ವಿಶ್ವದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ದೇಹ ಶಸ್ತ್ರಚಿಕಿತ್ಸೆ

By Shwetha
|

ಒಬ್ಬರ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಕೂರಿಸುವ ಅಭೂತಪೂರ್ವ ಸಾಧನೆಯ ಕುರಿತು ನೀವು ಕೇಳಿದ್ದೀರಾ? ಆದರೆ ಇಟಲಿಯ ನರಶಸ್ತ್ರಚಿಕಿತ್ಸಕ ಸರ್ಜಿಯಾ ಕ್ಯಾನ್‌ವಾರೊ ವಿಶ್ವದಲ್ಲೇ ಈ ರೀತಿಯ ಸುದ್ದಿಯನ್ನು ಸ್ವತಃ ಪ್ರಕಟಪಡಿಸಿದ್ದು ಆದಷ್ಟು ಬೇಗನೇ ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ಮತ್ತೊಬ್ಬನ ತಲೆಯನ್ನು ಹೊಲಿಯುವ ಶಸ್ತ್ರಕ್ರಿಯೆಯನ್ನು ಮಾಡಲಿದ್ದಾರಂತೆ.

ಓದಿರಿ: ಉತ್ತರವೇ ದೊರಕದೇ ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

ಬರಿಯ ತಲೆ ಮಾತ್ರವಲ್ಲದೆ ಸಂಪೂರ್ಣ ದೇಹವನ್ನು ಕಸಿ ಮಾಡುವ ಅಭೂತಪೂರ್ವ ಪ್ರಯತ್ನಕ್ಕೆ ಸರ್ಜಿಯಾ ಮುಂದಾಗಲಿದ್ದಾರೆ. ಚೀನಾದ ಮೂಳೆ ಶಾಸ್ತ್ರಜ್ಞ ಕ್ಸಯೋಪಿಂಗ್ ರನ್ ಈ ಕ್ರಿಯೆಯನ್ನು ನಡೆಸಲು ತಂಡವನ್ನು ರಚಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಈ ವಿಚಾರವನ್ನು ಈ ಹಿಂದೆಯೇ ಬಹಳಷ್ಟು ವಿಜ್ಞಾನಿಗಳು ಅನ್ವೇಷಿಸಿದ್ದು ಪ್ರಾಣಾಂತಿಕ ಕಾಯಿಲೆಗಳಿಂದ ಮನುಷ್ಯರನ್ನು ಈ ಮೂಲಕ ಸಂರಕ್ಷಿಸುವ ಇರಾದೆ ಇದರ ಹಿಂದಿದೆ.

ಆದರೆ ಈ ಕಸಿಯನ್ನು ನಡೆಸಲು ಕೆಲವೊಂದು ಅಡೆತಡೆಗಳಿದ್ದು ಅದನ್ನು ದಾಟಿ ವಿಜ್ಞಾನಿಗಳು ಈ ಶಸ್ತ್ರಕ್ರಿಯೆಯನ್ನು ನಡೆಸಬೇಕಾಗಿದೆ. ಅಡ್ಡಿ ಆತಂಕಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

#1

#1

ಯಾವುದೇ ಕಸಿಯಲ್ಲಿ, ದಾನಿಯ ದೇಹಭಾಗವನ್ನು (ದಾನಿಯ ಶರೀರದಿಂದ ತೆಗೆದುಕೊಂಡಿದೆ ಎಂಬುದಾಗಿ ಹೇಳಲಾದ) ಸ್ವೀಕರಿಸುವವರ ದೇಹಭಾಗಕ್ಕೆ ಇರಿಸುವವರೆಗೆ ಜೀವಂತವಾಗಿಡಬಹುದಾಗಿದೆ.

#2

#2

ದೇಹದಿಂದ ಅಂಗವನ್ನು ತೆಗೆದೊಡನೆಯೇ, ಇದು ಸಾಯಲು ಆರಂಭವಾಗುತ್ತದೆ.

#3

#3

ಹೃದಯ ಅಥವಾ ಕಿಡ್ನಿ ಕಸಿ, ಸಾಧ್ಯವಾದಷ್ಟು ದೀರ್ಘಸಮಯದವರೆಗೆ ಜೀವಿಸಬಲ್ಲ ಸಮಯದವರೆಗೆ ತಂಪಾಗಿರಿಸಲು ವೈದ್ಯರು ಪ್ರಯತ್ನಪಡುತ್ತಾರೆ. ಅಂಗವನ್ನು ತಂಪಾಗಿರಿಸುವುದು ಜೀವಿಸಲು ಅಗತ್ಯವಾಗಿರುವ ಅದರ ಕೋಶಗಳ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

#4

#4

ವೈದ್ಯರುಗಳು ಅಂಗಕ್ಕೆ ತಂಪಾದ ಉಪ್ಪು ನೀರಿನಿಂದ ಸ್ನಾನ ಮಾಡಿಸುವ ಮೂಲಕ ಇದನ್ನು ಸಾಧ್ಯವಾಗಿಸುತ್ತಾರೆ. ಈ ಕ್ರಿಯೆಯು ಕಿಡ್ನಿಯನ್ನು 48 ಗಂಟೆಗಳ ಕಾಲ, ಯಕೃತ್ತನ್ನು 24 ಗಂಟೆ, ಮತ್ತು ಹೃದಯವನ್ನು 10 ಗಂಟೆ ಸಂರಕ್ಷಿಸುತ್ತದೆ.

