ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು!..ಇದು ಇಂಡಿಯಾ!!

ಇದೇ ಮೊದಲ ವಾರದಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.!!

|

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಲಿದೆ. ಹೌದು, ಭಾರತೀಯರನ್ನು ಭಾರತೀಯ ನೆಲದಿಂದಲೇ ಅಂತರಿಕ್ಷಕ್ಕೆ ಕೊಂಡೊಯ್ಯುವ ರಾಕೆಟ್ ಅನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು, ಇದೇ ಜೂನ್ ಮೊದಲ ವಾರದಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.!!

ಅಂತರಿಕ್ಷಕ್ಕೆ ಮಾನವರನ್ನು ಸಾಗಿಸಬಲ್ಲ ಬೃಹತ್ ಬಾಹ್ಯಾಕಾಶ ನೌಕೆ ಜಿಎಲ್ವಿ ಮಾರ್ಕ್ 3 ರಾಕೆಟ್ ಅನ್ನು ತಯಾರಿಸಿರುವ ಇಸ್ರೋ ಇದೇ ಮೊದಲ ಬಾರಿಗೆ ಇಂತಹ ಸಾಧನೆ ಮಾಡಿದ ದೇಶಗಳ ಸಾಲಿಗೆ ಸೇರಲಿದೆ.! 15 ವರ್ಷಗಳ ಸತತ ಪರಿಶ್ರಮಕ್ಕೆ ಪ್ರತಫಲ ದೊರೆಯುವ ವಿಶ್ವಾಸವಿದ್ದು, ಅಮೆರಿಕಾ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಮಾನವರನ್ನು ಸಾಗಿಸಬಲ್ಲ ಬಾಹ್ಯಾಕಾಶ ನೌಕೆ ಹೊಂದಿವೆ!!

 ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು!..ಇದು ಇಂಡಿಯಾ!!

ಓದಿರಿ: ಜಿಯೋ ಫೈಬರ್ ಬಗ್ಗೆ ಏರ್‌ಟೆಲ್ ಹೆದರಿರುವುದು ಏಕೆ ಗೊತ್ತಾ?

ಇಸ್ರೊ ಈವರೆಗಗೂ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ಮತ್ತು ಬೃಹತ್ ರಾಕೆಟ್‌ ಎಂಬ ಖ್ಯಾತಿಯನ್ನು ಈ ರಾಕೆಟ್ ಹೊಂದಿದ್ದು, 640 ಟನ್ ತೂಕವನ್ನು ಹೊಂದಿದೆ. ಅಂದರೆ ಸರಿಸುಮಾರು 200 ಆನೆಗಳಿಗೂ ಹೆಚ್ಚು ತೂಕವನ್ನು ಜಿಎಸ್‌ಎಲ್‌ವಿ ಮಾರ್ಕ್ 3ನೌಕೆ ಹೊಂದಿದೆ.!!

 ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು!..ಇದು ಇಂಡಿಯಾ!!

ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್‌ ಬಳಕೆಯಾಗಲಿದ್ದು, ಪ್ರಾಯೋಗಿಕವಾಗಿ ಉಡಾವಣೆ ಮಾಡಲು ಇಸ್ರೋ ಭರದ ಸಿದ್ಧತೆಯಲ್ಲಿ ತೊಡಗಿದೆ. ಇನ್ನು ಈ ರಾಕೆಟ್‌ ನಿರ್ಮಾಣಕ್ಕೆ 300 ಕೋಟಿ ರೂ. ವೆಚ್ಚವಾಗಿದೆ.!!

ಓದಿರಿ: ಐಟಿಯಲ್ಲಿ ಕೆಲಸ ಬೇಕೆ?.. ಹಾಗಿದ್ರೆ ಈ ಐಟಿ ಉದ್ಯೋಗಿಯ ಕಥೆ ಕೇಳಿ!!!

Best Mobiles in India

English summary
The new rocket is capable of carrying satellites of four ton class into the geosynchronous orbit.to know more visit to kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X