ವಾಟ್ಸಾಪ್‌ಗೆ ಖ್ಯಾತಿಯ ಕಿರೀಟ ತೊಡಿಸಿದ ಬಿಲಿಯನ್ ಬಳಕೆದಾರರು

By Shwetha
|

ಫೇಸ್‌ಬುಕ್ ಖರೀದಿ ಮಾಡಿರುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತಿಂಗಳಿಗೆ ಬಿಲಿಯನ್ ಬಳಕೆದಾರರನ್ನು ಪಡೆದುಕೊಂಡು ಹೆಸರುವಾಸಿಯಾಗಿದೆ. 42 ಬಿಲಿಯನ್ ಸಂದೇಶಗಳು ಮತ್ತು 1.6 ಬಿಲಿಯನ್ ಫೋಟೋಗಳು ನಿತ್ಯವೂ ಇದರಲ್ಲಿ ಶೇರ್ ಆಗುತ್ತಿದ್ದು ಏಳು ವರ್ಷ ಹಳೆಯ ಅಪ್ಲಿಕೇಶನ್ ಎಂಬ ಹಿರಿಮೆ ಇದಕ್ಕಿದೆ. ಬಳಕೆದಾರರು ನಿತ್ಯವೂ 250 ಮಿಲಿಯನ್ ವೀಡಿಯೊಗಳನ್ನು ಕಳುಹಿಸುತ್ತಿದ್ದು 1ಬಿಲಿಯನ್ ಗ್ರೂಪ್‌ಗಳನ್ನು ರಚಿಸಿದ್ದಾರೆ.

$22 ಬಿಲಿಯನ್‌ಗೆ ಫೇಸ್‌ಬುಕ್ ಎರಡು ವರ್ಷಗಳ ಹಿಂದೆ ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಖರೀದಿಸಿತ್ತು. ಕಂಪೆನಿಗೆ ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದ್ದು ವಾಟ್ಸಾಪ್‌ನ ಈ ಸಾಧನೆ ನಿಜಕ್ಕೂ ಮೇರೆ ಮೀರಿದುದು.

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದು

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದು

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ನಿಮಗೆ ಬೇಕಾದ ಹಾಗೆ ಬದಲಾಯಿಸಬಹುದು. ನೀವು ಆರಿಸುವ ಚಿತ್ರವನ್ನು ನಿಮಗೆ ಮಾತ್ರ ನೋಡಬಹುದು ಎಂಬುದು ನಿಮ್ಮ ಮನದಲ್ಲಿರಲಿ. ಅಂತ್ರಜಾಲದಲ್ಲಿ ಒಂದು ಚಿತ್ರವನ್ನು ಹುಡುಕಿ ಮತ್ತು ಅದನ್ನು 561×561 ಪಿಕ್ಸೆಲ್‌ಗಳಿಗೆ ಮರುಗಾತ್ರಗೊಳಿಸಿ ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಆ ಚಿತ್ರದೊಂದಿಗೆ ನಮೂದಿಸಿ. ನಂತರ ಎಸ್‌ಡಿ ಕಾರ್ಡ್‌ಗೆ ಹೋಗಿ>ವಾಟ್ಸಾಪ್>ಪ್ರೊಫೈಲ್ ಚಿತ್ರ ಇಲ್ಲಿಗೆ ಹೋಗಿ.

ಲಾಸ್ಟ್ ಸೀನ್ ಅನ್ನು ಮರೆಮಾಚುವುದು

ಲಾಸ್ಟ್ ಸೀನ್ ಅನ್ನು ಮರೆಮಾಚುವುದು

"ನಾಟ್ ಲಾಸ್ಟ್ ಸೀನ್" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಇದಕ್ಕಾಗಿ ನೀವು ಯಾವುದೇ ರೂಟ್ ಪ್ರವೇಶವನ್ನು ಹೊಂದಬೇಕಾಗಿಲ್ಲ.