#5

#5

ಆದರೆ ತಲೆಯ ಭಾಗವು ಹೆಚ್ಚು ಕಷ್ಟಕರ ಎಂದೆನಿಸಿದ್ದು, ತಲೆಯನ್ನು ಪ್ರತ್ಯೇಕ ಭಾಗವೆಂದು ಪರಿಗಣಿಸಲಾಗಿದೆ. ಇದು ಹೆಚ್ಚು ಭಾರ ಮತ್ತು ದೇಹದ ಹೆಚ್ಚು ಕ್ಲಿಷ್ಟಕರ ಭಾಗ ಎಂದೆನಿಸಿದೆ.

#6

#6

ಹಲವಾರು ಸಂಶೋಧನೆಗಳಿಂದ ತಿಳಿಪಟ್ಟಿರುವುದು ಏನೆಂದರೆ ತಲೆಕಡಿಯುವಿಕೆ ಸಂದರ್ಭದಲ್ಲಿ ತಲೆಯಲ್ಲಿರುವ ರಕ್ತದೊತ್ತಡವು ನಾಟಕೀಯವಾಗಿ ಕೆಳಗಿಳಿಯುತ್ತದೆ. ತಾಜಾ ರಕ್ತ ಮತ್ತು ಆಮ್ಲಜನಕದ ನಷ್ಟವು ಮೆದುಳನ್ನು ಕೋಮಾಕ್ಕೆ ತಳ್ಳುತ್ತದೆ, ನಂತರ ಸಾವು ಉಂಟಾಗುತ್ತದೆ.

#7

#7

ದೇಹವು ಹೊಸ ಅಂಗವನ್ನು ಸ್ವೀಕರಿಸುವ ಸಂದರ್ಭದಲ್ಲಿ ಆ ಅಂಗದ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ. ಇದರಿಂದಾಗಿ ತಲೆಯ ಕಸಿಯಲ್ಲಿ ವ್ಯತ್ಯಯವುಂಟಾಗುತ್ತದೆ.

#8

#8

ನರಶಾಸ್ತ್ರಜ್ಞ ರಾಬರ್ಟ್ ವೈಟ್ ಮಂಗನ ತಲೆಯನ್ನು ಇನ್ನೊಂದು ಮಂಗನ ದೇಹಕ್ಕೆ ಕಸಿಮಾಡುವ ಪ್ರಕ್ರಿಯೆಯನ್ನು 1970 ರಲ್ಲಿ ಕೈಗೊಂಡಿದ್ದರು. ಮಂಗನ ದೇಹವನ್ನು ಈ ಸಮಯದಲ್ಲಿ ಅವರು 59 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಇರಿಸಿದ್ದರು. ತಲೆಯು ರೋಗನಿರೋಧಕ ಶಕ್ತಿಯನ್ನು ಎಂಟು ದಿನಗಳಲ್ಲಿ ನಿರಾಕರಿಸಿದ್ದರಿಂದ, ಮಂಗನು ಸತ್ತಿತು.

#9

#9

ಅಂದರೆ ಮಾನವನ ತಲೆಯ ಕಸಿಯಲ್ಲಿ ಗಂಟೆಯೊಳಗೆ ಇದನ್ನು ಮಾಡಬೇಕು. ಎರಡೂ ದೇಹಗಳಲ್ಲಿ ತಲೆಯನ್ನು ಒಂದೇ ಸಮಯದಲ್ಲಿ ತೆಗೆಯಬೇಕು. ಗಂಟೆಯೊಳಗೆ ಎಲ್ಲಾ ಕೆಲಸವನ್ನು ಕರಾರುವಕ್ಕಾಗಿ ಮಾಡಬೇಕಾಗುತ್ತದೆ.

#10

#10

ಪ್ರಾಣಿಗಳ ಮೇಲೆ ಈ ಪ್ರಯೋಗವನ್ನು ನಡೆಸಿದ ನಂತರವೇ ಮಾನವರ ಮೇಲೆ ತಲೆಯ ಕಸಿಯನ್ನು ನಡೆಸಬೇಕಾಗುತ್ತದೆ. ಆದರೆ ಪ್ರಾಣಿಗಳ ಮೇಲೆ ನಡೆಸುವ ಈ ಪ್ರಯೋಗವು ಘೋರವಾಗಿರುತ್ತದೆ. ಅದಾಗ್ಯೂ ಮಾನವರ ತಲೆಯನ್ನು ಇನ್ನೊಂದು ದೇಹಕ್ಕೆ ಕೂರಿಸುವ ಪ್ರಯೋಗ ಯಶಸ್ವಿಯಾದಲ್ಲಿ ಹೆಚ್ಚಿನ ಪ್ರಾಣಾಂತಿಕ ರೋಗಗಳನ್ನು ಹತ್ತಿಕ್ಕಬಹುದಾಗಿದೆ.

Best Mobiles in India

English summary
Italian neurosurgeon Sergio Canavero made headlines around the world last year with the bold claim that he would soon be stitching someone's head onto another person's body.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X