ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

By Ashwath
|

ಪಾಸ್‌ವರ್ಡ್‌ ಕಳ್ಳತನವಾಗದಂತೆ ಎಷ್ಟೇ ಸುರಕ್ಷಾ ಕ್ರಮಗಳನ್ನು ಜನ ಮತ್ತು ಟೆಕ್‌ ಕಂಪೆನಿಗಳು ಕೈಗೊಂಡರೂ ಪಾಸ್‌ವರ್ಡ್‌ ಕದಿಯುವ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಯಾಹೂ ಬಳಕೆದಾರರ ‌ಪಾಸ್‌ವರ್ಡ್‌‌ಗಳನ್ನು ಕಳ್ಳರು ದೋಚಿದ್ದಾರೆ.

ಯಾಹೂ ತನ್ನ ಬ್ಲಾಗ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು,ಇತ್ತಿಚಿನ ದಿನಗಳಲ್ಲಿ ದುರುದ್ದೇಶಪೂರಿತ ಕಂಪ್ಯೂಟರ್ ತಂತ್ರಾಂಶವನ್ನು ಬಳಸಿ ಕದಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಪಾಸ್‌ವರ್ಡ್‌ನ್ನು ಬದಲಾಯಿಸಿ ಎಂದು ಯಾಹೂ ಬಳಕೆದಾರರಲ್ಲಿ ವಿನಂತಿಸಿದೆ.

ಬ್ಲಾಗ್‌ನಲ್ಲಿ ಎಷ್ಟು ಬಳಕೆದಾರರ ಪಾಸ್‌ವರ್ಡ್‌ನ್ನು ದೋಚಿದ್ದಾರೆ ಎಂಬುದನ್ನು ನಿಖರವಾಗಿ ಪ್ರಕಟಿಸಿಲ್ಲ.ಯಾಹೂ ತನ್ನ ಬಳಕೆದಾರರಿಗೆ ಕೆಲವೊಂದು ಸಲಹೆ ನೀಡಿದ್ದು, ಅಕ್ಷರಗಳ ನಡುವೆ ಸಂಖ್ಯೆ ಇರುವ ಪಾಸ್‌ವರ್ಡ್‌ ಬಳಸಿ. ಜೊತೆಗೆ ಒಂದೇ ಪಾಸ್‌ವರ್ಡ್‌ನ್ನು ಬೇರೆ ಬೇರೆ ಸೇವೆಯಲ್ಲಿ ಬಳಸಬೇಡಿ ಎಂದು ವಿನಂತಿಸಿಕೊಂಡಿದೆ.

ಇದನ್ನೂ ಓದಿ: ನೈಜೀರಿಯನ್‌ ಹ್ಯಾಕರ್‌ಗಳು ಹೈಟೆಕ್‌ ಕಳ್ಳತನ ಮಾಡುವುದು ಹೇಗೆ ತಿಳಿದಿದ್ದೀರಾ?

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

 ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ


ನಿಮ್ಮ ಪಾಸ್‌ವರ್ಡ್‌ಕಡಿಮೆ ಎಂದರೂ 15 ಅಕ್ಷರಗಳನ್ನು ಹೊಂದಿರುವಂತೆ ನೋಡಿಕೊಳ್ಳಿ, ಏಕೆಂದರೆ 15 ಅಂಕಿಯುಳ್ಳ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಾಗುವುದಿಲ್ಲ.

 ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ


ಪಾಸ್‌ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ನಿಮ್ ಜನ್ಮ ದಿನಾಂಕ ಅಥವಾ ನಿಮ್ಮ ಹೆಸರನ್ನು ಆಧರಿಸಿ ಪಾಸ್‌ವರ್ಡ್‌ ನೀಡಬೇಡಿ. ಸಾಮಾನ್ಯವಾಗಿ ಬಹುತೇಕ ಮಂದಿ ಈ ರೀತಿ ತಪ್ಪು ಮಾಡುತ್ತಾರೆ ಇದರಿಂದಾಗಿ ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್‌ ಹ್ಯಾಕ್‌ ಮಾಡುವುದು ತೀರಾ ಸುಲಭವಾಗುತ್ತದೆ.

 ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ನಿಮ್ಮ ಪಾಸ್‌ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ಅಕ್ಷರಗಳ ನಡುವೆ ಸಂಖ್ಯೆಗಳನ್ನು ಕೂಡಾ ಬಳಸಿದಲ್ಲಿ ನಿಮ್ಮ ಪಾಸ್‌ವರ್ಡ್‌ ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ k3h89 ರೀತಿಯಲ್ಲಿ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಿದ್ದಲ್ಲಿ ನಿಮ್ಮ ಪಾಸ್‌ವರ್ಡ್‌ನ್ನು ಹ್ಯಾಕ್‌ ಮಾಡುವುದು ಕಷ್ಟವಾಗುತ್ತದೆ

 ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ


ಯಾವುದೇ ಸಂದರ್ಭದಲ್ಲಿಯೂ ಕೂಡಾ ನಿಮ್ಮ ವೈಯುಕ್ತಿಕ ಪಾಸ್‌ವರ್ಡ್‌ಗಳನ್ನು ಎಂದಿಗೂ ಯಾರ ಬಳಿಯೂ ಶೇರ್ ಮಾಡದಿರಿ. ಒಂದು ವೇಳೆ ಪಾಸ್‌ವರ್ಡ್‌ ಹೇಳಬೇಕಾದ ಸಂದರ್ಭ ಬಂದಲ್ಲಿ ಹೇಳಿದ ಬಳಿಕ ಮತ್ತೆ ಪಾಸ್‌ವರ್ಡ್‌ ಬದಲಾಯಿಸಿ ಬಿಡಿ.

 ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ

ಯಾಹೂ ಬಳಕೆದಾರರ ಪಾಸ್‌ವರ್ಡ್‌ ಕಳ್ಳತನ


ಸಾಫ್ಟ್‌ವೇರ್‌ ಕಂಪೆನಿ ಸ್ಲ್ಪಾಶ್‌ಡೇಟಾ.ಕಾಂ(splashdata.com)ಕಳೆದ ವರ್ಷ‌ ಅತಿ ಹೆಚ್ಚು ಜನ ಬಳಸಿರುವ ಕೆಟ್ಟ ಪಾಸ್‌ವರ್ಡ್‌‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 123456 ಪಾಸ್‌ವರ್ಡ್‌ ಮೊದಲ ಸ್ಥಾನ ಪಡೆದಿದ್ದರೆ, password ಎರಡನೇ ಸ್ಥಾನ ಪಡೆದಿದೆ ಎಂದು ತಿಳಿಸಿದೆ.
ml

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X