ಮನೆಯೊಳಗಿನ ಲೈಟ್‌ನಿಂದಲೇ 2GB/s ವೇಗದ ಇಂಟರ್ನೆಟ್ ಪಡೆಯಿರಿ!

By Suneel
|

ವಿಜ್ಞಾನಿಗಳ ತಂಡವೊಂದು ಹೊಸ ನ್ಯಾನೋ ವಸ್ತುವೊಂದನ್ನು ಅಭಿವೃದ್ದಿಪಡಿಸಿದ್ದು, ಅತಿ ಹೆಚ್ಚಿನ ಬೆಳಕು ನೀಡುವುದರ ಜೊತೆಗೆ, ಒಂದು ಸೆಕೆಂಡಿಗೆ 2GB ವೇಗದ ವೈರ್‌ಲೆಸ್‌ ಇಂಟರ್ನೆಟ್ ನೀಡುವ ಸಾಮರ್ಥ್ಯ ಹೊಂದಿದೆ.

4G, ಫೈಬರ್‌ನೆಟ್‌ ಸಹ ನೀಡಲಾಗದ ಇಂಟರ್ನೆಟ್ ಡಾಟಾ ವೇಗ ಸಾಮರ್ಥ್ಯದ ಹೊಸ ನ್ಯಾನೋ ವಸ್ತು ಯಾವುದು, ಅದರ ವಿಶೇಷತೆ ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!

ಕಿಂಗ್‌ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ

ಕಿಂಗ್‌ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ

ಸೌದಿ ಅರೇಬಿಯಾದ 'ಕಿಂಗ್‌ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ'ದ ಸಂಶೋಧಕರು ನ್ಯಾನೋಕ್ರೆಸ್ಟಲ್ಲೈನ್ ವಸ್ತುವೊಂದನ್ನು ಅಭಿವೃದ್ದಿಪಡಿಸಿದ್ದು, ನೀಲಿ ಬೆಳಕಿಗಿಂತ ಅತ್ಯಧಿಕವಾದ ಬಿಳಿ ಬೆಳಕನ್ನು ಪ್ರಕಾಶಿಸುತ್ತದೆ.

ವೈಫೈ ಮತ್ತು ಬ್ಲೂಟೂತ್‌

ವೈಫೈ ಮತ್ತು ಬ್ಲೂಟೂತ್‌

ವೈಫೈ ಮತ್ತು ಬ್ಲೂಟೂತ್‌ ಅತ್ಯುತ್ತಮ ಟೆಕ್ನಾಲಜಿಗಳಾಗಿದ್ದು, ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳನ್ನು ಮಾಹಿತಿ ವರ್ಗಾವಣೆಗಾಗಿ ಚಿಕ್ಕದಾಗಿ ಮಾಡಿ ಹೆಚ್ಚು ಉಪಯೋಗಪಡೆಯುತ್ತವೆ.

ವಿಸಿಬಲ್‌ ಲೈಟ್‌ ಕಂಮ್ಯೂನಿಕೇಷನ್(VLC)

ವಿಸಿಬಲ್‌ ಲೈಟ್‌ ಕಂಮ್ಯೂನಿಕೇಷನ್(VLC)

ವಿಸಿಬಲ್‌ ಲೈಟ್‌ ಕಂಮ್ಯೂನಿಕೇಷನ್ (VLC) ಅನಿಯಂತ್ರಿತ ಮತ್ತು ಸಮರ್ಥ ಹೆಚ್ಚು ದಕ್ಷತೆಯ ಎಲೆಕ್ಟ್ರೋಮ್ಯಾಗ್ನೆಟಿಕ್‌ ತರಂಗವನ್ನು ಬಳಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

VLC ವಿಶೇಷತೆ

VLC ವಿಶೇಷತೆ

VLC ಟೆಕ್ನಾಲಜಿಯು ಮಾಹಿತಿ ಸಂಚಾರ ಮತ್ತು ಟೆಕ್ನಾಲಜಿ ಪ್ರದರ್ಶನವನ್ನು ಬೆಳಕಿನ ವ್ಯವಸ್ಥೆಯೊಂದಿಗೆ ಒಗ್ಗೂಡಿಸಿದ್ದು, ಉದಾಹರಣೆಗೆ ಮನೆಯೊಳಗಿನ ಲೈಟ್‌ಗಳು ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳಿಗೆ ಇಂಟರ್ನೆಟ್ ನೀಡುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

