ ಟೀಮ್, 360 ಡಿಗ್ರಿ ವೀಡಿಯೊ ಫೀಚರ್ ಅಭಿವೃದ್ದಿಪಡಿಸಿದ ಅಮೆರಿಕ ಮೂಲದ ವರ್ಚುವಲ್‌ ರಿಯಾಲಿಟಿ ಸಂಸ್ಥೆ 'ಗಿರೊಪ್ಟಿಕ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ.

ವೀಡಿಯೊಲ್ಯಾನ್‌ ಟೀಮ್‌ಗೆ ಮಾದರಿಗಳು, ಕ್ಯಾಮೆರಾ, ಕೋಡ್‌ಗಳು ಮತ್ತು ಪರಿಣತಿಗಳ ಸಪೋರ್ಟ್‌ ನೀಡುವುದರೊಂದಿಗೆ ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಲ್ಲಿ 360 ಡಿಗ್ರಿ ವೀಡಿಯೊವನ್ನು ನೇರವಾಗಿ ಸಪೋರ್ಟ್ ಮಾಡುವಂತೆ ಸಹಾಯ ಮಾಡುತ್ತಿದೆ.

ವಿಸ್ತರಿತ ಬೆಂಬಲ

ವಿಸ್ತರಿತ ಬೆಂಬಲ

ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಲ್ಲಿ ಬಳಕೆದಾರರು ಇನ್ಮುಂದೆ 360 ಡಿಗ್ರಿ ವೀಡಿಯೊ ಮತ್ತು ಫೋಟೋಗಳನ್ನು ಪನೋರಮಾದಂತೆಯೆ ಪ್ಲೇ ಮಾಡಬಹುದು. ಪ್ಲೇಯರ್ ಓಪನ್‌ ಸೋರ್ಸ್ ಮತ್ತು ಕ್ರಾಸ್ ಪ್ಲಾಟ್‌ಫಾರ್ಮ್‌ ಫಾರ್ಮ್ಯಾಟ್, ಓಪನ್‌ಜಿಎಲ್ ಮತ್ತು ಡೈರೆಕ್ಟ್3ಡಿ11 ಸಪೋರ್ಟ್‌ ಮಾಡುತ್ತದೆ.

ವೀಡಿಯೊ ಅಥವಾ ವೀಡಿಯೊಪಾಯಿಂಟ್ ನಿಖರವಾಗಿ ಮೌಸ್ ಅಥವಾ ಕೀಬೋರ್ಡ್‌ನಿಂದ ನಿಯಂತ್ರಣ ಹೊಂದುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ ಅಪ್ಲಿಕೇಶನ್

ಮೊಬೈಲ್‌ ಅಪ್ಲಿಕೇಶನ್

360 ಡಿಗ್ರಿ ವೀಡಿಯೊ ಮತ್ತು ಫೋಟೋ ಪ್ರದರ್ಶನವನ್ನು ಮೊಬೈಲ್‌ ಅಪ್ಲಿಕೇಶನ್‌ನಲ್ಲೂ ಲಭ್ಯವಾಗುವಂತೆ ನೀಡಲಾಗುತ್ತದೆ ಎಂದು ವೀಡಿಯೊಲ್ಯಾನ್ ಬಹಿರಂಗಪಡಿಸಿದೆ. ಕಂಪನಿ ಬಿಡುಗಡೆ ಮಾಡುವ ವಿಎಲ್‌ಸಿ 360 ಡಿಗ್ರಿ ಫೀಚರ್ ಆಂಡ್ರಾಯ್ಡ್, ಐಓಎಸ್, ಮತ್ತು ಎಕ್ಸ್‌ಬಾಕ್ಸ್ ಒನ್‌ ಬಳಕೆದಾರರಿಗೆ ಲಭ್ಯ ಎಂದು ಕಂಪನಿ ಹೇಳಿದೆ.

