ವಾಟ್ಸಾಪ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದರೆ ಬಂಧನ

By Suneel
|

ಟೆಕ್‌ ಒಂದು ರೀತಿಯಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಅನುಕೂಲಗಳು ಎಷ್ಟಿದೆಯೋ ಅಷ್ಟೇ ಅನಾನುಕೂಲವು ಟೆಕ್‌ನಿಂದ ಸಂಭವಿಸಬಹುದು. ಅಂತಹ ಘಟನೆಗಳು ಇಂದಿನ ಸಾಮಾಜಿಕ ಜಾಲತಾಣ ಮತ್ತು ಸಂದೇಶ ರವಾನೆ ವೇದಿಕೆಗಳಲ್ಲಿ ಜರುಗುತ್ತಿರುವುದನ್ನು ಕಾಣಬಹುದಾಗಿದೆ.

ಓದಿರಿ: ಈ ಆಪ್‌ಗಳಿಂದ ಮೊಬೈಲ್‌ನಲ್ಲೇ ಸಿನಿಮಾ ತಯಾರಿಸಿ

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಮತ್ತೊಬ್ಬರ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್‌ ಮಾಡುವ ಮುಖಾಂತರ ಶಿಕ್ಷೆಗೆ ಒಳಗಾದ ಅಸಂಖ್ಯಾತ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೇ. ಆದರೆ ಎಲ್ಲರೂ ಕೂಡ ಒಂದು ವಿಷಯವನ್ನು ಖಂಡಿತ ಅರ್ಥಮಾಡಿಕೊಳ್ಳಲೇ ಬೇಕಿದೆ.ಆಕ್ಚೇಪಾರ್ಹ ವಿಷಯ ಎಂದರೆ ಯಾವುದು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಿದೆ. ಕಾರಣ ವಾಟ್ಸಾಪ್‌ ಗ್ರೂಪ್‌ ನಿರ್ವಾಹಕನೊಬ್ಬ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್‌ ಮಾಡುವ ಮುಖಾಂತರ ಬಂಧನಕ್ಕೆ ಒಳಗಾಗಿದ್ದಾರೆ. ಹಾಗಾದರೆ ಈ ವಿಷಯ ಏನಿರಬಹುದು ಎಂಬ ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ.

4 ಜನರ ಬಂಧನ

4 ಜನರ ಬಂಧನ

ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್‌ ಮಾಡಿ ಮಹಾರಾಷ್ಟ್ರದ ಲಾತುರ್‌ ಜಿಲ್ಲೆಯಲ್ಲಿ ವಾಟ್ಸಾಪ್‌ ಗ್ರೂಪ್‌ ನಿರ್ವಾಹಕ ಮತ್ತು ಇತರ ಮೂವರು ಬಂಧನಕ್ಕೊಳಗಾಗಿದ್ದಾರೆ.

ಆಕ್ಷೇಪಾರ್ಹ ವಿಷಯ

ಆಕ್ಷೇಪಾರ್ಹ ವಿಷಯ

ಹಸು ಕತ್ತರಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ವಿಡಿಯೋಗಳನ್ನು ಹಾಕಿರುವುದು ಆಕ್ಷೇಪಾರ್ಹ ವಿಷಯವಾಗಿದೆ.

ಬಂಧನ

ಬಂಧನ

ಈ ನಾಲ್ವರನ್ನು ಐಪಿಸ ಸೆಕ್ಷನ್ 153, ಸೆಕ್ಷನ್‌ 34, ಸೆಕ್ಷನ್ 67 ರ ಅಡಿಯಲ್ಲಿ ಪೋಲೀಸರು ಇವರನ್ನು ಬಂಧಿಸಿದ್ದಾರೆ.

ಸೆಕ್ಷನ್‌ 67

ಸೆಕ್ಷನ್‌ 67

ಸೆಕ್ಷನ್‌ 67 ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಶಿಕ್ಷಾರ್ಹ ಅಪರಾಧ ಎಂದು ಹೇಳುತ್ತದೆ.

ಅಪರಾಧಿ

ಅಪರಾಧಿ

ವರದಿಯು ಗ್ರೂಪ್‌ ನಿರ್ವಾಹಕ ಈ ಪ್ರಕರಣದ ಪೂರ್ಣ ಅಪರಾಧಿಯಾಗುತ್ತಾನೆ, ಆದರೆ ಯಾರು ಸಹ ಇದನ್ನು ಸಮರ್ಥಿಸಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದೆ.

ಧಾನ್ಯ ಮೆನನ್‌

ಧಾನ್ಯ ಮೆನನ್‌

'ಶಾಲೆಯಲ್ಲಿ ಯಾವುದೇ ಘಟನೆಗಳು ನೆಡೆದರು ಅದಕ್ಕೆ ಆಡಳಿತ ನಿರ್ವಾಹಕ ಹೊಣೆ ಯಾಗುತ್ತಾನೆ' . ' ಅಂತೆಯೇ ವಾಟ್ಸಾಪ್‌ಗ್ರೂಪ್‌ನಲ್ಲಿ ಇತರರನ್ನು ಸೇರಿಸುವ ಮತ್ತು ತೆಗೆದು ಹಾಕುವ ಅಧಿಕಾರವನ್ನು ಗ್ರೂಪ್‌ ಸ್ಥಾಪಕ ಹೊಂದಿರುತ್ತಾನೆ. ಹಾಗೆಯೇ ಈತನೇ ಗ್ರೂಪ್‌ ಸದಸ್ಯರು ಎಂತಹ ವಿಷಯಗಳನ್ನು ಶೇರ್‌ ಮಾಡುತ್ತಾರೆ ಎಂಬುದನ್ನು ತಿಳಿದಿರ ಬೇಕು '' ಎಂದು ಸೈಬರ್‌ ಸುರಕ್ಷತೆ ಜಾಣೆ ಧಾನ್ಯ ಮೆನನ್‌ ಹೇಳಿದ್ದಾರೆ.

ಗ್ರೂಪ್‌ ಸಂಸ್ಥಾಪಕರೇ ಜವಾಬ್ದಾರರು

ಗ್ರೂಪ್‌ ಸಂಸ್ಥಾಪಕರೇ ಜವಾಬ್ದಾರರು

ಏಕೆಂದರೇ, ಗ್ರೂಪ್‌ ಅನ್ನು ಆರಂಭಸಿ, ಸದಸ್ಯರನ್ನು ಸೇರಿಸುವವರು ಇವರೇ ಆದ್ದರಿಂದ ಗ್ರೂಪ್‌ ಸಂಸ್ಥಾಪಕರೇ ಜವಾಬ್ದಾರರಾಗಿರುತ್ತಾರೆ ಎಂದು ಧಾನ್ಯ ಮೆನನ್‌ ಹೇಳಿದ್ದಾರೆ.

Best Mobiles in India

English summary
Technology is a double edged sword. So are the social networking and messaging platforms, which can be a boon or a bane. There have been innumerable cases where people have been arrested for sharing objectionable content..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X