ಲೈಫ್ ಟೈಮ್‌ ಕನ್ನಡಕದ ಬದಲು ಕಣ್ಣಿಗೆ ಸುರಕ್ಷೆ 'ಬಯೋನಿಕ್‌ ಲೆನ್ಸ್‌'ನಿಂದ!

By Suneel
|

'ದಿ ಆಕುಮೆಟಿಕ್ಸ್' ಬಯೋನಿಕ್‌ ಲೆನ್ಸ್ ಭವಿಷ್ಯದಲ್ಲಿ ಉತ್ತಮ ಲೆನ್ಸ್ ಆಗಲಿದ್ದು ಕನ್ನಡಕಗಳ ಬದಲಾಗಿ ಇದನ್ನು ಉಪಯೋಗಿಸಲಾಗುತ್ತದೆ. ಆಕುಮೆಟಿಕ್ಸ್‌ ಟೆಕ್ನಾಲಜಿ ಕಾರ್ಪೋರೇಷನ್‌ನ ಡಾ|| ಗಾರ್ತ್‌ ವೆಬ್ಬ್‌ ಎಂಬುವವರು ಹೊಸ ವಿನ್ಯಾಸದ ಅದ್ಭುತವಾದ ಬಯೋನಿಕ್‌ ಲೆನ್ಸ್‌ ಅನ್ನು ನಿರ್ಮಿಸಿದ್ದು, ಪ್ರಪಂಚದಾದ್ಯಂತ ಕನ್ನಡಕ ಬಳಸುವವರ ಲೈಫ್‌ಸ್ಟೈಲ್‌ ಅನ್ನು ಚೇಂಜ್‌ ಮಾಡಲಿದೆ.

ಹಲವರು ಕನ್ನಡಕ ಬಳಸಿ ಬಳಸಿ ಕಣ್ಣಿನ ಸುತ್ತಲು ಒಂದು ರೀತಿಯ ಗುರುತು ಉಳಿಯುತ್ತದೆ. ಇನ್ನೂ ಕೆಲವರು ಪರೀಕ್ಷಿಸಿದ ಕನ್ನಡ ಬಳಕೆ ಬದಲು ಲೆನ್ಸ್‌ ಅನ್ನು ಬಳಸುತ್ತಾರೆ. ಆದರೆ ಲೆನ್ಸ್ ಅನ್ನು ಗುಣಮಟ್ಟದ ಆಧಾರದಲ್ಲಿ ಆಗಾಗ ಚೇಂಜ್‌ ಮಾಡಬೇಕಾಗುತ್ತದೆ. ಆದರೆ ಇಂದು ಆಕುಮೆಟಿಕ್‌ ಟೆಕ್ನಾಲಜಿಯ ಬಯೋನಿಕ್‌ ಲೆನ್ಸ್ ಪ್ರಪಂಚದಾದ್ಯಂತದ ಕನ್ನಡಕ ಬಳಕೆದಾರರು ಮತ್ತು ದೃಷ್ಟಿದೋಷವಿರುವವರ ಲೈಫ್ ಸ್ಟೈಲ್‌ ಅನ್ನೇ ಬದಲಿಸಿದೆ. ಇದರ ವಿಶೇಷತೆ ಬಗ್ಗೆ ತಿಳಿಯಲು ಲೇಖನದ ಸ್ಲೈಡರ್‌ ಅನ್ನು ಕ್ಲಿಕ್ಕಿಸಿ ಓದಿರಿ.

ಅಂತೂ ಬಂತೂ 'ಇಂಡಿಯನ್‌ ಮೋಟಾರ್‌ಸೈಕಲ್‌'ಗಳಿಗೆ ಟಚ್‌ಸ್ಕ್ರೀನ್ ಸಿಸ್ಟಮ್‌

ಬಯೋನಿಕ್ ಲೆನ್ಸ್

ಬಯೋನಿಕ್ ಲೆನ್ಸ್

ಬಯೋನಿಕ್ ಲೆನ್ಸ್ ವಿನ್ಯಾಸಕಾರರು ಬಯೋನಿಕ್ ಲೆನ್ಸ್ ಅನ್ನು ಕಣ್ಣಿನ ಭಾಗಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 20/20 ಸಾಮಾನ್ಯ ದೂರದ ದೃಶ್ಯವನ್ನು ಉತ್ತಮವಾಗಿ ನೀಡುತ್ತದೆ ಎಂದು ಹೇಳಿದ್ದಾರೆ.

