ಇನ್‌ಸ್ಟಾಗ್ರಾಂನಿಂದ ಕ್ಲಾಸ್‌ಮೇಟ್ಸ್‌ ಹುಡುಕಿ..! ಶಾಲಾ ದಿನಗಳ ಮೆಲುಕು ಹಾಕಿ..!


ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹೊಸ ಹೊಸ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ.ಇದೀಗ ಇನ್ಸ್ಟಾಗ್ರಾಂ ಎರಡು ಹೊಸ ಫೀಚರ್ ಗಳನ್ನು ತನ್ನ ಪ್ರಸಿದ್ಧ ಪಿಕ್ಚರ್ ಶೇರಿಂಗ್ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಫೀಚರ್ ಗಳು ಹೆಚ್ಚು ಮಂದಿಯನ್ನು ಕನೆಕ್ಟ್ ಮಾಡುವುದಕ್ಕೆ ನೆರವು ನೀಡಲಿದೆ.

Advertisement

ನೇಮ್ ಟ್ಯಾಗ್ ಫೀಚರ್:

ವೈಶಿಷ್ಟ್ಯತೆಯ ಹೆಸರು "ನೇಮ್ ಟ್ಯಾಗ್". ಇವು ಕಸ್ಟಮೈಜ್ ಆಗಿರುವ ಗ್ರಾಫಿಕ್ ಗಳಾಗಿದ್ದು ಕ್ಯೂಆರ್ ಕೋಡ್ ಗಳಂತೆ ವರ್ತಿಸುತ್ತದೆ. ಈ ನೇಮ್ ಟ್ಯಾಗ್ ಗಳನ್ನು ಆಪ್ ನಲ್ಲಿ ಸ್ಕ್ಯಾನಿಂಗ್ ಮಾಡುವ ಮುಖಾಂತರ ಬಳಕೆದಾರರು ನೇರವಾಗಿ ಬಳಕೆದಾರರ ಪ್ರೊಫೈಲ್ ನ್ನು ತೆರೆಯಬಹುದಾಗಿದೆ. ನೇಮ್ ಟ್ಯಾಗ್ ಗಳನ್ನು ವಿಭಿನ್ನ ರೀತಿಯಲ್ಲಿ ಕಸ್ಟಮೈಜ್ ಮಾಡಬಹುದು. ಟ್ಯಾಗ್ ಕಲರ್ ಗಳನ್ನು ಬದಲಿಸಬಹುದು ಮತ್ತು ಎಮೋಜಿ ಅಥವಾ ಫೋಟೋಗಳನ್ನು ಕೂಡ ಇದಕ್ಕೆ ಸೇರಿಸಬಹುದು.

ಬಳಕೆದಾರರು ನೇಮ್ ಟ್ಯಾಗ್ ಗಳನ್ನು ಇನ್ ಆಪ್ ಕ್ಯಾಮರಾ ಬಳಸಿ ಸ್ಕ್ಯಾನ್ ಮಾಡಬಹುದು ಅಥವಾ ನೇಮ್ ಟ್ಯಾಗ್ ವ್ಯೂನ ಬದಿಯಲ್ಲಿರುವ ಬಟನ್ ನ್ನು ಟ್ಯಾಪ್ ಮಾಡುವುದರಿಂದಲೂ ಕೂಡ ಇದನ್ನು ಸಾಧಿಸಬಹುದು. ಈಗಾಗಲೇ ನೇಮ್ ಟ್ಯಾಗ್ ಇನ್ಸ್ಟಾಗ್ರಾಂ ಆಪ್ ನಲ್ಲಿ ಲಭ್ಯವಿದೆ.

Advertisement
ಡೈರೆಕ್ಟರಿ ಫೀಚರ್:

ಇನ್ನೊಂದು ವೈಶಿಷ್ಟ್ಯತೆ ಡೈರೆಕ್ಟರಿ ಫೀಚರ್. ಇದು ಬಳಕೆದಾರರನ್ನು ಅವರ ಕಾಲೇಜಿನ ಆಧಾರದಲ್ಲಿ ಜೋಡಿಸುತ್ತದೆ ಅರ್ಥಾತ್ ಕ್ಲಾಸ್ ಮೇಟ್ ಗಳ ಜೊತೆಗೆ ಕನೆಕ್ಟ್ ಆಗುವುದಕ್ಕೆ ಇದು ಹೆಚ್ಚು ನೆರವು ನೀಡುತ್ತದೆ.

ವಿದ್ಯಾರ್ಥಿಗಳನ್ನು ಮತ್ತೆ ಸೇರಿಸುವ ಪ್ರಯತ್ನ:

ಇದು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ತೆರಳಿದ ನಂತರವೂ ಮತ್ತೆ ಸಂಪರ್ಕಕ್ಕೆ ಸಿಗುವಂತೆ ಮಾಡುತ್ತದೆ ಮತ್ತು ಅವರನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ಕಾಲೇಜ್ ಬಿಟ್ಟ ವಿದ್ಯಾರ್ಥಿಗಳೇ ಈ ಫೀಚರ್ ನ ಪ್ರಮುಖ ಟಾರ್ಗೆಟ್. ಹಾಗಾಗಿ ಈ ಫೀಚರ್ ಬ್ಯುಸಿನೆಸ್ ವಿಚಾರದಲ್ಲಿ ಬಹಳವಾಗಿ ಕಾರ್ಯ ನಿರ್ವಹಿಸುತ್ತದೆ.

