ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು

By Suneel
|

ಫೇಸ್‌ಬುಕ್‌ ನೆನ್ನೆ ತಾನೆ ತನ್ನ 12ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ಫೇಸ್‌ಬುಕ್‌ ಬಳಕೆದಾರರಿಗೆಲ್ಲಾ ತಿಳಿದಿರಬಹುದು. ಇದೇ ಖುಷಿಯಲ್ಲಿ ಫೇಸ್‌ಬುಕ್‌ ತನ್ನ ಬಗೆಗಿನ 12 ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದೆ.

ಓದಿರಿ :ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ

ಪ್ರಪಂಚದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು ಅಂದ್ರೆ ಚೀನ. ಆದ್ರೆ ಫೇಸ್‌ಬುಕ್‌ ಚೀನ ಜನಸಂಖ್ಯೆಯನ್ನು ಮೀರಿಸಿ ಅಲ್ಲಿನ ಜನಸಂಖ್ಯೆಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗಾದರೆ ಬನ್ನಿ ಫೇಸ್‌ಬುಕ್‌ ಬಗೆಗಿನ ಕುತೂಹಲಕಾರಿ ವಿಷಯಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

 ಭಾರತ ಫೇಸ್‌ಬುಕ್‌ಗೆ ಅತಿದೊಡ್ಡ ಮಾರುಕಟ್ಟೆ

ಭಾರತ ಫೇಸ್‌ಬುಕ್‌ಗೆ ಅತಿದೊಡ್ಡ ಮಾರುಕಟ್ಟೆ

ಫೇಸ್‌ಬುಕ್‌ಗೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಫೇಸ್‌ಬುಕ್‌ ಪ್ರಸ್ತುತದಲ್ಲಿ 1.6 ಶತಕೋಟಿ ದಿನನಿತ್ಯ ಬಳಕೆದಾರರನ್ನು ಹೊಂದಿದೆ. 2015 ರ ಮಧ್ಯಾಂತರದಲ್ಲಿ ಫೇಸ್‌ಬುಕ್‌ 125 ಶತಕೋಟಿ ಬಳಕೆದಾರರನ್ನು ಹೊಂದಿತ್ತು. 2016 ರಲ್ಲಿ ಭಾರತದಲ್ಲಿ ಫೇಸ್‌ಬುಕ್‌ 161 ಶತಕೋಟಿ ದಾಟುವ ನಿರೀಕ್ಷೆ ಹೊಂದಿದೆ.

ಅಮೇರಿಕ ಹಣದ ಮಾರುಕಟ್ಟೆ

ಅಮೇರಿಕ ಹಣದ ಮಾರುಕಟ್ಟೆ

ಫೇಸ್‌ಬುಕ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆ. ಆದರೆ ಅಮೇರಿಕ ಮಾತ್ರ ತನ್ನ ಲಾಭಕ್ಕೆ ಉತ್ತಮ ಮಾರುಕಟ್ಟೆಯಾಗಿದೆ.

ಫೇಸ್‌ಬುಕ್‌ ಬಳಕೆದಾರರ ಸರಾಸರಿ ಮೌಲ್ಯ

ಫೇಸ್‌ಬುಕ್‌ ಬಳಕೆದಾರರ ಸರಾಸರಿ ಮೌಲ್ಯ

ಪ್ರತಿ ತ್ರೈಮಾಸಿಕದಲ್ಲಿ ಪ್ರಪಂಚದಾದ್ಯಂತ ಪ್ರತಿ ಫೇಸ್‌ಬುಕ್‌ ಬಳಕೆದಾರನಿಂದ $3.73 (251.87 ರೂ) ಮೌಲ್ಯವನ್ನು ಸಂಪಾದಿಸಲಾಗುತ್ತದೆಯಂತೆ. ಇದನ್ನು ಇತ್ತೀಚಿನ ಲಾಭದ ವರದಿಯ ಪ್ರಕಾರ ಹೇಳಲಾಗಿದೆ.

