ಫೋನ್‌ಪೇಯಿಂದ ಹೊಸ ಫೀಚರ್‌..! ಫೋನ್‌ಪೇ ಎಟಿಎಂನಿಂದ ತ್ವರಿತ ಹಣ ಪಡೆಯಿರಿ..!


ಡಿಜಿಟಲ್ ಪೇಮೆಂಟ್‌ ಪ್ಲಾಟ್‌ಫಾರ್ಮ್ ಫೋನ್‌ಪೇ ಹೊಸ ವಿಶಿಷ್ಟ ಫೀಚರ್‌ ಒಂದನ್ನು ಪರಿಚಯಿಸಿದೆ. 'ಫೋನ್‌ಪೇ ಎಟಿಎಂ' ಎಂಬ ಈ ಫೀಚರ್‌, ಹಣದ ಅಗತ್ಯವಿರುವ ಬಳಕೆದಾರರಿಗೆ ವ್ಯಾಪಾರಿಗಳಿಂದ ತ್ವರಿತ ಹಣವನ್ನು ಒದಗಿಸುವ ಸೌಲಭ್ಯವಾಗಿದೆ.

Advertisement

ಹಣದ ಅಗತ್ಯವಿರುವ ಗ್ರಾಹಕರು ಫೋನ್‌ಪೇ ಅಪ್ಲಿಕೇಶನ್ ಒಪನ್‌ ಮಾಡಿ, 'ಸ್ಟೋರ್ಸ್‌' ಟ್ಯಾಬ್‌ಗೆ ಹೋಗಿ ಮತ್ತು 'ಫೋನ್‌ಪೇ ಎಟಿಎಂ' ಐಕಾನ್ ಕ್ಲಿಕ್ ಮಾಡಿ, ಈ ಸೌಲಭ್ಯವನ್ನು ನೀಡುವ ಹತ್ತಿರದ ಅಂಗಡಿಗಳನ್ನು ಕಂಡುಹಿಡಿಯಬಹುದು. ಪ್ರಸ್ತುತ, ಈ ಸೇವೆಯನ್ನು ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಪ್ರಾರಂಭಿಸಲಾಗಿದ್ದು, ಈ ಪೈಲಟ್ ವೈಶಿಷ್ಟ್ಯದ ಮೂಲಕ ವ್ಯಾಪಾರಿಗಳಿಂದ ದಿನಕ್ಕೆ 1,000 ರೂ, ಅನ್ನು ಬಳಕೆದಾರರು ತೆಗೆದುಕೊಳ್ಳಬಹುದು.

Advertisement

ಅಂಗಡಿಗೆ ಹೋಗಿ, 'ವಿಥ್‌ಡ್ರಾ' ಬಟನ್ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮೊತ್ತವನ್ನು ಫೋನ್‌ಪೇ ಅಪ್ಲಿಕೇಶನ್ ಮೂಲಕ ವ್ಯಾಪಾರಿಗಳಿಗೆ ವರ್ಗಾಯಿಸಿ. ಹಣ ವರ್ಗಾವಣೆಯಾದ ನಂತರ ವ್ಯಾಪಾರಿ ಗ್ರಾಹಕರಿಗೆ ಅಷ್ಟೇ ನಗದು ಹಣವನ್ನು ನೀಡುತ್ತಾನೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಫೋನ್‌ಪೆ ಎಟಿಎಂ ಗ್ರಾಹಕರಿಗೆ ನಮ್ಮ ವಿಶ್ವಾಸಾರ್ಹ ವ್ಯಾಪಾರಿ ಪಾಲುದಾರರ ಮೂಲಕ ಯಾವುದೇ ತೊಂದರೆಯಿಲ್ಲದೆ ಹಣವನ್ನು ವಿತ್‌ಡ್ರಾ ಮಾಡಲು ಅನುವು ಮಾಡಿಕೊಡುತ್ತದೆ. ಇದು ವ್ಯಾಪಾರಿಗಳಿಗೆ ಹಣ ಸಂಗ್ರಹಿಸುವ ಮತ್ತು ಬ್ಯಾಂಕ್ ಶಾಖೆಗೆ ಅನೇಕ ಬಾರಿ ತಮ್ಮ ಹೆಚ್ಚುವರಿ ಹಣ ಠೇವಣಿ ಇಡುವ ತೊಂದರೆಯನ್ನು ತಪ್ಪಿಸುತ್ತದೆ ಎಂದು ಫೋನ್‌ಫೇಯ ಆಫ್‌ಲೈನ್‌ ವ್ಯಾಪಾರ ಅಭಿವೃದ್ಧಿ ಮುಖ್ಯಸ್ಥ ವಿವೇಕ್ ಲೋಹ್ಚೆಬ್ ಹೇಳಿದ್ದಾರೆ.

ಈ ಸೇವೆ ಬಳಸಲು ಗ್ರಾಹಕರು ಅಥವಾ ವ್ಯಾಪಾರಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಗ್ರಾಹಕರಿಗೆ ವಾಪಸಾತಿ ಮಿತಿ ಆಯಾ ಬ್ಯಾಂಕುಗಳು ನಿಗದಿಪಡಿಸಿದ ಮಿತಿಗೆ ಸಮನಾಗಿರುತ್ತದೆ.

Best Mobiles in India

English Summary

PhonePe ATM Features Lets You Withdraw Cash Up To Rs. 1,000/Day