ವಾಟ್ಸಾಪ್ ಬಳಸಿಕೊಂಡು ಜಿಪ್ ಫೈಲ್ ಕಳುಹಿಸುವುದು

ವಾಟ್ಸಾಪ್ ಬಳಸಿಕೊಂಡು ಜಿಪ್ ಫೈಲ್ ಕಳುಹಿಸುವುದು

ಮೊದಲಿಗೆ ಕ್ಲೌಡ್ ಸೆಂಡ್ ಮತ್ತು ಡ್ರಾಪ್ ಬಾಕ್ಸ್ ಅನ್ನು ಸ್ಥಾಪಿಸಿ. ನಂತರ ಕ್ಲೌಡ್‌ಸೆಂಡ್ ಅನ್ನು ತೆರೆಯಿರಿ ಮತ್ತು ಕ್ಲೌಡ್‌ಸೆಂಡ್‌ನೊಂದಿಗೆ ಅದನ್ನು ಡ್ರಾಪ್‌ಬಾಕ್ಸ್‌ಗೆ ಲಿಂಕ್ ಮಾಡಲು ಅನುಮತಿಸಿ ನಿಮ್ಮ ಸ್ನೇಹಿತರೊಂದಿಗೆ ನೀವು ಹಂಚಿಕೊಳ್ಳಲು ಬಯಸುವ ಫೈಲ್ ಅನ್ನು ಕ್ಲೌಡ್‌ಸೆಂಡ್‌ಗೆ ಹಂಚಿಕೊಳ್ಳಲು ಕಳುಹಿಸಿ. ಇದು ನಿಮ್ಮ ಡ್ರಾಪ್‌ಬಾಕ್ಸ್‌ಗೆ ಫೈಲ್ ಅನ್ನು ಅಪ್‌ಲೋಡ್ ಮಾಡುತ್ತದೆ ಮತ್ತು ಅದರ ಲಿಂಕ್ ಅನ್ನು ನಿಮಗೆ ಒದಗಿಸುತ್ತದೆ. ನಂತರ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಅವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಆಂಡ್ರಾಯ್ಡ್‌ನಲ್ಲಿ ಬಹು ವಾಟ್ಸಾಪ್ ಖಾತೆ

ಆಂಡ್ರಾಯ್ಡ್‌ನಲ್ಲಿ ಬಹು ವಾಟ್ಸಾಪ್ ಖಾತೆ

ಇದನ್ನು ಮಾಡಲು ಸ್ವಿಚ್‌ಮೀ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ನಿಮಗೆ ಬೇರೆ ಖಾತೆಯ ಬೇರೆ ಬೇರೆ ವಾಟ್ಸಾಪ್ ಪ್ರೊಫೈಲ್ ಅನ್ನು ರಚಿಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್ ಸಂದೇಶಗಳನ್ನು ಮರಳಿ ಪಡೆದುಕೊಳ್ಳುವುದು

ವಾಟ್ಸಾಪ್ ಸಂದೇಶಗಳನ್ನು ಮರಳಿ ಪಡೆದುಕೊಳ್ಳುವುದು

ನಿಮ್ಮೆಲ್ಲಾ ಕಳೆದುಹೋದ ಸಂದೇಶಗಳನ್ನು ವಾಟ್ಸಾಪ್ ಎಸ್‌ಡಿ ಕಾರ್ಡ್‌ನಲ್ಲಿ ಸಂಗ್ರಹಿಸಿಡುತ್ತದೆ. ನಿಮ್ಮ ಎಸ್‌ಡಿ ಕಾರ್ಡ್‌ಗೆ ಹೋಗಿ> ವಾಟ್ಸಾಪ್>ಡೇಟಾಬೇಸ್ ಇಲ್ಲಿ ನಿಮಗೆ ಮೆಸೇಜ್ ಸ್ಟೋರ್ ಕಂಡುಬರುತ್ತದೆ.

ವಾಟ್ಸಾಪ್ ಸ್ವಯಂ ಇಮೇಜ್ ಡೌನ್‌ಲೋಡ್ ನಿಯಂತ್ರಣ

ವಾಟ್ಸಾಪ್ ಸ್ವಯಂ ಇಮೇಜ್ ಡೌನ್‌ಲೋಡ್ ನಿಯಂತ್ರಣ

ಸ್ವಯಂಚಾಲಿತ ಮೀಡಿಯಾ ಫೈಲ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹೊಸ ಆಯ್ಕೆಯನ್ನು ವಾಟ್ಸಾಪ್ ಸೇರಿಸಿದೆ. ಇದನ್ನು ಮಾಡಲು ಸೆಟ್ಟಿಂಗ್ಸ್> ಚಾಟ್ ಸೆಟ್ಟಿಂಗ್ಸ್>ಮೀಡಿಯಾ ಆಟೋ-ಡೌನ್‌ಲೋಡ್ ಮತ್ತು ನಿಮಗೆ ಸರಿಹೊಂದುವುದನ್ನು ಆರಿಸಿ.

