ಭೂಮಿಯ ಅಡಿಯಲ್ಲಿದೆ ನೀವರಿಯದ ಕೌತುಕಮಯ ಜಗತ್ತು

By Shwetha
|

ಈ ಜಗತ್ತು ಒಂದು ಮಾಯಾಲೋಕವಿದ್ದಂತೆ ನೀವು ಅಗೆದಷ್ಟೂ ಮೊಗೆದಷ್ಟೂ ನಿಮಗಿಲ್ಲಿ ರಹಸ್ಯಗಳ ಸರಮಾಲೆ ಸಿಕ್ಕೇ ಸಿಗುತ್ತದೆ. ಈಗ ನಾವು ಬಳಸುತ್ತಿರುವ ಅನುಕೂಲಗಳು, ನಮ್ಮ ನಾಗರೀಕತೆ ಹಿಂದೆ ಎಷ್ಟೋ ಪುರಾತನ ಕಾಲದಲ್ಲಿದ್ದ ನಮ್ಮ ಪೂರ್ವಜರ ಭಿಕ್ಷೆಯಾಗಿದೆ. ಈ ನಾಗರೀಕತೆಗಳು ಪ್ರಾಕೃತಿಕ ವಿಕೋಪಗಳಿಂದ ಅಳಿಯುವಿಕೆಯನ್ನು ಕಂಡರೂ ಅಧ್ಯಯನಗಳಿಂದ ಶೋಧನೆಗಳಿಂದ ಮತ್ತೊಮ್ಮೆ ಜೀವ ತಳೆದಿವೆ.

ಮೊನ್ನೆಯಷ್ಟೇ ಹದಿನೈದರ ಹುಡುಗನೊಬ್ಬ ಮಾಯನ್ ನಾಗರೀಕತೆಯನ್ನು ಅನ್ವೇಷಿಸಿದ ಕಥೆಯನ್ನು ಹೇಳಿದ್ದೆವು. ಇಂತಹುದೇ ರಹಸ್ಯಮಯ ನಾಗರೀಕತೆಗಳು ಅಳಿವನ್ನು ಕಂಡಿದ್ದರೂ ಅವುಗಳ ಅವಶೇಷಗಳಿಂದ ನಾವು ಆ ನಾಗರೀಕತೆ ಮತ್ತು ಅವುಗಳ ಇತಿಹಾಸವನ್ನು ಅವಲೋಕಿಸಬಹುದಾಗಿದೆ. ಅಂತೆಯೇ ಅವರುಗಳು ನಮಗೆ ನೀಡಿರುವ ಕೊಡುಗೆಗಳನ್ನು ಅವುಗಳನ್ನು ಅವರು ಕಂಡೆತ್ತಿಕೊಂಡಿರುವ ಪರಿಯನ್ನು ನಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇಂದಿನ ಲೇಖನದಲ್ಲಿ ಇಂತಹುದೇ ಅತಿ ಪುರಾತನ ಮತ್ತು ಕೌತುಕಮಯವಾಗಿರುವ ಇತಿಹಾಸ ದಾಖಲೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದು ಇದರಿಂದ ಇತಿಹಾಸದ ಬಗೆಗಿನ ಇಣುಕು ನೋಟವನ್ನು ನಿಮಗೆ ಕಂಡೆತ್ತಿಕೊಳ್ಳಬಹುದಾಗಿದೆ.

#1

#1

ಇದೊಂದು ಪುರಾತನ ಸೈಟ್ ಆಗಿದ್ದು ಭೂಮಿಯಲ್ಲಿ ಪತ್ತೆಯಾಗಿದೆ. ಇದನ್ನು ಹೇಗೆ ನಿರ್ಮಿಸಲಾಗಿದೆ ಎಂಬುದು ಇಂದಿನ ಇಂಜಿನಿಯರ್‌ಗಳಿಗೂ ಪತ್ತೆಹಚ್ಚಲು ಕಷ್ಟಾಸಾಧ್ಯವಾಗಿದೆ. ಏಕೈಕ ಹಾಳೆಯಲ್ಲಿ ಸರಿಯಾಗಿ ಕೂರುವ ಈ ಕಲ್ಲುಗಳು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#2

#2

ಟ್ವಿನಾಕು ಗೇಟ್‌ವೇನಲ್ಲಿ ಸ್ಥಾಪಿತವಾಗಿರುವ ಗಟ್ಟಿಯಾದ ಶಿಲೆಯಾಗಿದೆ. ಈ ಪುರಾತನ ಶಿಲೆಯಲ್ಲಿರುವ ಕೆಲವೊಂದು ಕೆತ್ತನೆಗಳನ್ನು ಸಂಶೋಧಕರಿಗೆ ಇಂದಿಗೂ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಜ್ಯೋತಿಷ್ಯ ಮತ್ತು ಖಗೋಳ ಮೌಲ್ಯಗಳನ್ನು ಈ ಕೆತ್ತನೆಗಳು ಪಡೆದುಕೊಂಡಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#3