ಫೇಸ್‌ಬುಕ್‌ ಸಿನಿಮಾ

ಫೇಸ್‌ಬುಕ್‌ ಸಿನಿಮಾ

ಫೇಸ್‌ಬುಕ್‌ 2010ರಲ್ಲಿ ಫೇಸ್‌ಬುಕ್‌ ಮೂಲದ ಬಗ್ಗೆ ನಿರ್ಮಿಸಲಾದ "ದಿ ಸೋಶಿಯಲ್‌ ನೆಟ್‌ವರ್ಕ್‌" ಸಿನಿಮಾವು 4 ಗೋಲ್ಡೆನ್‌ಗೋಬ್ಸ್‌ಪ್ರಶಸ್ತಿ ಪಡೆದಿದ್ದು, ಅಲ್ಲದೇ ಉತ್ತಮ ಸಿನಿಮಾ ಮತ್ತು ಉತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದಿದೆ. ಇನ್ನೊಂದು ವಿಶೇಷತೆ ಎಂದರೆ 3 ಆಸ್ಕರ್‌ ಪ್ರಶಸ್ತಿಯನ್ನು ಉತ್ತಮ ಸ್ಕ್ರೀನ್‌ ಪ್ಲೇ ಗಾಗಿ ಪಡೆದಿದೆ.

2008 ರಲ್ಲಿ ಟಾಪ್‌ ಮೊದಲ ಸಾಮಾಜಿಕ ಜಾಲತಾಣ

2008 ರಲ್ಲಿ ಟಾಪ್‌ ಮೊದಲ ಸಾಮಾಜಿಕ ಜಾಲತಾಣ

ಫೇಸ್‌ಬುಕ್‌ 2008ರಲ್ಲಿ ಟಾಪ್‌ ಮೊದಲ ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿತು.

 ಮೊದಲ ಬಂಡವಾಳ ಹೂಡಿಕೆ

ಮೊದಲ ಬಂಡವಾಳ ಹೂಡಿಕೆ

ಫೇಸ್‌ಬುಕ್‌ ಮೊದಲ ಬಂಡವಾಳ ಹೂಡಿಕೆಯಾಗಿ $500,000 (33,765,225 ರೂಪಾಯಿಗಳು) ಹಣವನ್ನು ಪೇಪಾಲ್‌ ಸಹ-ಸಂಸ್ಥಾಪಕರಾದ ಪೀಟರ್ ಥಿಯೆಲ್‌ರಿಂದ ಪಡೆಯಿತು.

ಗೂಗಲ್‌ ದಿಕ್ಕರಿಸಿ, ಮೈಕ್ರೋಸಾಫ್ಟ್‌ ಸ್ವೀಕಾರ

ಗೂಗಲ್‌ ದಿಕ್ಕರಿಸಿ, ಮೈಕ್ರೋಸಾಫ್ಟ್‌ ಸ್ವೀಕಾರ

ಸರ್ಚ್ ಇಂಜಿನ್‌ ಗೂಗಲ್‌ ಅನ್ನು ದಿಕ್ಕರಿಸಿ, 2007 ರಲ್ಲಿ ಫೇಸ್‌ಬುಕ್‌ ತನ್ನ 1.7% ಪಾಲನ್ನು $240 ಮೌಲ್ಯಕ್ಕೆ ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿತು.

ಸ್ನಾಪ್‌ಚಾಟ್ ಬಿಡ್ ವಿಫಲ

ಸ್ನಾಪ್‌ಚಾಟ್ ಬಿಡ್ ವಿಫಲ

ನವೆಂಬರ್‌ 2013 ರಲ್ಲಿ ಸ್ನಾಪ್‌ಚಾಟ್‌ ಮೆಸೇಜಿಂಗ್‌ ಆಪ್‌ ಫೇಸ್‌ಬುಕ್‌ನ $3 ಬಿಲಿಯನ್‌ (202 ಶತಕೋಟಿ) ಸ್ವಾಧೀನ ಪ್ರಸ್ತಾವವನ್ನು ತಿರಸ್ಕರಿಸಿತು. ನಂತರದಲ್ಲಿ ಫೇಸ್‌ಬುಕ್‌ನ ದೊಡ್ಡ ಸ್ವಾಧೀನತೆಗಳೆಂದರೆ ಇನ್ಸ್ಟಗ್ರಾಂ $1 ಬಿಲಿಯನ್‌ (2012), ವಾಟ್ಸಾಪ್‌ 19 ಬಿಲಿಯನ್‌( 2014), ಓಕುಲಸ್ ವಿಆರ್‌$2 ಬಿಲಿಯನ್ (2014).

