ವಿಜ್ಞಾನಿಗಳಿಂದ ಸ್ಥೂಲಾಕಾಯ ಸಮಸ್ಯೆಗೆ ಅದ್ಭುತ ಪರಿಹಾರ

By Shwetha
|

ಅಧಿಕ ದೇಹ ತೂಕವೆಂಬುದು ಶಾಪವೆಂದೇ ಪರಿಗಣಿಸುವವರು ನಮ್ಮಲ್ಲಿ ಹಲವರಿದ್ದಾರೆ. ನಾವು ಏನು ತಿಂದರೂ ದಪ್ಪಗಾಗುತ್ತೇವೆ ಏನು ತಿನ್ನಬೇಕು ತಿನ್ನಬಾರದು ಎಂಬುದೇ ದೊಡ್ಡ ಸಮಸ್ಯೆಯಾಗಿದೆ ಎಂದು ನುಡಿಯುವವರನ್ನು ನೀವು ಕೇಳಿರುತ್ತೀರಿ. ಆದರೆ ಏನು ಬೇಕಾದರೂ ತಿಂದರೂ ಅದನ್ನು ಹಿತಮಿತವಾಗಿ ಸೇವಿಸಿ ದೇಹದ ಆರೋಗ್ಯಕ್ಕಾಗಿ ವ್ಯಾಯಾಮಗಳನ್ನು ಮಾಡುವುದು ಕೂಡ ದೇಹವನ್ನು ಸ್ವಾಸ್ಥ್ಯಪೂರ್ವಕವಾಗಿ ಇರಿಸುತ್ತದೆಂಬುದು ವೈದ್ಯಲೋಕ ಅಮಿತ ದೇಹತೂಕವಿರುವವರಿಗೆ ಅಂತೆಯೇ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕೆಂಬ ಹಂಬಲವುಳ್ಳುವರಿಗೆ ತಿಳಿಸುವ ಹಿತನುಡಿಯಾಗಿದೆ.

ಓದಿರಿ: ಸ್ಪೇಸ್ ಜಂಕ್ ಭೂಮಿಗೆ ಅಪ್ಪಳಿಸಿದಾಗ ಏನು ಸಂಭವಿಸುತ್ತದೆ?

ಆದರೆ ಮುಂದುವರಿದಿರುವ ನಮ್ಮ ತಂತ್ರಜ್ಞಾನವು ಮಾನವನ ಹೊಟ್ಟೆಯಲ್ಲಿರುವ ಹೆಚ್ಚುವರಿ ಆಹಾರವನ್ನು ಹೊರತೆಗೆಯುವ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು ಪೆನ್ಸುಲ್ವೇನಿಯಾ ಮೂಲದ ಕಂಪೆನಿ ಆಸ್ಪೈರ್ ಬೆರಿಯಾಟಿಕ್ಸ್ ಆಗಿದೆ. ಯುಎಸ್ ಎಫ್‌ಡಿಎ (ಫುಡ್ ಏಂಡ್ ಡ್ರಗ್ ಅಡ್ಮಿಮಿನಿಸ್ಟ್ರೇಶನ್) ಈ ಡಿವೈಸ್ ಅನ್ನು ಅಂಗೀಕರಿಸಿದ್ದು ನಮ್ಮಲ್ಲಿಗೆ ಬರುವವರೆಗೆ ಕಾಯಲೇಬೇಕಾಗಿದೆ.

ಸ್ಥೂಲಕಾಯ

ಸ್ಥೂಲಕಾಯ

22 ರ ಹರೆಯದ ಸ್ಥೂಲಕಾಯರನ್ನು, ಶಸ್ತ್ರಕ್ರಿಯೆ ನಡೆಸಿ ಕೂಡ ಅಧಿಕ ತೂಕವನ್ನು ಕರಗಿಸಿಕೊಳ್ಳದವರನ್ನು ಈ ಅಧ್ಯಯನದಲ್ಲಿ ಬಳಸಿ ಈ ಸಾಧನವು ನಡೆಸುವ ಕ್ರಿಯೆಯನ್ನು ಸಾಧಿಸಲಾಗಿದೆ.

ಅಟ್ಯಾಚ್

ಅಟ್ಯಾಚ್

ಈ ಡಿವೈಸ್‌ನಲ್ಲಿ ಒಂದು ಪಂಪ್ ಅನ್ನು ಮೆದುಗೊಳವೆಗೆ ಅಟ್ಯಾಚ್ ಮಾಡಲಾಗಿರುತ್ತದೆ. ಇದನ್ನು ಮಾನವರ ಹೊಟ್ಟೆಗೆ ಸಿಕ್ಕಿಸಿ ಆಹಾರವನ್ನು ಹೊರತೆಗೆಯಲು ಬಳಸಲಾಗುತ್ತದೆ.

