ಎಚ್ಚರ! ಈಕೆ ನಿಮ್ಮ ಫೇಸ್‌ಬುಕ್‌ನಲ್ಲಿದ್ದರೆ ಈಗಲೇ ಬ್ಲಾಕ್ ಮಾಡಿ

By Shwetha
|

ಫೇಸ್‌ಬುಕ್ ಜಾಲತಾಣ ಇಂದು ಹೆಚ್ಚು ವೇಗದಲ್ಲಿ ಬಳಕೆದಾರರನ್ನು ಸಂಪರ್ಕಪಡಿಸುತ್ತಿದೆ. ಆದರೆ ಈ ತಾಣ ಬಳಕೆದಾರರಿಗೆ ಹೇಗೆ ಸಹಕಾರಿಯಾಗಿದೆಯೋ ಅಂತೆಯೇ ಅಪಾಯದ ಸುಳಿಯಲ್ಲೇ ಬಳಕೆದಾರರನ್ನು ಕೆಡಹುವ ಸ್ಥಳವೂ ಆಗಿದೆ. ಫೇಸ್‌ಬುಕ್‌ಗೆ ಈ ಉದ್ದೇಶ ಇಲ್ಲದೇ ಹೋದರೂ ಇದನ್ನು ಬಳಸುವ ವ್ಯಕ್ತಿಗಳು ಈ ತಾಣವನ್ನು ತಮ್ಮ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಾವು ಇಷ್ಟೆಲ್ಲಾ ಪೀಠಿಕೆಯನ್ನು ಈ ತಾಣದ ಬಗೆಗೆ ನೀಡುತ್ತಿರುವುದು ಆಘಾತಕಾರಿಯಾದ ವಿಷಯವೊಂದನ್ನು ಅರಹುವುದಕ್ಕಾಗಿ.

ಒಬ್ಬ ಹೆಂಗಸು ತನ್ನದೇ ಬೇರೆ ಬೇರೆ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಬಳಕೆದಾರರನ್ನು ಮೋಸದ ಸುಳಿಗೆ ಒಡ್ಡುತ್ತಿದ್ದಾಳೆ ಈಕೆಯ ಬಗ್ಗೆಯೇ ನಾವು ಇಂದಿಲ್ಲಿ ತಿಳಿಸುತ್ತಿದ್ದು ಈಕೆ ಏನಾದರೂ ನಿಮ್ಮ ಸ್ನೇಹಿತರ ಗುಂಪಿನಲ್ಲಿದ್ದರೆ ಮುಲಾಜಿಲ್ಲದೆ ಆಕೆಯನ್ನು ಬ್ಲಾಕ್ ಮಾಡಿ.

ಓದಿರಿ:'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

#1

#1

ಈಕೆಯ ಹೆಸರು ಮಧು ಶಾ ಎಂದಾಗಿದ್ದು, ಬರೋಬ್ಬರಿ 30 ಪ್ರತ್ಯೇಕ ಖಾತೆಯನ್ನು ಫೇಸ್‌ಬುಕ್‌ನಲ್ಲಿ ಈಕೆ ಹೊಂದಿದ್ದಾಳೆ. ಈಕೆಯ ನಿಜವಾದ ಫೋಟೋ ಹೆಸರು ಇನ್ನೂ ಖಾತ್ರಿಯಾಗಿಲ್ಲ. ಆಕೆಯ ಎಲ್ಲಾ ಪ್ರೊಫೈಲ್ ಚಿತ್ರಗಳೂ ಒಂದೇ ಆಗಿವೆ.

#2

#2

ಈಕೆಯ ಈ ಪ್ರೊಫೈಲ್ ನಾಟಕವನ್ನು ಎಚ್ಚರಿಸುವ ಸಲುವಾಗಿ ಹೆಚ್ಚಿನ ಬಳಕೆದಾರರು ಈಕೆಯ ಮಾಹಿತಿಯಿರುವ ಪ್ರೊಫೈಲ್ ಅನ್ನು ಶೇರ್ ಮಾಡಿದ್ದು ಇದೊಂದು ಮೋಸದ ಜಾಲವಾಗಿದೆ ಎಂಬುದು ತಿಳಿದು ಬಂದಿದೆ.

#3

#3

ಫೇಸ್‌ಬುಕ್ ಬಳಕೆದಾರರಾದ ಪವನ್ ಹೇಳುವಂತೆ ನಾಲ್ಕು ವರ್ಷಗಳಿಂದ ಮಧುವಿನೊಂದಿಗೆ ಈತ 150 ಮ್ಯೂಚುವಲ್ ಸ್ನೇಹಿತರನ್ನು ಹೊಂದಿದ್ದಾರೆ ಎಂದಾಗಿದೆ. ಆದರೆ ಪರಿಶೀಲನೆ ಮಾಡಿದ ನಂತರ, ಮಧುವನ್ನು ಈತನ ಯಾರೊಬ್ಬ ಸ್ನೇಹಿತರೂ ತಿಳಿದಿಲ್ಲ ಎಂಬುದಾಗಿದೆ.