#3

ಭೂಮಿಯಲ್ಲಿರುವ ಹೆಚ್ಚು ನಿಗೂಢ ಸ್ಥಳವಾಗಿ ಈ ಗುಹೆಗಳು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 2000 ಹಳೆಯದಷ್ಟು ಪುರಾತನ ಇತಿಹಾಸವನ್ನು ಈ ಗುಹೆಗಳು ಪಡೆದುಕೊಂಡಿದ್ದು ಕೃತಕ ಗುಹೆಗಳಾಗಿದ್ದು ಮಾನವನು ಈ ಗುಹೆಗಳನ್ನು ಪತ್ತೆಹಚ್ಚಿದ್ದು ಗುಹೆಗಳ ಎತ್ತರ ಮತ್ತು ಆಕಾರವನ್ನು ಕಂಡು ಸಂಶೋಧಕರು ಸ್ತಂಭೀಭೂತರಾಗಿದ್ದಾರೆ. ಈ ಕೃತಕ ಗುಹೆಗಳನ್ನು ಏತಕ್ಕಾಗಿ ನಿರ್ಮಿಸಲಾಗಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#4

#4

ನಿಜಕ್ಕೂ ಅದ್ಭುತವಾಗಿರುವ ನೀರಿನಾಳದ ಈ ನಗರವನ್ನು ಸ್ಕೂಬಾ ತರಬೇತುದಾರರೊಬ್ಬರು ಪತ್ತೆಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನೀರಿನಾಳದ ನಗರವಾಗಿ ಪತ್ತೆಯಾಗಿದೆ. 10,000 ವರ್ಷಗಳ ಹಿಂದೆ ಈ ಕಲ್ಲುಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂಬುದು ಅನ್ವೇಷಣೆಯಾಗಿದ್ದು ಪುರಾತನ ಈಜಿಪ್ಟಿಯನ್ನರುಗಳ ಪಿರಾಮಿಡ್‌ಗಳ ರಚನೆಗಿಂತಲೂ ಮುನ್ನವೇ ಇದು ಜನ್ಮತಾಳಿದೆ ಎನ್ನಲಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#5

#5

ಅತ್ಯಂತ ಪುರಾತನ ನಗರವಾಗಿ ಖ್ಯಾತಿಗೊಂಡಿದ್ದ ಮೊಹೆಂಜೋದಾರವನ್ನು 1992 ರಲ್ಲಿ ಸಿಂಧೂತಟದಲ್ಲಿ ಪತ್ತೆ ಮಾಡಿದ್ದು ಭಾರತೀಯ ಖಗೋಳಶಾಸ್ತ್ರಜ್ಞ ಆರ್. ಬನಾರ್ಜಿಯಾಗಿದ್ದಾರೆ. ಸುಧಾರಿತ ನ್ಯೂಕ್ಲಿಯರ್ ಆಯುಧಗಳಿಂದ ಈ ನಗರ ಅವನತಿಯನ್ನು ಕಂಡಿದೆ ಎಂಬುದಾಗಿ ಹೇಳಲಾಗುತ್ತಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#6

#6

ಪತ್ತೆಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ನಗರವಾಗಿ ಡೆರಿಂಕ್ಯೂ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಇದನ್ನು ಹೇಗೆ ಮತ್ತು ಏತಕ್ಕಾಗಿ ನಿರ್ಮಿಸಲಾಗಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ. ತಮ್ಮ ರಕ್ಷಣೆಗಾಗಿ ಈ ನಗರವನ್ನು ಪುರಾತನ ಜನರು ನಿರ್ಮಿಸಿರಬಹುದು ಎಂಬ ಮಾತನ್ನೂ ತಳ್ಳಿಹಾಕುವಂತಿಲ್ಲ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#7

#7

ಕೋಸ್ಟಾ ರಿಕಾದಲ್ಲಿ ಕಂಡುಬಂದಿರುವ ದೈತ್ಯ ಕಲ್ಲುಗಳು ದಕ್ಷಿಣ ಅಮೇರಿಕಾದಲ್ಲಿ ಪ್ರಥಮವಾಗಿ ಪತ್ತೆಯಾಗಿರುವಂತಹದ್ದಾಗಿದೆ. ಕಾಡುಗಳನ್ನು ಸಮತಟ್ಟು ಮಾಡುತ್ತಿರುವಾಗ ಅಲ್ಲಿನ ಕೆಲಸಗಾರರ ಕಣ್ಣಿಗೆ ಈ ದೈತ್ಯ ಕಲ್ಲುಗಳು ಕಂಡುಬಂದಿವೆ. ಇಲ್ಲಿನ ನಾಗರೀಕರು ಹೇಳುವಂತೆ ಚಿನ್ನದ ಸಂರಕ್ಷಣೆಗಾಗಿ ಬಹುಶಃ ಈ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ ಎಂದಾಗಿದೆ. ಆದರೆ ಇದಕ್ಕಾಗಿ ಶೋಧಗಳು ನಡೆದಿವೆಯಾದರೂ ಯಾವುದೇ ನಿಧಿ ಪತ್ತೆಯಾಗಿಲ್ಲ. ಈ ಕಲ್ಲುಗಳ ನಿರ್ಮಾಣ ಯಾತಕ್ಕಾಗಿ ಆಗಿದೆ ಎಂಬುದು ಮಾತ್ರ ರಹಸ್ಯಮಯವಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#8