ಕ್ಲಾಸ್ ಮೇಟ್ಸ್‌ ಹುಡುಕುವುದಕ್ಕೆ ನೆರವು:

ಇನ್ಸ್ಟಾಗ್ರಾಂ ಈಗಾಗಲೇ ಕಾಲೇಜ್ ಕಮ್ಯುನಿಟಿಯನ್ನು ಸೇರುವಂತೆ ಸಾಕಷ್ಟು ಪ್ರಚಾರ ಮಾಡುತ್ತಿದೆ ಮತ್ತು ಇತರೆ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಸಾಧಿಸುವಂತೆ ಹೇಳುತ್ತಿದೆ. ಒಮ್ಮೆ ಬಳಕೆದಾರರು ಈ ಕಮ್ಯುನಿಟಿಗೆ ಸೇರಿದರೆ ಅವರ ವಿಶ್ವವಿದ್ಯಾಲಯ ಮತ್ತು ಅವರು ಕಾಲೇಜಿನಲ್ಲಿ ಯಾವ ವರ್ಷ ಓದಿದ್ದರು ಎಂಬ ಬಗೆಗಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಇದು ಕ್ಲಾಸ್ ಬೇಸ್ಡ್ ಆಗಿ ಲಿಸ್ಟ್ ತಯಾರಿಸುವುದಕ್ಕೂ ಇದು ನೆರವಾಗುತ್ತದೆ. ಯಾರೆಲ್ಲ ಕ್ಲಾಸ್ ಮೇಟ್ಸ್ ಆಗಿದ್ದರೂ ಅವರು ಈ ಫೀಚರ್ ಗೆ ಒಳಪಟ್ಟಿದ್ದರೆ ನಿಮಗೆ ಕೂಡಲೇ ಸಂಪರ್ಕಕ್ಕೆ ಲಭ್ಯವಾಗುತ್ತಾರೆ.

ವಿಡಿಯೋ ಟ್ಯಾಗಿಂಗ್ ಪರೀಕ್ಷೆ

ಇನ್ಸ್ಟಾಗ್ರಾಂ ತನ್ನ ಹೊಸ ಫೀಚರ್ ನಲ್ಲಿ ಸ್ನೇಹಿತರಿಗೆ ವೀಡಿಯೋಗಳನ್ನು ಟ್ಯಾಗ್ ಮಾಡುವುದರ ಬಗ್ಗೆ ಟೆಸ್ಟಿಂಗ್ ಕೆಲಸವನ್ನು ಮಾಡುತ್ತಿದೆ.. ಫೋಟೋಸ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೆ ಟ್ಯಾಗ್ ಮಾಡುವುದಕ್ಕೂ ಅವಕಾಶ ನೀಡಲಾಗುತ್ತದೆ. ಆದರೆ ವೀಡಿಯೋಗಳಿಗೆ ಇನ್ನೂ ಕೂಡ ಟ್ಯಾಗ್ ಮಾಡುವ ಫೀಚರ್ ಲಭ್ಯವಿಲ್ಲ. ಆದರೆ ಈ ಫೀಚರ್ ಕೂಡ ಟೆಸ್ಟಿಂಗ್ ಹಂತದಲ್ಲಿದ್ದು, ಆಪ್ ನಲ್ಲಿ ಯಾವಾಗ ಬರಲಿದೆ ಎಂಬುದನ್ನು ಕಾದುನೋಡಬೇಕು. ಆಯ್ಕೆ ಮಾಡಿದ ಕೆಲವೇ ಕೆಲವು ಬಳಕೆದಾರರು ಮಾತ್ರ ಈ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಟ್ಯಾಗ್ ಗಳು ಕೇವಲ ಆಪ್ ನಲ್ಲಿ ಮಾತ್ರ ಬರುತ್ತಿದ್ದು ಡೆಸ್ಕ್ ಟಾಪ್ ವರ್ಷನ್ ನಲ್ಲಿ ಲಭ್ಯವಾಗುತ್ತಿಲ್ಲ.

ಕೆಲವೇ ದಿನಗಳಲ್ಲಿ ವಿಡಿಯೋ ಟ್ಯಾಗಿಂಗ್‌

ಇನ್ಸ್ಟಾಗ್ರಾಂ 2013 ರಿಂದ ವೀಡಿಯೋಗಳನ್ನು ಪೋಸ್ಟ್ ಮಾಡಲು ಅವಕಾಶ ನೀಡುತ್ತಿದೆ. ಆದರೆ ವೀಡಿಯೋ ಟ್ಯಾಗ್ ಗಳು ಇನ್ನೂ ಬಿಡುಗಡೆಗೊಂಡಿಲ್ಲ ಎಂಬುದು ಆಶ್ಚರ್ಯದ ಸಂಗತಿಯೇ. ಅದರಲ್ಲೂ ಸ್ಟೋರೀಸ್ ನಲ್ಲಿ ಬಳಕೆದಾರರು ಇತರರನ್ನು ಟ್ಯಾಗ್ ಮಾಡಲು ಎರಡು ವರ್ಷದ ಮುನ್ನವೇ ಅವಕಾಶ ಬಿಡುಗಡೆಗೊಳಿಸಲಾಗಿತ್ತು. ಆದರೆ ವೀಡಿಯೋ ಟ್ಯಾಗಿಂಗ್ ಇನ್ನೂ ಅಸಾಧ್ಯವಾಗಿರುವುದು ಅನೇಕರಿಗೆ ಪ್ರಶ್ನಾರ್ಥಕವಾಗಿದೆ. ಆದರೆ ಕೆಲವೇ ದಿನದಲ್ಲಿ ಈ ಫೀಚರ್ ಕೂಡ ಬಿಡುಗಡೆಗೊಳ್ಳುತ್ತದೆ ಎಂಬ ನಿರೀಕ್ಷೆ ಇದೆ.

Best Mobiles in India

English Summary

Instagram starts rolling out two new features, and they are good. To know more this visit kannada.gizbot.com