ವಾಟ್ಸ್‌ಆಪ್‌ನಲ್ಲಿ ಇನ್ನು ಮುಂದೆ ಕರೆ ಮಾಡಬಹುದು!

By Ashwath
|

ವಾಟ್ಸ್‌ಆಪ್‌ ಬಳಕೆದಾರರಿಗೆ ಗುಡ್‌ನ್ಯೂಸ್‌. ಇನ್ನು ಮುಮದೆ ವಾಟ್ಸ್‌ಆಪ್‌ನಲ್ಲೇ ನಿಮ್ಮ ಸ್ನೇಹಿತರಿಗೆ ಕರೆ ಮಾಡಬಹುದು.ಫೇಸ್‌‌ಬುಕ್‌ ವಾಟ್ಸ್‌ಆಪ್‌ನ್ನು ಖರೀದಿಸಿದ ಬಳಿಕ ವಾಟ್ಸ್‌ಆಪ್‌ ತನ್ನ ಬಳಕೆದಾರರಿಗೆ ಹೊಸ ವಿಶೇಷತೆಗಳನ್ನು ನೀಡಲು ಮುಂದಾಗುತ್ತಿದ್ದು ತನ್ನ ಎರಡನೇ ತ್ರೈಮಾಸಿಕದಲ್ಲಿ ಈ ವಿಶೇಷತೆಯನ್ನು ಆರಂಭದಲ್ಲಿ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ನೀಡಲಿದೆ.

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಈ ವಿಚಾರವನ್ನು ಪ್ರಕಟ ಪಡಿಸಿದ ವಾಟ್ಸ್‌ಆಪ್‌ ಸಿಇಒ ಜನ್‌ ಕೌಮ್‌ ಆರಂಭದಲ್ಲಿ ಆಂಡ್ರಾಯ್ಡ್‌ ಐಓಎಸ್‌‌ ಸಾಧನಗಳಿಗೆ ನೀಡಿದ ಬಳಿಕ ವಿಂಡೋಸ್‌ ಮತ್ತು ಬ್ಲ್ಯಾಕ್‌ಬೆರಿ ಸಾಧನಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ವಾಟ್ಸ್‌ಆಪ್‌ನಲ್ಲಿ ಇನ್ನು ಮುಂದೆ ಕರೆ  ಮಾಡಬಹುದು!

ಬಿಬಿಎಂ,ಸ್ಕೈಪ್‌‌,ವೈಬರ್‌ನಲ್ಲಿ ಈ ಸೇವೆಗಳಿದ್ದು ಸ್ಮಾರ್ಟ್‌‌ಫೋನ್‌ನಲ್ಲಿ ಹಣವಿಲ್ಲದಿದ್ದರೂ ಇಂಟರ್‌ನೆಟ್‌ ಸಂಪರ್ಕ‌ದ ಮೂಲಕ ಕರೆ ಮಾಡಬಹುದಾಗಿದೆ.ವಾಟ್ಸ್‌ಆಪ್‌ನ್ನು ಫೇಸ್‌‌ಬುಕ್‌ 9 ಶತಕೋಟಿ ಡಾಲರ್‌ ನೀಡಿ ಕಳೆದ ವಾರ ಖರೀದಿಸಿತ್ತು. ವಿಶ್ವದಲ್ಲಿ 45 ಕೋಟಿ ಜನ ವಾಟ್ಸ್‌ ಆಪ್‌ನ್ನು ಬಳಸುತ್ತಿದ್ದು,ಪ್ರತಿದಿನ 19 ಶತಕೋಟಿ ಮೆಸೇಜ್‌‌‌ಗಳು,60 ಕೋಟಿ ಚಿತ್ರಗಳು 10 ಕೋಟಿ ವಿಡಿಯೋಗಳು ವಾಟ್ಸ್‌ ಆಪ್‌ನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ವಾಟ್ಸ್‌ ಆಪ್‌ ಹಿಂದಿರುವ ಭಾರತೀಯ ವ್ಯಕ್ತಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X