ನೋವು ನೀಡದ ಬಯೋನಿಕ್‌ ಲೆನ್ಸ್‌

ನೋವು ನೀಡದ ಬಯೋನಿಕ್‌ ಲೆನ್ಸ್‌

ನೋವು ನೀಡದ ಬಯೋನಿಕ್‌ ಲೆನ್ಸ್, ಅದನ್ನು ಬಳಸುವವರಿಗೆ 3 ಪಟ್ಟು ದೃಶ್ಯವನ್ನು ಉತ್ತಮವಾಗಿ ನೋಡಲು ಸಹಾಯಕವಾಗಿದೆ. ಉತ್ತಮ ಗುಣಮಟ್ಟದ ದೃಶ್ಯೀಕರಣ ಅನುಭವಿಸಬಹುದಾಗಿದೆ ಎನ್ನಲಾಗಿದೆ.

ಸಂಶೋಧಕರು

ಸಂಶೋಧಕರು

ಸಂಶೋಧಕರು ಬಯೋನಿಕ್‌ ಲೆನ್ಸ್‌ ಅನ್ನು ಅಭಿವೃದ್ದಿಪಡಿಸಲು 8 ವರ್ಷ ಅಧ್ಯಯನ ಮಾಡಿದ್ದಾರೆ. ಅಲ್ಲದೇ ಬಯೋನಿಕ್‌ ಲೆನ್ಸ್‌ ವಿನ್ಯಾಸಕ್ಕೆ $3 ದಶಲಕ್ಷ ಡಾಲರ್‌ ಅನ್ನು ವಿನಿಯೋಗಿಸಲಾಗಿದೆ.

ಡಾ|| ಗಾರ್ತ್‌ ವೆಬ್‌

ಡಾ|| ಗಾರ್ತ್‌ ವೆಬ್‌

ಡಾ|| ಗಾರ್ತ್‌ ವೆಬ್‌'ರವರು ತಮ್ಮ ಅಧ್ಯಯನದ ಯಶಸ್ವಿ ಬಗ್ಗೆ ಹೆಚ್ಚು ಆಶಾವಾದಿಯಾಗಿ ಕಾರ್ಯನಿರ್ವಹಿಸಿ ನೋವು ರಹಿತ ವಾದ ಬಯೋನಿಕ್‌ ಲೆನ್ಸ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ. ಬಯೋನಿಕ್‌ ಲೆನ್ಸ್‌ ಅನ್ನು ನೋವು ಆಗದಂತೆ ವ್ಯವಸ್ಥೆಗೊಳಿಸಲು 8 ನಿಮಿಷವಾಗುತ್ತದೆ ಎನ್ನಲಾಗಿದೆ.

ಬಯೋನಿಕ್‌ ಲೆನ್ಸ್‌ ಕಾಂಟ್ಯಾಕ್ಟ್‌ ಲೆನ್ಸ್‌ ಅಲ್ಲ

ಬಯೋನಿಕ್‌ ಲೆನ್ಸ್‌ ಕಾಂಟ್ಯಾಕ್ಟ್‌ ಲೆನ್ಸ್‌ ಅಲ್ಲ

ಅಂದಹಾಗೆ ಬಯೋನಿಕ್‌ ಲೆನ್ಸ್ ಅನ್ನು ಕಾಂಟ್ಯಾಕ್ಟ್ ಲೆನ್ಸ್ ರೀತಿಯಲ್ಲಿ ವಿನ್ಯಾಸ ಮಾಡಿಲ್ಲ. ವಾಸ್ತವವಾಗಿ, ಬಯೋನಿಕ್‌ ಲೆನ್ಸ್ ಕಣ್ಣಿನಲ್ಲಿ ನೈಸರ್ಗಿಕ ದ್ವಿ ಲೆನ್ಸ್ ರೀತಿಯಲ್ಲಿ ಬದ್ಧವಾಗಿರಲಿದೆ.

