ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ

By Suneel
|

ಸಾಮಾಜಿಕ ಜಾಲತಾಣಗಳು ಸಂವಹನಕ್ಕೆ ಉತ್ತಮ ಉಪಯೋಗಗಳನ್ನು ನೀಡುತ್ತವೆ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ವಿಷಯ ಅಂದ್ರೆ ಎಷ್ಟು ಉಪಯೋಗವಿದೆಯೋ ಅಷ್ಟೇ ಅನಾನುಕೂಲಗಳು ಎದುರಾಗುತ್ತವೆ ಎಂಬುದು. ಯಾಕೆ ಅಂತಿರಾ ? ಅಧ್ಯಯನವೊಂದು ಸಾಮಾಜಿಕ ಜಾಲತಾಣ ಅತಿಯಾಗಿ ಬಳಸುವುದರಿಂದ ರಾತ್ರಿ ನಿದ್ರೆಗೆ ಅಧಿಕವಾದ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ.

ಓದಿರಿ :ಆಕರ್ಷಕ ಫೇಸ್‌ಬುಕ್ ಪ್ರೊಫೈಲ್‌ನಿಂದ ನಿಮಗೆ ಕೈತುಂಬಾ ಸಂಬಳ

ನಿದ್ರಾ ಭಂಗ

ನಿದ್ರಾ ಭಂಗ

ಅಧಿಕವಾಗಿ ಸಾಮಾಜಿಕ ಜಾಲತಾಣ ಬಳಸುವುದು ನಿದ್ರೆಗೆ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಪಿಟ್ಸ್ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನ ಹೇಳಿದೆ.

ಸಾಮಾಜಿಕ ಜಾಲತಾಣ ಬಳಕೆ

ಸಾಮಾಜಿಕ ಜಾಲತಾಣ ಬಳಕೆ

ಹೆಚ್ಚು ಸಮಯ ಸೋಶಿಯಲ್‌ ಮೀಡಿಯಾ ಬಳಕೆಯಿಂದ ನಿದ್ರೆಯ ಸಮಯ ಕಡಿಮೆಯಾಗುತ್ತದೆ.

 ಪ್ರಶ್ನಾವಳಿ

ಪ್ರಶ್ನಾವಳಿ

ಅಮೇರಿಕದಲ್ಲಿ 19 ರಿಂದ 32 ವಯಸ್ಸಿನ 1,788 ಯುವಜನತೆಯು ಸೋಶಿಯಲ್‌ ಮೀಡಿಯಾ ಬಳಕೆಯಿಂದ ಆಗುವ ಸಮಸ್ಯೆ ಬಗ್ಗೆ ಪ್ರಶ್ನಾವಳಿಗಳಿಗೆ ಉತ್ತರಿಸಿದ್ದಾರೆ. ಈ ಪ್ರಶ್ನೆಗಳು ನಿದ್ರೆಯ ಸಮಸ್ಯೆ ಕುರಿತಂತೆ ಇದ್ದವು. ಫೇಸ್‌ಬುಕ್‌, ಟ್ವಿಟರ್, ಯೂಟ್ಯೂಬ್‌, ಇನ್ಸ್ಟಾಗ್ರಾಂ ಹವ್ಯಾಸಗಳು ನಿದ್ರೆಗೆ ತೊಂದರೆ ಮಾಡುತ್ತವೆ ಎಂಬುದು ಕಂಡುಬಂದಿದೆ.

 ಅಧ್ಯಯನದಲ್ಲಿ ಭಾಗಿಯಾದವರು

ಅಧ್ಯಯನದಲ್ಲಿ ಭಾಗಿಯಾದವರು

ಅಧ್ಯಯನದ ಪ್ರಶ್ನಾವಳಿಗೆ ಉತ್ತರಿಸಿದ ಶೇಕಡ 30 ಯುವಜನತೆ ಅಧಿಕವಾದ ನಿದ್ರಾ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ಹೇಳಿದ್ದಾರೆ. ಬಹುಸಂಖ್ಯಾತರು ಒಂದು ಗಂಟೆಗಿಂತ ಹೆಚ್ಚು ಕಾಲ ಲಾಗಿನ್ ಆಗಿರುವುದಾಗಿ ಹೇಳಿದ್ದಾರೆ.

 ಜೆಸಿಕಾ ಲೆವೆನ್‌ಸನ್‌

ಜೆಸಿಕಾ ಲೆವೆನ್‌ಸನ್‌

ಅಧ್ಯಯನದ ಪ್ರಮುಖ ಲೇಖಕಿ ಜೆಸಿಕಾ ಲೆವೆನ್‌ಸನ್‌ ಆಗಾಗ ಸೋಶಿಯಲ್‌ ಮೀಡಿಯಾ ಚೆಕ್‌ ಮಾಡುವ ಹವ್ಯಾಸದಿಂದ ನಿದ್ರೆ ಮಾಡುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ನಿದ್ರೆ ಸಮಸ್ಯೆಯ ರೋಗಿಗಳಿಗೆ ಅವರ ಸಾಮಾಜಿಕ ಜಾಲತಾಣ ಹವ್ಯಾಸದ ಕುರಿತು ಸಹ ಪ್ರಶ್ನೆಗಳನ್ನು ಇನ್ನುಮುಂದೆ ಕೇಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ಅಧ್ಯಯನ

ಹೆಚ್ಚಿನ ಅಧ್ಯಯನ

ಸಂಶೋಧಕರು, 'ಇನ್ನು ಹೆಚ್ಚು ಅಧ್ಯಯನಗಳನ್ನು ಜೆಸಿಕಾ ಅವರು ಕೈಗೊಂಡು ಪರಿಣಾಮ ಮತ್ತು ಕಾರಣಗಳನ್ನು ಕಂಡುಹಿಡಿಯಬೇಕಿದೆ. ನಿದ್ರೆಯ ಅಭಾವದಿಂದ ಸಾಮಾಜಿಕ ಜಾಲತಾಣ ಬಳಸುತ್ತಿದ್ದಾರೋ ಅಥವಾ ಸಾಮಾಜಿಕ ಜಾಲತಾಣ ಬಳಸುವುದರಿಂದ ನಿದ್ರೆಗೆ ಸಮಸ್ಯೆ ಆಗುತ್ತಿದೆಯೋ ಎಂಬುದನ್ನು ನಿಖರವಾಗಿ ಹೇಳಬೇಕಿದೆ" ಎಂದಿದ್ದಾರೆ.

ತಂತ್ರಜ್ಞಾನ ಕಂಪನಿಗಳಿಂದ ಫೀಚರ್‌ಗಳು

ತಂತ್ರಜ್ಞಾನ ಕಂಪನಿಗಳಿಂದ ಫೀಚರ್‌ಗಳು

ಹಲವು ಟೆಕ್‌ ಕಂಪನಿಗಳು ಈಗಾಗಲೇ ನಿದ್ರೆಗೆ ಸಹಾಯವಾಗುವಂತ ಫೀಚರ್‌ಗಳನ್ನು ತಂದಿವೆ. F.lux ಸಾಫ್ಟ್‌ವೇರ್‌ ಮೊಬೈಲ್‌ ಅಥವಾ ಕಂಪ್ಯೂಟರ್‌ ಸ್ಕ್ರೀನ್‌ ವ್ಯವಸ್ಥೆಗೊಳಿಸುವುದರ ಮುಖಾಂತರ ನಿದ್ರೆಗೆ ಸಹಾಯವಾಗುವ ಫೀಚರ್‌ಹೊಂದಿದೆ.

Best Mobiles in India

English summary
social media use can cause sleep disturbance: study. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X