ಜನಪ್ರಿಯ ಆಪ್‌ಗಳಿಗೆ ಗೇಟ್‌ಪಾಸ್‌ ನೀಡಿದ ಗೂಗಲ್‌..! ಯಾವ್ಯಾವ ಆಪ್‌ ಡಿಲೀಟ್‌..?


ಅತ್ಯಂತ ಜನಪ್ರಿಯ ಬೆಂಚ್‌ಮಾರ್ಕಿಂಗ್ ಆಪ್‌ಗಳಲ್ಲಿ ಒಂದಾದ ಆಂಟುಟು, ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗಲ್ಲ. ಶಿಯೋಮಿ ಮತ್ತು ರಿಯಲ್‌ಮಿಯಂತಹ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ಈ ಅಪ್ಲಿಕೇಶನ್ ಅನ್ನು ಬಳಸುತ್ತಿವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ತಮ್ಮ ಕಾರ್ಯಕ್ಷಮತೆ ತೋರಿಸಲು ಅಂಟುಂಟು ಸ್ಕೋರ್‌ಗಳನ್ನು ಹೆಚ್ಚಾಗಿ ಹೇಳುತ್ತವೆ.

Advertisement

ಆಂಟುಟು ಹೊರತುಪಡಿಸಿ, ಗೂಗಲ್ ಪ್ಲೇ ಸ್ಟೋರ್‌ನಿಂದ ಆಂಟುಟು ಬ್ರ್ಯಾಂಡಿಂಗ್‌ ಹೊಂದಿರುವ ಇತರ ಎರಡು ಬೆಂಚ್‌ಮಾರ್ಕಿಂಗ್ ಅಪ್ಲಿಕೇಶನ್‌ಗಳನ್ನು ಸಹ ಗೂಗಲ್‌ ತೆಗೆದುಹಾಕಿದೆ.

Advertisement

ಆಂಡ್ರಾಯ್ಡ್ ಪೋಲಿಸ್‌ ವರದಿ ಪ್ರಕಾರ, ಚೀತಾ ಮೊಬೈಲ್‌ನಿಂದ ಅಪ್ಲಿಕೇಶನ್‌ಗಳ ಮೇಲೆ ಉಂಟಾದ ದೊಡ್ಡ ದೌರ್ಜನ್ಯದ ಹಿನ್ನೆಲೆ ಗೂಗಲ್ ಎಲ್ಲಾ ಆಂಟುಟು ಆಪ್‌ಗಳನ್ನು ತೆಗೆದುಹಾಕಿದೆ. ಕಂಪನಿಯು ಪ್ಲೇ ಸ್ಟೋರ್‌ನಿಂದ ಆಂಟುಟು ಬೆಂಚ್‌ಮಾರ್ಕ್, ಆಂಟುಟು 3ಡಿ ಬೆಂಚ್ ಮತ್ತು ಆಂಟುಟು ಬೆಂಚ್‌ಮಾರ್ಕ್ ಆಪ್‌ಗಳನ್ನು ತೆಗೆದುಹಾಕಿದೆ.

ಫೆಬ್ರವರಿ 22, 2020ರವರೆಗೆ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ ಎಂದು ವರದಿ ಹೇಳಿದೆ. ಆದರೆ, ಈಗ ಅಪ್ಲಿಕೇಶನ್‌ಗಳನ್ನು ಹುಡುಕಿದಾಗ ನಮಗೆ ಯಾವುದೇ ಫಲಿತಾಂಶ ಕಂಡುಬರುವುದಿಲ್ಲ. ಅಪ್ಲಿಕೇಶನ್‌ಗಳ ಕಣ್ಮರೆಗೆ ಗೂಗಲ್ ಅಥವಾ ಚೀತಾ ಮೊಬೈಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಂಡ್ರಾಯ್ಡ್‌ ಪೊಲೀಸ್‌ ಉಲ್ಲೇಖಿಸಿದೆ.

Advertisement

ಇತ್ತೀಚೆಗೆ, ಗೂಗಲ್ 600 ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಅವುಗಳನ್ನು ತನ್ನ ಜಾಹೀರಾತು ಹಣಗಳಿಸುವ ಪ್ಲ್ಯಾಟ್‌ಫಾರ್ಮ್‌ಗಳಾದ ಗೂಗಲ್ ಆಡ್‌ಮೊಬ್ ಮತ್ತು ಗೂಗಲ್ ಆಡ್ ಮ್ಯಾನೇಜರ್‌ನಿಂದ ಕೂಡ ನಿಷೇಧಿಸಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಚೀನಾ, ಭಾರತ ಮತ್ತು ಸಿಂಗಾಪುರದ ಮೂಲದವು. ಮತ್ತು ಇಂಗ್ಲಿಷ್ ಮಾತನಾಡುವ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಬುಜ್‌ಫೀಡ್‌ನ ವರದಿ ಬಹಿರಂಗಪಡಿಸಿದೆ. ಆದ್ದರಿಂದ, ಗೂಗಲ್ ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ ಎನ್ನಲಾಗಿದೆ.

ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್‌ಗಳ ಡೌನ್‌ಲೋಡ್ ಲಿಂಕ್‌ಗಳನ್ನು ಎಪಿಕೆ ಲಿಂಕ್‌ಗಳೊಂದಿಗೆ ಬದಲಾಯಿಸಿದ್ದು, ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಬಗ್ಗೆ ಆಂಟುಟುಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ.

Best Mobiles in India

Advertisement

English Summary

Google Play Store Removes Three Most-Popular Apps: Here's Why