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸದೇ ವಾಟ್ಸಾಪ್ ಖಾತೆ ಬಳಕೆ

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸದೇ ವಾಟ್ಸಾಪ್ ಖಾತೆ ಬಳಕೆ

ಮೊದಲಿಗೆ ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿರುವ ವಾಟ್ಸಾಪ್ ಖಾತೆಯನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ಪುನಃ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸಂದೇಶ ಸೇವೆಗಳನ್ನು ಸ್ಥಗಿತಗೊಳಿಸಲು ಫ್ಲೈಟ್ ಮೋಡ್ ಅನ್ನು ಬಳಸಿ. ವೆರಿಫೈ ತ್ರೂ ಎಸ್‌ಎಮ್‌ಎಸ್ ಎಂಬ ವೆರಿಫಿಕೇಶನ್ ಆಯ್ಕೆಯನ್ನು ಆರಿಸಿ. ಇಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ. ನಂತರ ಅದರ ಮೇಲೆ ತಟ್ಟಿ ರದ್ದು ಮಾಡಿ. ಇದರ ನಂತರ ಸ್ಪೂಟ್ ಟೆಕ್ಸ್ಟ್ ಮೆಸೇಜ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ನಂತರ ಔಟ್‌ಬಾಕ್ಸ್> ಸಂದೇಶ ವಿವರಗಳನ್ನು ಸ್ಪೂಫ್ ಅಪ್ಲಿಕೇಶನ್‌ಗೆ ನಕಲಿಸಿ ಮತ್ತು ಅದನ್ನು ಸ್ಪೂಫ್‌ಡ್ ವೆರಿಫಿಕೇಶನ್‌ಗೆ ಕಳುಹಿಸಿ. ಈ ಎಲ್ಲಾ ವಿವರಗಳನ್ನು ನೀವು ನಿಮ್ಮ ಸ್ಪೂಫ್‌ಡ್ ಮೆಸೇಜ್‌ನಲ್ಲಿ ಬಳಸಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಮರೆಮಾಚುವುದು

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಮರೆಮಾಚುವುದು

ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಚಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ, ವಾಟ್ಸಾಪ್ ಪ್ಲಸ್ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ವಾಟ್ಸಾಪ್ ಪ್ಲಸ್ ಅನ್ನು ಸ್ಥಾಪಿಸಿಕೊಂಡ ನಂತರ, ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಚಬಹುದಾಗಿದೆ.

ವಾಟ್ಸಾಪ್‌ನಲ್ಲಿ ಧ್ವನಿ ಅಧಿಸೂಚನೆ

ವಾಟ್ಸಾಪ್‌ನಲ್ಲಿ ಧ್ವನಿ ಅಧಿಸೂಚನೆ

ವಾಟ್ಸಾಪ್ ಅಧಿಸೂಚನೆಗಳನ್ನು ಓದಲು ನಿಮಗೆ ಸಮಯವಿಲ್ಲ ಎಂದಾದಲ್ಲಿ ಅದನ್ನು ಧ್ವನಿ ಅಧಿಸೂಚನೆಗಳಾಗಿ ಮಾರ್ಪಡಿಸಬಹುದು. ವಾಯ್ಸ್ ಫಾರ್ ನೋಟಿಫಿಕೇಶನ್ ಮತ್ತು ಟೆಕ್ಸ್ಟ್‌ ಟು ಸ್ಪೀಚ್ ಅನ್ನು ಸ್ಥಾಪಿಸಬೇಕು.

ವಾಟ್ಸಾಪ್ ಸ್ಥಿತಿ

ವಾಟ್ಸಾಪ್ ಸ್ಥಿತಿ

"ವಾಟ್ಸಾಪ್ ಫಾರ್ ವಾಟ್ಸಾಪ್" ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿದ ನಂತರದಿಂದ ನಿಮಗೆಷ್ಟು ಸಂದೇಶಗಳು ಬಂದಿವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್> ಖಾತೆ> ನೆಟ್‌ವರ್ಕ್ ಬಳಕೆ ಹೀಗೆ ಮಾಡಿ.

ವಾಟ್ಸಾಪ್ ಖಾತೆ ಅಳಿಸುವಿಕೆ

ವಾಟ್ಸಾಪ್ ಖಾತೆ ಅಳಿಸುವಿಕೆ

ನಿಮ್ಮ ಸಿಮ್ ಕಾರ್ಡ್ ಅನ್ನು ನೀವು ಬದಲಾಯಿಸಿದಲ್ಲಿ, ನಿಮ್ಮ ಖಾತೆ ಅಂತ್ಯಗೊಳ್ಳುವುದಿಲ್ಲ. ನಿಮ್ಮ ವಾಟ್ಸಾಪ್ ಖಾತೆಯನ್ನು ನೀವು ಹಸ್ತಚಾಲಿತವಾಗಿ ಅಳಿಸಬೇಕಾಗುತ್ತದೆ. ಸೆಟ್ಟಿಂಗ್ಸ್> ಖಾತೆ> ನಿಮ್ಮ ಖಾತೆ ಅಳಿಸಿ.