ಪೋರ್ಟ್ ವಾಲ್ವ್

ಪೋರ್ಟ್ ವಾಲ್ವ್

ಡಿಸ್ಕ್ ಮಾದರಿಯಲ್ಲಿರುವ ಪೋರ್ಟ್ ವಾಲ್ವ್ ಅನ್ನು ಮೆದುಗೊಳವೆಗೆ ಸಂಪರ್ಕಪಡಿಸಲಾಗಿದ್ದು ಇದು ರೋಗಿಯ ಹೊರಭಾಗದಿಂದ ಹೊರಬರುತ್ತದೆ. ಎಂಬುದಾಗಿ ಎಫ್‌ಡಿಎ ತಿಳಿಸಿದೆ.

30 ಶೇಕಡಾದಷ್ಟು ಕ್ಯಾಲೋರಿ

30 ಶೇಕಡಾದಷ್ಟು ಕ್ಯಾಲೋರಿ

ಊಟದ ನಂತರ ಸ್ಥೂಲತೆಯನ್ನು ಹೊಂದಿರುವ ರೋಗಿಯು 20 ರಿಂದ 30 ನಿಮಿಷಗಳ ಕಾಲ ಈ ಸಾಧನವನ್ನು ಬಳಸಬೇಕಾಗುತ್ತದೆ. ಅಂತೆಯೇ 10 ನಿಮಿಷಗಳ ಕಾಲ ವಾಲ್ವ್ ಅನ್ನು ತೆರೆಯಬೇಕು. ಇದರಿಂದ 30 ಶೇಕಡಾದಷ್ಟು ಕ್ಯಾಲೋರಿ ಹೊರಹೋಗುತ್ತದೆ.

ಕ್ಯಾಲೋರಿ ಹೊರಹಾಕುವಿಕೆ

ಕ್ಯಾಲೋರಿ ಹೊರಹಾಕುವಿಕೆ

ಈ ಸಾಧನವು ಕ್ಯಾಲೋರಿ ಹೊರಹಾಕುವಿಕೆ ಸಹಾಯಕವಾಗಿದ್ದು ತೂಕವನ್ನು ನಿಯಂತ್ರಣಕ್ಕೆ ತರುವಲ್ಲಿ ಇದು ಪ್ರಮುಖ ಅಂಶವೆಂದೇ ಪರಿಗಣಿತವಾಗಿದೆ. ರೋಗಿಗಳು ಇದರ ಬಗ್ಗೆ ಅಸ್ಥೆಯನ್ನು ವಹಿಸಿಕೊಂಡು ಅವರನ್ನು ನೋಡಿಕೊಳ್ಳುವವರು ಅವರಲ್ಲಿ ಆರೋಗ್ಯಕರ ತಿನ್ನುವ ಕ್ರಿಯೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದಾಗಿ ವೈದ್ಯರಾದ ವಿಲಿಯಮ್ ಮೇಸಲ್ ತಿಳಿಸುತ್ತಾರೆ.

ಉತ್ತಮ ಮಾರ್ಗದರ್ಶನ

ಉತ್ತಮ ಮಾರ್ಗದರ್ಶನ

ಈ ಸಾಧನವನ್ನು ಬಳಸುವಾಗ ಉತ್ತಮ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗುತ್ತದೆ. ಅಜೀರ್ಣ, ತಲೆಸುತ್ತುವುದು, ವಾಂತಿ, ಮಲಬದ್ಧತೆ ಮತ್ತು ಡಯೇರಿಯಾ ಸಮಸ್ಯೆಯು ಸಾಧನವನ್ನು ತಪ್ಪಾಗಿ ಬಳಸುವುದರಿಂದ ಉಂಟಾಗುವ ಸಮಸ್ಯೆಗಳಾಗಿವೆ.

ಅಡ್ಡಪರಿಣಾಮ

ಅಡ್ಡಪರಿಣಾಮ

ಟ್ಯೂಬ್ ಅನ್ನು ಇರಿಸುವಾಗ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ನೋಯುತ್ತಿರುವ ಕುತ್ತಿಗೆ, ರಕ್ತಸ್ರಾವ ಮತ್ತು ನ್ಯುಮೋನಿಯಾ, ಕವಾಟದ ಸುತ್ತ ಕಿರಿಕಿರಿ ಉಂಟಾಗುವ ಸಂಭವ ಇರುತ್ತದೆ.

ಸ್ಥೂಲಕಾಯ ಸಮಸ್ಯೆಗಳಿಗೆ ನಿವಾರಕ

ಸ್ಥೂಲಕಾಯ ಸಮಸ್ಯೆಗಳಿಗೆ ನಿವಾರಕ

ಅಂತೂ ಈ ಡಿವೈಸ್ ಭಾರತಕ್ಕೆ ಯಾವಾಗ ಕಾಲಿಡಲಿದೆ ಎಂಬದನ್ನು ಕಾದು ನೋಡಬೇಕಾಗಿದ್ದು ಇದು ಹೆಚ್ಚು ಸ್ಥೂಲಕಾಯ ಸಮಸ್ಯೆಗಳಿಗೆ ನಿವಾರಕವಾಗಿ ಪರಿಗಣಿತವಾಗಲಿದೆ.

Best Mobiles in India

English summary
The AspireAssist device is directed for use by obese people who are at least 22 years of age and have not been able to lose weight despite all other approaches, excluding surgery. This device was developed by a Pennsylvania-based company called Aspire Bariatrics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X