ಬಳಕೆದಾರರು 360 ವೀಡಿಯೊ ಕ್ಲಿಪ್ ನಾವಿಗೇಟ್‌ ಮಾಡಲು ತಮ್ಮ ಡಿವೈಸ್‌ ಬಳಸಿದರೆ ಸಾಕು. ಆಕುಲಸ್ ರಿಫ್ಟ್, ಗೂಗಲ್ ಡೇಡ್ರೀಮ್, ಮತ್ತು ಎಚ್‌ಟಿಸಿ ವೈವ್ ನಂತಹ ವರ್ಚುವಲ್‌ ರಿಯಾಲಿಟಿ ಡಿವೈಸ್‌ಗಳಿಗೆ ಸಪೋರ್ಟ್‌ ಮಾಡಲಿದೆ.

ಸಕಾರಾತ್ಮಕ ಪರಿಣಾಮ

ಸಕಾರಾತ್ಮಕ ಪರಿಣಾಮ

'ಗಿರಾಪ್ಟಿಕ್' ಕಂಪನಿಯ ಸಿಇಓ ಮತ್ತು ಸಹ-ಸಂಸ್ಫಾಪಕರಾದ ರಿಚರ್ಡ್ ಓಲ್ಲಿಯರ್, "ವಿಎಲ್‌ಸಿ ಪ್ರಪಂಚದಾದ್ಯಂತ ಬಳಸುವ ಪ್ರಖ್ಯಾತ ವೀಡಿಯೊ ಪ್ಲೇಯರ್ ಆಗಿದ್ದು, ಕಂಪನಿ ತನ್ನ ಪರಿಣತಿಯೊಂದಿಗೆ 360 ಡಿಗ್ರಿಯಲ್ಲಿ ಓಪನ್‌ ಸೋರ್ಡ್‌ ಪ್ಲೇಯರ್‌ಗೆ ಕೊಡುಗೆ ನೀಡಲು ಹೆಮ್ಮೆ ಪಡುತ್ತಿದೆ" ಎಂದು ಹೇಳಿದ್ದಾರೆ.

ಅಲ್ಲದೇ ಸಹಯೋಗದಿಂದ ದಶಲಕ್ಷ ಗಟ್ಟಲೇ ಬಳಕೆದಾರರು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಿಂದ ಸಂಪೂರ್ಣ ಉಪಯೋಗ ಪಡೆಯಬಹುದು ಎಂದು ಹೇಳಿದೆ.

 ನೆನಪಿಡಲೇಬೇಕಾದ ವಿಷಯ

ನೆನಪಿಡಲೇಬೇಕಾದ ವಿಷಯ

ವಿಎಲ್‌ಸಿ ಟೆಕ್ನಿಕಲ್ ಪ್ರಿವೀವ್ ಪ್ರಸ್ತುತದಲ್ಲಿ ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರಿಗೆ ಲಭ್ಯ. ವಿಎಲ್‌ಸಿ ಟೆಕ್ನಿಕಲ್ ಪ್ರಿವೀವ್ ನೋಡಲು ಬಯಸುವವರು ಇದು ಇನ್ನೂ ಸಹ ಪರೀಕ್ಷೆಯಲ್ಲಿದೆ ಎಂಬುದನ್ನು ಮರೆಯುವಹಾಗಿಲ್ಲ. ನಿರೀಕ್ಷೆಪಟ್ಟಷ್ಟು ಸುಲಭವಾಗಿ ಮತ್ತು ಬಳಕೆದಾರರ ಸ್ನೇಹಿಯಾಗಿ ಇನ್ನೂ ಸಹ ರನ್‌ ಆಗುತ್ತಿಲ್ಲ. ಕಾರಣ ಇನ್ನೂ ಟೆಸ್ಟ್‌ ಮಾಡಲಾಗುತ್ತಿದೆ.

ವಿಎಲ್‌ಸಿ ಹೊಸ ವಿಭಾಗಕ್ಕೆ ಕಾಲಿರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರಕಟಣೆಕಾರರು 360 ಡಿಗ್ರಿ ಕಂಟೆಂಟ್‌ ಅನ್ನು ಪ್ಲೇ ಮಾಡಲು ವಿಎಲ್‌ಸಿ ಬಳಕೆ ಮಾಡಿಕೊಳ್ಳಬಹುದು.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
VLC media player can now play all your 360-degree videos and images directly. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X