ಫೇಸ್‌ಬುಕ್ ವೀಡಯೊಗಳನ್ನು ಟಿವಿಯಲ್ಲಿ ಸ್ಟ್ರೀಮ್‌ ಮಾಡುವುದು ಹೇಗೆ?

Written By:

ಫೇಸ್‌ಬುಕ್, ವೀಡಿಯೊ ಸೇವೆಯನ್ನು ಹೆಚ್ಚು ಸಮರ್ಥಗೊಳಿಸಲು ಫೇಸ್‌ಬುಕ್‌ ಲೈವ್, ವೀಡಿಯೋ ಡೌನ್‌ಲೋಡ್‌ ಟ್ರಿಕ್ಸ್ ಮತ್ತು ಇತರೆ ಫೀಚರ್‌ಗಳನ್ನು ಪರಿಚಯಿಸಿದೆ.

ಫೇಸ್‌ಬುಕ್ ವೀಡಯೊಗಳನ್ನು ಟಿವಿಯಲ್ಲಿ ಸ್ಟ್ರೀಮ್‌ ಮಾಡುವುದು ಹೇಗೆ?

ಫೇಸ್‌ಬುಕ್‌ನ ಹಲವು ಹೊಸ ಫೀಚರ್‌ಗಳಿಂದ ಇಂದು ಸ್ನೇಹಿತರ ವೈಯಕ್ತಿಕ ಚಟುವಟಿಕೆಗಳನ್ನು ನೋಡಬಹುದು, ಡೀಲಿಸಿಯಸ್ ಆಹಾರಗಳನ್ನು ತಯಾರಿಸುವುದನ್ನು ಕಲಿಯಬಹುದು, ಲೇಟೆಸ್ಟ್‌ ಎಲೆಕ್ಷನ್ ಬಗ್ಗೆ ಲೈವ್ ಮಾಹಿತಿ ನೋಡಬಹುದು. ಫೇಸ್‌ಬುಕ್ ವೀಡಿಯೊ ನಿರಂತರವಾಗಿ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸಹಾಯಕವಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಅಂದಹಾಗೆ ವಿಶೇಷ ಅಂದ್ರೆ ಫೇಸ್‌ಬುಕ್‌ ತನ್ನ ವೀಡಿಯೊ ಫೀಚರ್‌ ಅನ್ನು ಇನ್ನೊಂದು ಉತ್ತಮ ಹಂತಕ್ಕೆ ಕೊಂಡೊಯ್ಯುತ್ತಿದೆ. ಹೌದು, ಫೇಸ್‌ಬುಕ್ ಗೂಗಲ್‌ ಕ್ರೋಮ್‌ಕಾಸ್ಟ್‌ ಮತ್ತು ಆಪಲ್ ಟಿವಿ'ಯೊಂದಿಗೆ ಕೈಜೋಡಿಸುವುದರೊಂದಿಗೆ ಬಳಕೆದಾರರು ವೀಡಯೊಗಳನ್ನು ನೋಡುವುದನ್ನು ಇನ್ನಷ್ಟು ಸುಲಭಗೊಳಿಸಿದೆ. ಅಂದ್ರೆ ಇನ್ನುಮುಂದೆ ಫೇಸ್‌ಬುಕ್ ವೀಡಿಯೊಗಳನ್ನು ದೊಡ್ಡ ಸ್ಕ್ರೀನ್‌ಗಳಾದ ಟಿವಿಗಳಲ್ಲಿ ನೋಡಬಹುದು.

