ಕೊರೊನಾ ಭೀತಿ: ವರ್ಕ್ ಫ್ರಮ್‌ ಹೋಮ್ ಕೆಲಸಕ್ಕೆ ಈ ಆಪ್ಸ್ ನೆರವಾಗಲಿವೆ!


ಜಗತ್ತಿನಾದ್ಯಂತ ಹಬ್ಬುತ್ತಿರುವ ಮಾರಕ ಕೊರೊನಾ ವೈಸರ್ ಕರ್ನಾಟಕದಲ್ಲಿಯೂ ಭಾರಿ ಭೀತಿ ಮೂಡಿಸಿದೆ. ಕೊರೊನಾ ವೈರಸ್‌ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಕೊಳ್ಳುತ್ತಿದ್ದು, ಒಂದು ವಾರಗಳ ಕಾಲ ಚಿತ್ರಮಂದಿರ, ಪಬ್, ಮಾಲ್ ಬಂದ್ ಮಾಡಿದೆ. ಜಾತ್ರೆ, ಸಮಾವೇಶ, ಕಾರ್ಯಕ್ರಮಗಳಿಗೂ ಬ್ರೇಕ್ ಹಾಕಿದೆ. ಇನ್ನು ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯ ಕಾಳಜಿಯಿಂದ ವರ್ಕ್ ಫ್ರಮ್‌ ಹೋಮ್ ಅವಕಾಶ ನೀಡಿವೆ.

Advertisement

ಹೌದು, ಕೊರೊನಾ ವೈರಸ್‌ ಹರಡದಂತೆ ತಡೆಯಲು ಐಟಿ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಗೂಗಲ್, ಟ್ವಿಟ್ಟರ್, ಸೇರಿದಂತೆ ದೊಡ್ಡ ಸಂಸ್ಥೆಗಳು ಸಹ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ಮಾಡಿಕೊಟ್ಟಿವೆ. ಉದ್ಯೋಗಿಗಳು ಮನೆಯಿಂದಲೂ ಆಫೀಸ್‌ನಂತೆಯೆ ಕಾರ್ಯನಿರ್ವಹಿಸಲು ತಂತ್ರಜ್ಞಾನ ನೆರವಾಗಿದೆ.

Advertisement

ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸಲು ಅಗತ್ಯವಾಗುವ ವೀಡಿಯೊ ಕಾನ್ಫರೆನ್ಸ್, ಫೈಲ್‌ಗಳನ್ನು ಹಂಚಿಕೊಳ್ಳುವುದು, ಕ್ಯಾಲೆಂಡರ್‌ ಗಮನಿಸುವುದು, ಡೇಟಾ ಶೇರ್‌ಗೆ ಸೂಕ್ತ ಸೌಲಭ್ಯ ಅಗತ್ಯ. ಇಂತಹ ಅಗತ್ಯ ಕೆಲಸಗಳನ್ನು ಸುಗಮವಾಗಿ ನಡೆಯಲು ಕೆಲವು ಅಪ್ಲಿಕೇಶನ್‌ಗಳು ಪೂರಕವಾಗಿವೆ. ಅಂತಹ ಐದು ಆಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ಬೇಸ್‌ಕ್ಯಾಂಪ್ 3-Basecamp 3

ಬೇಸ್‌ಕ್ಯಾಂಪ್‌ 3 ಆಪ್‌ ಒಂದು collaboration- ಸಹಯೋಗ ತಾಣವಾಗಿದೆ. ಇಲ್ಲಿ ಚಾಟ್‌ ರೂಮ್‌ ಆಯ್ಕೆ ಇದೆ, ಮೆಸೆಜ್ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಫೈಲ್‌ ಟ್ರಾನ್ಸ್‌ಫರ್ ಮಾಡುವ ಸೌಲಭ್ಯಗಳು ಇವೆ. ಇನ್ನು ಈ ಆಪ್ ಆಂಡ್ರಾಯ್ಡ್, ಐಓಎಸ್‌, ಮ್ಯಾಕ್ ಓಎಸ್‌ ಗಳಲ್ಲಿಯೂ ಲಭ್ಯವಾಗಲಿದೆ. ಪೇಯ್ಡ್ ಆವೃತ್ತಿಯಲ್ಲಿಯೂ ಲಭ್ಯ ಇದೆ.

