ಬಾಹುಬಲಿಯ ಸೆಲ್ಫಿ ವಿಡಿಯೋ ಇಲ್ಲಿದೇ ನೋಡಿ..!!

ಸ್ರೊ ವಿಜ್ಞಾನಿಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಜಿಎಸ್‌ಎಲ್‌ವಿ ಮಾರ್ಕ್‌-III ರಾಕೆಟ್ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋ ಇದಾಗಿದೆ.

|

ಬಾಹುಬಲಿ ಸೆಲ್ಫಿ ವಿಡಿಯೋ ಎಂದ ತಕ್ಷಣ ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದ ವಿಡಿಯೋ ಅಲ್ಲ, ಇಸ್ರೊ ವಿಜ್ಞಾನಿಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಜಿಎಸ್‌ಎಲ್‌ವಿ ಮಾರ್ಕ್‌-III ರಾಕೆಟ್ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋ ಇದಾಗಿದೆ.

ಬಾಹುಬಲಿಯ ಸೆಲ್ಫಿ ವಿಡಿಯೋ ಇಲ್ಲಿದೇ ನೋಡಿ..!!

ಓದಿರಿ: ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 5 ರೂ.ಗೆ ಅನ್ಲಿಮಿಟೆಡ್ ಡೇಟಾ..!!!

ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯಂತ ತೂಕದ ರಾಕೆಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಎಸ್‌ಎಲ್‌ವಿ ಮಾರ್ಕ್‌-III ಉಪಗ್ರಹ ಉಡಾವಣಾ ವಾಹನಕ್ಕೆ ಬಾಹುಬಲಿ ಎಂದು ಅಡ್ಡ ಹೆಸರಿಡಲಾಗಿದ್ದು, ಇದು ಭೂಮಿಯಿಂದ ಯಾನ ಆರಂಭಿಸಿದರಿಂದ ಕ್ಷಣದಿಂದ ಹಿಡಿದು ತನ್ನ ಕಾರ್ಯವನ್ನು ಮುಗಿಸುವವರೆಗೂ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಇಸ್ರೋ ಅದನ್ನು ಬಿಡುಗಡೆ ಮಾಡಿದೆ.

ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತು ಭೂಮಿಯಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಜಿಎಸ್‌ಎಲ್‌ವಿ ಮಾರ್ಕ್‌-III ಸಾಗಿದ ಹಾದಿಯ ಪ್ರತಿ ಹಂತವೂ ಸದ್ಯ ಬಿಡುಗಡೆಗೊಂಡಿರುವ ಸೆಲ್ಫಿ ವಿಡಿಯೋದಲ್ಲಿ ದಾಖಲಾಗಿದೆ.

ಬಾಹುಬಲಿಯ ಸೆಲ್ಫಿ ವಿಡಿಯೋ ಇಲ್ಲಿದೇ ನೋಡಿ..!!

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

ಆಂಧ್ರಪ್ರದೇಶದ ರಾಕೆಟ್ ಉಡಾವಣಾ ಕೇಂದ್ರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪ್ರಯಾಣ ಆರಂಭಿಸಿದ ಜಿಎಸ್‌ಎಲ್‌ವಿ ಮಾರ್ಕ್‌-III ರಾಕೆಟ್‌, ನಿಖರವಾಗಿ 16 ನಿಮಿಷಗಳಲ್ಲಿ ಹೊತ್ತು ಹೊಗಿದ್ದ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿತ್ತು.

4000 ಕೆಜಿ ಭಾರದ ಉಪಗ್ರಹಗಳನ್ನು ಹೊರುವ ಸಾಮರ್ಥ್ಯವಿರುವ ಜಿಎಸ್‌ಎಲ್‌ವಿ ಮಾರ್ಕ್‌-III, 3,136 ಕೆಜಿ ತೂಕದ ಜಿಸ್ಯಾಟ್‌-19 ಉಪಗ್ರಹವನ್ನು ಸೋಮವಾರ ಭೂಸ್ಥಿರ ಕಕ್ಷೆಗೆ ಸೇರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದೆ.ಇದರಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಪ್ರತಿ ಹಂತವನ್ನು ಚಿತ್ರೀಕರಿಸಿಕೊಂಡು ಕಳುಹಿಸಿದೆ.

ವಿಡಿಯೋ ನೋಡಿ:

Best Mobiles in India

Read more about:
English summary
GSLV Mk III took 'selfies" during launch and later, from space. ISRO's mammoth 640-tonne satellite could carry India's astronauts to space one day. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X