ಫೇಸ್‌ಬುಕ್‌ನ ಈ ಸರ್ವೀಸ್ ಎಂಜಾಯ್‌ಗಾಗಿ ಅಗತ್ಯವಾದ ಅಂಶಗಳು ಏನು?
ಫೇಸ್‌ಬುಕ್‌ನ ಅಧಿಕೃತ ಬ್ಲಾಗ್‌ ಪ್ರಕಾರ, ಆಪಲ್‌ ಟಿವಿ, ಏರ್‌ಪ್ಲೇ ಎನೇಬಲ್ ಡಿವೈಸ್‌ಗಳು, ಕ್ರೋಮ್‌ಕಾಸ್ಟ್ ಮತ್ತು ಇತರೆ ಗೂಗಲ್‌ ಕಾಸ್ಟ್ ಎನೇಬಲ್‌ ಡಿವೈಸ್‌ಗಳು ಅಥವಾ ನಿಮ್ಮ ವೆಬ್‌ ಬ್ರೌಸರ್‌ ಇದ್ದಲ್ಲಿ, ಸುಲಭವಾಗಿ ಫೇಸ್‌ಬುಕ್‌ ವೀಡಿಯೊಗಳನ್ನು ಟಿವಿಗೆ ಸ್ಟ್ರೀಮ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್ ವೀಡಯೊಗಳನ್ನು ಟಿವಿಯಲ್ಲಿ ಸ್ಟ್ರೀಮ್‌ ಮಾಡುವುದು ಹೇಗೆ?

ಈ ಕೆಳಗಿನ 4 ಹಂತಗಳನ್ನು ಫಾಲೋ ಮಾಡಿ
- ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ನೋಡಲು ಬಯಸುವ ವೀಡಿಯೊವನ್ನು ಮೊದಲು ಆಯ್ಕೆ ಮಾಡಿ.

- ನಂತರ ಬಲಭಾಗದಲ್ಲಿರುವ ಟಿವಿ ಸಿಂಬಲ್‌ ಮೇಲೆ ಕ್ಲಿಕ್ ಮಾಡಿ

- ವೀಡಯೊವನ್ನು ಸ್ಟ್ರೀಮ್‌ ಮಾಡಲು ಡಿವೈಸ್‌ ಅನ್ನು ಸೆಲೆಕ್ಟ್‌ ಮಾಡಿ.

- ನಂತರ ನಿಮ್ಮ ಟಿವಿಯಲ್ಲಿ ಫೇಸ್‌ಬುಕ್ ವೀಡಿಯೊವನ್ನು ಎಂಜಾಯ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್ ವೀಡಯೊಗಳನ್ನು ಟಿವಿಯಲ್ಲಿ ಸ್ಟ್ರೀಮ್‌ ಮಾಡುವುದು ಹೇಗೆ?

ಮತ್ತೇನು ಮಾಡಬಹುದು?
ನಿಮ್ಮ ಟಿವಿಯಲ್ಲಿ ಫೇಸ್‌ಬುಕ್‌ ವೀಡಿಯೊಗಳನ್ನು ನೋಡುವಾಗ, ಹಿಂದೆ ಹೋಗಿ ನ್ಯೂಸ್‌ ಫೀಡ್‌ ಅನ್ನು ಅದೇ ಡಿವೈಸ್‌ನಲ್ಲಿ ನೋಡಬಹುದು. ವೀಡಿಯೊ ಪ್ಲೇ ಆಗುತ್ತಿದ್ದರು, ಸಹ ಇತರೆ ಸ್ಟೋರಿಗಳನ್ನು ಟಿವಿಯಲ್ಲಿ ನೋಡಬಹುದು. ಫೇಸ್‌ಬುಕ್ ಲೈವ್ ವೀಡಿಯೊವನ್ನು ನಿಮ್ಮ ಟಿವಿಯಲ್ಲಿ ಸ್ಟ್ರೀಮ್ ಮಾಡುತ್ತಿದ್ದಲ್ಲಿ, ರಿಯಲ್‌ ಟೈಮ್‌ ರಿಯಾಕ್ಷನ್‌ ಅನ್ನು ಸ್ಕ್ರೀನ್‌ನಲ್ಲಿ ನೋಡಬಹುದು. ಅಲ್ಲದೇ ರಿಯಲ್ ಟೈಮ್‌ ರಿಯಾಕ್ಷನ್‌ಗೆ ಪ್ರತಿಕ್ರಿಯೆಯನ್ನು ಸಹ ನೀಡಬಹುದು. ವಿಮರ್ಶೆ ಮಾಡಬಹುದು.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Here's How You Can Stream Facebook Videos on TV. To know more visit kannada.gizbot.com
Please Wait while comments are loading...
Opinion Poll

Social Counting