ಗರ್ಭಿಣಿಯರಿಗೆ ಮುದ ನೀಡುವ ಆಪ್- ನಿಮ್ಮ ಮಗು ಹೇಗಿರುತ್ತದೆ ಎಂದು ತಿಳಿಸುವ ಆಪ್


ಭವಿಷ್ಯ ಅನ್ನುವುದು ಬಹಳ ಕುತೂಹಲಕಾರಿ. ನಮ್ಮ ಮುಂದಿನ ಜೀವನದ ಅದೆಷ್ಟೋ ವಿಚಾರಗಳು ಹೇಗಿರುತ್ತವೆ ಎಂಬ ಕುತೂಹಲ ವರ್ತಮಾನದಲ್ಲಿ ಕಾಡುವುದು ಸರ್ವೇಸಾಮಾನ್ಯ. ಜಾತಕ, ಜ್ಯೋತಿಷ್ಯ,ಗ್ರಹಗತಿ ಇವೆಲ್ಲವೂ ಭವಿಷ್ಯದ ಬಗ್ಗೆ ಏನೇನನ್ನೋ ಹೇಳುತ್ತವೆ. ಆದರೆ ಅದೆಷ್ಟು ಸತ್ಯವಾಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ವರ್ತಮಾನದಲ್ಲಿ ನಾವಂದುಕೊಳ್ಳುವ ಭವಿಷ್ಯದ ಪರಿಕಲ್ಪನೆ ನಿಜವಾಗಬೇಕು ಎಂದೇನಿಲ್ಲ. ಆದರೂ ತಿಳಿದುಕೊಳ್ಳುವ ಕುತೂಹಲಗಳಿಗೆ ಎಲ್ಲೆಯಿಲ್ಲ.

ಅದರಲ್ಲೂ ಗರ್ಭಿಣಿಯಾಗಿದ್ದಾಗ ಮಹಿಳೆಯರಿಗೆ ಇಂತಹ ಕುತೂಹಲಗಳು ಹೆಚ್ಚಾಗಿರುತ್ತದೆ. ಹೆಣ್ಣು ಮಗುವಾಗುತ್ತಾ ಗಂಡು ಮಗುವಾಗುತ್ತಾ ಎಂಬ ಕುತೂಹಲ ಒಂದೆಡೆಯಾದರೆ ಹುಟ್ಟುವ ಮಗು ಹೇಗಿರುತ್ತದೆ? ಅಪ್ಪನ ಹಾಗೋ ಇಲ್ಲಾ ಅಮ್ಮನ ಹಾಗೋ ಎಂಬ ಕುತೂಹಲ ಇನ್ನೊಂದೆಡೆ. ಇದಕ್ಕೆ ಮೆಡಿಕಲ್ ಸ್ಕ್ಯಾನಿಂಗ್ ಗಳು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದರೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇನ್ನು ಲಿಂಗದ ಬಗ್ಗೆ ಭಾರತದಲ್ಲಿ ತಿಳಿದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಬಿಡಿ.

ಆದರೆ ಮಗು ಹೇಗಿರುತ್ತದೆ? ನೋಡುವುದಕ್ಕೆ ಅಪ್ಪನಂತೆಯೋ ಅಮ್ಮನಂತೆಯೋ ಎಂಬುದನ್ನು ತಿಳಿಸುವ ಆಪ್ ಗಳು ಲಭ್ಯವಿದೆ ಎಂದರೆ ನೀವು ನಂಬುತ್ತೀರಾ? ಹೌದು ಇದು ಫ್ಯೂಚರ್ ಬೇಬಿಯ ಬಗ್ಗೆ ತಿಳಿಸುವ ಆಪ್. ಹಾಗಂತ ಈ ಆಪ್ ತಿಳಿಸಿದಂತೆಯೇ ನಿಮ್ಮ ಮಗು ಹುಟ್ಟುತ್ತದೆ ಎಂದಲ್ಲ. ಆದರೆ ಅಪ್ಪನ ಫೋಟೋ, ಅಮ್ಮನ ಫೋಟೋ ಹಾಕಿ ಕ್ಲಿಕ್ಕಿಸಿದರೆ ನಿಮಗೆ ಹುಟ್ಟುವ ಮಗು ಹೇಗಿರುತ್ತದೆ ಎಂದು ಈ ಆಪ್ ತಿಳಿಸುತ್ತದೆ.