VLC ಅಪ್ಲಿಕೇಶನ್‌ಗಳ ಅಗತ್ಯತೆ

VLC ಅಪ್ಲಿಕೇಶನ್‌ಗಳ ಅಗತ್ಯತೆ

ಬಿಳಿ ಬೆಳಕನ್ನು ಉತ್ಪತ್ತಿ ಮಾಡುವ ಎಲ್‌ಇಡಿಗಳು VLC ಅಪ್ಲಿಕೇಶನ್‌ಗೆ ಅಗತ್ಯವಾಗಿದೆ. ಈ ಎಲ್‌ಇಡಿಗಳು ನೀಲಿ ಬೆಳಕನ್ನು ನೀಡುವ ರಂಜಕ ಜೊತೆಗಿನ ಡಯೋಡ್‌ನಿಂದ ತಯಾರಿಸಲ್ಪಟ್ಟಿದ್ದು, ಸ್ವಲ್ಪ ಪ್ರಮಾಣದ ಕೆಂಪು ಮತ್ತು ಹಸಿರು ರೇಡಿಯೇಷನ್ ಬೆಳಕನ್ನು ನೀಡುತ್ತದೆ. ಆದರೆ VLC ಯು ಬಿಳಿ ಬೆಳಕನ್ನು ಉತ್ಪಾದಿಸುವುದನ್ನು ಬಳಸಿಕೊಳ್ಳಲಿದೆ ಎಂದು 'ಕಿಂಗ್‌ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ'ದ ಪ್ರೊಫೆಸರ್‌ 'ಬೂನ್‌ ಓಯ್‌' ಹೇಳಿದ್ದಾರೆ.

VLC ಬದಲು ನ್ಯಾನೋಕ್ರೆಸ್ಟಲ್‌ ಕನ್ವರ್ಟರ್‌

VLC ಬದಲು ನ್ಯಾನೋಕ್ರೆಸ್ಟಲ್‌ ಕನ್ವರ್ಟರ್‌

ಸಂಶೋಧಕರು VLC ಟೆಕ್ನಾಲಜಿ ಇದ್ದರೂ ಸಹ ಅದರ ಬದಲು ನ್ಯಾನೋಕ್ರೆಸ್ಟಲ್‌ ಕನ್ವರ್ಟರ್‌ ಅನ್ನು ಬಳಸಲಿದ್ದು, ಅದು ಹೆಚ್ಚಿನ ಡಾಟಾ ರೇಟ್‌ ನೀಡಲಿದೆಯಂತೆ. ಇದನ್ನು 8 ನ್ಯಾನೋಮೀಟರ್‌ ಗಳ ಗಾತ್ರದ ಸೀಸಿಯಮ್ ಗಾಜಿನ ಬ್ರೋಮೈಡ್‌ನಿಂದ ರಚಿಸಲಾಗಿದೆ.

 ಆಪ್ಟಿಕಲ್ ಹೊರಸೂಸುವಿಕೆ ನಿರ್ವಹಣೆ

ಆಪ್ಟಿಕಲ್ ಹೊರಸೂಸುವಿಕೆ ನಿರ್ವಹಣೆ

ನ್ಯಾನೋಕ್ರೆಸ್ಟಲ್‌ ಹೊರಸೂಸುವಕೆ ನಿರ್ವಹಣೆ ಫ್ರಿಕ್ವೆನ್ಸಿ 491 ಮೆಗಾಹರ್ಟ್ಸ್ ಇರಲಿದ್ದು, ರಂಜಕ ಬಳಸುವುದಕ್ಕಂತ 40 ಪಟ್ಟು ವೇಗ ಹೆಚ್ಚಿರಲಿದೆ. ಅಲ್ಲದೇ ಡಾಟಾ ಸಂಚಾರ ಒಂದು ಸೆಕೆಂಡ್‌ಗೆ 2 ಶತಕೋಟಿ ಬಿಟ್‌ ಇರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಟೆಕ್ನಾಲಜಿ ಅಭಿವೃದ್ದಿಗೊಂಡು ಯಾವಾಗ ಜನರಿಗೆ ತಲುಪುತ್ತದೆ ಎಂಬ ಬಗ್ಗೆ ಮಾಹಿತಿ ಅಧಿಕೃತವಾಗಿ ತಿಳಿದುಬಂದಿಲ್ಲ.

Best Mobiles in India

Read more about:
English summary
New nano-material promises 2GB data speed per second. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X