#4

#4

ಭಾರತದಲ್ಲಿರುವ ಜನರನ್ನು ಮಾತ್ರ ಸೇರಿಸಿಕೊಂಡಂತೆ ಖಾತೆ ಗೋಚರಿಸುತ್ತಿದ್ದು, ಆದರೆ ಇತರ ರಾಷ್ಟ್ರಗಳ ಸ್ನೇಹಿತರೂ ಇದರಲ್ಲಿರುವುದು ಪತ್ತೆಯಾಗಿದೆ.

#5

#5

ತನ್ನ ಚಿತ್ರವನ್ನು ಈ ಫೇಸ್‌ಬುಕ್ ಪ್ರೊಫೈಲ್‌ಗಳಿಗೆ ಬಳಸಿರುವ ಬಗ್ಗೆ ಈ ಮಹಿಳೆಗೆ ಗೊತ್ತಿದೆಯೇ ಇಲ್ಲವೇ ಎಂಬದರ ಬಗ್ಗೆಯೂ ಮಾಹಿತಿ ಇಲ್ಲ.

#6

#6

ಪವನ್ ಅವರು ಫೇಸ್‌ಬುಕ್‌ನಲ್ಲಿ ಸ್ವತಃ ಬರೆದುಕೊಂಡಿದ್ದು ಮಧು ಶಾ ನಿಮ್ಮ ಪ್ರೊಫೈಲ್‌ನಲ್ಲಿದ್ದರೆ ಕೂಡಲೇ ಬ್ಲಾಕ್ ಮಾಡಿ ಇದನ್ನು ಹಗುರವಾಗಿ ಪರಿಗಣಿಸಬೇಡಿ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

#7

#7

ಈಕೆಯ ಹೆಸರು ಮತ್ತು ಫೋಟೋವುಳ್ಳ 34 ಪ್ರತ್ಯೇಕ ಖಾತೆಗಳು ಇದೀಗ ಪತ್ತೆಯಾಗಿದ್ದು, ಬೇರೆ ಬೇರೆ ಸೈಟ್‌ಗಳಲ್ಲಿದೆ. ನಾಲ್ಕುವರ್ಷಗಳಿಂದ ಮಧು ಶಾಳ 34 ಫೇಕ್ ಪ್ರೊಫೈಲ್ ಅನ್ನು ಪವನ್ ಹೊಂದಿರುವುದೇ ಅವರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಎಂದು ಹೇಳಿದ್ದಾರೆ.

#8

#8

ಈ ರೀತಿ ಖಾತೆಯನ್ನು ಹೊಂದಿಸಿರುವುದಕ್ಕೆ ಕಾರಣವೇನು ಎಂಬುದೂ ಇನ್ನೂ ಗೊತ್ತಾಗಿಲ್ಲ ಅದಾಗ್ಯೂ ಇದೊಂದು ಮೋಸದ ಬಲೆಯಾಗಿದ್ದು, ಬಳಕೆದಾರ ಹೆಸರು, ಪಾಸ್‌ವರ್ಡ್‌ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ದೋಚುವ ಹುನ್ನಾರ ಇದರಲ್ಲಿ ಅಡಗಿದೆ ಎಂಬುದು ಪವನ್ ಶಂಕೆಯಾಗಿದೆ.

#9

#9

ಫೇಸ್‌ಬುಕ್ ಇಂಡಿಯಾ ಈ ಫೇಕ್ ಖಾತೆ ಬಗ್ಗೆ ತನಿಖೆಯನ್ನು ನಡೆಸುತ್ತಿದೆ ಎಂಬುದಾಗಿ ವರದಿಯಲ್ಲಿ ತಿಳಿಸಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು</a><br /><a href=ಮಂಗಳ ಗ್ರಹಕ್ಕೂ ಅಪ್ಪಳಿಸಿದ ಬೃಹತ್ ಸುನಾಮಿ
ನಾವು ಕಂಡರಿಯದ ದೈತ್ಯಮಾನವರು ಭೂಮಿಯಲ್ಲಿ ಇದ್ದದ್ದು ಹೌದು" title="ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು
ಮಂಗಳ ಗ್ರಹಕ್ಕೂ ಅಪ್ಪಳಿಸಿದ ಬೃಹತ್ ಸುನಾಮಿ
ನಾವು ಕಂಡರಿಯದ ದೈತ್ಯಮಾನವರು ಭೂಮಿಯಲ್ಲಿ ಇದ್ದದ್ದು ಹೌದು" loading="lazy" width="100" height="56" />ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು
ಮಂಗಳ ಗ್ರಹಕ್ಕೂ ಅಪ್ಪಳಿಸಿದ ಬೃಹತ್ ಸುನಾಮಿ
ನಾವು ಕಂಡರಿಯದ ದೈತ್ಯಮಾನವರು ಭೂಮಿಯಲ್ಲಿ ಇದ್ದದ್ದು ಹೌದು

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
More than 30 separate profiles exist for Madhu Shah, who is not believed to be a real person, all with a profile picture featuring the same woman.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X