ಇನ್ಸ್ಟಾಲ್ ಮಾಡುವುದು ಹೀಗೆ:

ಪ್ಲೇ ಸ್ಟೋರ್ ಗೆ ತೆರಳಿ " ಫ್ಯೂಚರ್ ಬೇಬಿ ಪ್ರಿಡಿಕ್ಟರ್ ಆಪ್" ಎಂದು ಟೈಪ್ ಮಾಡಿ. ಹಲವಾರು ಆಪ್ ಗಳು ತೆರೆದುಕೊಳ್ಳುತ್ತದೆ. ಬೇರೆಬೇರೆ ಡೆವಲಪರ್ ಗಳು ಅಭಿವೃದ್ಧಿಗೊಳಿಸಿದ ಈ ಆಪ್ ಗಳಲ್ಲಿ ನಿಮಗೆ ಇಷ್ಟವಾಗಿರುವುದನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಎಲ್ಲಾ ಆಪ್ ಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಕಾರ್ಯ ನಿರ್ವಹಿಸುತ್ತವೆ. ಇನ್ಸ್ಟಾಲ್ ಮಾಡಿ ತೆರೆದ ನಂತರ ಆಪ್ ಕೇಳುವ ಕೆಲವು ಅನುಮತಿಗಳನ್ನು ನೀಡಬೇಕಾಗುತ್ತದೆ.

ಆಪ್ ನಲ್ಲಿ ಏನು ಮಾಡಬೇಕು?

ನಂತರ ಆಪ್ ನಲ್ಲಿ ನಿಮ್ಮ ಫೋಟೋ ಮತ್ತು ನಿಮ್ಮ ಸಂಗಾತಿಯ ಫೋಟೋವನ್ನು ಅಪ್ ಲೋಡ್ ಮಾಡಬೇಕು. ಅದಕ್ಕಾಗಿ ಮೀಸಲಿರುವ ಜಾಗದಲ್ಲಿ ಗ್ಯಾಲರಿಯಿಂದ ಸೆಲೆಕ್ಟ್ ಮಾಡಿ ಇಲ್ಲವೇ ಹೊಸದಾಗಿ ಕ್ಯಾಮರಾ ಬಳಸಿ ಫೋಟೋ ಕ್ಲಿಕ್ಕಿಸಿ ಅಪ್ ಲೋಡ್ ಮಾಡಿ. ನಂತರ ನೀವು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದೀರೋ ಅಥವಾ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದೀರೋ ಎಂಬುದನ್ನು ಆಯ್ಕೆ ಮಾಡಿ ಮುಂದುವರಿಯಿರಿ.

ಮನಸ್ಸಿಗೆ ಮುದ ನೀಡುವ ಆಪ್:

ನಿಮ್ಮ ಮತ್ತು ನಿಮ್ಮ ಸಂಗಾತಿಯ ಫೋಟೋ ಆಧರಿಸಿ ನಿಮ್ಮ ಮಗುವಿನ ಫೋಟೋವನ್ನು ಆಪ್ ನೀಡುತ್ತದೆ. ತಮಾಷೆಯೆನ್ನಿಸಿದರೂ ಒಂದು ರೀತಿಯಾಗಿ ಮನಸ್ಸಿಗೆ ಮುದ ನೀಡುವ ಆಪ್ ಇದಾಗಿರುತ್ತದೆ. ತಲೆಯಲ್ಲಿ ಓಡಾಡುವ ಮಗುವಿನ ಕಲ್ಪನೆಗೊಂದು ಆಪ್ ನಲ್ಲಿ ಮುದ್ರಿತ ರೂಪ ನೀಡುತ್ತದೆ.

ಜಸ್ಟ್ ಫಾರ್ ಎ ಫನ್ ಅಷ್ಟೇ!

ಆದರೆ ಹೀಗೆಯೇ ನಿಮ್ಮ ಮಗು ಇರುತ್ತದೆ ಎಂದು ಖಂಡಿತ ಭಾವಿಸಬೇಡಿ. ಇದು ಜಸ್ಟ್ ಫಾರ್ ಎ ಫನ್ ಅಷ್ಟೇ! ಯಾಕೆಂದರೆ ಭಾರತೀಯರ ಫೋಟೋ ಅಪ್ ಲೋಡ್ ಮಾಡಿದಾಗ ವಿದೇಶಿ ಮಗುವಿನಂತಹ ಫೋಟೋ ಆಪ್ ನಲ್ಲಿ ಬರುವುದೂ ಇದೆ! ಹೊಟ್ಟೆಯಲ್ಲಿರುವ ಮುದ್ದು ಕಂದಮ್ಮ ಹೊರ ಬಂದ ಮೇಲೆ ಹೇಗಿರುತ್ತದೆ ಎಂಬ ಕುತೂಹಲವು ಗರ್ಭಿಣಿಯರಲ್ಲಿ ಆಗಾಗ ಸುಳಿದಾಡುವುದರಿಂದಾಗಿ ಸ್ವಲ್ಪ ಸಮಯಕ್ಕೆ ಖಂಡಿತ ಈ ಆಪ್ ಅವರಿಗೆ ಮುದ ನೀಡುತ್ತದೆ.

Most Read Articles
Best Mobiles in India
Read More About: Apps news

Have a great day!
Read more...

English Summary

Curious About How Your Unborn Looks? Download This App