#8

ರಷ್ಯಾದ ಸಂಶೋಧಕರು ಹೇಳಿರುವಂತೆ, ಈ ಟ್ರ್ಯಾಕ್‌ಗಳು 14 ಮಿಲಿಯನ್ ಹಳೆಯದಾಗಿದ್ದು ಅಜ್ಞಾತ ಪುರಾತನ ನಾಗರೀಕತೆಯೊಂದು ಅಭಿವೃದ್ಧಿಪಡಿಸಿದ್ದಾಗಿರಬಹುದು ಎಂಬುದಾಗಿ ಪತ್ತೆಮಾಡಲಾಗಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#9

#9

ಗೇಬನ್‌ನಲ್ಲಿ 1972 ರಲ್ಲಿ ಪತ್ತೆಯಾಗಿರುವ ನ್ಯೂಕ್ಲಿಯರ್ ರಿಯಾಕ್ಟರ್ ಎರಡು ಬಿಲಿಯನ್ ಹಳೆಯದಾಗಿದೆ ಎಂಬುದು ಇನ್ನಷ್ಟು ರಹಸ್ಯಮಯ ಅಂಶಗಳನ್ನು ನಮಗಿಲ್ಲಿ ತೋರಿಸುತ್ತಿದೆ. ಭೂಮಿಯಲ್ಲಿ ಬೇರಾವುದೇ ಕಡೆಯಲ್ಲಿ ಇಂತಹದ್ದನ್ನು ಅಭಿವೃದ್ಧಿಪಡಿಸಿಲ್ಲ ಎಂಬುದು ಇನ್ನಷ್ಟು ಕುತೂಹಲಕ್ಕೆ ನಮ್ಮನ್ನು ನೂಕುತ್ತದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

#10

#10

ಈ ಪಿರಾಮಿಡ್‌ಗಳು ಇರುವಂತಹ ಸ್ಥಳ ವಿಸ್ಕೊ ನಗರವಾಗಿದೆ. ಮಾನವ ನಿರ್ಮಿತ ಪಿರಾಮಿಡ್‌ಗಳು ಇವುಗಳಾಗಿದ್ದು ಭೂಮಿಯಲ್ಲಿ ಪತ್ತೆಯಾಗಿರುವುದೇ ಹೆಚ್ಚು ದಿಗ್ಭ್ರಮೆಯನ್ನು ಉಂಟುಮಾಡುವಂತಿದೆ. ನಿಜಕ್ಕೂ ಈ ಪುರಾತನ ಅನ್ವೇಷಣೆಗಳ ನಿರ್ಮಾಣ ಏತಕ್ಕಾಗಿ ಮಾಡಲಾಗಿದೆ ಎಂಬುದೂ ಇನ್ನಷ್ಟು ಕುತೂಹಲವನ್ನು ನಮ್ಮಲ್ಲಿ ಮಾಡುತ್ತಿದೆ.
ಚಿತ್ರಕೃಪೆ: ಏಂಶಿಯೆಂಟ್ ಕೋಡ್

ಗಿಜ್‌ಬಾಟ್ ಕನ್ನಡ

ಗಿಜ್‌ಬಾಟ್ ಕನ್ನಡ

ರಿಯಲ್‌ ಟೈಮ್‌ ಗ್ರಹಗಳ ಚಲನೆಯನ್ನು ತೋರಿಸುವ ಟೆಕ್‌
ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು
2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ" title="ರಿಯಲ್‌ ಟೈಮ್‌ ಗ್ರಹಗಳ ಚಲನೆಯನ್ನು ತೋರಿಸುವ ಟೆಕ್‌ "ವಾಚ್‌"
ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು
2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ" loading="lazy" width="100" height="56" />ರಿಯಲ್‌ ಟೈಮ್‌ ಗ್ರಹಗಳ ಚಲನೆಯನ್ನು ತೋರಿಸುವ ಟೆಕ್‌ "ವಾಚ್‌"
ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು
2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

Read more about:
English summary
Here we bring you some of the most inexplicable things found on Earth.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X