ಐಸ್‌ಲ್ಯಾಂಡ್‌ ಸಂವಿಧಾನ ತಿದ್ದುಪಡಿ

ಐಸ್‌ಲ್ಯಾಂಡ್‌ ಸಂವಿಧಾನ ತಿದ್ದುಪಡಿ

2011 ಜೂನ್‌ನಲ್ಲಿ ಯೂರೋಪ್‌ನ ಐಸ್‌ಲ್ಯಾಂಡ್‌ ದೇಶ ತನ್ನ ದೇಶದಲ್ಲಿನ ಜನರಿಂದ ಫೇಸ್‌ಬುಕ್‌ ಮತ್ತು ಟ್ವಿಟರ್‌ಮೂಲಕ ಸಲಹೆಗಳನ್ನು ಸ್ವೀಕರಿಸಿ ಸಂವಿಧಾನವನ್ನು ಪುನರ್‌ರಚಿಸಿತು.

ಸಿಇಓ ಶಾರ್ಟ್‌ಕಟ್‌

ಸಿಇಓ ಶಾರ್ಟ್‌ಕಟ್‌

ಫೇಸ್‌ಬುಕ್‌ ಯುಆರ್‌ಎಲ್‌ನ ಮುಂದೆ ನಂಬರ್‌ 4 ಅನ್ನು ಸೇರಿಸುವುದರೊಂದಿಗೆ ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ರವರ ಫೇಸ್‌ಬುಕ್‌ ಪೇಜ್‌ಗೆ ನೇರವಾಗಿ ಹೋಗಬಹುದಾಗಿದೆ. ಇದು ಇನ್ನೊಂದು ವಿಶೇಷತೆಯಾಗಿದೆ. ಉದಾಹರಣೆಗೆ www.facebook.com/4

 ಫೇಸ್‌ಬುಕ್‌ ಲೈಕ್‌ ಬಟನ್‌

ಫೇಸ್‌ಬುಕ್‌ ಲೈಕ್‌ ಬಟನ್‌

ಫೇಸ್‌ಬುಕ್‌, ಡೊಮೇನ್‌ ಮಾಲಿಕನದು. ಅದು ತನ್ನನ್ನೇ ತಾನು ಹೀಗಳೆಯಲು "I hate Facebook" ಬಟನ್‌ಹೊಂದಿದೆ. ಆದರೆ ಅದಕ್ಕೆ ಬಟನ್‌ ಹೊತ್ತಲು ನೀವು ಲೈಕ್‌ ಬಟನ್‌ ಅನ್ನೇ ಪ್ರೆಸ್‌ ಮಾಡಬೇಕು.

 ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಫೇಸ್‌ಬುಕ್‌ನ ಪ್ರಾಥಮಿಕ ಬಣ್ಣ ನೀಲಿಯಾಗಿದ್ದು, ಜುಕರ್‌ಬರ್ಗ್‌ ಸಂದರ್ಶನವೊಂದರಲ್ಲಿ ನೀಲಿ ಬಣ್ಣ ನನಗೆ ಅತಿ ಹೆಚ್ಚು ಇಷ್ಟವಾದ ಬಣ್ಣ, ಆದ್ದರಿಂದ ನಾನು ಎಲ್ಲವನ್ನು ನೀಲಿಯಲ್ಲಿಯೇ ನೋಡುತ್ತೇನೆ ಎಂದಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?

ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳುವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!

ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲುಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
12 mind blowing facts as Facebook turns 12. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X