ಫೋನ್ ಸಂಖ್ಯೆ ಬದಲಾವಣೆ

ಫೋನ್ ಸಂಖ್ಯೆ ಬದಲಾವಣೆ

ಇದನ್ನು ಮಾಡಲು ಮೊದಲಿಗೆ ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಖಾತೆ ನಂತರ ಸಂಖ್ಯೆ ಬದಲಾವಣೆ ಈ ವಿಧಾನವನ್ನು ಅನುಸರಿಸಿ. ಇಲ್ಲಿ ನಿಮ್ಮ ಹಳೆಯ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ ಮತ್ತು ಹೊಸ ಸಂಖ್ಯೆಯನ್ನು ನಮೂದಿಸಿ ಡನ್ ಒತ್ತಿ.

ವಾಟ್ಸಾಪ್ ಥೀಮ್ ಬದಲಾವಣೆ

ವಾಟ್ಸಾಪ್ ಥೀಮ್ ಬದಲಾವಣೆ

ವಾಟ್ಸಾಪ್ ಪ್ಲಸ್ ಹೋಲೋ ಅಪ್ಲಿಕೇಶನ್ ಮೂಲಕ ನಿಮಗೆ ಬೇಕಾದ ವಾಟ್ಸಾಪ್ ಥೀಮ್ ಬದಲಾವಣೆಯನ್ನು ನಿಮಗೆ ಮಾಡಿಕೊಳ್ಳಬಹುದು.

ಒಂದೇ ಸಮಯದಲ್ಲಿ ಎರಡು ಚಿತ್ರಗಳು

ಒಂದೇ ಸಮಯದಲ್ಲಿ ಎರಡು ಚಿತ್ರಗಳು

ವಯಸ್ಸಾದವರ ಫೋಟೋವನ್ನು ಯುವತಿಯ ಫೋಟೋದಂತೆ ಮಾರ್ಪಡಿಸಿ ನಿಮ್ಮ ಸ್ನೇಹಿತರನ್ನು ಬೆಸ್ತು ಬೀಳಸಿಬಹುದು ಮೆಗಿಆಪ್ ಟ್ರಿಕ್ಸ್ ಇದನ್ನು ಬಳಸಿಕೊಂಡು ಈ ರೀತಿಯಲ್ಲಿ ನಿಮ್ಮ ಸ್ನೇಹಿತನ್ನು ಮೂರ್ಖರನ್ನಾಗಿಸಬಹುದು.

ನಿಮ್ಮ ಸ್ನೇಹಿತರ ವಾಟ್ಸಾಪ್ ಖಾತೆಯ ಮೇಲೆ ಬೆಂಗಾವಲು

ನಿಮ್ಮ ಸ್ನೇಹಿತರ ವಾಟ್ಸಾಪ್ ಖಾತೆಯ ಮೇಲೆ ಬೆಂಗಾವಲು

ಸ್ಪೈ ಮಾಸ್ಟರ್ ಪ್ರೊ ಎಂಬ ಹೆಸರಿನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸ್ನೇಹಿತರ ವಾಟ್ಸಾಪ್ ಚಟುವಟಿಕೆಗಳ ಮೇಲೆ ನಿಗಾವಿರಿಸಬಹುದು.

ಇನ್ನಷ್ಟು ಓದಿರಿ

ಇನ್ನಷ್ಟು ಓದಿರಿ

ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ? </a><br /><a href=ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ
ಮೊಬೈಲ್ ಸ್ಫೋಟಕ್ಕೆ ತುತ್ತಾದ ದುರ್ದೈವಿ ಬಾಲಕ" title="ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ
ಮೊಬೈಲ್ ಸ್ಫೋಟಕ್ಕೆ ತುತ್ತಾದ ದುರ್ದೈವಿ ಬಾಲಕ" loading="lazy" width="100" height="56" />ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ
ಮೊಬೈಲ್ ಸ್ಫೋಟಕ್ಕೆ ತುತ್ತಾದ ದುರ್ದೈವಿ ಬಾಲಕ

Best Mobiles in India

English summary
WhatsApp, the bare-bones messaging app owned by Facebook Inc.FB -1.68%, now boasts a billion users a month, a key point on its road to profitability.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X