ಜೂಮ್-Zoom

ಜೂಮ್ ಆಪ್‌ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ಪರದೆ/ಸ್ಕ್ರೀನ್‌ ಹಂಚಿಕೆ ಮತ್ತು ವೇಗದ ಸಂದೇಶ ಕಳುಹಿಸುವಿಕೆಯನ್ನು ಬೆಂಬಲಿಸುತ್ತದೆ. ಮೆನೆಯಿಂದ ಕೆಲಸ ಮಾಡಲು ಉತ್ತಮ ಸಪೋರ್ಟ್‌ ನೀಡಲಿದೆ. ಇನ್ನು ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್, ಐಓಎಸ್‌, ಮ್ಯಾಕ್ ಓಎಸ್‌ ಗಳಲ್ಲಿಯೂ ಲಭ್ಯ.

ಸ್ಲಾಕ್-Slack

ವರ್ಕ್ ಫ್ರಮ್ ಹೋಮ್‌ಗೆ ಸ್ಲಾಕ್ ಸಹ ಒಂದು ಅತ್ಯುತ್ತಮ ಆಪ್‌ ಆಗಿದೆ. ಇಲ್ಲಿ ಬಳಕೆದಾರರು ಡಾಕ್ಯುಮೆಂಟ್‌ಗಳನ್ನು ಸಂದೇಶ ಕಳುಹಿಸಬಹುದು, ಶೇರ್‌ ಮಾಡಬಹುದು, ಫೋಟೋ, ವಿಡಿಯೊ, ಮೀಡಿಯಾ ಶೇರ್ ಮಾಡುವ ಆಯ್ಕೆ ಇದೆ. ಅಂದಹಾಗೆ ಇದು ಉಚಿತ ಅಪ್ಲಿಕೇಶನ್‌ ಆಗಿದೆ. ಆಂಡ್ರಾಯ್ಡ್, ಐಓಎಸ್‌, ಓಎಸ್‌ನಲ್ಲಿ ಲಭ್ಯ.

ಟ್ರೆಲ್ಲೊ-Trello

ಸಹಯೋಗ/collaboration ಈ ಅಪ್ಲಿಕೇಶನ್ ಉತ್ತಮವಾಗಿದೆ. ಬಳಕೆದಾರರು ಮಾಡಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಲು ಆಯ್ಕೆ ಹೊಂದಿದೆ. ವಿವಿಧ ಬೋರ್ಡ್‌ಗಳನ್ನು ಬಳಸುವ ಮೂಲಕ ಆ ಯೋಜಿತ ಯೋಜನೆಗಳನ್ನು ಯಶಸ್ವಿ ಮಾಡಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ವಿವಿಧ ಸದಸ್ಯರೊಂದಿಗೆ/ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಆಯ್ಕೆ ಸಹ ಇದೆ. ಆಂಡ್ರಾಯ್ಡ್, ಐಓಎಸ್‌, ಓಎಸ್‌ನಲ್ಲಿ ಲಭ್ಯ.

ಹಾರ್ವೆಸ್ಟ್-Harvest

ಹಾರ್ವೆಸ್ಟ್ ಅಪ್ಲಿಕೇಶನ್ ಸಹ ಸಹಯೋಗ/collaboration ಕೆಲಸಕ್ಕೆ ಅತ್ಯುತ್ತಮ ವೇದಿಕೆ ಆಗಿದೆ. ಸಮಯ ಮತ್ತು ಲಾಗ್ ವೆಚ್ಚಗಳನ್ನು ಪತ್ತೆಹಚ್ಚಲು ಈ ಅಪ್ಲಿಕೇಶನ್ ಸೂಕ್ತವಾಗಿದೆ. ಹಾಗೆಯೇ ಇನ್‌ವಾಯ್ಸ್‌ಗಳನ್ನು ಸಹ ನಿರ್ವಹಿಸಬಹುದು. ಜೊತೆಗೆ ರಶೀದಿಗಳ ಇರಿಸಲು ಈ ಅಪ್ಲಿಕೇಶನ್ ಬೆಂಬಲ ನೀಡುತ್ತದೆ.

Best Mobiles in India

English Summary

Here we list out 5 apps that can be useful for those who might be working from home.