ಲೆನ್ಸ್‌ ವ್ಯವಸ್ಥೆಗೊಳಿಸುವಿಕೆ

ಲೆನ್ಸ್‌ ವ್ಯವಸ್ಥೆಗೊಳಿಸುವಿಕೆ

ಲೆನ್ಸ್ ಅಳವಡಿಕೆಯು ಸರಳವಾಗಿದ್ದು, ಯಾವುದೇ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಬಹುದಾಗಿದೆ.

ಬಯೋನಿಕ್‌ ಲೆನ್ಸ್‌

ಬಯೋನಿಕ್‌ ಲೆನ್ಸ್‌

ಬಯೋನಿಕ್‌ ಲೆನ್ಸ್‌ ಲವಣಯುಕ್ತವಾಗಿದ್ದು ಅದನ್ನು ಕಣ್ಣಿಗೆ ಒಂದು ಸಿರಿಂಜ್‌ ಮೂಲಕ ಹರಿಸಲಾಗುತ್ತದೆ. ಫೋಲ್ಡ್‌ ಆಗಿರುವ ಲೆನ್ಸ್‌ ಓಪನ್‌ ಆಗುತ್ತದೆ ಮತ್ತು ಹತ್ತು ಸೆಕೆಂಡುಗಳ ನಂತರ ಸ್ವಾಭಾವಿಕ ಲೆನ್ಸ್ ಆಗುತ್ತದೆ. ನಂತರ ವ್ಯಕ್ತಿಯು ತಕ್ಷಣ ತನ್ನ ದೃಷ್ಟಿಯಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು ಎನ್ನಲಾಗಿದೆ.

ಬಯೋನಿಕ್‌ ಲೆನ್ಸ್‌ನಿಂದ ಸುರಕ್ಷತೆ ಹೆಚ್ಚು

ಬಯೋನಿಕ್‌ ಲೆನ್ಸ್‌ನಿಂದ ಸುರಕ್ಷತೆ ಹೆಚ್ಚು

ಅಂದಹಾಗೆ ಬಯೋನಿಕ್ ಲೆನ್ಸ್‌ ಕಣ್ಣಿನ ಪೊರೆ ಉಂಟಾಗುವಿಕೆಯಿಂದ ಹೆಚ್ಚು ಸುರಕ್ಷತೆ ನೀಡುತ್ತದೆ. ದೃಷ್ಟಿ ದೋಷ ಸರಿ ಪಡಿಸುವ ಲೇಸರ್‌ ಚಿಕಿತ್ಸೆಗಿಂತ ಕಡಿಮೆ ಅಪಾಯಕಾರಿಯಾಗಿದೆ. ವೆಬ್ಬ್‌'ರವರು ಮಾರುಕಟ್ಟೆಗೆ 2017 ರಲ್ಲಿ ಬಯೋನಿಕ್‌ ಲೆನ್ಸ್‌ ಅನ್ನು ತರುವ ಬಗ್ಗೆ ಹೇಳಿದ್ದಾರೆ.

rn

ವೀಡಿಯೊ

ಬಯೋನಿಕ್‌ ಲೆನ್ಸ್‌ ಬಗೆಗಿನ ವೀಡಿಯೊ ನೋಡಿರಿ

ಗಿಜ್‌ಬಾಟ್‌

ಗಿಜ್‌ಬಾಟ್‌

ರೂ 2,500 ಕ್ಕೆ 90 ದಿನ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಆಕ್ಸೆಸ್ರೂ 2,500 ಕ್ಕೆ 90 ದಿನ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಆಕ್ಸೆಸ್

ವೈಜ್ಞಾನಿಕ ಕಾದಂಬರಿಗಳಲ್ಲಿ ಹೇಳಲಾದ ಇಂದಿನ ಪ್ರಖ್ಯಾತ ಟೆಕ್ನಾಲಜಿಗಳುವೈಜ್ಞಾನಿಕ ಕಾದಂಬರಿಗಳಲ್ಲಿ ಹೇಳಲಾದ ಇಂದಿನ ಪ್ರಖ್ಯಾತ ಟೆಕ್ನಾಲಜಿಗಳು

Best Mobiles in India

English summary
New Bionic Lens Promises Perfect Vision For Your Lifetime. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X